ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ತನ್ನ ಐತಿಹಾಸಿಕ (1000ನೇ ಏಕದಿನ ಪಂದ್ಯ) ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವಿನ ನಗೆ ಬೀರಿದೆ. ವೆಸ್ಟ್ ಇಂಡೀಸ್ ನೀಡಿದ 177 ರನ್ಗಳ ಟಾರ್ಗೆಟ್ ಬೆನ್ನತ್ತಿದ ಟೀಮ್ ಇಂಡಿಯಾ 4 ವಿಕೆಟ್ ಕಳೆದುಕೊಂಡು 28 ಓವರ್ಗಳಲ್ಲಿ ಗುರಿ ಮುಟ್ಟುವ ಮೂಲಕ ಭರ್ಜರಿ ಜಯ ತನ್ನದಾಗಿಸಿಕೊಂಡಿತು. ಟೀಮ್ ಇಂಡಿಯಾ ಪರ ರೋಹಿತ್ ಶರ್ಮಾ 51 ಎಸೆತಗಳಲ್ಲಿ 60 ರನ್ ಬಾರಿಸಿ ಮಿಂಚಿದರು. ಇದಕ್ಕೂ ಮುನ್ನ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಮೊದಲ ಓವರ್ನ್ನೇ ಮೇಡನ್ ಮೂಲಕ ಸಿರಾಜ್ ಉತ್ತಮ ಆರಂಭ ನೀಡಿದರು. ಅಷ್ಟೇ ಅಲ್ಲದೆ 3ನೇ ಓವರ್‌ನಲ್ಲಿ ಶಾಯ್ ಹೋಪ್ ವಿಕೆಟ್ ಪಡೆದು ಸಿರಾಜ್ ಮೊದಲ ಯಶಸ್ಸು ತಂದುಕೊಟ್ಟರು. ಇದಾದ ಬಳಿಕ ದಾಳಿಗಿಳಿದ ವಾಷಿಂಗ್ಟನ್ ಸುಂದರ್ ಬ್ರಾಂಡನ್ ಕಿಂಗ್ ಹಾಗೂ ಬ್ರಾವೊ ವಿಕೆಟ್ ಪಡೆದು ಮಿಂಚಿದರು.
ಮತ್ತೊಂದೆಡೆ ಚಹಲ್ ಕೂಡ ತನ್ನ ಸ್ಪಿನ್ ಮೋಡಿ ಮೂಲಕ ವೆಸ್ಟ್ ಇಂಡೀಸ್ ಮಧ್ಯಮ ಕ್ರಮಾಂಕಕ್ಕೆ ಆಘಾತ ನೀಡಿದರು. ಮೊದಲ ಓವರ್‌ನಲ್ಲಿ ಪೂರನ್ ಅವರ ವಿಕೆಟ್ ಪಡೆದ ಚಹಲ್ ಮುಂದಿನ ಎಸೆತದಲ್ಲಿ ವಿಂಡೀಸ್ ನಾಯಕ ಪೊಲಾರ್ಡ್ ಅವರನ್ನು ಬೌಲ್ಡ್ ಮಾಡಿದರು. ಅಲ್ಲದೆ ಎರಡನೇ ಓವರ್‌ನಲ್ಲಿ ಶಮ್ರಾ ಬ್ರೂಕ್ಸ್‌ನ ವಿಕೆಟ್ ಪಡೆದರು. 79 ರನ್ಗೆ 7 ವಿಕೆಟ್ ಕಳೆದುಕೊಂಡಿದ್ದ ವಿಂಡೀಸ್ಗೆ ಆಸರೆಯಾಗಿದ್ದು ಜೇಸನ್ ಹೋಲ್ಡರ್ ಹಾಗೂ ಫ್ಯಾಬಿಯಾನ್ ಅಲೆನ್.
8ನೇ ವಿಕೆಟ್ಗೆ 78 ರನ್ಗಳ ಜೊತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 150 ರ ಗಡಿದಾಟಿಸಿದರು. ಈ ಹಂತದಲ್ಲಿ ಅಲೆನ್ (29) ಸುಂದರ್ಗೆ ವಿಕೆಟ್ ಒಪ್ಪಿಸಿದರೆ, ಅರ್ಧಶತಕ ಪೂರೈಸಿ ಅಪಾಯಕಾರಿಯಾಗಿ ಪರಿಣಮಿಸಿದ್ದ ಹೋಲ್ಡರ್ (57) ಪ್ರಸಿದ್ಧ್ ಕೃಷ್ಣಗೆ ವಿಕೆಟ್ ನೀಡಿದರು. ಅದರಂತೆ ಅಂತಿಮವಾಗಿ ವೆಸ್ಟ್ ಇಂಡೀಸ್ ತಂಡವು 43.5 ಓವರ್ಗಳಲ್ಲಿ 179 ರನ್ಗೆ ಸರ್ವಪತನ ಕಂಡಿತು. ಟೀಮ್ ಇಂಡಿಯಾ ಪರ ಚಹಲ್ 4 ವಿಕೆಟ್ ಕಬಳಿಸಿದರೆ, ಸುಂದರ್ 3 ವಿಕೆಟ್ ಪಡೆದು ಮಿಂಚಿದರು. ಇನ್ನು ಪ್ರಸಿದ್ಧ್ ಕೃಷ್ಣ 2 ವಿಕೆಟ್ ಉರುಳಿಸಿದರೆ, ಸಿರಾಜ್ 1 ವಿಕೆಟ್ ಪಡೆದರು.
ಭಾರತ ಪ್ಲೇಯಿಂಗ್: ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ರಿಷಬ್ ಪಂತ್(ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್
ವೆಸ್ಟ್ ಇಂಡೀಸ್ ಪ್ಲೇಯಿಂಗ್ 11: ಬ್ರಾಂಡನ್ ಕಿಂಗ್, ಶಾಯ್ ಹೋಪ್, ಶಮರ್ ಬ್ರೂಕ್ಸ್, ಡ್ಯಾರೆನ್ ಬ್ರಾವೋ, ನಿಕೋಲಸ್ ಪೂರನ್(ವಿಕೆಟ್ ಕೀಪರ್), ಕೀರಾನ್ ಪೊಲಾರ್ಡ್(ನಾಯಕ), ಜೇಸನ್ ಹೋಲ್ಡರ್, ಫ್ಯಾಬಿಯನ್ ಅಲೆನ್, ಅಲ್ಜಾರಿ ಜೋಸೆಫ್, ಕೆಮರ್ ರೋಚ್, ಅಕೇಲ್ ಹೋಸೇನ್
ಪಂದ್ಯ ಆರಂಭ: ಮಧ್ಯಾಹ್ನ 1.30 ಗಂಟೆಗೆ
ಸೂರ್ಯಕುಮಾರ್ ಯಾದವ್ ಹಾಗೂ ದೀಪಕ್ ಹೂಡಾ 51 ಎಸೆತಗಳಲ್ಲಿ 50 ರನ್ಗಳ ಜೊತೆಯಾಟ
ಗೆಲುವಿನತ್ತ ಟೀಮ್ ಇಂಡಿಯಾ
ಹೋಲ್ಡರ್ ಎಸೆತದಲ್ಲಿ ಹೂಡಾ ಬ್ಯಾಟ್ ಔಟ್ ಸೈಡ್ ಎಡ್ಜ್…ಸ್ಲಿಪ್ನಲ್ಲಿ ಯಾವುದೇ ಫೀಲ್ಡರ್ ಇಲ್ಲ…ಫೋರ್
ಜೇಸನ್ ಹೋಲ್ಡರ್ ಎಸೆತದಲ್ಲಿ ಲೆಗ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಸೂರ್ಯಕುಮಾರ್ ಯಾದವ್
ಅಕಿಲ್ ಹೊಸೈನ್ ಎಸೆತದಲ್ಲಿ ಸೂರ್ಯಕುಮಾರ್ ಯಾದವ್ ಬ್ಯಾಟ್ ಎಡ್ಜ್…ಚೆಂಡು ಗುರುತಿಸಲು ಎಡವಿದ ಕೀಪರ್…ಕ್ಯಾಚ್ ಮಿಸ್…ಚೆಂಡು ಬೌಂಡರಿಗೆ…ಫೋರ್
ಏಕದಿನ ಕ್ರಿಕೆಟ್ನಲ್ಲಿ ಬೌಂಡರಿ ಖಾತೆ ತೆರೆದ ದೀಪಕ್ ಹೂಡಾ
ಅಲ್ಝಾರಿ ಜೋಸೆಫ್ ಎಸೆತದಲ್ಲಿ ಕವರ್ ಡ್ರೈವ್ ಮೂಲಕ ಫೋರ್ ಬಾರಿಸಿದ ಹೂಡಾ
ಅಕಿಲ್ ಹೊಸೈನ್ ಎಸೆತದಲ್ಲಿ ಸ್ಲಿಪ್ ಮೂಲಕ ಆಕರ್ಷಕ ಬೌಂಡರಿಗಿಟ್ಟಿಸಿಕೊಂಡ ಸೂರ್ಯಕುಮಾರ್
ಹೊಸೈನ್ ಎಸೆತದಲ್ಲಿ ಲೆಗ್ ಸೈಡ್ನತ್ತ ಸ್ವೀಪ್ ಶಾಟ್ ಬಾರಿಸಿದ ಸೂರ್ಯ ಕುಮಾರ್ ಯಾದವ್…ಫೋರ್
ಜೋಸೆಫ್ ಎಸೆತದಲ್ಲಿ ಸೂರ್ಯ ಕುಮಾರ್ ಯಾದವ್ ಸ್ಟ್ರೈಟ್ ಡ್ರೈವ್…ಬೌಲರ್ ಕಾಲು ತಾಗಿ ಚೆಂಡು ವಿಕೆಟ್ಗೆ
ಕ್ರೀಸ್ ಬಿಟ್ಟಿದ್ದ ರಿಷಭ್ ಪಂತ್ (11) ರನೌಟ್
ಅಕಿಲ್ ಹೊಸೈನ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದ ಇಶಾನ್ ಕಿಶನ್
ಬೌಂಡರಿ ಲೈನ್ನಲ್ಲಿ ಕ್ಯಾಚ್
28 ರನ್ಗಳಿಸಿ ಹೊರನಡೆದ ಇಶಾನ್ ಕಿಶನ್
ಜೋಸೆಫ್ ಎಸೆತದಲ್ಲಿ ಆನ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ರಿಷಭ್ ಪಂತ್
ಜೋಸೆಫ್ ಭರ್ಜರಿ ಬೌನ್ಸರ್ಗೆ ಅಪ್ಪರ್ ಕಟ್ ಶಾಟ್ ಮೂಲಕ ಸಿಕ್ಸರ್ ಸಿಡಿಸಿದ ಇಶಾನ್ ಕಿಶನ್
ಅಕಿಲ್ ಹೊಸೈನ್ ಎಸೆತದಲ್ಲಿ ರಿಷಭ್ ಪಂತ್ ಆಕರ್ಷಕ ಹೊಡೆತ ಫೋರ್
ಅಲ್ಝಾರಿ ಜೋಸೆಫ್ ಎಸೆತದಲ್ಲಿ ಪುಲ್ ಶಾಟ್ಗೆ ಯತ್ನ…
ಬೌಂಡರಿ ಲೈನಲ್ಲಿ ಕ್ಯಾಚ್ ನೀಡಿದ ವಿರಾಟ್ ಕೊಹ್ಲಿ (8)
ಅಲ್ಝಾರಿ ಜೋಸೆಫ್ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ಹೊರನಡೆದ ಹಿಟ್ಮ್ಯಾನ್
51 ಎಸೆತಗಳಲ್ಲಿ 60 ರನ್ ಬಾರಿಸಿ ಇನಿಂಗ್ಸ್ ಅಂತ್ಯಗೊಳಿಸಿದ ರೋಹಿತ್ ಶರ್ಮಾ
ಹೊಸೈನ್ ಎಸೆತದಲ್ಲಿ ಲೆಗ್ ಸೈಡ್ನತ್ತ ಆಕರ್ಷಕವಾಗಿ ಬೌಂಡರಿ ಬಾರಿಸಿದ ಹಿಟ್ಮ್ಯಾನ್
ಜೋಸೆಫ್ ಎಸೆತದಲ್ಲಿ ಆಕರ್ಷಕ ಸ್ಟ್ರೈಟ್ ಹಿಟ್ ಮೂಲಕ ಬೌಂಡರಿಗಿಟ್ಟಿಸಿಕೊಂಡ ಹಿಟ್ಮ್ಯಾನ್
ಅರ್ಧಶತಕ ಪೂರೈಸಿದ ರೋಹಿತ್
42 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಹಿಟ್ಮ್ಯಾನ್
ಸ್ಪಿನ್ನರ್ ಅಕಿಲ್ ಹೊಸೈನ್ ಕೈಗೆ ಚೆಂಡು ನೀಡಿದ ನಾಯಕ ಕೀರನ್ ಪೊಲಾರ್ಡ್
ಮೊದಲ 10 ಓವರ್ಗಳಲ್ಲಿ 67 ರನ್ಗಳಿಸಿದ ಟೀಮ್ ಇಂಡಿಯಾ
ಕ್ರೀಸ್ನಲ್ಲಿ ಇಶಾನ್ ಕಿಶನ್-ರೋಹಿತ್ ಶರ್ಮಾ ಬ್ಯಾಟಿಂಗ್
ರೋಚ್ ಎಸೆತದಲ್ಲಿ ಪುಲ್ ಶಾಟ್ ಮೂಲಕ ಭರ್ಜರಿ ಸಿಕ್ಸ್ ಸಿಡಿಸಿದ ರೋಹಿತ್ ಶರ್ಮಾ
ಕೆಮರ್ ರೋಚ್ ಎಸೆತದಲ್ಲಿ ಫಸ್ಟ್ ಸ್ಲಿಪ್ ಮೂಲಕ ಆಕರ್ಷಕ ಬೌಂಡರಿ ಬಾರಿಸಿದ ರೋಹಿತ್ ಶರ್ಮಾ
ರೋಚ್ ಎಸೆತದಲ್ಲಿ ಪುಲ್ ಶಾಟ್ ಮೂಲಕ ಬೌಂಡರಿ ಬಾರಿಸಿದ ರೋಹಿತ್ ಶರ್ಮಾ
9ನೇ ಓವರ್‌ನಲ್ಲಿ 50 ರನ್ಗಳ ಗಡಿದಾಟಿದ ಟೀಮ್ ಇಂಡಿಯಾ
ರೋಚ್ ಓವರ್‌ನಲ್ಲಿ ಎರಡು ಬೌಂಡರಿ ಬಾರಿಸಿದ ರೋಹಿತ್ ಶರ್ಮಾ
8 ಓವರ್ ಮುಕ್ತಾಯಕ್ಕೆ ಟೀಮ್ ಇಂಡಿಯಾ ಸ್ಕೋರ್ 48
ಕ್ರೀಸ್ನಲ್ಲಿ ಇಶಾನ್ ಕಿಶನ್-ರೋಹಿತ್ ಶರ್ಮಾ ಬ್ಯಾಟಿಂಗ್
ಅಲ್ಝಾರಿ ಜೋಸೆಫ್ ಎಸೆತದಲ್ಲಿ ಮಿಡ್ ಆನ್ತ್ತ ರಾಕೆಟ್ ವೇಗದಲ್ಲಿ ಫೋರ್ ಸಿಡಿಸಿದ ಇಶಾನ್ ಕಿಶನ್
ಹೋಲ್ಡರ್ ಎಸೆತದಲ್ಲಿ ಆಫ್ ಸೈಡ್ನತ್ತ ಹಿಟ್ಮ್ಯಾನ್ ಬ್ಯಾಟ್ನಿಂದ ಸೂಪರ್ ಶಾಟ್…ಫೋರ್
12 ಎಸೆತಗಳ ಬಳಿಕ ಮೊದಲ ಬೌಂಡರಿ ಬಾರಿಸಿದ ಇಶಾನ್ ಕಿಶನ್
ಹೋಲ್ಡರ್ ಎಸೆತದಲ್ಲಿ ಫೋರ್ ಸಿಡಿಸಿದ ಕಿಶನ್
4 ಓವರ್ ಮುಕ್ತಾಯ
ಕ್ರೀಸ್ನಲ್ಲಿ ಇಶಾನ್ ಕಿಶನ್-ರೋಹಿತ್ ಶರ್ಮಾ ಬ್ಯಾಟಿಂಗ್
ಜೇಸನ್ ಹೋಲ್ಡರ್ ಎಸೆತದಲ್ಲಿ ಸ್ಟ್ರೈಟ್ ಡ್ರೈವ್…ಹಿಟ್ಮ್ಯಾನ್ ಬ್ಯಾಟ್ನಿಂದ ಆಕರ್ಷಕ ಬೌಂಡರಿ
ರೋಚ್ ಎಸೆತದಲ್ಲಿ ಲೆಗ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿ ಖಾತೆ ತೆರೆದ ರೋಹಿತ್ ಶರ್ಮಾ
ಮೊದಲ ಓವರ್: ಕೇಮರ್ ರೋಚ್
ಆರಂಭಿಕರು: ರೋಹಿತ್ ಶರ್ಮಾ-ಇಶಾನ್ ಕಿಶನ್
176 ರನ್ಗೆ ವೆಸ್ಟ್ ಇಂಡೀಸ್ ಆಲೌಟ್
ಟೀಮ್ ಇಂಡಿಯಾಗೆ 177 ರನ್ಗಳ ಸಾಧಾರಣ ಗುರಿ
ಟೀಮ್ ಇಂಡಿಯಾ ಪರ ಚಹಲ್ 4 ವಿಕೆಟ್ ಕಬಳಿಸಿದರೆ, ಸುಂದರ್ 3 ವಿಕೆಟ್ ಪಡೆದು ಮಿಂಚಿದರು.
ಚಹಲ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಮೂಲಕ ಭರ್ಜರಿ ಸಿಕ್ಸ್ ಸಿಡಿಸಿದ ಅಲ್ಝಾರಿ ಜೋಸೆಫ್
ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ಜೇಸನ್ ಹೋಲ್ಡರ್ (57)
71 ಎಸೆತಗಳಲ್ಲಿ 57 ರನ್ ಬಾರಿಸಿ ವಿಂಡೀಸ್ ತಂಡಕ್ಕೆ ಆಸರೆಯಾಗಿದ್ದ ಹೋಲ್ಡರ್
ಶಾರ್ದೂಲ್ ಎಸೆತದಲ್ಲಿ ಬೌಂಡರಿ ಬಾರಿಸಿ ಖಾತೆ ತೆರೆದ ಅಲ್ಝಾರಿ ಜೋಸೆಫ್
ವಾಷಿಂಗ್ಟನ್ ಸುಂದರ್ ಎಸೆತದಲ್ಲಿ ನೇರವಾಗಿ ಕ್ಯಾಚ್ ನೀಡಿದ ಫ್ಯಾಬಿಯಾನ್ ಅಲೆನ್ (29).
ಹೋಲ್ಡರ್-ಅಲೆನ್ 78 ರನ್ಗಳ ಜೊತೆಯಾಟ ಅಂತ್ಯ
ವೆಸ್ಟ್ ಇಂಡೀಸ್ ಆಲ್ರೌಂಡರ್ 58 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದಾರೆ.
78 ರನ್ಗೆ 6 ವಿಕೆಟ್ ಕಳೆದುಕೊಂಡಿದ್ದ ವಿಂಡೀಸ್ ತಂಡಕ್ಕೆ ಆಸರೆಯಾದ ಹೋಲ್ಡರ್ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರು.
WI 157/7 (38)
ಶಾರ್ದೂಲ್ ಠಾಕೂರ್ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸರ್ ಸಿಡಿಸಿದ ಅಲೆನ್
ಕ್ರೀಸ್ನಲ್ಲಿ ಜೇಸನ್ ಹೋಲ್ಡರ್-ಫ್ಯಾಬಿಯಾನ್ ಅಲೆನ್ ಬ್ಯಾಟಿಂಗ್
ಚಹಲ್ ಎಸೆತಕ್ಕೆ ಮೂರನೇ ಬಾರಿ ಸಿಕ್ಸ್ ಸಿಡಿಸಿದ ಹೋಲ್ಡರ್
8ನೇ ವಿಕೆಟ್ಗೆ ಅರ್ಧಶತಕದ ಜೊತೆಯಾಟವಾಡಿದ ಜೇಸನ್ ಹೋಲ್ಡರ್-ಫ್ಯಾಬಿಯಾನ್ ಅಲೆನ್
ಚಹಲ್ ಎಸೆತದಲ್ಲಿ ಜೇಸನ್ ಹೋಲ್ಡರ್ ಭರ್ಜರಿ ಹೊಡೆತ…ಬೌಂಡರಿ ಲೈನ್ನಲ್ಲಿ ಪ್ರಸಿದ್ಧ್ ಕೃಷ್ಣ ಕ್ಯಾಚ್ ಡ್ರಾಪ್…ಸಿಕ್ಸ್
ಕ್ರೀಸ್ನಲ್ಲಿ ಜೇಸನ್ ಹೋಲ್ಡರ್-ಫ್ಯಾಬಿಯಾನ್ ಅಲೆನ್ ಬ್ಯಾಟಿಂಗ್
And, 101 in quick succession ??#INDvWI https://t.co/r2WqMVPbI4
— BCCI (@BCCI) February 6, 2022
ಚಹಲ್ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಬೌಂಡರಿ ಬಾರಿಸಿದ ಜೇಸನ್ ಹೋಲ್ಡರ್
ಕ್ರೀಸ್ನಲ್ಲಿ ಜೇಸನ್ ಹೋಲ್ಡರ್-ಫ್ಯಾಬಿಯಾನ್ ಅಲೆನ್ ಬ್ಯಾಟಿಂಗ್
ಚಹಲ್ ಎಸೆತದಲ್ಲಿ ಜೇಸನ್ ಹೋಲ್ಡರ್ ಬಿಗ್ ಹಿಟ್…ಪಂದ್ಯದ ಮೊದಲ ಸಿಕ್ಸ್
ಪ್ರಸಿದ್ಥ್ ಕೃಷ್ಣ ಎಸೆತದಲ್ಲಿ ವಿಕೆಟ್ ಕೀಪರ್ ಪಂತ್ಗೆ ಕ್ಯಾಚ್ ನೀಡಿ ಹೊರನಡೆದ ಅಕಿಲ್ ಹೊಸೈನ್
ಚಹಲ್ ಎಸೆತದಲ್ಲಿ ಕೀಪರ್ಗೆ ಕ್ಯಾಚ್ ನೀಡಿ ಹೊರನಡೆದ ಬ್ರೂಕ್ಸ್ (12)
1.5 ಓವರ್‌ನಲ್ಲಿ 6 ರನ್ ನೀಡಿ 3 ವಿಕೆಟ್ ಕಬಳಿಸಿರುವ ಚಹಲ್
ಏಕದಿನ ಕ್ರಿಕೆಟ್ನಲ್ಲಿ 100 ವಿಕೆಟ್ ಪಡೆದ ಬೌಲರುಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಚಹಲ್
60 ಪಂದ್ಯಗಳ ಮೂಲಕ ಈ ಸಾಧನೆ ಮಾಡಿದ ಚಹಲ್
ಯುಝಿ ಚಹಲ್ ಗೂಗ್ಲಿ…ಕೀರನ್ ಪೊಲಾರ್ಡ್ (0) ಕ್ಲೀನ್ ಬೌಲ್ಡ್
ಎರಡು ಎಸೆತಗಳಲ್ಲಿ 2 ವಿಕೆಟ್ ಉರುಳಿಸಿದ ಚಹಲ್
ಚಹಲ್ ಎಸೆತದಲ್ಲಿ ನಿಕೋಲಸ್ ಪೂರನ್ (18) ಎಲ್ಬಿಡಬ್ಲ್ಯೂ….ಔಟ್
ಯುಝಿ ಚಹಲ್ ಕೈಗೆ ಚೆಂಡು ನೀಡಿದ ನಾಯಕ ರೋಹಿತ್ ಶರ್ಮಾ
ವಾಷಿಂಗ್ಟನ್ ಸುಂದರ್ ಎಸೆತದಲ್ಲಿ ಪೂರನ್ ಸ್ವೀಪ್ ಶಾಟ್…ಚೆಂಡು ಬೌಂಡರಿಗೆ…ಫೋರ್
ಕ್ರೀಸ್ನಲ್ಲಿ ನಿಕೋಲಸ್ ಪೂರನ್ – ಶಮರ್ ಬ್ರೂಕ್ಸ್ ಬ್ಯಾಟಿಂಗ್
ಮೊದಲ ವಿಕೆಟ್ ಮೊಹಮ್ಮದ್ ಸಿರಾಜ್ಗೆ
2ನೇ ಮತ್ತು 3ನೇ ವಿಕೆಟ್ ಪಡೆದ ವಾಷಿಂಗ್ಟನ್ ಸುಂದರ್
ವಾಷಿಂಗ್ಟನ್ ಸುಂದರ್ ಎಸೆತದಲ್ಲಿ ಡೀಪ್ ಎಕ್ಸ್ಟ್ರಾ ಕವರ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ನಿಕೋಲಸ್ ಪೂರನ್
ವಾಷಿಂಗ್ಟನ್ ಸುಂದರ್ ಸ್ಪಿನ್ ಮೋಡಿ- ಮೇಡನ್ ಓವರ್
ಕ್ರೀಸ್ನಲ್ಲಿ ನಿಕೋಲಸ್ ಪೂರನ್ – ಶಮರ್ ಬ್ರೂಕ್ಸ್ ಬ್ಯಾಟಿಂಗ್
ಶಾರ್ದೂಲ್ ಠಾಕೂರ್ ಎಸೆತದಲ್ಲಿ ಬೌಂಡರಿ ಬಾರಿಸಿ ಖಾತೆ ತೆರೆದ ನಿಕೋಲಸ್ ಪೂರನ್
ವಾಷಿಂಗ್ಟನ್ ಸುಂದರ್ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ಹೊರ ನಡೆದ ಡಾರೆನ್ ಬ್ರಾವೊ (18)
ವೆಸ್ಟ್ ಇಂಡೀಸ್ 2ನೇ ವಿಕೆಟ್ ಪತನ
ವಾಷಿಂಗ್ಟನ್ ಸುಂದರ್ ಎಸೆತದಲ್ಲಿ ಫ್ರಂಟ್ ಫೀಲ್ಡರ್ ಸೂರ್ಯಕುಮಾರ್ ಯಾದವ್ಗೆ ಕ್ಯಾಚ್ ನೀಡಿದ ಬ್ರಾಂಡನ್ ಕಿಂಗ್ (13)
ಮೊದಲ 10 ಓವರ್ ಮುಕ್ತಾಯ
ನಿಧಾನಗತಿಯ ಆರಂಭ ಪಡೆದಿರುವ ವೆಸ್ಟ್ ಇಂಡೀಸ್
ಕ್ರೀಸ್ನಲ್ಲಿ ಡಾರೆನ್ ಬ್ರಾವೊ – ಬ್ರಾಂಡನ್ ಕಿಂಗ್ ಬ್ಯಾಟಿಂಗ್
ಕ್ರೀಸ್ನಲ್ಲಿ ಡಾರೆನ್ ಬ್ರಾವೊ – ಬ್ರಾಂಡನ್ ಕಿಂಗ್ ಬ್ಯಾಟಿಂಗ್
ವಾಷಿಂಗ್ಟನ್ ಸುಂದರ್ ಕೈಗೆ ಚೆಂಡು ನೀಡಿದ ರೋಹಿತ್ ಶರ್ಮಾ
ಕ್ರೀಸ್ನಲ್ಲಿ ಡಾರೆನ್ ಬ್ರಾವೊ – ಬ್ರಾಂಡನ್ ಕಿಂಗ್ ಬ್ಯಾಟಿಂಗ್
ಪ್ರಸಿದ್ಧ ಕೃಷ್ಣ ಎಸೆತದಲ್ಲಿ ಭರ್ಜರಿ ಬೌಂಡರಿ ಬಾರಿಸಿದ ಡಾರೆನ್ ಬ್ರಾವೊ
ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ಸೂಪರ್ ಕವರ್ ಡ್ರೈವ್ ಶಾಟ್ ಬಾರಿಸಿದ ಬ್ರಾಂಡನ್ ಕಿಂಗ್…ಫೋರ್
ಸಿರಾಜ್ ಸತತ ಎರಡು ಎಸೆತಗಳಲ್ಲಿ ಬೌಂಡರಿ ಬಾರಿಸಿದ ಶಾಯ್ ಹೋಪ್
ಮರು ಎಸೆತದಲ್ಲೇ ಶಾಯ್ ಹೋಪ್ ಬೌಲ್ಡ್
ಟೀಮ್ ಇಂಡಿಯಾಗೆ ಮೊದಲ ಯಶಸ್ಸು
ಸಿರಾಜ್ ಔಟ್ ಸೈಡ್ ಆಫ್ ಸೈಡ್ ಎಸೆತ…
ಬ್ಯಾಕ್ ಟು ಬ್ಯಾಕ್ ಎರಡು ಬೌಂಡರಿ ಬಾರಿಸಿದ ಶಾಯ್ ಹೋಪ್
ಕ್ರೀಸ್ನಲ್ಲಿ ಶಾಯ್ ಹೋಪ್ ಮತ್ತು ಬ್ರಾಂಡನ್ ಕಿಂಗ್ ಬ್ಯಾಟಿಂಗ್
2ನೇ ಓವರ್ನ ಮೊದಲ ಎಸೆತದಲ್ಲೇ ಬ್ರಾಂಡನ್ ಕಿಂಗ್ ಬೌಂಡರಿ
ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ಬೌಂಡರಿ ಬಾರಿಸಿ ತಂಡದ ರನ್ ಖಾತೆ ತೆರೆದ ಕಿಂಗ್
ಮೊದಲ ಓವರ್‌ನಲ್ಲಿ ಮೊಹಮ್ಮದ್ ಸಿರಾಜ್ ಬೆಂಕಿ ಬೌಲಿಂಗ್
ಯಾವುದೇ ರನ್ ನೀಡದೆ ಮೇಡನ್ ಓವರ್ ಎಸೆದ ಸಿರಾಜ್
WI 0/0 (1)
ಮೊದಲ ಓವರ್: ಮೊಹಮ್ಮದ್ ಸಿರಾಜ್
ವೆಸ್ಟ್ ಇಂಡೀಸ್ ಆರಂಭಿಕರು:
ಶಾಯ್ ಹೋಪ್
ಬ್ರಾಂಡನ್ ಕಿಂಗ್
ಏಕದಿನ ಕ್ರಿಕೆಟ್ನಲ್ಲಿ ಮೈಲುಗಲ್ಲು ತಲುಪಿದ ಮೊದಲ ತಂಡ
50 ODIಗಳು: ಇಂಗ್ಲೆಂಡ್ (ಜನವರಿ 1980)
100 ODIಗಳು: ಆಸ್ಟ್ರೇಲಿಯಾ (ಜನವರಿ 1984)
500 ODIಗಳು: ಪಾಕಿಸ್ತಾನ (ಜೂನ್ 2001)
1000 ODIಗಳು: ಭಾರತ (ಫೆಬ್ರವರಿ 2022)
A look at #TeamIndia's Playing XI for the 1st ODI.
Live – https://t.co/NH3En574vl #INDvWI @Paytm pic.twitter.com/SYFrR5LZ5F
— BCCI (@BCCI) February 6, 2022
ವೆಸ್ಟ್ ಇಂಡೀಸ್ ಪ್ಲೇಯಿಂಗ್ 11: ಬ್ರಾಂಡನ್ ಕಿಂಗ್, ಶಾಯ್ ಹೋಪ್, ಶಮರ್ ಬ್ರೂಕ್ಸ್, ಡ್ಯಾರೆನ್ ಬ್ರಾವೋ, ನಿಕೋಲಸ್ ಪೂರನ್(ವಿಕೆಟ್ ಕೀಪರ್), ಕೀರಾನ್ ಪೊಲಾರ್ಡ್(ನಾಯಕ), ಜೇಸನ್ ಹೋಲ್ಡರ್, ಫ್ಯಾಬಿಯನ್ ಅಲೆನ್, ಅಲ್ಜಾರಿ ಜೋಸೆಫ್, ಕೆಮರ್ ರೋಚ್, ಅಕೇಲ್ ಹೋಸೇನ್
ಭಾರತ ಪ್ಲೇಯಿಂಗ್: ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ರಿಷಬ್ ಪಂತ್(ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್
Congratulations to @HoodaOnFire who is all set to make his debut for #TeamIndia. #INDvWI pic.twitter.com/849paxXNgM
— BCCI (@BCCI) February 6, 2022
ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಐಸಿಸಿ ಅಂಡರ್ – 19 ವಿಶ್ವಕಪ್ನಲ್ಲಿ (ICC Under 19 World Cup 2022) ಭಾರತದ ಪಾರುಪತ್ಯ ಮುಂದುವರೆದಿದೆ. ಶನಿವಾರ ರಾತ್ರಿ ನಡೆದ ಅಂತಿಮ ಫೈನಲ್ ಕಾದಾಟದಲ್ಲಿ ಇಂಗ್ಲೆಂಡ್ ವಿರುದ್ಧ 4 ವಿಕೆಟ್ಗಳ ಗೆಲುವು ಸಾಧಿಸುವ ಮೂಲಕ ಭಾರತ ಅಂಡರ್ – 19 ತಂಡ (England U19 vs India U19) ದಾಖಲೆಯ ಐದನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
2⃣0⃣0⃣0⃣ ?
2⃣0⃣0⃣8⃣ ?
2⃣0⃣1⃣2⃣ ?
2⃣0⃣1⃣8⃣ ?
2⃣0⃣2⃣2⃣ ?India U19 – The FIVE-TIME World Cup Winners ? ?#U19CWC #BoysInBlue pic.twitter.com/DiE53Sdu0Y
— BCCI (@BCCI) February 5, 2022
Published On - 12:48 pm, Sun, 6 February 22