IND vs BAN 1st ODI: ಇಂದು ಭಾರತ-ಬಾಂಗ್ಲಾದೇಶ ಮೊದಲ ಏಕದಿನ: ರೋಹಿತ್​ಗೆ ಆಡುವ ಬಳಗದ್ದೇ ದೊಡ್ಡ ಸವಾಲು

| Updated By: Vinay Bhat

Updated on: Dec 04, 2022 | 8:55 AM

India vs Bangladesh ODI: ನಾಯಕ ರೋಹಿತ್ ಶರ್ಮಾ ಅವರಿಗೆ ಪ್ಲೇಯಿಂಗ್ ಇಲೆವೆನ್​ನದ್ದೇ ದೊಡ್ಡ ಚಿಂತೆ ಆಗಿದೆ. ಮುಖ್ಯವಾಗಿ ಓಪನರ್​ಗಳು ಯಾರು ಎಂಬ ಗೊಂದಲ ಉಂಟಾಗಿದೆ. ರೋಹಿತ್​ಗೆ ಜೋಡಿಯಾಗಿ ಕಣಕ್ಕಿಳಿಯಲು ಮೂರು ಬ್ಯಾಟರ್​ಗಳು ತಯಾರಾಗಿದ್ದಾರೆ.

IND vs BAN 1st ODI: ಇಂದು ಭಾರತ-ಬಾಂಗ್ಲಾದೇಶ ಮೊದಲ ಏಕದಿನ: ರೋಹಿತ್​ಗೆ ಆಡುವ ಬಳಗದ್ದೇ ದೊಡ್ಡ ಸವಾಲು
India vs Bangladesh
Follow us on

ಭಾರತ ಕ್ರಿಕೆಟ್ ತಂಡದ ಬಾಂಗ್ಲಾದೇಶ (India vs Bangladesh) ಪ್ರವಾಸಕ್ಕೆ ಇಂದು ಚಾಲನೆ ಸಿಗಲಿದೆ. ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮೊದಲ ಏಕದಿನ ಪಂದ್ಯ ಆಯೋಜನೆ ಮಾಡಲಾಗಿದೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಸೋತ ಬಳಿಕ ಟೀಮ್ ಇಂಡಿಯಾ 50 ಓವರ್​ಗಳ ಪಂದ್ಯದಲ್ಲಿ ಕಮ್​ಬ್ಯಾಕ್ ಮಾಡಲು ಇದು ಉತ್ತಮ ವೇದಿಕೆಯಾಗಿದೆ. ಅಲ್ಲದೆ ಮುಂದಿನ ವರ್ಷ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್​ಗೂ ತಂಡ ಕಟ್ಟಲು ಈ ಸರಣಿ ಸಹಕಾರಿ ಆಗಲಿದೆ. ರೋಹಿತ್ ಶರ್ಮಾ (Rohit Sharma) ನಾಯಕನಾಗಿ ತಂಡಕ್ಕೆ ಕಮ್​ಬ್ಯಾಕ್ ಮಾಡಿದ್ದಾರೆ. ಇವರ ಜೊತೆಗೆ ವಿಶ್ರಾಂತಿಯಲ್ಲಿದ್ದ ವಿರಾಟ್ ಕೊಹ್ಲಿ (Virat Kohli), ಕೆಎಲ್ ರಾಹುಲ್ ಕೂಡ ತಂಡ ಸೇರಿಕೊಂಡಿದ್ದಾರೆ. ಉಭಯ ತಂಡಗಳಲ್ಲಿ ಕೂಡ ಇಂಜುರಿಯಿಂದ ಕೆಲ ಪ್ರಮುಖ ಆಟಗಾರರು ಅಲಭ್ಯರಾಗಿದ್ದು, ಈ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ.

ರೋಹಿತ್​​ಗೆ ಓಪನರ್​ಗಳ ಚಿಂತೆ:

ನಾಯಕ ರೋಹಿತ್ ಶರ್ಮಾ ಅವರಿಗೆ ಪ್ಲೇಯಿಂಗ್ ಇಲೆವೆನ್​ನದ್ದೇ ದೊಡ್ಡ ಚಿಂತೆ ಆಗಿದೆ. ಮುಖ್ಯವಾಗಿ ಓಪನರ್​ಗಳು ಯಾರು ಎಂಬ ಗೊಂದಲ ಉಂಟಾಗಿದೆ. ರೋಹಿತ್​ಗೆ ಜೋಡಿಯಾಗಿ ಕಣಕ್ಕಿಳಿಯಲು ಮೂರು ಬ್ಯಾಟರ್​ಗಳು ತಯಾರಾಗಿದ್ದಾರೆ. ಶಿಖರ್ ಧವನ್, ಕೆಎಲ್ ರಾಹುಲ್ ಹಾಗೂ ಇಶಾನ್ ಕಿಶನ್ ಪೈಕಿ ಯಾರಿಗೆ ಸ್ಥಾನ ಎಂಬುದು ಕುತೂಹಲ ಕೆರಳಿಸಿದೆ. ಮಧ್ಯಮ ಕ್ರಮಾಂಕದಲ್ಲಿ ಕೂಡ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ರಾಹುಲ್ ತ್ರಿಪಾಠಿ, ರಜತ್ ಪಟಿದಾರ್ ಎಂಬ ಅನೇಕ ಆಯ್ಕೆಗಳಿವೆ. ವಾಷಿಂಗ್ಟನ್ ಸುಂದರ್, ಶಹ್ಬಾಜ್ ಅಹ್ಮದ್ ಹಾಗೂ ಅಕ್ಷರ್ ಪಟೇಲ್ ಆಲ್ರೌಂಡರ್​ಗಳಾಗಿದ್ದಾರೆ.

ಇದನ್ನೂ ಓದಿ
Asia Cup 2023: BCCI ಗೆ ಬೆದರಿಕೆ ಹಾಕಿ, ಯು ಟರ್ನ್​ ಹೊಡೆದ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ
Deepak Chahar: ಮಲೇಷ್ಯಾ ಏರ್​ಲೈನ್ಸ್​ಗೆ ಮನಬಂದಂತೆ ಬೈದ ದೀಪಕ್ ಚಹರ್: ಮೊದಲ ಏಕದಿನದಿಂದ ಔಟ್?
Mohammed Shami: ಬಾಂಗ್ಲಾ ವಿರುದ್ಧದ ಪಂದ್ಯಕ್ಕೂ ಮುನ್ನ ಭಾರತಕ್ಕೆ ಬಿಗ್ ಶಾಕ್: ಮೊಹಮ್ಮದ್ ಶಮಿ ಔಟ್
IND vs BAN: ಭಾರತ ವಿರುದ್ಧದ ಏಕದಿನ ಪಂದ್ಯ ವೀಕ್ಷಣೆಗೆ ಬಾಂಗ್ಲಾದೇಶ ನಿಗದಿ ಪಡಿಸಿದ ಟಿಕೆಟ್ ಬೆಲೆ ಎಷ್ಟು ಗೊತ್ತೆ?: ಶಾಕ್​ ಆಗ್ತೀರಾ

PAK vs ENG: 2 ಇನಿಂಗ್ಸ್​ನಲ್ಲಿ 7 ಶತಕ…ಬೌಲರ್​ಗಳು ಹೈರಾಣ..!

ಶಮಿ ಹೊರಕ್ಕೆ:

ಟಿ20 ವಿಶ್ವಕಪ್‌ ನಂತರ ಮೊಹಮ್ಮದ್ ಶಮಿ ತರಬೇತಿ ಅವಧಿಯಲ್ಲಿ ಗಾಯಗೊಂಡ ಕಾರಣ ಬಾಂಗ್ಲಾ ವಿರುದ್ಧದ ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ. ಹೀಗಾಗಿ ಇವರ ಜಾಗಕ್ಕೆ ಯುವ ವೇಗಿ ಉಮ್ರಾನ್ ಮಲಿಕ್ ಆಯ್ಕೆ ಆಗಿದ್ದಾರೆ. ಶಮಿ ಅವರ ಗಾಯದ ಪ್ರಮಾಣ ಎಷ್ಟಿದೆ ಎಂಬುದು ಇನ್ನೂ ತಿಳಿದಿಲ್ಲ. ಅವರು ಚೇತರಿಸಿಕೊಳ್ಳಲು ಎಷ್ಟು ಸಮಯ ಬೇಕು ಎಂಬುದು ಇನ್ನಷ್ಟೆ ತಿಳಿದುಬರಬೇಕಿದೆ. ಶಮಿ ಅನುಪಸ್ಥಿತಿಯಲ್ಲಿ ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್ ಮತ್ತು ದೀಪಕ್ ಚಹರ್ ಏಕದಿನ ಸರಣಿಯನ್ನು ವೇಗಿಗಳ ವಿಭಾಗದಿಂದ ಮುನ್ನಡೆಸಬೇಕಿದೆ. ಇವರ ಜೊತೆಗೆ ಕುಲದೀಪ್ ಸೇನ್ ಕೂಡ ರೇಸ್​ನಲ್ಲಿದ್ದಾರೆ.

ಮಳೆಯ ಕಾಟ ಇದೆಯೇ?:

ಭಾರತ ಹಾಗೂ ನ್ಯೂಜಿಲೆಂಡ್​ ನಡುವಿನ ಟಿ20 ಹಾಗೂ ಏಕದಿನ ಸರಣಿಯಲ್ಲಿ ಮಳೆ ಬೆಂಬಿಡದೆ ಕಾಡಿತ್ತು. ಹೀಗಿರುವಾಗ ಭಾರತ-ಬಾಂಗ್ಲಾ ಪಂದ್ಯಕ್ಕೂ ಹವಾಮಾನದ ಬಗ್ಗೆಯೂ ಅಭಿಮಾನಿಗಳಲ್ಲಿ ಭೀತಿ ಎದುರಾಗಿದೆ. ಆದರೆ, ಇಲ್ಲಿನ ಹವಾಮಾನ ವರದಿಯ ಪ್ರಕಾರ ಪಂದ್ಯದ ದಿನದಂದು ಬಿಸಿಲು ಇರಲಿದ್ದು ಅಭಿಮಾನಿಗಳು ಇಡೀ ಪಂದ್ಯವನ್ನು ನೋಡುವುದಕ್ಕೆ ಯಾವುದೇ ಅಡೆತಡೆ ಇಲ್ಲ ಎಂದು ಹವಾಮಾನ ವರದಿಯಲ್ಲಿ ತಿಳಿಸಲಾಗಿದೆ. ಸುಮಾರು ಆರು ತಿಂಗಳ ಬಳಿಕ ಈ ಪಿಚ್​ನಲ್ಲಿ ಪಂದ್ಯ ನಡೆಯುತ್ತಿರುವ ಕಾರಣ ಉಭಯ ತಂಡಗಳಿಗೆ ಸುಲಭವಂತು ಕಂಡಿತಾ ಇಲ್ಲ.

Tagenarine Chanderpaul: ಚೊಚ್ಚಲ ಇನಿಂಗ್ಸ್​ನಲ್ಲೇ ಅರ್ಧಶತಕ ಬಾರಿಸಿ ಶುಭಾರಂಭ ಮಾಡಿದ ಖ್ಯಾತ ಕ್ರಿಕೆಟಿಗನ ಪುತ್ರ..!

ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಏಕದಿನ ಪಂದ್ಯ ಬೆಳಗ್ಗೆ 11:30ಕ್ಕೆ ಆರಂಭವಾಗಲಿದ್ದು, ಟಾಸ್ 11 ಗಂಟೆಗೆ ನಡೆಯಲಿದೆ. ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರವಾಗಲಿದೆ. ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ಸನ್ ಲೈವ್ ಅಪ್ಲಿಕೇಶನ್‌ನಲ್ಲಿ ನೋಡಬಹುದು.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆ.ಎಲ್. ರಾಹುಲ್ (ಉಪ ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ರಜತ್ ಪಾಟೀದಾರ್, ಶ್ರೇಯಸ್ ಅಯ್ಯರ್, ರಾಹುಲ್ ತ್ರಿಪಾಠಿ, ರಿಷಭ್ ಪಂತ್ (ವಿಕೆಟ್‌ ಕೀಪರ್), ಇಶಾನ್ ಕಿಶನ್, ಶಹ್ಬಾಜ್ ಅಹಮದ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ದೀಪಕ್ ಚಾಹರ್, ಕುಲದೀಪ್ ಸೇನ್, ಉಮ್ರಾನ್ ಮಲಿಕ್.

ಬಾಂಗ್ಲಾದೇಶ ತಂಡ: ಲಿಟ್ಟನ್ ದಾಸ್ (ನಾಯಕ), ಅನಾಮುಲ್ ಹಕ್ ಬಿಜೋಯ್, ಶಕಿಬ್ ಅಲ್ ಹಸನ್, ಮುಷ್ಫೀಕುರ್ ರಹೀಮ್, ಅಫೀಫ್ ಹುಸೇನ್, ಯಾಸಿರ್ ಅಲಿ, ಮೆಹಿದಿ ಹಸನ್ ಮಿರಾಜ್, ಮುಸ್ತಫಿಜುರ್ ರೆಹಮಾನ್, ಹಸನ್ ಮಹಮೂದ್, ಎಬಾಡೋತ್ ಹುಸೇನ್, ನಸ್ಮದ್, ನಸ್ಮದ್, ನಸ್ಮದ್ ಶಾಂತೋ, ನೂರುಲ್ ಹಸನ್ ಸೋಹನ್.

ಹೆಚ್ಚಿನ ಕ್ರೀಡಾ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:10 am, Sun, 4 December 22