‘ದುಡ್ಡು ಮಾಡಿಕೊಂಡು ಇಲ್ಲಿಂದ ಕಾಲ್ಕೀಳುತ್ತಾರೆ’; ವಿದೇಶಿ ಕೋಚ್​ಗಳ ಬಗ್ಗೆ ಗೌತಮ್ ‘ಗಂಭೀರ’ ಆರೋಪ

Gautam Gambhir: ವಿದೇಶದಿಂದ ಕೋಚ್‌ಗಳು ಬರುತ್ತಾರೆ, ನಿಗದಿತ ಸಮಯದೊಳಗೆ ಕೆಲಸ ಮಾಡುತ್ತಾರೆ. ಬಳಿಕ ಸಾಕಷ್ಟು ಹಣ ಮಾಡಿಕೊಂಡು ಇಲ್ಲಿಂದ ಕಾಲ್ಕಿಳುತ್ತಾರೆ ಎಂದು ಗಂಭೀರ್ ಹೇಳಿದ್ದಾರೆ.

‘ದುಡ್ಡು ಮಾಡಿಕೊಂಡು ಇಲ್ಲಿಂದ ಕಾಲ್ಕೀಳುತ್ತಾರೆ’; ವಿದೇಶಿ ಕೋಚ್​ಗಳ ಬಗ್ಗೆ ಗೌತಮ್ ‘ಗಂಭೀರ’ ಆರೋಪ
Gautam GambhirImage Credit source: Hindustan Times
Follow us
TV9 Web
| Updated By: ಪೃಥ್ವಿಶಂಕರ

Updated on:Dec 01, 2022 | 4:12 PM

ಟೀಂ ಇಂಡಿಯಾದ (Team India) ಮಾಜಿ ಆಟಗಾರ ಗೌತಮ್ ಗಂಭೀರ್ (Gautam Gambhir) ಒಂದಿಲ್ಲೊಂದು ವಿಚಾರಗಳಲ್ಲಿ ಸದಾ ಚರ್ಚೆಯಲ್ಲಿರುತ್ತಾರೆ. ಅಲ್ಲದೆ ಸೋಶಿಯಲ್ ಮೀಡಿಯಾಗಳ ಮೂಲಕ ಕ್ರಿಕೆಟ್ ಮಂಡಳಿ ಮತ್ತು ಆಟಗಾರರಿಗೆ ಸಲಹೆ ನೀಡುತ್ತಿರುವುತ್ತಾರೆ. ಸದ್ಯ ಗಂಭೀರ್ ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ವಿದೇಶಿ ಕೋಚ್​ಗೆ (Foreign coaches) ಹಣ ಖರ್ಚು ಮಾಡುವ ಬದಲು ಭಾರತದ ಆಟಗಾರನಿಗೆ ಆ ಅವಕಾಶ ಕೊಡಿ ಎಂದಿದ್ದಾರೆ. ಅಲ್ಲದೆ ಸಾಕಷ್ಟು ಹಣ ಪಡೆದುಕೊಳ್ಳುವ ವಿದೇಶಿ ಕೋಚ್​ಗಳ ಕೆಲಸ ಮಾತ್ರ ಅಷ್ಟಕಷ್ಟೆ ಎಂದು ಗಂಭೀರ್ ಆರೋಪ ಹೊರಿಸಿದ್ದಾರೆ. ಗಂಭೀರ್ ಅವರ ಈ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಅನೇಕ ಅಭಿಮಾನಿಗಳು ಈ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.

ಹಣ ಮಾಡಿಕೊಂಡು ಇಲ್ಲಿಂದ ಕಾಲ್ಕಿಳುತ್ತಾರೆ

ಕೆಲವು ದಿನಗಳ ಹಿಂದೆ ದೆಹಲಿಯಲ್ಲಿ ನಡೆದ ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ & ಇಂಡಸ್ಟ್ರಿ (ಎಫ್‌ಐಸಿಸಿಐ) ಸಮಾರಂಭದಲ್ಲಿ ಮಾತನಾಡಿದ್ದ ಗೌತಮ್ ಗಂಭೀರ್, ವಿದೇಶದಿಂದ ಕೋಚ್‌ಗಳು ಬರುತ್ತಾರೆ, ನಿಗದಿತ ಸಮಯದೊಳಗೆ ಕೆಲಸ ಮಾಡುತ್ತಾರೆ. ಬಳಿಕ ಸಾಕಷ್ಟು ಹಣ ಮಾಡಿಕೊಂಡು ಇಲ್ಲಿಂದ ಕಾಲ್ಕಿಳುತ್ತಾರೆ ಎಂದು ಹೇಳಿದ್ದಾರೆ. ಈಗ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿರುವ ಗಂಭೀರ್, ವಿದೇಶಿ ಕೋಚ್​ಗಳ ಬದಲು ಭಾರತದ ಮಾಜಿ ಆಟಗಾರರಿಗೆ ಹೆಚ್ಚು ಮಣೆ ಹಾಕಿದ್ದು, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಮತ್ತು ರವಿಶಾಸ್ತ್ರಿ ಅವರತ್ತ ಒಲವು ತೋರಿದ್ದಾರೆ.

ಇದನ್ನೂ ಓದಿ: Legends League Cricket: ಕ್ರಿಕೆಟ್ ಅಖಾಡಕ್ಕೆ ಮತ್ತೆ ಎಂಟ್ರಿಕೊಟ್ಟ ಬಿಜೆಪಿ ಸಂಸದ ಗೌತಮ್ ಗಂಭೀರ್..!

ಕಳೆದ ಆರೇಳು ವರ್ಷಗಳಲ್ಲಿ ಭಾರತೀಯ ಕ್ರಿಕೆಟ್‌ನಲ್ಲಿ ಸಂಭವಿಸಿದ ಒಂದು ಒಳ್ಳೆಯ ವಿಷಯವೆಂದರೆ, ಟೀಂ ಇಂಡಿಯಾದ ಮಾಜಿ ಆಟಗಾರರು ಹಾಲಿ ತಂಡಕ್ಕೆ ತರಬೇತಿ ನೀಡಲು ಪ್ರಾರಂಭಿಸಿದ್ದಾರೆ. ನಾನು ಇದರಲ್ಲಿ ಬಹಳ ಬಲವಾದ ನಂಬಿಕೆಯುಳ್ಳವನು. ಭಾರತೀಯರು ಭಾರತೀಯ ಕ್ರಿಕೆಟ್ ತಂಡಕ್ಕೆ ತರಬೇತಿ ನೀಡಬೇಕು. ಅಲ್ಲದೆ ಟೀಂ ಇಂಡಿಯಾಕ್ಕೆ ತರಬೇತುದಾರರಾಗಿ ಬರುವ ವಿದೇಶಿ ಕೋಚ್​ಗಳು, ನಿರ್ದಿಷ್ಟ ಸಮಯದವರೆಗೆ ಕೆಲಸ ಮಾಡುತ್ತಾರೆ. ಮಾಡಿದ ಕೆಲಸಕ್ಕೆ ಹಣ ಪಡೆದು ಇಲ್ಲಿಂದ ಕಣ್ಮರೆಯಾಗುತ್ತಾರೆ.

ಕ್ರೀಡೆಗಳು ಭಾವನಾತ್ಮಕ ನಂಟನ್ನು ಹೆಚ್ಚಾಗಿ ಬಯಸುತ್ತವೆ

ಆದರೆ ಕ್ರೀಡೆಗಳು ಭಾವನಾತ್ಮಕ ನಂಟನ್ನು ಹೆಚ್ಚಾಗಿ ಬಯಸುತ್ತವೆ. ಅಲ್ಲದೆ ಭಾರತೀಯ ಕ್ರಿಕೆಟ್ ಅಥವಾ ಭಾರತೀಯ ಕ್ರೀಡೆಗಳ ಬಗ್ಗೆ ಭಾರತೀಯರು ಹೆಚ್ಚು ಭಾವನಾತ್ಮಕವಾದ ನಂಟನ್ನು ಹೊಂದಿದ್ದಾರೆ. ಹೀಗಾಗಿ ಟೀಂ ಇಂಡಿಯಾದಲ್ಲಿ ಭಾರತದ ಕೋಚ್​ಗಳಿರುವುದು ಬಹಳ ಮುಖ್ಯ. ಸದ್ಯ ಭಾರತದಲ್ಲಿ ಈ ಬೆಳವಣಿಗೆ ಕಂಡು ಬರುತ್ತಿದ್ದು, ರಾಹುಲ್ ದ್ರಾವಿಡ್ ಆಗಿರಲಿ ಅಥವಾ ಅವರಿಗಿಂತ ಮೊದಲು ರವಿಶಾಸ್ತ್ರಿ ಮತ್ತು ಅನಿಲ್ ಕುಂಬ್ಳೆ ಆಗಿರಲಿ ಇವರು ತಂಡದಲ್ಲಿ ಭಾವನಾತ್ಮಕವಾದ ನಂಟನ್ನು ಬೆಸೆಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಾರೆ. ಹೀಗಾಗಿ ಭಾರತ ಕ್ರಿಕೆಟ್​ಗೆ ಭಾರತೀಯರೇ ಕೋಚ್​ಗಳಾಗುವುದು ಒಳ್ಳೇಯದು ಎಂಬುದು ನನ್ನ ಅಭಿಪ್ರಾಯ ಎಂದು ಗಂಭೀರ್ ಹೇಳಿಕೊಂಡಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:11 pm, Thu, 1 December 22

ದೆಹಲಿ: ನಂದಿನಿ ಉತ್ಪನ್ನಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಸಿಎಂ
ದೆಹಲಿ: ನಂದಿನಿ ಉತ್ಪನ್ನಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಸಿಎಂ
ಬಿಪಿಎಲ್ ಕಾರ್ಡ್ ರದ್ದಾಗಿರುವ ಬಗ್ಗೆ ಯಾವುದೇ ನೋಟೀಸ್ ನೀಡದ ಇಲಾಖೆ
ಬಿಪಿಎಲ್ ಕಾರ್ಡ್ ರದ್ದಾಗಿರುವ ಬಗ್ಗೆ ಯಾವುದೇ ನೋಟೀಸ್ ನೀಡದ ಇಲಾಖೆ
ರಸ್ತೆ ಬದಿ ವಾಲಿದ ​ವಿಕ್ರಂಗೌಡ ಮೃತದೇಹ ಸಾಗಿಸುತ್ತಿದ್ದ ಆ್ಯಂಬುಲೆನ್ಸ್
ರಸ್ತೆ ಬದಿ ವಾಲಿದ ​ವಿಕ್ರಂಗೌಡ ಮೃತದೇಹ ಸಾಗಿಸುತ್ತಿದ್ದ ಆ್ಯಂಬುಲೆನ್ಸ್
ಮುಖ್ಯಮಂತ್ರಿಯವರು ಜಾತಿಗಣತಿ ವರದಿಯ ಅಧ್ಯಯನ ಮಾಡುತ್ತಿದ್ದಾರೆ: ಪರಮೇಶ್ವರ್
ಮುಖ್ಯಮಂತ್ರಿಯವರು ಜಾತಿಗಣತಿ ವರದಿಯ ಅಧ್ಯಯನ ಮಾಡುತ್ತಿದ್ದಾರೆ: ಪರಮೇಶ್ವರ್
ಮಹಿಳಾ ಪ್ರಯಾಣಿಕರಿಂದ ತುಂಬಿದ ಬಸ್: ಮೂಡಿಗೆರೆಯಲ್ಲಿ ವಿದ್ಯಾರ್ಥಿಗಳ ಪರದಾಟ
ಮಹಿಳಾ ಪ್ರಯಾಣಿಕರಿಂದ ತುಂಬಿದ ಬಸ್: ಮೂಡಿಗೆರೆಯಲ್ಲಿ ವಿದ್ಯಾರ್ಥಿಗಳ ಪರದಾಟ
ಚಿಕ್ಕಂದಿನಲ್ಲಿ ಅಪ್ಪನ ಕಳೆದುಕೊಂಡಿದ್ದ ವಿಕ್ರಂಗೌಡ ತಂಗಿಯ ಮದುವೆ ಮಾಡಿಸಿದ್ದ
ಚಿಕ್ಕಂದಿನಲ್ಲಿ ಅಪ್ಪನ ಕಳೆದುಕೊಂಡಿದ್ದ ವಿಕ್ರಂಗೌಡ ತಂಗಿಯ ಮದುವೆ ಮಾಡಿಸಿದ್ದ
ಶೋರೂಮಲ್ಲಿದ್ದ ಬ್ಯಾಟರಿಗಳು ಸ್ಪೋಟಗೊಂಡ ಕಾರಣ ಹೆಚ್ಚಿದ ಬೆಂಕಿ ಪ್ರಮಾಣ
ಶೋರೂಮಲ್ಲಿದ್ದ ಬ್ಯಾಟರಿಗಳು ಸ್ಪೋಟಗೊಂಡ ಕಾರಣ ಹೆಚ್ಚಿದ ಬೆಂಕಿ ಪ್ರಮಾಣ
ರಾಯಚೂರಿನಲ್ಲಿ ಮಧ್ಯರಾತ್ರಿ ಜೆಸಿಬಿ ಘರ್ಜನೆ: ಶಿವ, ಗಣೇಶನ ಗುಡಿ ತೆರವು
ರಾಯಚೂರಿನಲ್ಲಿ ಮಧ್ಯರಾತ್ರಿ ಜೆಸಿಬಿ ಘರ್ಜನೆ: ಶಿವ, ಗಣೇಶನ ಗುಡಿ ತೆರವು
ಪ್ರಧಾನಿ ಮೋದಿಯನ್ನು ಅಪ್ಪುಗೆಯಿಂದ ಬರಮಾಡಿಕೊಂಡ ಇರ್ಫಾನ್ ಅಲಿ
ಪ್ರಧಾನಿ ಮೋದಿಯನ್ನು ಅಪ್ಪುಗೆಯಿಂದ ಬರಮಾಡಿಕೊಂಡ ಇರ್ಫಾನ್ ಅಲಿ
ವೈಲ್ಡ್ ಕಾರ್ಡ್ ಸ್ಪರ್ಧಿಯಿಂದ ಸುರೇಶ್​ಗೆ ಅವಮಾನ; ಮನೆ ಬಿಟ್ಟು ಹೋಗ್ತಾರಾ?
ವೈಲ್ಡ್ ಕಾರ್ಡ್ ಸ್ಪರ್ಧಿಯಿಂದ ಸುರೇಶ್​ಗೆ ಅವಮಾನ; ಮನೆ ಬಿಟ್ಟು ಹೋಗ್ತಾರಾ?