
ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಟೀಂ ಇಂಡಿಯಾವನ್ನು (India vs West Indies) ಇಂದು ಪ್ರಕಟಿಸಲಾಗಿದೆ. ವಿಂಡೀಸ್ ವಿರುದ್ಧದ ಸರಣಿಗೆ ಟೀಂ ಇಂಡಿಯಾದಿಂದ ಐದು ಆಟಗಾರರನ್ನು ಕೈಬಿಡಲಾಗಿದೆ. ಆದರೆ ಈ ಸರಣಿಗೆ ಹೊಸ ಉಪನಾಯಕನನ್ನು ಆಯ್ಕೆ ಮಾಡಲಾಗಿದೆ ಎಂಬುದು ದೊಡ್ಡ ಸುದ್ದಿ. ಈ ಆಟಗಾರ ಬೇರೆ ಯಾರೂ ಅಲ್ಲ, ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ (Ravindra Jadeja). ವಾಸ್ತವವಾಗಿ ಇಂಗ್ಲೆಂಡ್ ಸರಣಿಯಲ್ಲಿ ರಿಷಭ್ ಪಂತ್ ಉಪನಾಯಕರಾಗಿದ್ದರು. ಆದರೆ ಗಾಯದಿಂದಾಗಿ ಅವರು ವೆಸ್ಟ್ ಇಂಡೀಸ್ ಸರಣಿಗೆ ಆಯ್ಕೆಯಾಗಿಲ್ಲ. ಹೀಗಾಗಿ ಉಪನಾಯಕನನ್ನು ಬದಲಿಸಲಾಗಿದೆ. ಆದಾಗ್ಯೂ ರವೀಂದ್ರ ಜಡೇಜಾ ಅವರನ್ನು ಉಪನಾಯಕರನ್ನಾಗಿ ನೇಮಿಸಿರುವುದು ನಿಜಕ್ಕೂ ಆಶ್ಚರ್ಯಕರವಾಗಿದೆ.
ವಾಸ್ತವವಾಗಿ ಇಂಗ್ಲೆಂಡ್‌ನಲ್ಲಿ ನಡೆದ ಐದನೇ ಟೆಸ್ಟ್‌ನಲ್ಲಿ ಕೆಎಲ್ ರಾಹುಲ್ ತಂಡದ ಉಪನಾಯಕರಾಗಿದ್ದರು. ಹೀಗಿರುವಾಗ ಅನುಭವಿ ರಾಹುಲ್ಗೆ ಉಪನಾಯಕತ್ವವನ್ನು ನೀಡದೆ ವೃತ್ತಿಜೀವನದ ಕೊನೆಯ ದಿನಗಳನ್ನು ಎಣಿಸುತ್ತಿರುವ ರವೀಂದ್ರ ಜಡೇಜಾಗೆ ಈ ಜವಾಬ್ದಾರಿ ವಹಿಸಲಾಗಿದೆ. ತಂಡದಲ್ಲಿ ಈ ಜವಾಬ್ದಾರಿಯನ್ನು ಹೊರುವ ಹಲವು ಆಟಗಾರರು ಇದ್ದಾಗಲೂ ಜಡೇಜಾ ಹೇಗೆ ಉಪನಾಯಕತ್ವ ಸಿಕ್ಕಿತ್ತು ಎಂಬುದು ಪ್ರಶ್ನೆಯಾಗಿದೆ.
ಪ್ರಸ್ತುತ ರವೀಂದ್ರ ಜಡೇಜಾ ಅವರಿಗೆ 36 ವರ್ಷ. ಅಚ್ಚರಿಯ ಸಂಗತಿಯೆಂದರೆ ಟೀಂ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ ಅವರ ಟೆಸ್ಟ್ ವೃತ್ತಿಜೀವನ ಈ ವಯಸ್ಸಿನಲ್ಲಿ ಕೊನೆಗೊಂಡಿತು. ಆದರೆ ಅದೇ ವಯಸ್ಸಿನ ಜಡೇಜಾಗೆ ಉಪನಾಯಕತ್ವ ನೀಡಲಾಗಿದೆ. ಭಾರತೀಯ ತಂಡದ ಆಯ್ಕೆದಾರರು ಜಡೇಜಾ ಅವರಿಗೆ ಈ ಜವಾಬ್ದಾರಿ ನೀಡಲು ಕಾರಣವೇನು?. ವಾಸ್ತವವಾಗಿ ರವೀಂದ್ರ ಜಡೇಜಾ ಅವರ ಬಡ್ತಿಗೆ ನಿಜವಾದ ಕಾರಣ ಇಂಗ್ಲೆಂಡ್‌ನಲ್ಲಿ ಅವರ ಅದ್ಭುತ ಪ್ರದರ್ಶನ ಎಂದು ಹೇಳಲಾಗುತ್ತಿದೆ. ಜಡೇಜಾ ಇಂಗ್ಲೆಂಡ್‌ನಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿ 86 ಸರಾಸರಿಯಲ್ಲಿ 516 ರನ್ ಗಳಿಸಿದರು. ಇದರಲ್ಲಿ ಒಂದು ಶತಕ ಮತ್ತು ಐದು ಅರ್ಧಶತಕಗಳು ಸೇರಿದ್ದವು. ಬೌಲಿಂಗ್ನಲ್ಲೂ ಏಳು ವಿಕೆಟ್‌ಗಳನ್ನು ಪಡೆದಿದ್ದರು. ಅವರ ಪ್ರದರ್ಶನ ಮತ್ತು ಅನುಭವವನ್ನು ಪರಿಗಣಿಸಿ ಈ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿದೆ.
8 ತಿಂಗಳಲ್ಲಿ ನಾಲ್ವರು ಸೂಪರ್ ಸ್ಟಾರ್ಗಳ ನಿವೃತ್ತಿ; ಭಾರತ ಟೆಸ್ಟ್ ತಂಡದ ಸುವರ್ಣ ಯುಗಾಂತ್ಯ
ಒಂದೆಡೆ ಜಡೇಜಾ ಅವರಿಗೆ ಬಡ್ತಿ ನೀಡಿದರೆ, ಮತ್ತೊಂದೆಡೆ ಐದು ಆಟಗಾರರನ್ನು ತಂಡದಿಂದ ಕೈಬಿಡಲಾಗಿದೆ. ಕರುಣ್ ನಾಯರ್, ಶಾರ್ದೂಲ್ ಠಾಕೂರ್, ಆಕಾಶ್ ದೀಪ್, ಅಭಿಮನ್ಯು ಈಶ್ವರನ್ ಮತ್ತು ಅಂಶುಲ್ ಕಾಂಬೋಜ್ ಅವರನ್ನು ಟೀಂ ಇಂಡಿಯಾದಿಂದ ಕೈಬಿಡಲಾಗಿದೆ. ಈ ಮಧ್ಯೆ, ಅಕ್ಷರ್ ಪಟೇಲ್ ಮತ್ತು ದೇವದತ್ ಪಡಿಕ್ಕಲ್ ತಂಡಕ್ಕೆ ಮರಳಿದ್ದಾರೆ.
ಭಾರತದ ಟೆಸ್ಟ್ ತಂಡ: ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್, ಸಾಯಿ ಸುದರ್ಶನ್, ಸಾಯಿ ಸುದರ್ಶನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ನಿತೀಶ್ ಕುಮಾರ್ ರೆಡ್ಡಿ, ಎನ್ ಜಗದೀಸನ್ (ವಿಕೆಟ್ ಕೀಪರ್).
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ