IND Women vs AUS Women: ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಮಿಂಚಿದ ಭಾರತ; ಸ್ಮೃತಿ ದಾಖಲೆಯ ಅರ್ಧಶತಕ
IND Women vs Aus Women: ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನಾ ಔಟಾಗದೆ 80 ರನ್ ಗಳಿಸಿದರು. ಆಫ್ ಸೈಡ್ನಲ್ಲಿ ಕೆಲವು ಅದ್ಭುತ ಶಾಟ್ಗಳನ್ನು ಆಡಿದ ಮಂಧನಾ, 144 ಎಸೆತಗಳಲ್ಲಿ 15 ಬೌಂಡರಿಗಳ ಸಹಾಯದಿಂದ 80 ರನ್ ಗಳಿಸಿದ್ದಾರೆ.
ಭಾರತೀಯ ಮಹಿಳಾ ಕ್ರಿಕೆಟ್ ಮತ್ತು ಆಸ್ಟ್ರೇಲಿಯಾ ಮಹಿಳಾ ತಂಡದ ನಡುವೆ ಏಕೈಕ ಡೇ ನೈಟ್ ಟೆಸ್ಟ್ ಪಂದ್ಯ ನಡೆಯುತ್ತಿದೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ದಿನದಾಟದಲ್ಲಿ ಭಾರತ ಚಹಾ ತನಕ ಒಂದು ವಿಕೆಟ್ಗೆ 132 ರನ್ ಗಳಿಸಿತು. ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನಾ ಔಟಾಗದೆ 80 ರನ್ ಗಳಿಸಿದರು. ಆಫ್ ಸೈಡ್ನಲ್ಲಿ ಕೆಲವು ಅದ್ಭುತ ಶಾಟ್ಗಳನ್ನು ಆಡಿದ ಮಂಧನಾ, 144 ಎಸೆತಗಳಲ್ಲಿ 15 ಬೌಂಡರಿಗಳ ಸಹಾಯದಿಂದ 80 ರನ್ ಗಳಿಸಿದ್ದಾರೆ. ಅವರು ಮೊದಲ ವಿಕೆಟ್ಗೆ ಶೆಫಾಲಿ ವರ್ಮಾ ಜೊತೆ 93 ರನ್ ಜೊತೆಯಾಟವನ್ನು ಹಂಚಿಕೊಂಡರು. ಶೆಫಾಲಿ 64 ಎಸೆತಗಳಲ್ಲಿ 31 ರನ್ ಗಳಿಸಿದರು. ಮಳೆಯಿಂದಾಗಿ ಮೊದಲ ದಿನದ ಆಟ ಬೇಗ ಮುಗಿಯಿತು.
ಎರಡನೇ ಸೆಷನ್ ಹೆಚ್ಚಿನ ಭಾಗವು ಮಳೆಯಿಂದಾಗಿ ರದ್ದಾಯಿತು, ಆದರೆ ಈ ಸೆಷನ್ನಲ್ಲಿ, ಮಂಧನಾ 16 ರನ್ಗಳಿಸಿ ತನ್ನ ಹಿಂದಿನ ಅತ್ಯುತ್ತಮ ವೈಯಕ್ತಿಕ 78 ರನ್ಗಳನ್ನು ಮೀರಿಸಿದರು. ಪೂನಮ್ ರಾವುತ್ (57 ಎಸೆತಗಳಲ್ಲಿ 16 ರನ್) ಚಹಾ ಸಮಯದಲ್ಲಿ ಮಂಧಾನ ಜೊತೆಗಿದ್ದರು. ಇಬ್ಬರೂ ಎರಡನೇ ವಿಕೆಟ್ಗೆ 39 ರನ್ಗಳ ಮುರಿಯದ ಜೊತೆಯಾಟವನ್ನು ಹಂಚಿಕೊಂಡರು.
ಟಾಸ್ ಗೆದ್ದ ಆಸ್ಟ್ರೇಲಿಯಾ ಇದಕ್ಕೂ ಮೊದಲು ಆಸ್ಟ್ರೇಲಿಯಾ ಟಾಸ್ ಗೆದ್ದಿತು ಮತ್ತು ಹಸಿರು ಪಿಚ್‌ನಲ್ಲಿ ಬೌಲಿಂಗ್ ಮಾಡಲು ನಿರ್ಧರಿಸಿತು, ಆದರೆ ಮಂಧನಾ ಅದನ್ನು ತಪ್ಪು ಎಂದು ಸಾಬೀತುಪಡಿಸಿದರು. ವಾಸ್ತವವಾಗಿ, ಶೆಫಾಲಿ ಮತ್ತು ಮಂಧಾನಾ ತಮ್ಮ ಸಾಂಪ್ರದಾಯಿಕ ಆಟಕ್ಕೆ ವಿರುದ್ಧವಾಗಿ ಬ್ಯಾಟಿಂಗ್ ಮಾಡುವ ಮೂಲಕ ಆಸ್ಟ್ರೇಲಿಯಾದ ಬೌಲರ್‌ಗಳನ್ನು ಬೆರಗುಗೊಳಿಸಿದರು. ಸಾಮಾನ್ಯವಾಗಿ ಆಕ್ರಮಣಶೀಲರಾಗಿರುವ ಶೆಫಾಲಿ, ಮಂಧನಾಗೆ ಉತ್ತಮ ಸಾಥ್ ನೀಡಿದರು.
ಭಾರತ ಭರ್ಜರಿ ಪ್ರದರ್ಶನ ಚೊಚ್ಚಲ ಟೆಸ್ಟ್‌ಗೆ ಪಾದಾರ್ಪಣೆ ಮಾಡುತ್ತಿದ್ದ ಡಾರ್ಸಿ ಬ್ರೌನ್ ಎಸೆತಗಳಲ್ಲಿ ಮಂಧನಾ ಹಲವು ಬೌಂಡರಿಗಳನ್ನು ಬಾರಿಸಿದರು. ಮಂಧನಾ ಮೆಕ್‌ಗ್ರಾತ್‌ಗೆ ಕವರ್ ಡ್ರೈವ್ ಹಾಕುವ ಮೂಲಕ ಅರ್ಧಶತಕ ಪೂರೈಸಿದರು. ಅದೇ ಸಮಯದಲ್ಲಿ, ಶೆಫಾಲಿ ತನ್ನ ಇನ್ನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿಗಳನ್ನು ಹೊಡೆದರು. ಅವರು ಎರಡು ಬಾರಿ ಜೀವದಾನವನ್ನೂ ಪಡೆದರು. ಮ್ಯಾಗ್ ಲೆನ್ನಿಂಗ್ ಕ್ಯಾಚ್ ಅನ್ನು ಮೊದಲ ಸ್ಲಿಪ್‌ನಲ್ಲಿ ಕೈಬಿಟ್ಟರು. ಆದರೆ ಅನ್ನಾಬೆಲ್ ಸದರ್‌ಲ್ಯಾಂಡ್ ನಂತರ ಮಿಡ್-ಆನ್‌ನಲ್ಲಿ ಕ್ಯಾಚ್ ಅನ್ನು ಕೈಬಿಟ್ಟರು.
ಮಂಧನಾ ಮೊದಲು 50 ರನ್ ಗಳಿಸಿದರು ಆದರೆ ನಂತರ 64 ಎಸೆತಗಳನ್ನು ಆಡಿ 14 ರನ್ ಗಳಿಸಿದರು. ಇನ್ನೊಂದು ತುದಿಯಲ್ಲಿ, ಪೂನಮ್ ರಾವುತ್ 16 ರನ್ ಗಳಿಸಿ ಮೈದಾನದಲ್ಲಿದ್ದಾರೆ. ಮಳೆಯಿಂದಾಗಿ ಊಟದ ವಿರಾಮದ ನಂತರವೂ ಆಟವನ್ನು ನಿಲ್ಲಿಸಬೇಕಾಯಿತು. ಆಗ ಭಾರತ ಒಂದು ವಿಕೆಟ್ಗೆ 114 ರನ್ ಗಳಿಸಿತ್ತು.
Published On - 7:01 pm, Thu, 30 September 21