IPL Media Rights: ಐಪಿಎಲ್​ನ ಪ್ರತಿ ಪಂದ್ಯ 111* ಕೋಟಿಗೆ ಮಾರಾಟ..!

IPL Media Rights: ಭಾನುವಾರ ನಡೆದ ಹರಾಜಿನಲ್ಲಿ ಟಿವಿ ಪ್ರಸಾರ ಹಕ್ಕುಗಳಿಗಾಗಿ ಸೋನಿ ನೆಟ್‌ವರ್ಕ್, ರಿಲಯನ್ಸ್ ವಯಾಕಾಮ್ 18 ಮತ್ತು ಸ್ಟಾರ್​ ನೆಟ್​ವರ್ಕ್​ ನಡುವೆ ತೀವ್ರ ಪೈಪೋಟಿ ಕಂಡು ಬಂದಿತ್ತು.

IPL Media Rights: ಐಪಿಎಲ್​ನ ಪ್ರತಿ ಪಂದ್ಯ 111* ಕೋಟಿಗೆ ಮಾರಾಟ..!
IPL Media Rights
TV9kannada Web Team

| Edited By: Zahir PY

Jun 13, 2022 | 9:10 PM

IPL Media Rights: ಐಪಿಎಲ್ ನೇರ ಪ್ರಸಾರ ಹಕ್ಕುಗಳಿಗಾಗಿ ಭರ್ಜರಿ ಪೈಪೋಟಿ ಮುಂದುವರೆದಿದೆ. ಸೋಮವಾರ ನಡೆದ ಹರಾಜಿನ ಮೂಲಕ ಭಾರತದಲ್ಲಿನ ಟಿವಿ ಪ್ರಸಾರ ಹಕ್ಕುಗಳನ್ನು 23,575 ಕೋಟಿಗೆ ಡಿಸ್ನಿ (ಸ್ಟಾರ್​ ನೆಟ್​ವರ್ಕ್​)​ ಪಡೆದುಕೊಂಡಿದೆ. ಹಾಗೆಯೇ ಭಾರತದ ಡಿಜಿಟಲ್​ ಪ್ರಸಾರ ಹಕ್ಕುಗಳನ್ನು ರಿಲಯನ್ಸ್ ವಯಾಕಾಮ್​-18 ಕಂಪೆನಿ 20,500 ಕೋಟಿ ನೀಡಿ ತಮ್ಮದಾಗಿಸಿಕೊಂಡಿದೆ. ಅದರಂತೆ 2023 ರಿಂದ 2027 ರವರೆಗೆ ಐಪಿಎಲ್ ನೇರ ಪ್ರಸಾರವು ಸ್ಟಾರ್ ಸ್ಪೋರ್ಟ್ಸ್​ ಚಾನೆಲ್​ ಹಾಗೂ ಡಿಜಿಟಲ್ ಪ್ರಸಾರವು ಜಿಯೋ ಹಾಗೂ ವೂಟ್​ ಆ್ಯಪ್​ಗಳಲ್ಲಿ ಇರಲಿದೆ. ವಿಶೇಷ ಎಂದರೆ ಈ ಬಾರಿ ಬಿಸಿಸಿಐ 4 ಪ್ಯಾಕೇಜ್ ಮೂಲಕ ಹರಾಜು ಪ್ರಕ್ರಿಯೆಯನ್ನು ನಡೆಸುತ್ತಿದೆ. ಅದರಂತೆ ಪ್ಯಾಕೇಜ್-ಎ ನಲ್ಲಿ ಟಿವಿ ರೈಟ್ಸ್ ನೀಡಲಾಗಿದ್ದರೆ, ಪ್ಯಾಕೇಜ್-ಬಿ ನಲ್ಲಿ ಡಿಜಿಟಲ್ ಹಕ್ಕುಗಳಿಗಾಗಿ ಬಿಡ್ಡಿಂಗ್ ನಡೆಸಲಾಗಿತ್ತು. ಇದೀಗ ಪ್ಯಾಕೇಜ್-ಸಿ ಹರಾಜು ನಡೆದಿದ್ದು, ಬಿಡ್ಡಿಂಗ್​ ಪ್ರಕ್ರಿಯೆಯನ್ನು ಮಂಗಳವಾರಕ್ಕೆ ಮುಂದೂಡಲಾಗಿದೆ.

ಇಲ್ಲಿ ಪ್ಯಾಕೇಜ್-ಎ (ಟಿವಿ ರೈಟ್ಸ್)​ 23,370 ಕೋಟಿಗೆ ಮಾರಾಟವಾದರೆ, ಪ್ಯಾಕೇಜ್-ಬಿ (ಡಿಜಿಟಲ್ ಪ್ರಸಾರ ಹಕ್ಕುಗಳು) 20,500 ಕೋಟಿಗೆ ಹರಾಜಾಗಿದೆ. ಈ ಮೂಲಕ ಕೇವಲ ಎರಡು ಪ್ಯಾಕೇಜ್​ಗಳ ಮೂಲಕ ಬಿಸಿಸಿಐ ಬರೋಬ್ಬರಿ 44,075 ಕೋಟಿ ಆದಾಯಗಳಿಸಿದೆ. ಇದೀಗ ಆರಂಭಿಕ ಪಂದ್ಯ, ಅಂತಿಮ ಪಂದ್ಯ, ಮೂರು ಪ್ಲೇ-ಆಫ್‌ಗಳು ಮತ್ತು ಕೆಲವು ವಾರಾಂತ್ಯದ ಡಬಲ್ ಹೆಡರ್‌ ಪಂದ್ಯಗಳನ್ನು ಒಳಗೊಂಡಿರುವ 18 ಮ್ಯಾಚ್​ಗಳಿಗೆ ಸೀಮಿತವಾಗಿರುವ ಡಿಜಿಟಲ್​ ಹಕ್ಕುಗಳ ​ಪ್ಯಾಕೇಜ್-ಸಿ ಬಿಡ್ಡಿಂಗ್ ನಡೆಯುತ್ತಿದೆ.

ಸೋಮವಾರದ ಅಂತ್ಯಕ್ಕೆ ಈ ಬಿಡ್ಡಿಂಗ್ ಮೊತ್ತ 1813 ಕೋಟಿಗೆ ಬಂದು ನಿಂತಿದೆ. ಅಂದರೆ ಈಗಾಗಲೇ ಬಿಸಿಸಿಐಗೆ 45,775 ಕೋಟಿ (44,075+1813 ) ಹರಿದು ಬಂದಿದೆ. ಅದರಂತೆ ಪ್ರತಿ ಪಂದ್ಯವು 111.92 ಕೋಟಿಗೆ ಮಾರಾಟವಾಗಿದೆ. ಇದರೊಂದಿಗೆ ವಿಶ್ವದ ಎರಡನೇ ಅತ್ಯಂತ ಶ್ರೀಮಂತ ಸ್ಪೋರ್ಟ್ಸ್​​ ಲೀಗ್ ಆಗಿ ಐಪಿಎಲ್​ ಗುರುತಿಸಿಕೊಂಡಿದೆ. ಸದ್ಯ ಅಗ್ರಸ್ಥಾನದಲ್ಲಿ ಅಮೆರಿಕದ ನ್ಯಾಷನಲ್ ಫುಟ್‌ಬಾಲ್ ಲೀಗ್ (NFL) ಇದ್ದು, ಇದರ ಪ್ರತಿ ಪಂದ್ಯದ ನೇರ ಪ್ರಸಾರದ ಹಕ್ಕು 133 ಕೋಟಿಗೆ ಮಾರಾಟವಾಗಿದೆ.

ಇದೀಗ ಐಪಿಎಲ್​ ಪ್ರತಿ ಪಂದ್ಯಗಳ ಪ್ರಸಾರ ಹಕ್ಕುಗಳು 111 ಕೋಟಿಗೆ ತಲುಪಿದೆ. ಈ ಮೂಲಕ ವಿಶ್ವದ ಶ್ರೀಮಂತ ಕ್ರಿಕೆಟ್ ಆಗಿ ಐಪಿಎಲ್ ಗುರುತಿಸಿಕೊಂಡಿದೆ. ಅಷ್ಟೇ ಅಲ್ಲದೆ ವಿಶ್ವದ ಅತ್ಯಂತ ದುಬಾರಿ ಪ್ರಸಾರ ಹಕ್ಕನ್ನು ಹೊಂದಿರುವ 2ನೇ ಲೀಗ್​ ಆಗಿ ಹೊರಹೊಮ್ಮಿದೆ. ಇನ್ನು ವಿದೇಶಿ ಪ್ರಸಾರ ಹಕ್ಕುಗಳಿಗಾಗಿ ಪ್ಯಾಕೇಜ್ ಡಿ ಬಿಡ್ಡಿಂಗ್ ಕೂಡ ನಡೆಯಬೇಕಿದ್ದು, ಈ ಪ್ಯಾಕೇಜ್​ನ ಹರಾಜು 3 ಕೋಟಿಯಿಂದ ಪ್ರಾರಂಭವಾಗುತ್ತದೆ. ಹೀಗಾಗಿ ಐಪಿಎಲ್​ ಪ್ರಸಾರ ಹಕ್ಕುಗಳಿಂದ 50 ಸಾವಿರಕ್ಕೂ ಅಧಿಕ ಮೊತ್ತಗಳಿಸುವ ನಿರೀಕ್ಷೆಯಲ್ಲಿದೆ ಬಿಸಿಸಿಐ.

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada