ಆಗಸ್ಟ್ 28 ರಂದು ಬಹುನಿರೀಕ್ಷಿತ ಏಷ್ಯಾಕಪ್ 2022 (Asia Cup 2022) ಆರಂಭವಾಗಲಿದ್ದು, ಈ ಕ್ರೀಡಾಕೂಟದಲ್ಲಿ ಒಂದು ವರ್ಷದ ನಂತರ ಭಾರತ ಮತ್ತು ಪಾಕಿಸ್ತಾನ ಮತ್ತೊಮ್ಮೆ ಮುಖಾಮುಖಿಯಾಗಲು ವೇದಿಕೆ ಸಿದ್ಧವಾಗಿದೆ. ICC T20 ವಿಶ್ವಕಪ್‌ನಲ್ಲಿ (ICC T20 World Cup 2022) ಸೋಲಿನ ನಂತರ ಮೆನ್ ಇನ್ ಬ್ಲೂ ಮೆನ್ ಇನ್ ಗ್ರೀನ್ ತಂಡವನ್ನು ಎದುರಿಸುವುದು ಇದೇ ಮೊದಲು. ಉಭಯ ತಂಡಗಳಿಗೂ ಏಷ್ಯಾಕಪ್ ಗೆಲ್ಲುವುದು ಬಹಳ ಮುಖ್ಯವಾಗಿದ್ದು, ಎರಡೂ ತಂಡಗಳು ಸಹ ಗೆಲುವಿಗಾಗಿ ಶತಾಯಗತಾಯ ಹೋರಾಡಲಿವೆ. ಇದಕ್ಕಾಗಿ ಟೀಂ ಇಂಡಿಯಾ ಮಾಜಿ ನಾಯಕ ಕೊಹ್ಲಿ ಈಗಾಗಲೇ ಸಮರಾಭ್ಯಾಸ ಶುರು ಮಾಡಿದ್ದು, ಈಗ ಪಾಕಿಸ್ತಾನದ ನಾಯಕ ಬಾಬರ್ ಆಜಮ್ ಕೂಡ ತಾಲೀಮು ಆರಂಭಿಸಿದ್ದಾರೆ. ಏಷ್ಯಾಕಪ್ಗಾಗಿ ಅಭ್ಯಾಸ ಆರಂಭಿಸಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಫೋಟೋವನ್ನು ಪಾಕ್ ನಾಯಕ ಬಾಬರ್ ಆಜಮ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ತಕ್ಷಣ, ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು ಬಾಬರ್ ಅವರನ್ನು ಹೊಗಳಲು ಪ್ರಾರಂಭಿಸಿದ್ದಾರೆ. ಆದರೆ ಕೆಲವು ಅಂದ ಅಭಿಮಾನಿಗಳು ಭಾರತವನ್ನು ಟ್ರೋಲ್ ಮಾಡಲು ಆರಂಭಿಸಿದ್ದಾರೆ. ಅಂತಹ ಕೆಲವು ಟ್ವೀಟ್‌ಗಳು ಇಲ್ಲಿವೆ.
Make it happen ??♂️ pic.twitter.com/OsSvlDNwEo
— Babar Azam (@babarazam258) August 13, 2022
All the Best my Skipper ?? pic.twitter.com/J0ClxV0PU6
— H A M Z A ?? (@HamzaKhan259) August 13, 2022
Babar Azam lifting the #1 spot both in ODIs and T20Is like a Boss ?
Skipper shaping up ? #BabarAzam? pic.twitter.com/GLoMPxUBdq
— Team Babar Azam (@Team_BabarAzam) August 13, 2022
Do well in Netherlands champ ? pic.twitter.com/NN49alC8aU
— ? (@FOREVER_VK_FAN) August 13, 2022
Bs kr Bobby.agr Indian na picture Dekh ly tho becharrrry dhar ky bhagg jayengy.??
— Zia Shehzad ??✨ (@kircutexprt) August 13, 2022
Babar Azam Getting Ready To Statpad against Netherlands ??
— Prof. Boies Pilled Bell ? (@Lil_Boies45) August 13, 2022
ಏಷ್ಯಾ ಕಪ್ಗೆ ಉಭಯ ತಂಡಗಳು ಹೀಗಿವೆ
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷ್ದೀಪ್ ಸಿಂಗ್, ಅವೇಶ್ ಖಾನ್.
ಸ್ಟ್ಯಾಂಡ್‌ಬೈ ಆಟಗಾರರು: ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ದೀಪಕ್ ಚಹಾರ್.
ಪಾಕಿಸ್ತಾನ ತಂಡ: ಬಾಬರ್ ಅಜಮ್ (ನಾಯಕ), ಶಾದಾಬ್ ಖಾನ್, ಆಸಿಫ್ ಅಲಿ, ಫಖರ್ ಜಮಾನ್, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಂ ಜೂನಿಯರ್, ನಸೀಮ್ ಶಾ, ಶಾಹೀನ್ ಶಾ ಆಫ್ರಿದಿ, ಶಾನವಾಜ್ ದಹಾನಿ ಖಾದಿರ್.
Published On - 9:26 pm, Sat, 13 August 22