AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs BAN: ಬಾಂಗ್ಲಾ ತಂಡಕ್ಕೆ ಬಿಗ್ ಶಾಕ್; ಮೊದಲ ಏಕದಿನ ಪಂದ್ಯದಿಂದ ತಂಡದ ಸ್ಟಾರ್ ವೇಗಿ ಔಟ್..!

IND vs BAN: ತಸ್ಕಿನ್‌ಗೆ ಬೆನ್ನುನೋವು ಮರುಕಳಿಸಿದ್ದು, ಇದರಿಂದಾಗಿ ಮೊದಲ ಏಕದಿನ ಪಂದ್ಯದಿಂದ ಅವರು ಹೊರಗುಳಿಯಲಿದ್ದಾರೆ. ಅವರ ಬದಲು ಶೋರಿಫುಲ್ ಇಸ್ಲಾಂಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ ಎಂದು ಬಾಂಗ್ಲಾ ಕ್ರಿಕೆಟ್ ಆಯ್ಕೆ ಮಂಡಳಿ ಸದಸ್ಯರೊಬ್ಬರು ತಿಳಿಸಿದ್ದಾರೆ.

IND vs BAN: ಬಾಂಗ್ಲಾ ತಂಡಕ್ಕೆ ಬಿಗ್ ಶಾಕ್; ಮೊದಲ ಏಕದಿನ ಪಂದ್ಯದಿಂದ ತಂಡದ ಸ್ಟಾರ್ ವೇಗಿ ಔಟ್..!
ಬಾಂಗ್ಲಾ ತಂಡ
TV9 Web
| Updated By: ಪೃಥ್ವಿಶಂಕರ|

Updated on:Dec 01, 2022 | 4:52 PM

Share

ಭಾರತ ಮತ್ತು ಬಾಂಗ್ಲಾದೇಶ (India and Bangladesh) ನಡುವಿನ ಏಕದಿನ ಸರಣಿ ಆರಂಭಕ್ಕೂ ಮುನ್ನವೇ ಆತಿಥೇಯ ತಂಡ ಭಾರಿ ಹಿನ್ನಡೆ ಅನುಭವಿಸಿದೆ. ನಿಗದಿಯಂತೆ ಈ ಉಭಯ ತಂಡಗಳ ನಡುವೆ ಭಾನುವಾರದಂದು ಮೊದಲ ಏಕದಿನ ಪಂದ್ಯ ನಡೆಯಲಿದೆ. ಆದರೆ ಈ ಪಂದ್ಯಕ್ಕೂ ಮೊದಲು ಬಾಂಗ್ಲಾ ತಂಡದ ಸ್ಟಾರ್ ವೇಗದ ಬೌಲರ್ ತಸ್ಕಿನ್ ಅಹ್ಮದ್ (Taskin Ahmed) ಇಂಜುರಿಯಿಂದಾಗಿ ಮೊದಲ ಪಂದ್ಯದಿಂದ ಹೊರಗುಳಿದಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಮಾಹಿತಿಯ ಪ್ರಕಾರ, ಬೆನ್ನುನೋವಿನ ಕಾರಣದಿಂದಾಗಿ ತಾಸ್ಕಿನ್ ಏಕದಿನ ಸರಣಿಯ ಮೊದಲ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಟೀಂ ಇಂಡಿಯಾ ವಿರುದ್ಧ ಅದ್ಭುತ ದಾಖಲೆ ಹೊಂದಿರುವ ತಸ್ಕಿನ್ ತಂಡದಿಂದ ಹೊರಗುಳಿದಿರುವುದು ಬಾಂಗ್ಲಾ ತಂಡಕ್ಕೆ ಹಿನ್ನಡೆಯುಂಟು ಮಾಡಿದೆ. ಇತ್ತೀಚಿಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್​ನಲ್ಲಿಯೂ (T20 World Cup) ತಸ್ಕಿನ್ ಬಾಂಗ್ಲಾದೇಶ ಪರ ಉತ್ತಮ ಪ್ರದರ್ಶನ ನೀಡಿದ್ದರು.

ಅವರ ಬದಲು ಶೋರಿಫುಲ್ ಇಸ್ಲಾಂಗೆ ಸ್ಥಾನ

ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಮುಖ್ಯ ಆಯ್ಕೆದಾರರು ಕ್ರಿಕ್‌ಬಜ್‌ಗೆ ನೀಡಿರುವ ಮಾಹಿತಿ ಪ್ರಕಾರ, ತಸ್ಕಿನ್‌ಗೆ ಹಳೆಯ ಬೆನ್ನುನೋವು ಮರುಕಳಿಸಿದ್ದು, ಇದರಿಂದಾಗಿ ಮೊದಲ ಏಕದಿನ ಪಂದ್ಯದಿಂದ ಅವರು ಹೊರಗುಳಿಯಲಿದ್ದಾರೆ. ಅವರ ಬದಲು ಶೋರಿಫುಲ್ ಇಸ್ಲಾಂಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಅಲ್ಲದೆ ಮುಂದಿನ ಕೆಲವು ದಿನಗಳಲ್ಲಿ ತಸ್ಕಿನ್‌ ಚೇತರಿಸಿಕೊಳ್ಳದಿದ್ದರೆ ಸರಣಿಯ ಉಳಿದ ಎರಡು ಪಂದ್ಯಗಳಲ್ಲಿ ಅವರನ್ನು ಆಡಿಸುವ ಬಗ್ಗೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದಿದ್ದಾರೆ.

ತಸ್ಕಿನ್​ಗೂ ಮುನ್ನ ನವೆಂಬರ್ 30 ರಂದು ಶೇರ್-ಎ-ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ತಮೀಮ್ ಇಕ್ಬಾಲ್ ತೊಡೆಸಂದು ಗಾಯಕ್ಕೆ ಒಳಗಾಗಿದ್ದರು. ಆ ಬಳಿಕ ತಮೀಮ್ ಅವರ ಇಂಜುರಿ ತೀವ್ರತೆ ಎಷ್ಟಿದೆ ಎಂಬುದನ್ನು ತಿಳಿಯಲು ಸ್ಕ್ಯಾನ್ ಮಾಡಲಾಗಿದ್ದು, ಅದರ ವರದಿ ಇನ್ನು ಬರಬೇಕಿದೆ. ವರದಿ ಬಂದ ಬಳಿಕ ಅವರು ತಂಡದಲ್ಲಿ ಆಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ‘ದುಡ್ಡು ಮಾಡಿಕೊಂಡು ಇಲ್ಲಿಂದ ಕಾಲ್ಕೀಳುತ್ತಾರೆ’; ವಿದೇಶಿ ಕೋಚ್​ಗಳ ಬಗ್ಗೆ ಗೌತಮ್ ‘ಗಂಭೀರ’ ಆರೋಪ

ಏಕದಿನ ಸರಣಿಯ ವೇಳಾಪಟ್ಟಿ

ಮೊದಲ ಏಕದಿನ ಪಂದ್ಯ- ಡಿಸೆಂಬರ್ 4 ಭಾನುವಾರ- ಢಾಕಾದ ಶೇರ್-ಎ-ಬಾಂಗ್ಲಾ ಸ್ಟೇಡಿಯಂ- ಬೆಳಿಗ್ಗೆ 11:30

ಎರಡನೇ ಏಕದಿನ ಪಂದ್ಯ- ಡಿಸೆಂಬರ್ 7 ಬುಧವಾರ- ಢಾಕಾದ ಶೇರ್-ಎ-ಬಾಂಗ್ಲಾ ಸ್ಟೇಡಿಯಂ- ಬೆಳಿಗ್ಗೆ 11:30

ಮೂರನೇ ಏಕದಿನ ಪಂದ್ಯ- ಡಿಸೆಂಬರ್ 10 ಶನಿವಾರ- ಢಾಕಾದ ಶೇರ್-ಎ-ಬಾಂಗ್ಲಾ ಕ್ರೀಡಾಂಗಣ- ಬೆಳಿಗ್ಗೆ 11:30

ಏಕದಿನ ಸರಣಿಗೆ ಉಭಯ ತಂಡಗಳು

ಭಾರತ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಶ್ರೇಯಸ್ ಅಯ್ಯರ್, ರಾಹುಲ್ ತ್ರಿಪಾಠಿ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಹಬಾಜ್ ಅಹ್ಮದ್, ಕೆಎಲ್ ರಾಹುಲ್, ರಿಷಬ್ ಪಂತ್, ಇಶಾನ್ ಕಿಶನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ದೀಪಕ್ ಚಹಾರ್, ಕುಲದೀಪ್ ಸೇನ್

ಬಾಂಗ್ಲಾದೇಶ: ತಮೀಮ್ ಇಕ್ಬಾಲ್ (ನಾಯಕ), ಯಾಸಿರ್ ಅಲಿ, ನಜ್ಮುಲ್ ಹೊಸೈನ್ ಶಾಂಟೊ, ಶಕೀಬ್ ಅಲ್ ಹಸನ್, ಅಫೀಫ್ ಹೊಸೈನ್, ಮಹ್ಮುದುಲ್ಲಾ, ಮೆಹಿದಿ ಹಸನ್ ಮಿರಾಜ್, ಲಿಟ್ಟನ್ ದಾಸ್, ಅನಾಮುಲ್ ಹಕ್, ಮುಶ್ಫಿಕರ್ ರಹೀಮ್, ನೂರುಲ್ ಹಸನ್, ಮುಸ್ತಫಿಜುರ್ ರಹಮಾನ್, ತಸ್ಕಿನ್ ಅಹ್ಮದ್, ಹಸನ್ ಮಹಮೂದ್, ಎಬಾಡೋತ್ ಹೊಸೈನ್, ನಸುಮ್ ಅಹ್ಮದ್

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:52 pm, Thu, 1 December 22

‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ