AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಬರ್-ರಿಜ್ವಾನ್‌ನಂತಹ ಬ್ಯಾಟರ್​ಗಳಿಗಾಗಿ ಭಾರತ ಇಷ್ಟರಲ್ಲೇ ಹಂಬಲಿಸಲಿದೆ; ಪಾಕ್ ಮಾಜಿ ಕ್ಯಾಪ್ಟನ್ ಶಾಕಿಂಗ್ ಹೇಳಿಕೆ

ಒಂದು ವರ್ಷದ ಹಿಂದೆ ನಾವು ಟಿ20 ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಅವರಂತಹ ಬ್ಯಾಟ್ಸ್‌ಮನ್‌ಗಳಿಲ್ಲ ಎಂದು ಹೇಳುತ್ತಿದ್ದೆವು.

ಬಾಬರ್-ರಿಜ್ವಾನ್‌ನಂತಹ ಬ್ಯಾಟರ್​ಗಳಿಗಾಗಿ ಭಾರತ ಇಷ್ಟರಲ್ಲೇ ಹಂಬಲಿಸಲಿದೆ; ಪಾಕ್ ಮಾಜಿ ಕ್ಯಾಪ್ಟನ್ ಶಾಕಿಂಗ್ ಹೇಳಿಕೆ
ಬಾಬರ್-ರಿಜ್ವಾನ್‌
TV9 Web
| Edited By: |

Updated on: Dec 20, 2021 | 7:51 AM

Share

ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್… ಈ ಎರಡು ಹೆಸರುಗಳು ಪ್ರಸ್ತುತ ವಿಶ್ವ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಹೊಂದಿವೆ. 2021 ರಲ್ಲಿ, ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಟಿ 20 ಸ್ವರೂಪದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಟಿ20 ವಿಶ್ವಕಪ್ ಇರಲಿ, ದ್ವಿಪಕ್ಷೀಯ ಸರಣಿ ಇರಲಿ ಇಬ್ಬರ ಬ್ಯಾಟ್ ಬಿರುಸಾಗಿ ಘರ್ಜಿಸುತ್ತಿದೆ. ಪಾಕಿಸ್ತಾನದ ಮಾಜಿ ಆಟಗಾರರು ಈಗ ಈ ಬ್ಯಾಟ್ಸ್‌ಮನ್‌ಗಳನ್ನು ಅಸಾಮಾನ್ಯ ಎಂದು ಪರಿಗಣಿಸಲು ಪ್ರಾರಂಭಿಸಿದ್ದಾರೆ.ಅದೇ ಸಮಯದಲ್ಲಿ ಭಾರತವು ಈಗ ರಿಜ್ವಾನ್-ಬಾಬರ್‌ನಂತಹ ಬ್ಯಾಟ್ಸ್‌ಮನ್‌ಗಳಿಗಾಗಿ ಹಂಬಲಿಸುತ್ತಿದೆ ಎಂದು ಪಾಕ್ ಮಾಜಿ ಆಟಗಾರರು ಹೇಳಲು ಆರಂಭಿಸಿದ್ದಾರೆ.

ಪಿಟಿವಿ ಸ್ಪೋರ್ಟ್ಸ್ ಜೊತೆಗಿನ ಸಂವಾದದಲ್ಲಿ ಪಾಕಿಸ್ತಾನದ ಮಾಜಿ ನಾಯಕ ರಶೀದ್ ಲತೀಫ್ ಮಾತನಾಡಿ, ಒಂದು ಕಾಲದಲ್ಲಿ ನಮ್ಮಲ್ಲಿ ವಿರಾಟ್-ರೋಹಿತ್ ಅವರಂತಹ ಬ್ಯಾಟ್ಸ್‌ಮನ್‌ಗಳಿಲ್ಲ ಎಂದು ಪಾಕಿಸ್ತಾನದ ಜನರು ಹೇಳುತ್ತಿದ್ದರು. ಆದರೆ ಈಗ ಭಾರತವು ಬಾಬರ್ ಆಜಮ್ ಮತ್ತು ಮೊಹಮ್ಮದ್ ಅವರಂತಹ ಬ್ಯಾಟ್ಸ್‌ಮನ್‌ಗಳನ್ನು ಹೊಂದಿಲ್ಲ ಎಂದು ಹೇಳಲು ಹೊರಟಿದೆ ಎಂದಿದ್ದಾರೆ.

ಬಾಬರ್-ರಿಜ್ವಾನ್‌ನಂತಹ ಬ್ಯಾಟ್ಸ್‌ಮನ್‌ಗಳಿಗಾಗಿ ಭಾರತ ಹಂಬಲಿಸುತ್ತದೆ! ಬಾಬರ್ ಮತ್ತು ರಿಜ್ವಾನ್ ಅವರನ್ನು ಹೊಗಳಿದ ರಶೀದ್ ಲತೀಫ್, ಒಂದು ವರ್ಷದ ಹಿಂದೆ ನಾವು ಟಿ20 ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಅವರಂತಹ ಬ್ಯಾಟ್ಸ್‌ಮನ್‌ಗಳಿಲ್ಲ ಎಂದು ಹೇಳುತ್ತಿದ್ದೆವು. ಆದರೆ ಈಗ ಸ್ವಲ್ಪ ಸಮಯದ ನಂತರ ಭಾರತೀಯರು ರಿಜ್ವಾನ್ ಮತ್ತು ಬಾಬರ್ ಅವರಂತಹ ಬ್ಯಾಟ್ಸ್‌ಮನ್‌ಗಳನ್ನು ನಾವು ಹೊಂದಿಲ್ಲ ಎಂದು ಹೇಳುತ್ತಾರೆ ಎಂದು ನಾನು ನಂಬುತ್ತೇನೆ ಎಂದಿದ್ದಾರೆ.

ಬಾಬರ್-ರಿಜ್ವಾನ್ ದಾಖಲೆ ಬ್ಯಾಟಿಂಗ್ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಟಿ20 ಕ್ರಿಕೆಟ್‌ನ ಹಲವು ದಾಖಲೆಗಳನ್ನು ಮುರಿದಿದ್ದಾರೆ. ಆರಂಭಿಕರಾಗಿ ಕಣಕ್ಕಿಳಿದ ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ಟಿ20 ಕ್ರಿಕೆಟ್‌ನಲ್ಲಿ 4 ಬಾರಿ 150ಕ್ಕೂ ಹೆಚ್ಚು ರನ್ ಹಂಚಿಕೊಂಡಿದ್ದು ವಿಶ್ವದಾಖಲೆಯಾಗಿದೆ. 150ಕ್ಕೂ ಹೆಚ್ಚು ರನ್‌ಗಳ ಈ ನಾಲ್ಕು ಜೊತೆಯಾಟಗಳನ್ನು ಈ ವರ್ಷ ಮಾಡಲಾಗಿದೆ. ಇದೇ ವರ್ಷ ನಡೆದ ಟಿ20 ವಿಶ್ವಕಪ್‌ನಲ್ಲಿ ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಅದ್ಭುತ ಪ್ರದರ್ಶನ ನೀಡಿ ತಂಡವನ್ನು ಸೆಮಿಫೈನಲ್‌ಗೆ ಕೊಂಡೊಯ್ದರು. ಇಬ್ಬರೂ ಭಾರತದ ವಿರುದ್ಧ ಅಜೇಯ ಅರ್ಧಶತಕ ಗಳಿಸಿ ಪಾಕಿಸ್ತಾನಕ್ಕೆ 10 ವಿಕೆಟ್‌ಗಳ ದೊಡ್ಡ ಜಯವನ್ನು ತಂದುಕೊಟ್ಟರು.

ಬಾಬರ್ ಆಜಮ್ ಕಳೆದ ಕೆಲವು ವರ್ಷಗಳಿಂದ ತಮ್ಮ ಅಬ್ಬರ ತೋರಿಸುತ್ತಿದ್ದಾರೆ. ಆದರೆ 2021 ರ ವರ್ಷವು ಮೊಹಮ್ಮದ್ ರಿಜ್ವಾನ್ ಅವರದ್ದಾಗಿದೆ. ಈ ಆಟಗಾರ ಈ ವರ್ಷ 29 ಪಂದ್ಯಗಳಲ್ಲಿ 119 ಬೌಂಡರಿಗಳನ್ನು ಬಾರಿಸಿದ್ದಾರೆ. ಕ್ಯಾಲೆಂಡರ್ ವರ್ಷದಲ್ಲಿ ಬೌಂಡರಿ ಬಾರಿಸಿದ ಏಕೈಕ ಆಟಗಾರ ರಿಜ್ವಾನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದಲ್ಲದೇ, ಮೊಹಮ್ಮದ್ ರಿಜ್ವಾನ್ ಒಂದು ಕ್ಯಾಲೆಂಡರ್ ವರ್ಷದಲ್ಲಿ 1000 ಕ್ಕೂ ಹೆಚ್ಚು T20 ರನ್ ಗಳಿಸಿದ ಮೊದಲ ಆಟಗಾರ. ಈ ವರ್ಷ ರಿಜ್ವಾನ್ ಅವರ ಬ್ಯಾಟ್ 73.66 ಸರಾಸರಿಯಲ್ಲಿ 1326 ರನ್ ಗಳಿಸಿದೆ. ರಿಜ್ವಾನ್ ಈ ವರ್ಷ 12 ಕ್ಕೂ ಹೆಚ್ಚು ಬಾರಿ 50 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ, ಇದು ವಿಶ್ವ ದಾಖಲೆಯಾಗಿದೆ.

ದೇವೇಗೌಡರ ಈ ನಿರ್ಧಾರದ ಹಿಂದಿರುವ ರಾಜಕೀಯ ಲೆಕ್ಕಾಚಾರವೇನು ಗೊತ್ತಾ?
ದೇವೇಗೌಡರ ಈ ನಿರ್ಧಾರದ ಹಿಂದಿರುವ ರಾಜಕೀಯ ಲೆಕ್ಕಾಚಾರವೇನು ಗೊತ್ತಾ?
ರಾಯರ ಮಠಕ್ಕೂ ತಟ್ಟಿದ ಭಾಷಾ ವಿವಾದ: ತೆಲುಗು ಭಾಷಿಕರ ವಿರೋಧ
ರಾಯರ ಮಠಕ್ಕೂ ತಟ್ಟಿದ ಭಾಷಾ ವಿವಾದ: ತೆಲುಗು ಭಾಷಿಕರ ವಿರೋಧ
ಡಬಲ್ ಎಲಿಮಿನೇಷನ್​​: ಮನೆ ಮಂದಿಗೆ ಶಾಕ್ ಕೊಟ್ಟ ಬಿಗ್​​ಬಾಸ್
ಡಬಲ್ ಎಲಿಮಿನೇಷನ್​​: ಮನೆ ಮಂದಿಗೆ ಶಾಕ್ ಕೊಟ್ಟ ಬಿಗ್​​ಬಾಸ್
ಏಕಾಏಕಿ ಮುಗಿಬಿದ್ದ ಬೀದಿ ನಾಯಿಗಳಿಂದ ದಂಪತಿ, ಮಗು ಕೂದಲೆಳೆ ಅಂತರದಲ್ಲಿ ಪಾರು
ಏಕಾಏಕಿ ಮುಗಿಬಿದ್ದ ಬೀದಿ ನಾಯಿಗಳಿಂದ ದಂಪತಿ, ಮಗು ಕೂದಲೆಳೆ ಅಂತರದಲ್ಲಿ ಪಾರು
ಹೊಸ ವರ್ಷಾಚರಣೆ: ಬೆಂಗಳೂರಿನಲ್ಲಿ ಟ್ರಾಫಿಕ್ ರೂಲ್ಸ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷಾಚರಣೆ: ಬೆಂಗಳೂರಿನಲ್ಲಿ ಟ್ರಾಫಿಕ್ ರೂಲ್ಸ್ ಹೇಗಿರುತ್ತೆ ಗೊತ್ತಾ?
‘ಮಾರ್ಕ್’ಗೆ ಪೈರಸಿ ಕಾಟ, ಸುದೀಪ್ ತೆಗೆಸಿದ ಪೈರಸಿ ಲಿಂಕ್ ಎಷ್ಟು?
‘ಮಾರ್ಕ್’ಗೆ ಪೈರಸಿ ಕಾಟ, ಸುದೀಪ್ ತೆಗೆಸಿದ ಪೈರಸಿ ಲಿಂಕ್ ಎಷ್ಟು?
2026 ಕುಂಭ ರಾಶಿಗೆ ಸಾಡೇಸಾತಿಯ ಅಂತಿಮ ಘಟ್ಟ; ಆರೋಗ್ಯದ ನಿರ್ಲಕ್ಷ್ಯಬೇಡ
2026 ಕುಂಭ ರಾಶಿಗೆ ಸಾಡೇಸಾತಿಯ ಅಂತಿಮ ಘಟ್ಟ; ಆರೋಗ್ಯದ ನಿರ್ಲಕ್ಷ್ಯಬೇಡ
ಭರ್ಜರಿ ಗಳಿಕೆ ಮಧ್ಯೆ ‘ಮಾರ್ಕ್’ ಸುದ್ದಿಗೋಷ್ಠಿ: ಇಲ್ಲಿದೆ ಲೈವ್
ಭರ್ಜರಿ ಗಳಿಕೆ ಮಧ್ಯೆ ‘ಮಾರ್ಕ್’ ಸುದ್ದಿಗೋಷ್ಠಿ: ಇಲ್ಲಿದೆ ಲೈವ್
‘ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ!’
‘ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ!’
ತಡರಾತ್ರಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಪುಂಡರು
ತಡರಾತ್ರಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಪುಂಡರು