IND vs SL: ಹಿರಿಯ ಆಟಗಾರರಿಗೆ ಮತ್ತೆ ವಿಶ್ರಾಂತಿ..! ಲಂಕಾ ವಿರುದ್ಧದ ಟಿ20 ಸರಣಿಗೆ ಹಾರ್ದಿಕ್ ನಾಯಕ

TV9kannada Web Team

TV9kannada Web Team | Edited By: pruthvi Shankar

Updated on: Dec 01, 2022 | 1:27 PM

IND vs SL: ಜನವರಿಯಲ್ಲಿ ನಡೆಯಲಿರುವ 3 ಟಿ20 ಪಂದ್ಯಗಳ ಸರಣಿಯಿಂದ ರೋಹಿತ್, ವಿರಾಟ್ ವಿಶ್ರಾಂತಿ ಪಡೆಯಲಿದ್ದಾರೆ. ವೈಸ್ ಕ್ಯಾಪ್ಟನ್ ಕೆಎಲ್ ರಾಹುಲ್ ಮದುವೆಯ ಕಾರಣದಿಂದ ಈ ಸರಣಿಯಿಂದ ದೂರ ಉಳಿಯಲಿದ್ದಾರೆ ಎಂದು ವರದಿಯಾಗಿದೆ.

IND vs SL: ಹಿರಿಯ ಆಟಗಾರರಿಗೆ ಮತ್ತೆ ವಿಶ್ರಾಂತಿ..! ಲಂಕಾ ವಿರುದ್ಧದ ಟಿ20 ಸರಣಿಗೆ ಹಾರ್ದಿಕ್ ನಾಯಕ
team india

ಟಿ20 ವಿಶ್ವಕಪ್ (T20 World Cup) ಬಳಿಕ ತಂಡದಿಂದ ವಿಶ್ರಾಂತಿ ಪಡೆದಿರುವ ಟೀಂ ಇಂಡಿಯಾದ (Team India) ಹಿರಿಯ ಆಟಗಾರರು ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಗಾಗಿ ತಂಡ ಸೇರಿಕೊಂಡಿದ್ದಾರೆ. ಬಾಂಗ್ಲಾ ಪ್ರವಾಸದಲ್ಲಿ 3 ಏಕದಿನ ಹಾಗೂ 3 ಟೆಸ್ಟ್ ಪಂದ್ಯಗಳನ್ನು ಆಡಲಿರುವ ಟೀಂ ಇಂಡಿಯಾ ಈ ಪ್ರವಾಸದ ಬಳಿಕ ಜನವರಿಯಲ್ಲಿ ಶ್ರೀಲಂಕಾ ವಿರುದ್ಧ 3 ಪಂದ್ಯಗಳ ಟಿ20 ಹಾಗೂ ಏಕದಿನ ಸರಣಿಗಳನ್ನು ತವರಿನಲ್ಲಿ ಆಡಲಿದೆ. ಆದರೆ ಈ ಸರಣಿಗೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ (Rohit Sharma, Virat Kohli and KL Rahul) ಅಲಭ್ಯರಾಗಲಿದ್ದಾರೆ. ಬಿಸಿಸಿಐ ಮೂಲಗಳ ಪ್ರಕಾರ, ಶ್ರೀಲಂಕಾ ವಿರುದ್ಧದ ಸರಣಿಗೆ ಆಯ್ಕೆಯಾದ ತಂಡದಿಂದ ಈ ಮೂವರು ಆಟಗಾರರಿಗೆ ವಿಶ್ರಾಂತಿ ನೀಡಲಾಗುವುದು. ಹಾಗೆಯೇ ಟಿ20 ತಂಡದ ನಾಯಕತ್ವವನ್ನು ಹಾರ್ದಿಕ್ ಪಾಂಡ್ಯಗೆ (Hardik Pandya) ವಹಿಸಲಾಗುವುದು ಎಂದು ಇನ್‌ಸೈಡ್‌ಸ್ಪೋರ್ಟ್‌ ವರದಿ ಮಾಡಿದೆ.

ಶ್ರೀಲಂಕಾ ವಿರುದ್ಧ ಮುಂದಿನ ವರ್ಷ ಜನವರಿಯಲ್ಲಿ ನಡೆಯಲಿರುವ 3 ಟಿ20 ಪಂದ್ಯಗಳ ಸರಣಿಯಿಂದ ರೋಹಿತ್, ವಿರಾಟ್ ವಿಶ್ರಾಂತಿ ಪಡೆಯಲಿದ್ದಾರೆ. ವೈಸ್ ಕ್ಯಾಪ್ಟನ್ ಕೆಎಲ್ ರಾಹುಲ್ ಮದುವೆಯ ಕಾರಣದಿಂದ ಈ ಸರಣಿಯಿಂದ ದೂರ ಉಳಿಯಲಿದ್ದಾರೆ. ಇವರಲ್ಲದೆ, ದಿನೇಶ್ ಕಾರ್ತಿಕ್, ಆರ್. ಅಶ್ವಿನ್, ಮೊಹಮ್ಮದ್ ಶಮಿ ಕೂಡ ಈ ಸರಣಿಯಿಂದ ಬ್ರೇಕ್ ಪಡೆಯಲಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ ಎಂದು ಇನ್‌ಸೈಡ್‌ಸ್ಪೋರ್ಟ್‌ ತನ್ನ ವರದಿಯಲ್ಲಿ ಹೇಳಿಕೊಂಡಿದೆ.

ಇದನ್ನೂ ಓದಿ: KL Rahul Wedding: ಜನವರಿಯಲ್ಲಿ ರಾಹುಲ್- ಅಥಿಯಾ ಮದುವೆ? ತಂಡದಿಂದ ಬ್ರೇಕ್ ಕೇಳಿದ ಕನ್ನಡಿಗ

ಡಿಸೆಂಬರ್​ನಲ್ಲಿ ನೂತನ ಆಯ್ಕೆ ಮಂಡಳಿ

ವರದಿಯ ಪ್ರಕಾರ, ಡಿಸೆಂಬರ್‌ನಲ್ಲಿ ಹೊಸ ಆಯ್ಕೆ ಸಮಿತಿಯನ್ನು ರಚಿಸಲಾಗುವುದು. ಬಳಿಕ ನೂತನ ಆಯ್ಕೆ ಮಂಡಳಿ ಶ್ರೀಲಂಕಾ ಸರಣಿಗೆ ಟೀಂ ಇಂಡಿಯಾವನ್ನು ಆಯ್ಕೆ ಮಾಡುವ ಜವಬ್ದಾರಿ ತೆಗೆದುಕೊಳ್ಳಲಿದ್ದಾರೆ. ಈ ಬಗ್ಗೆ ಈಗಾಗಲೇ ರೋಹಿತ್, ವಿರಾಟ್ ಅವರಿಗೆ ತಿಳಿಸಲಾಗಿದೆ. ಅಲ್ಲದೆ ಈ ವಿಚಾರದಲ್ಲಿ ಈ ಇಬ್ಬರು ಬಿಸಿಸಿಐ ಜೊತೆಗಿದ್ದಾರೆ ಎಂದು ತಿಳಿದುಬಂದಿದೆ.

ಮುಂದಿನ ಟಿ20 ವಿಶ್ವಕಪ್​ಗೆ ಈಗಿನಿಂದಲೇ ತಯಾರಿ

ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ರೋಹಿತ್, ವಿರಾಟ್ ಅವರಂತಹ ಹಿರಿಯರು ಆಡದಿರುವುದು ಟೀಮ್ ಇಂಡಿಯಾದ ಮುಂದಿನ ಟಿ20 ವಿಶ್ವಕಪ್ ತಯಾರಿಯ ಭಾಗವಾಗಿದೆ. ವಾಸ್ತವವಾಗಿ, ಬಿಸಿಸಿಐ ಮುಂದಿನ ಟಿ20 ವಿಶ್ವಕಪ್‌ಗೆ ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಹೊಸ ತಂಡವನ್ನು ಸಿದ್ಧಪಡಿಸುವ ಉತ್ಸಾಹದಲ್ಲಿದೆ. ರೋಹಿತ್, ವಿರಾಟ್ ಅಥವಾ ಇತರ ಹಿರಿಯ ಆಟಗಾರರನ್ನು ಮುಂದಿನ ಟಿ20 ವಿಶ್ವಕಪ್‌ ತಂಡದಿಂದ ಕೈಬಿಡುವ ಸಾಧ್ಯತೆಗಳಿವೆ. ಹೀಗಾಗಿ ಶ್ರೀಲಂಕಾ ವಿರುದ್ಧದ ಸರಣಿಯಿಂದ ಎಲ್ಲಾ ಹಿರಿಯ ಆಟಗಾರರು ಹೊರಗುಳಿಯಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada