PAK vs AFG, ICC World Cup: ಅಫ್ಘಾನಿಸ್ತಾನ ಐತಿಹಾಸಿಕ ಜಯಕ್ಕೆ ಭಾರತೀಯ ಕ್ರಿಕೆಟಿಗರಿಂದ ಹೊಗಳಿಕೆಯ ಸುರಿಮಳೆ: ಯಾರು ಏನಂದ್ರು ನೋಡಿ

|

Updated on: Oct 24, 2023 | 11:02 AM

Afghanistan cricket team, ICC World Cup: ಐಸಿಸಿ ಏಕದಿನ ವಿಶ್ವಕಪ್​ನಲ್ಲಿ ಪಾಕಿಸ್ತಾನ ವಿರುದ್ಧದ ಅಫ್ಘಾನಿಸ್ತಾನ ತಂಡದ ಗೆಲುವನ್ನು ಭಾರತೀಯರು ಹೆಚ್ಚು ಸಂಭ್ರಮಿಸಿದರು. ಭಾರತದ ಕ್ರಿಕೆಟ್ ದಿಗ್ಗಜರು ಕೂಡ ಅಫ್ಘಾನ್ ಗೆಲುವಿಗೆ ಶುಭಕೋರಿದ್ದಾರೆ. ಅಫ್ಘಾನ್ ಆಟಗಾರರು ಗೆಲುವಿನ ಬಳಿಕ ಅಭಿಮಾನಿಗಳಿಗೆ ಧನ್ಯವಾದ ಕೂಡ ಹೇಳಿದ್ದಾರೆ.

PAK vs AFG, ICC World Cup: ಅಫ್ಘಾನಿಸ್ತಾನ ಐತಿಹಾಸಿಕ ಜಯಕ್ಕೆ ಭಾರತೀಯ ಕ್ರಿಕೆಟಿಗರಿಂದ ಹೊಗಳಿಕೆಯ ಸುರಿಮಳೆ: ಯಾರು ಏನಂದ್ರು ನೋಡಿ
Afghanistan cricket
Follow us on

ಸೋಮವಾರ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್​ನ ಪಂದ್ಯಾವಳಿಯಲ್ಲಿ ಪಾಕಿಸ್ತಾನವನ್ನು ಬಗ್ಗು ಬಡಿದು ಅಫ್ಘಾನಿಸ್ತಾನ (Pakistan vs Afghanistan) ತಂಡ ಐತಿಹಾಸಿಕ ಗೆಲುವಿನ ಸಾಧನೆ ಮಾಡಿತು. ಕ್ರಿಕೆಟ್ ಶಿಶುಗಳು 8 ವಿಕೆಟ್‌ಗಳಿಂದ ಗೆದ್ದು ಬೀಗಿದರು. 283 ರನ್‌ಗಳ ಟಾರ್ಗೆಟ್ ಅನ್ನು ಎಚ್ಚರಿಕೆಯಿಂದ ಬೆನ್ನಟ್ಟಿದ ಅಫ್ಘಾನ್ ಬ್ಯಾಟರ್​ಗಳು ಎಲ್ಲೂ ತಪ್ಪೆಸೆಯದೆ ಅವರ ಅತ್ಯಧಿಕ ಯಶಸ್ವಿ ರನ್ ಚೇಸ್‌ ಮಾಡಿದ ದಾಖಲೆ ಕೂಡ ಬರೆದರು.

ಆರಂಭಿಕರಾದ ರಹಮಾನುಲ್ಲಾ ಗುರ್ಬಾಜ್ ಮತ್ತು ಇಬ್ರಾಹಿಂ ಝದ್ರಾನ್ ತಮ್ಮ ತಂಡಕ್ಕೆ ಅತ್ಯುತ್ತಮ ಆರಂಭವನ್ನು ನೀಡಿದ್ದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು. ಗುರ್ಬಾಜ್ 53 ಎಸೆತಗಳಲ್ಲಿ ಒಂಬತ್ತು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ 65 ರನ್ ಗಳಿಸಿದರೆ, ಜದ್ರಾನ್ 113 ಎಸೆತಗಳಲ್ಲಿ ಹತ್ತು ಬೌಂಡರಿಗಳೊಂದಿಗೆ 87 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾದರು.

ಇದನ್ನೂ ಓದಿ
ವಿಶ್ವಕಪ್ ಸೆಮಿಫೈನಲ್ ರೇಸ್​ನಲ್ಲಿ AFG ತಂಡ: ಇನ್ನೆಷ್ಟು ಪಂದ್ಯ ಗೆಲ್ಲಬೇಕು?
ಅಫ್ಘಾನ್ ವಿರುದ್ಧ ಸೋತ ಪಾಕಿಸ್ತಾನಕ್ಕೆ ಸೆಮೀ ಫೈನಲ್ ತಲುಪುವ ಅವಕಾಶ ಇದೆಯೇ?
ಚೆಪಾಕ್ ಅಭಿಮಾನಿಗಳಿಗೆ ತಲೆಬಾಗಿದ ಅಫ್ಘಾನ್ ಆಟಗಾರರು
PAK​ಗೆ ಮಣ್ಣುಮುಕ್ಕಿಸಿದ AFG: ಮೈದಾನದಲ್ಲೇ ರಶೀದ್ ಜೊತೆ ಪಠಾಣ್ ಡ್ಯಾನ್ಸ್

SA vs BAN, ICC World Cup: ವಿಶ್ವಕಪ್​ನಲ್ಲಿಂದು ದ. ಆಫ್ರಿಕಾ-ಬಾಂಗ್ಲಾದೇಶ ಮುಖಾಮುಖಿ: ಟಾಪ್ 2 ಮೇಲೆ ಹರಿಣಗಳ ಕಣ್ಣು

ರಹಮತ್ ಶಾ 84 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ 77 ರನ್ ಮತ್ತು ನಾಯಕ ಹಶ್ಮತುಲ್ಲಾ ಶಾಹಿದಿ 45 ಎಸೆತಗಳಲ್ಲಿ ಐದು ಬೌಂಡರಿಗಳೊಂದಿಗೆ 48 ರನ್ ಗಳಿಸಿ ಅಜೇಯರಾಗಿ ಉಳಿದು ವಿನ್ನಿಂಗ್ ಶಾಟ್ ಹೊಡೆದರು. ಶಾಹೀನ್ ಅಫ್ರಿದಿ ಮತ್ತು ಹಸನ್ ಅಲಿ ತಲಾ ಒಂದು ವಿಕೆಟ್ ಪಡೆದರು. ತಂಡದ ಸೋಲಿಗೆ ನಾಯಕ ಬಾಬರ್ ಅಝಂ ಬೌಲರ್​ಗಳೇ ಕಾರಣ ಎಂದರು.

ಈ ಪಂದ್ಯದಲ್ಲಿ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಿತು. ನಾಯಕ ಬಾಬರ್ ಅಜಮ್ ಮತ್ತು ಅಬ್ದುಲ್ಲಾ ಶಫೀಕ್ ಅವರ ಅರ್ಧಶತಕಗಳೊಂದಿಗೆ 283 ರನ್ ಕಲೆ ಹಾಕಿತು. ಚೊಚ್ಚಲ ವಿಶ್ವಕಪ್ ಆಡಿದ ನೂರ್ ಅಹ್ಮದ್ ಮೊದಲ ಇನ್ನಿಂಗ್ಸ್‌ನಲ್ಲಿ ಮೂರು ವಿಕೆಟ್ ಪಡೆದು ಮಿಂಚಿದರು. ನವೀನ್ ಉಲ್ ಹಕ್ ಎರಡು, ಮೊಹಮ್ಮದ್ ನಬಿ ಮತ್ತು ಅಜ್ಮತುಲ್ಲಾ ಒಮರ್ಜಾಯ್ ತಲಾ ಒಂದೊಂದು ವಿಕೆಟ್ ಪಡೆದರು.

ಅಫ್ಘಾನಿಸ್ತಾನ ತಂಡದ ಈ ಗೆಲುವನ್ನು ಭಾರತೀಯರು ಹೆಚ್ಚು ಸಂಭ್ರಮಿಸಿದರು. ಭಾರತದ ಕ್ರಿಕೆಟ್ ದಿಗ್ಗಜರು ಕೂಡ ಅಫ್ಘಾನ್ ಗೆಲುವಿಗೆ ಶುಭಕೋರಿದ್ದಾರೆ.

ಭಾರತೀಯ ಮಾಜಿ ಆಟಗಾರರು ಶುಭಕೋರಿರುವ ಟ್ವೀಟ್:

 

 

ಚೆಪಾಕ್ ಮೈದಾನದಲ್ಲಿ ಅಭಿಮಾನಿಗಳ ಸಂಪೂರ್ಣ ಸಪೋರ್ಟ್ ಅಫ್ಘಾನ್ ತಂಡಕ್ಕಿತ್ತು. ಇದಕ್ಕಾಗಿ ಅಫ್ಘಾನ್ ಆಟಗಾರರು ಗೆಲುವಿನ ಬಳಿಕ ಅಭಿಮಾನಿಗಳಿಗೆ ಧನ್ಯವಾದ ಕೂಡ ಹೇಳಿದರು. ಪಂದ್ಯ ಮುಗಿದ ಬಳಿಕ ಟೀಮ್ ಇಂಡಿಯಾ ಮಾಜಿ ಆಟಗಾರ ಇರ್ಫಾನ್ ಪಠಾಣ್ ಅಫ್ಘಾನಿಸ್ತಾನ ಆಲ್‌ರೌಂಡರ್ ರಶೀದ್ ಖಾನ್ ಜೊತೆ ಡ್ಯಾನ್ಸ್ ಮಾಡಿದ್ದಾರೆ. ಇದರ ವಿಡಿಯೋ ಕೂಡ ವೈರಲ್ ಆಗುತ್ತಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ