ರಾಹುಲ್, ಜಡೇಜಾ, ಶ್ರೇಯಸ್ ಔಟ್! ಟಿ20 ವಿಶ್ವಕಪ್ ತಂಡದಲ್ಲಿ ಕನ್ನಡಿಗನಿಗೆ ಅವಕಾಶ ಕೊಡದ ಗೌತಮ್ ಗಂಭೀರ್

T20 World Cup: ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ 2022 ರ ಟಿ 20 ವಿಶ್ವಕಪ್‌ಗೆ ತಮ್ಮ ಟಾಪ್ 7 ಆಟಗಾರರನ್ನು ಆಯ್ಕೆ ಮಾಡಿದ್ದಾರೆ. ಆದರೆ ಈ ತಂಡದಲ್ಲಿ ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್‌, ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್​ಗೆ ಅವಕಾಶ ನೀಡಲಿಲ್ಲ.

ರಾಹುಲ್, ಜಡೇಜಾ, ಶ್ರೇಯಸ್ ಔಟ್! ಟಿ20 ವಿಶ್ವಕಪ್ ತಂಡದಲ್ಲಿ ಕನ್ನಡಿಗನಿಗೆ ಅವಕಾಶ ಕೊಡದ ಗೌತಮ್ ಗಂಭೀರ್
ರಾಹುಲ್, ಕಿಶನ್
TV9kannada Web Team

| Edited By: pruthvi Shankar

Jun 13, 2022 | 6:27 PM

ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ (Gautam Gambhir) ಟಿ20 ವಿಶ್ವಕಪ್‌ (T20 World Cup)ಗೆ ತಮ್ಮ ಟಾಪ್ 7 ಆಟಗಾರರನ್ನು ಘೋಷಿಸಿದ್ದಾರೆ. ಆದರೆ ಈಗ ಗಂಭೀರ್ ಪ್ರಕಟಿಸಿರುವ ತಂಡ ನೋಡಿ ಎಲ್ಲಾ ಅಭಿಮಾನಿಗಳು ಆಶ್ಚರ್ಯಚಕಿತರಾಗಿದ್ದಾರೆ. ವಾಸ್ತವವಾಗಿ, ಗೌತಮ್ ಗಂಭೀರ್ ತಂಡದಲ್ಲಿ ಕೆಎಲ್ ರಾಹುಲ್, ರವೀಂದ್ರ ಜಡೇಜಾ (KL Rahul , Ravindra Jadeja) ಅವರಂತಹ ಟಾಪ್ ಆಟಗಾರರ ಹೆಸರುಗಳಿಲ್ಲ. ಜೊತೆಗೆ, ಗಂಬೀರ್ ತಂಡದಲ್ಲಿ ಇಬ್ಬರೂ ಹೊಸ ಮುಖಗಳಿಗೆ ಅವಕಾಶ ನೀಡಿದ್ದು, ಈ ಆಟಗಾರರು T20 ವಿಶ್ವಕಪ್‌ಗಾಗಿ ಟೀಮ್ ಇಂಡಿಯಾದ ಪ್ಲೇಯಿಂಗ್ XI ನಲ್ಲಿ ಇರುತ್ತಾರೆ ಎಂದು ಬಹುಶಃ ಯಾರು ಕೂಡ ನಂಬುವುದಿಲ್ಲ. ಗೌತಮ್ ಗಂಭೀರ್ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾಮೆಂಟರಿ ಸಮಯದಲ್ಲಿ ಟಿ20 ವಿಶ್ವಕಪ್​ಗಾಗಿ ತಮ್ಮ ಅಗ್ರ 7 ಆಟಗಾರರನ್ನು ಆಯ್ಕೆ ಮಾಡಿದ್ದಾರೆ. ಇದರಲ್ಲಿ ರೋಹಿತ್ ಶರ್ಮಾ ಜೊತೆಗೆ ಇಶಾನ್ ಕಿಶನ್ ಅವರನ್ನು ಓಪನರ್ ಆಗಿ ಆಯ್ಕೆ ಮಾಡಿದ್ದಾರೆ. ಹೀಗಾಗಿ ಕೆಎಲ್ ರಾಹುಲ್ ಅವರಿಗೆ ಗಂಭೀರ್ ತಂಡದಿಂದ ಕೋಕ್ ಸಿಕ್ಕಿದೆ. ಗೌತಮ್ ಗಂಭೀರ್ ಅವರು ಬಲ ಮತ್ತು ಎಡಗೈ ಬ್ಯಾಟ್ಸ್‌ಮನ್ ಓಪನಿಂಗ್ ನೋಡಲು ಬಯಸುವುದರಿಂದ ಜೊತೆಗೆ ನಾಯಕ ರೋಹಿತ್ ಶರ್ಮಾ ಖಚಿತವಾಗಿ ಆಡುತ್ತಾರೆ ಎಂಬ ಕಾರಣಕ್ಕಾಗಿ ಕೆಎಲ್ ರಾಹುಲ್ ಅವರನ್ನು ಹೊರಗಿಟ್ಟಿದ್ದಾರೆ ಎಂಬುದನ್ನು ಬಹಿರಂಗಗೊಳಿಸಿದ್ದಾರೆ.

ಬಲಗೈ ಬ್ಯಾಟ್ಸ್‌ಮನ್ ಅದ್ಭುತ ಟಿ20 ದಾಖಲೆಯನ್ನು ಹೊಂದಿರುವುದರಿಂದ ಗೌತಮ್ ಗಂಭೀರ್ ಕೆಎಲ್ ರಾಹುಲ್ ಬದಲಿಗೆ ಇಶಾನ್ ಕಿಶನ್ ಅವರನ್ನು ಆಯ್ಕೆ ಮಾಡಿರುವುದು ನಿಜಕ್ಕೂ ಆಘಾತಕಾರಿಯಾಗಿದೆ. ಅಲ್ಲದೆ ಸದ್ಯಕ್ಕೆ ಭಾರತ ತಂಡದಲ್ಲಿ ಅವರಂತೆ ದೊಡ್ಡ ಇನ್ನಿಂಗ್ಸ್ ಆಡುವವರು ಯಾರೂ ಇಲ್ಲ. ಜೊತೆಗೆ ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಅವರೊಂದಿಗೆ ಓಪನಿಂಗ್ ಮಾಡುವ ಬಗ್ಗೆ ಯೋಚಿಸುವುದಿಲ್ಲ ಎಂದು ಸ್ವತಃ ಇಶಾನ್ ಕಿಶನ್ ಹೇಳಿದ್ದರು.

ಇದನ್ನೂ ಓದಿ:IND vs SA T20 Match Live Streaming: ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಗೆಲ್ಲುತ್ತಾ ಭಾರತ? ಪಂದ್ಯದ ಬಗ್ಗೆ ಮಾಹಿತಿ ಹೀಗಿದೆ

ಶ್ರೇಯಸ್ ಅಯ್ಯರ್-ಜಡೇಜಾ ಕೂಡ ಗಂಭೀರ್ ಆಡುವ XI ನಲ್ಲಿಲ್ಲ

ಗೌತಮ್ ಗಂಭೀರ್ ಕೂಡ ತಮ್ಮ ಟಾಪ್ 7 ಆಟಗಾರರಲ್ಲಿ ರವೀಂದ್ರ ಜಡೇಜಾ ಮತ್ತು ಶ್ರೇಯಸ್ ಅಯ್ಯರ್‌ಗೆ ಸ್ಥಾನ ನೀಡಿಲ್ಲ. ಮಧ್ಯಮ ಕ್ರಮಾಂಕದಲ್ಲಿ ವೇಗದ ಬ್ಯಾಟಿಂಗ್‌ ಜೊತೆಗೆ ಬೌಲಿಂಗ್‌ ಮಾಡುವ ಅಯ್ಯರ್‌ ಬದಲಿಗೆ ದೀಪಕ್‌ ಹೂಡಾ ಅವರನ್ನು ಕಣಕ್ಕಿಳಿಸಿದ್ದಾರೆ. ಅಲ್ಲದೆ ಗೌತಮ್ ಗಂಭೀರ್ ಅವರ ಆಡುವ XI ನಲ್ಲಿ ರವೀಂದ್ರ ಜಡೇಜಾ ಕೂಡ ಇಲ್ಲ.

T20 ವಿಶ್ವಕಪ್ 2022 ಗಾಗಿ ಗೌತಮ್ ಗಂಭೀರ್ ಅವರ ಟಾಪ್ 7 ಆಟಗಾರರು

ಗೌತಮ್ ಗಂಭೀರ್ 2022 ರ T20 ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ-ಇಶಾನ್ ಕಿಶನ್ ಆರಂಭಿಕರಾಗಿ ಸೂರ್ಯಕುಮಾರ್ ಯಾದವ್ ಅವರನ್ನು 3 ನೇ ಸ್ಥಾನದಲ್ಲಿ ಇರಿಸಿದ್ದಾರೆ. ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನದಲ್ಲಿದ್ದರೆ, ದೀಪಕ್ ಹೂಡಾ ಐದನೇ ಸ್ಥಾನದಲ್ಲಿದ್ದಾರೆ. ಗಂಭೀರ್ ಆರನೇ ಸ್ಥಾನಕ್ಕೆ ಹಾರ್ದಿಕ್ ಪಾಂಡ್ಯ ಅವರನ್ನು ಆಯ್ಕೆ ಮಾಡಿದ್ದಾರೆ. ಜೊತೆಗೆ ರಿಷಬ್ ಪಂತ್ ಅವರನ್ನು 7ನೇ ಸ್ಥಾನದಲ್ಲಿ ಇರಿಸಿದ್ದಾರೆ.

ಆಫ್ರಿಕಾ ವಿರುದ್ಧ ಭಾರತ ತಂಡದ ಹೀನಾಯ ಪ್ರದರ್ಶನ

ಇದನ್ನೂ ಓದಿ

ಗೌತಮ್ ಗಂಭೀರ್ ಪ್ರಸ್ತುತ ಭಾರತ-ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಕಾಮೆಂಟರಿ ಮಾಡುತ್ತಿದ್ದಾರೆ. ಇದರಲ್ಲಿ ಆತಿಥೇಯ ತಂಡದ ಸ್ಥಿತಿ ಕೆಟ್ಟದಾಗಿದೆ. ದೆಹಲಿಯ ನಂತರ ಟೀಂ ಇಂಡಿಯಾ ಕಟಕ್ ಟಿ20ಯಲ್ಲೂ ಸೋತಿದೆ. ಕಟಕ್‌ನಲ್ಲಿ ಭಾರತ ತಂಡ 4 ವಿಕೆಟ್‌ಗಳಿಂದ ಸೋತಿತ್ತು. ಹೆನ್ರಿಕ್ ಕ್ಲಾಸೆನ್ ಅವರ ಅರ್ಧಶತಕದ ಇನ್ನಿಂಗ್ಸ್ ಅವರಿಗೆ ಭಾರವಾಗಿತ್ತು. ಇದೀಗ ಟೀಂ ಇಂಡಿಯಾ ಸರಣಿಯಲ್ಲಿ 0-2 ಹಿನ್ನಡೆಯಲ್ಲಿದ್ದು, ವಿಶಾಖಪಟ್ಟಣಂನಲ್ಲಿ ನಡೆಯಲಿರುವ ಪಂದ್ಯ ಮಾಡು ಇಲ್ಲವೇ ಮಡಿ ಹೋರಾಟವಾಗಿದೆ. ಏಕೆಂದರೆ ಸೋಲಿನೊಂದಿಗೆ ಸರಣಿಯೂ ಅವರ ಕೈ ತಪ್ಪಲಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada