IND Vs BAN 1st ODI Match Live Streaming: ಭಾರತ- ಬಾಂಗ್ಲಾ ಮುಖಾಮುಖಿ; ಪಂದ್ಯ ಆರಂಭ ಎಷ್ಟು ಗಂಟೆಗೆ?
IND Vs BAN 1st ODI Match Live Streaming: ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಭಾನುವಾರದಂದು ಮೊದಲ ಏಕದಿನ ಪಂದ್ಯವನ್ನು ಆಡುವುದರೊಂದಿಗೆ ಏಕದಿನ ಸರಣಿಯನ್ನು ಆರಂಭಿಸಲಿವೆ.
ನ್ಯೂಜಿಲೆಂಡ್‌ನಲ್ಲಿ (New Zealand) ನಡೆದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಸೋತು ಬರಿಗೈಯಲ್ಲಿ ವಾಪಸ್ಸಾಗಿದ್ದ ಟೀಂ ಇಂಡಿಯಾ (Team India) ಈಗ ಬಾಂಗ್ಲಾದೇಶಕ್ಕೆ ಹಾರಿದೆ. ಇಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಬೇಕಾಗಿದೆ. ಈ ಸರಣಿಯಲ್ಲಿ ಟೀಂ ಇಂಡಿಯಾದ ಹಲವು ಹಿರಿಯ ಆಟಗಾರರು ತಂಡಕ್ಕೆ ಪುನರಾಗಮನ ಮಾಡುತ್ತಿದ್ದಾರೆ. ಐಸಿಸಿ ಟಿ20 ವಿಶ್ವಕಪ್ (ICC T20 World Cup 2022) ನಂತರ, ತಂಡದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (Rohit Sharma, Virat Kohli, KL Rahul) ವಿಶ್ರಾಂತಿ ಪಡೆದಿದ್ದರು. ಈಗ ಈ ಮೂವರು ಬಾಂಗ್ಲಾದೇಶದ ವಿರುದ್ಧ ಕಣಕ್ಕಿಳಿಯಲಿದ್ದಾರೆ.
ಆದರೆ, ಈ ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಕೂಡ ಹಿನ್ನಡೆ ಅನುಭವಿಸಿದೆ. ತಂಡದ ಅನುಭವಿ ಬೌಲರ್ ಮೊಹಮ್ಮದ್ ಶಮಿ ಗಾಯದ ಸಮಸ್ಯೆಯಿಂದಾಗಿ ಸರಣಿಯಿಂದ ಹೊರಗುಳಿದಿದ್ದಾರೆ. ಈ ಕುರಿತು ಬಿಸಿಸಿಐ ಶನಿವಾರ ಹೇಳಿಕೆ ನೀಡುವ ಮೂಲಕ ಮಾಹಿತಿ ನೀಡಿದ್ದು ಅವರ ಬದಲು ಯುವ ವೇಗಿ ಉಮ್ರಾನ್ ಮಲಿಕ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಶಮಿ ನಿರ್ಗಮನದಿಂದಾಗಿ ತಂಡದ ಬೌಲಿಂಗ್ ವಿಭಾಗದಲ್ಲಿ ಅನುಭವಿಗಳ ಕೊರತೆ ಎದ್ದುಕಾಣುತ್ತಿದೆ.
ಫಾರ್ಮ್‌ಗೆ ಮರಳುತ್ತಾರಾ ರೋಹಿತ್?
ಐಸಿಸಿ ಟಿ20 ವಿಶ್ವಕಪ್ ಬಳಿಕ ಇದೀಗ ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನತ್ತ ಟೀಂ ಇಂಡಿಯಾ ಗಮನ ಹರಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಈ ಸರಣಿಯಲ್ಲಿ ನಾಯಕ ರೋಹಿತ್ ಶರ್ಮಾ ಪಾತ್ರವು ಬಹಳ ಮುಖ್ಯವಾಗಿದೆ. ಏಕೆಂದರೆ ಈ ಸರಣಿಯು ಟೀಮ್ ಇಂಡಿಯಾದ ವಿಶ್ವಕಪ್ ಅಭಿಯಾನದ ತಯಾರಿಗೆ ನಾಂದಿಯಾಗಬಹುದು. ಸ್ವತಃ ತಂಡದ ನಾಯಕ ರೋಹಿತ್ ಫಾರ್ಮ್ ಕಳೆದುಕೊಂಡು ಸಾಕಷ್ಟು ದಿನಗಳೇ ಕಳೆದಿವೆ. ಹೀಗಾಗಿ ಈ ಏಕದಿನ ಸರಣಿಯಿಂದ ಅವರು ತಮ್ಮ ಫಾರ್ಮ್‌ಗೆ ಮರಳಲು ಪ್ರಯತ್ನಿಸಲಿದ್ದಾರೆ.
ಇದನ್ನೂ ಓದಿ: IND Vs BAN: ಅನುಭವಿಗಳ ರೀ ಎಂಟ್ರಿ; ರೋಹಿತ್ ಜೊತೆ ಆರಂಭಿಕರಾಗಿ ಯಾರಿಗೆ ಅವಕಾಶ? ಹೀಗಿದೆ ಸಂಭಾವ್ಯ ತಂಡ
ಮೊದಲ ಏಕದಿನ ಪಂದ್ಯದ ಪೂರ್ಣ ವಿವರ ಹೀಗಿದೆ
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಏಕದಿನ ಪಂದ್ಯ ಯಾವಾಗ ನಡೆಯಲಿದೆ?
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಏಕದಿನ ಪಂದ್ಯ ಡಿಸೆಂಬರ್ 4 ಭಾನುವಾರ ನಡೆಯಲಿದೆ.
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಏಕದಿನ ಪಂದ್ಯ ಎಲ್ಲಿ ನಡೆಯಲಿದೆ?
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಏಕದಿನ ಪಂದ್ಯ ಢಾಕಾದ ಶೇರ್-ಎ-ಬಾಂಗ್ಲಾ ಸ್ಟೇಡಿಯಂನಲ್ಲಿ ನಡೆಯಲಿದೆ.
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಪಂದ್ಯ ಯಾವಾಗ ಆರಂಭವಾಗುತ್ತದೆ?
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಏಕದಿನ ಪಂದ್ಯ ಬೆಳಗ್ಗೆ 11:30ಕ್ಕೆ ಆರಂಭವಾಗಲಿದ್ದು, ಟಾಸ್ 11 ಗಂಟೆಗೆ ನಡೆಯಲಿದೆ.
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಏಕದಿನ ಪಂದ್ಯವನ್ನು ಯಾವ ಚಾನೆಲ್ನಲ್ಲಿ ವೀಕ್ಷಿಸಬಹುದು?
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಏಕದಿನ ಪಂದ್ಯ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರವಾಗಲಿದೆ.
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲನೇ ಏಕದಿನ ಪಂದ್ಯದ ಲೈವ್ ಸ್ಟ್ರೀಮಿಂಗ್ ಎಲ್ಲಿ ವೀಕ್ಷಿಸಬಹುದು?
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಏಕದಿನ ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ಸೋನಿ ಲಿವ್ ಅಪ್ಲಿಕೇಶನ್‌ನಲ್ಲಿ ನೋಡಬಹುದು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:26 pm, Sat, 3 December 22