AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

VHT ಟೂರ್ನಿಯಲ್ಲಿ ಕಣಕ್ಕಿಳಿಯಲಿರುವ ಟೀಮ್ ಇಂಡಿಯಾ ಆಟಗಾರರ ಪಟ್ಟಿ ಇಲ್ಲಿದೆ

Vijay Hazare Trophy 2025: ವಿಜಯ ಹಝಾರೆ ಟೂರ್ನಿ ಎಂದರೆ ದೇಶೀಯ ಏಕದಿನ ಪಂದ್ಯಾವಳಿ. ಈ ಟೂರ್ನಿಯಲ್ಲಿ ಬರೋಬ್ಬರಿ 32 ತಂಡಗಳು ಕಣಕ್ಕಿಳಿಯುತ್ತವೆ. ಡಿಸೆಂಬರ್ 24 ರಿಂದ ಶುರುವಾಗಲಿರುವ ಈ ಟೂರ್ನಿಯ ಮೊದಲ ದಿನವೇ 16 ಮ್ಯಾಚ್​ಗಳು ನಡೆಯಲಿವೆ. ಅಂದರೆ ಮೊದಲ ದಿನವೇ ಎಲ್ಲಾ ತಂಡಗಳು ಕಣಕ್ಕಿಳಿಯಲಿವೆ.

VHT ಟೂರ್ನಿಯಲ್ಲಿ ಕಣಕ್ಕಿಳಿಯಲಿರುವ ಟೀಮ್ ಇಂಡಿಯಾ ಆಟಗಾರರ ಪಟ್ಟಿ ಇಲ್ಲಿದೆ
Rohit - Rahul - Virat
ಝಾಹಿರ್ ಯೂಸುಫ್
|

Updated on: Dec 24, 2025 | 8:27 AM

Share

ದೇಶೀಯ ಏಕದಿನ ಟೂರ್ನಿ ವಿಜಯ ಹಝಾರೆ ಟ್ರೋಫಿ ಇಂದಿನಿಂದ (ಡಿ.24) ಶುರುವಾಗಲಿದೆ. 32 ತಂಡಗಳ ಈ ನಡುವಣ ಈ ಕದನದಲ್ಲಿ ಈ ಬಾರಿ ಟೀಮ್ ಇಂಡಿಯಾದ ಪ್ರಮುಖ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ. ಅಂದರೆ ಭಾರತೀಯ ಆಟಗಾರರು ಕೂಡ ದೇಶೀಯ ಟೂರ್ನಿಯಲ್ಲಿ ಕಾಣಿಸಿಕೊಳ್ಳುವುದನ್ನು ಬಿಸಿಸಿಐ ಕಡ್ಡಾಯಗೊಳಿಸಿದೆ. ಹೀಗಾಗಿ ನ್ಯೂಝಿಲೆಂಡ್ ವಿರುದ್ಧದ ಸರಣಿಗೂ ಮುನ್ನ ಭಾರತ ತಂಡದ ಆಟಗಾರರು ವಿಜಯ ಹಝಾರೆ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.

ಇಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಒಂದಷ್ಟು ಆಟಗಾರರು ವರ್ಷಗಳ ಬಳಿಕ ದೇಶೀಯ ಏಕದಿನ ಟೂರ್ನಿ ಆಡುತ್ತಿರುವುದು ವಿಶೇಷ. ಈ ಎಲ್ಲಾ ಆಟಗಾರರು ಮೊದಲ ದಿನವೇ ವಿವಿಧ ಭಾಗಗಳಲ್ಲಿ ಕಣಕ್ಕಿಳಿಯಲಿದ್ದಾರೆ. ಅದರಲ್ಲೂ ದೆಹಲಿ ಪರ ವಿರಾಟ್ ಕೊಹ್ಲಿ, ರಿಷಭ್ ಪಂತ್ ಹಾಗೂ ಹರ್ಷಿತ್ ರಾಣಾ ಇದೇ ಮೊದಲ ಬಾರಿಗೆ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಮತ್ತೊಂದೆಡೆ ಮುಂಬೈ ಪರ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಸರ್ಫರಾಝ್ ಖಾನ್ ಮತ್ತು ಯಶಸ್ವಿ ಜೈಸ್ವಾಲ್ ಕಣಕ್ಕಿಳಿಯಲಿದ್ದಾರೆ. ಅದರಂತೆ ಈ ಬಾರಿಯ ವಿಜಯ ಹಝಾರೆ ಟೂರ್ನಿಯಲ್ಲಿ ಕಣಕ್ಕಿಳಿಯಲಿರುವ ಟೀಮ್ ಇಂಡಿಯಾ ಆಟಗಾರರ ಪಟ್ಟಿ ಈ ಕೆಳಗಿನಂತಿದೆ…

  • ನಿತೀಶ್ ಕುಮಾರ್ ರೆಡ್ಡಿ – ಆಂಧ್ರ
  • ಹಾರ್ದಿಕ್ ಪಾಂಡ್ಯ – ಬರೋಡಾ
  • ಜಿತೇಶ್ ಶರ್ಮಾ – ಬರೋಡಾ
  • ಮೊಹಮ್ಮದ್ ಶಮಿ – ಬಂಗಾಳ
  • ಆಕಾಶ್ ದೀಪ್ – ಬಂಗಾಳ
  • ಶಹಬಾಝ್ ಅಹ್ಮದ್ – ಬಂಗಾಳ
  • ವಿರಾಟ್ ಕೊಹ್ಲಿ – ದೆಹಲಿ
  • ರಿಷಭ್ ಪಂತ್ – ದೆಹಲಿ
  • ಹರ್ಷಿತ್ ರಾಣಾ – ದೆಹಲಿ
  • ಇಶಾನ್ ಕಿಶನ್ – ಜಾರ್ಖಂಡ್
  • ಕೆಎಲ್ ರಾಹುಲ್ – ಕರ್ನಾಟಕ
  • ಪ್ರಸಿದ್ಧ್ ಕೃಷ್ಣ – ಕರ್ನಾಟಕ
  • ಸಂಜು ಸ್ಯಾಮ್ಸನ್ – ಕೇರಳ
  • ರುತುರಾಜ್ ಗಾಯಕ್ವಾಡ್ – ಮಹಾರಾಷ್ಟ್ರ
  • ರೋಹಿತ್ ಶರ್ಮಾ – ಮುಂಬೈ
  • ಯಶಸ್ವಿ ಜೈಸ್ವಾಲ್ – ಮುಂಬೈ
  • ಸೂರ್ಯಕುಮಾರ್ ಯಾದವ್ – ಮುಂಬೈ
  • ಶಿವಂ ದುಬೆ – ಮುಂಬೈ
  • ಸರ್ಫರಾಝ್ ಖಾನ್
  • ಶುಭಮನ್ ಗಿಲ್ – ಪಂಜಾಬ್
  • ಅಭಿಷೇಕ್ ಶರ್ಮಾ – ಪಂಜಾಬ್
  • ಅರ್ಷದೀಪ್ ಸಿಂಗ್ – ಪಂಜಾಬ್
  • ಸಾಯಿ ಸುದರ್ಶನ್ – ತಮಿಳುನಾಡು
  • ಧ್ರುವ್ ಜುರೆಲ್ – ಉತ್ತರ ಪ್ರದೇಶ
  • ರಿಂಕು ಸಿಂಗ್ – ಉತ್ತರ ಪ್ರದೇಶ

ಇದನ್ನೂ ಓದಿ: 15 ವರ್ಷಗಳ ಬಳಿಕ ವಿರಾಟ್ ಕೊಹ್ಲಿ ಕಣಕ್ಕಿಳಿಯುವುದು ಎಲ್ಲಿ?

ವಿಜಯ ಹಝಾರೆ ಟೂರ್ನಿಗೆ ಕರ್ನಾಟಕ ತಂಡ: ಮಯಾಂಕ್ ಅಗರ್ವಾಲ್ (ನಾಯಕ), ಕರುಣ್ ನಾಯರ್ (ಉಪನಾಯಕ), ದೇವದತ್ ಪಡಿಕ್ಕಲ್, ರವಿಚಂದ್ರಣ್ ಸ್ಮರಣ್, ಕೆಎಲ್ ಶ್ರೀಜಿತ್, ಅಭಿನವ್ ಮನೋಹರ್, ಶ್ರೇಯಸ್ ಗೋಪಾಲ್, ವಿಜಯಕುಮಾರ್ ವೈಶಾಕ್, ಮನ್ವಂತ್ ಕುಮಾರ್, ಶ್ರೀಶ ಆಚಾರ್, ಅಭಿಲಾಷ್ ಶೆಟ್ಟಿ, ಬಿಆರ್ ಶರತ್, ಹರ್ಷಿಲ್ ಧರ್ಮನಿ, ಧ್ರುವ  ಪ್ರಭಾಕರ್, ಕೆಎಲ್ ರಾಹುಲ್, ಪ್ರಸಿದ್ಧ್ ಕೃಷ್ಣ.