IPL 2021, SRH vs CSK: ಚೆನ್ನೈ ಗೆಲುವಿನ ಓಟಕ್ಕೆ ಬ್ರೇಕ್ ಹಾಕುತ್ತಾ ಹೈದರಾಬಾದ್: ಧೋನಿ ಪಡೆ ಗೆದ್ದರೆ ಏನಾಗಲಿದೆ?

ಉಭಯ ತಂಡಗಳು ಈವರೆಗೆ ಐಪಿಎಲ್​ನಲ್ಲಿ 15 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಸನ್​ರೈಸರ್ಸ್ ಹೈದರಾಬಾದ್ ಕೇವಲ 4 ಪಂದ್ಯಗಳಲ್ಲಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ 11 ಪಂದ್ಯಗಳಲ್ಲಿ ಗೆದ್ದ ಇತಿಹಾಸವಿದೆ.

IPL 2021, SRH vs CSK: ಚೆನ್ನೈ ಗೆಲುವಿನ ಓಟಕ್ಕೆ ಬ್ರೇಕ್ ಹಾಕುತ್ತಾ ಹೈದರಾಬಾದ್: ಧೋನಿ ಪಡೆ ಗೆದ್ದರೆ ಏನಾಗಲಿದೆ?
SRH vs CSK
Follow us
TV9 Web
| Updated By: Vinay Bhat

Updated on: Sep 30, 2021 | 7:18 AM

ಇಂಡಿಯನ್ ಪ್ರೀಮಿಯರ್ ಲೀಗ್ 14ನೇ (IPL 2021) ಆವೃತ್ತಿಯಲ್ಲಿ ಇಂದು ನಡೆಯಲಿರುವ 44ನೇ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ (Kane Williamson) ನಾಯಕತ್ವದ ಸನ್​ರೈಸರ್ಸ್ ಹೈದರಾಬಾದ್ ಮತ್ತು ಎಂ. ಎಸ್ ಧೋನಿ (MS Dhoni) ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ (SRH vs CSK)​ ತಂಡಗಳು ಮುಖಾಮುಖಿ ಆಗುತ್ತಿದೆ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದ್ದು, ಟೇಬಲ್ ಟಾಪರ್​ನಲ್ಲಿರುವ ಸಿಎಸ್​ಕೆ ತಂಡದ ಗೆಲುವಿನ ಓಟಕ್ಕೆ ಟೇಬಲ್ ಬಾಟಮ್​ನಲ್ಲಿರುವ ಎಸ್​ಆರ್​ಹೆಚ್ ಬ್ರೇಕ್ ಹಾಕುತ್ತಾ ನೋಡಬೇಕಿದೆ.

ಚೆನ್ನೈ ತಂಡ ಈವರೆಗೆ ಒಟ್ಟು 10 ಪಂದ್ಯಗಳನ್ನು ಆಡಿದ್ದು ಎಂಟರಲ್ಲಿ ಗೆದ್ದು ಕೇವಲ ಎರಡು ಪಂದ್ಯಗಳಲ್ಲಷ್ಟೆ ಸೋತಿದೆ. 16 ಅಂಕದೊಂದಿಗೆ ಅಗ್ರಸ್ಥಾನದಲ್ಲಿದೆ. ಇಂದಿನ ಪಂದ್ಯ ಗೆದ್ದರೆ ಪ್ಲೇ ಆಫ್​ಗೆ ಲಗ್ಗೆಯಿಟ್ಟ ಮೊದಲ ತಂಡವಾಗಿ ವಿಶೇಷ ಸಾಧನೆ ಮಾಡಲಿದೆ. ಇತ್ತ ಹೈದರಾಬಾದ್ ಚೆನ್ನೈಯ ವಿರುದ್ಧವಾಗಿದೆ. ಆಡಿದ 10 ಪಂದ್ಯಗಳಲ್ಲಿ ಕೇವಲ ಎರಡರಲ್ಲಿ ಮಾತ್ರ ಗೆದ್ದಿದ್ದು, ಎಂಟು ಪಂದ್ಯಗಳಲ್ಲಿ ಸೋತಿದೆ. 4 ಅಂಕದೊಂದಿಗೆ ಎಂಟನೇ ಸ್ಥಾನದಲ್ಲಿದೆ.

ಸಿಎಸ್​ಕೆ ಪರ ನಾಯಕ ಎಂ ಎಸ್ ಧೋನಿ ಮತ್ತು ಸುರೇಶ್ ರೈನಾ ಬಿಟ್ಟರೆ ಉಳಿದ ಎಲ್ಲ ಬ್ಯಾಟರ್​ಗಳು ಭರ್ಜರಿ ಫಾರ್ಮ್​ನಲ್ಲಿದ್ದಾರೆ. ರುತುರಾಜ್ ಗಾಯಕ್ವಾಡ್ ಹಾಗೂ ಫಾಫ್ ಡುಪ್ಲೆಸಿಸ್ ತಂಡಕ್ಕೆ ಬೊಂವಾಟ್ ಆರಂಭ ಒದಗಿಸುತ್ತಿದ್ದಾರೆ. ಆದರೆ, ಫಾಫ್ ಕಳೆದ ಪಂದ್ಯದಲ್ಲಿ ಇಂಜರಿಗೆ ತುತ್ತಾದ ಪರಿಣಾಮ ಇಂದಿನ ಪಂದ್ಯಕ್ಕೆ ಲಭ್ಯವಿರುವ ಬಗ್ಗೆ ಮಾಹಿತಿಯಿಲ್ಲ. ಇವರು ಕಣಕ್ಕಿಳಿಯದಿದ್ದಲ್ಲಿ ರಾಬಿನ್ ಉತ್ತಪ್ಪಗೆ ಅವಕಾಶ ನೀಡಬಹುದು.

ಅಂಬಟಿ ರಾಯುಡು ಹಾಗೂ ಮೊಯೀನ್ ಅಲಿ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡುತ್ತಿದ್ದಾರೆ. ರವೀಂದ್ರ ಜಡೇಜಾ ಹಾಗೂ ಡ್ವೇನ್ ಬ್ರಾವೋ ಆಲ್ರೌಂಡರ್ ಪ್ರದರ್ಶನ ಸಹಕಾರಿ ಆಗುತ್ತಿದೆ. ಸ್ಯಾಮ್ ಕುರ್ರನ್​ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ದೀಪಕ್ ಚಹಾರ್ ಹಾಗೂ ಜೋಶ್ ಹ್ಯಾಜ್ಲೆವುಡ್ ಮಾರಕವಾಗಿದ್ದಾರೆ.

ಇತ್ತ ತಂಡದಲ್ಲಿ ಹಿರಿಯ ಅನುಭವಿ ಆಟಗಾರರಿಗೆ ವಿಶ್ರಾಂತಿ ನೀಡಿ ಯುವ ಪಡೆಯನ್ನು ಕಣಕ್ಕಿಳಿಸಿ ಕಳೆದ ಪಂದ್ಯವನ್ನು ಗೆದ್ದಿದ್ದ ಹೈದರಾಬಾದ್ ತಂಡದಲ್ಲಿ ಬದಲಾವಣೆ ಅನುಮಾನ. ಜೇಸನ್ ರಾಯ್ ಮೇಲೆ ಸಾಕಷ್ಟು ನಂಬಿಕೆಯಿದೆ. ಪ್ರಿಯಂ ಗರ್ಗ್ ಕೂಡ ಉತ್ತಮ ಲಯದಲ್ಲಿದ್ದಾರೆ. ಅಭಿಷೇಕ್ ಶರ್ಮಾ ಜೇಸನ್ ಹೋಲ್ಡರ್, ನಾಯಕ ವಿಲಿಯಮ್ಸನ್ ಹಾಗೂ ವೃದ್ದಿಮಾನ್ ಸಾಹ ಎದ್ದು ನಿಂತರೆ ಚೆನ್ನೈಗೆ ಸುಲಭವಿಲ್ಲ.

ಉಭಯ ತಂಡಗಳು ಈವರೆಗೆ ಐಪಿಎಲ್​ನಲ್ಲಿ 15 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಸನ್​ರೈಸರ್ಸ್ ಹೈದರಾಬಾದ್ ಕೇವಲ 4 ಪಂದ್ಯಗಳಲ್ಲಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ 11 ಪಂದ್ಯಗಳಲ್ಲಿ ಗೆದ್ದ ಇತಿಹಾಸವಿದೆ.

ಐಪಿಎಲ್ 2021: ಗಾಯಾಳು ಮುಂಬೈ ಇಂಡಿಯನ್ಸ್ ವೇಗದ ಬೌಲರ್ ಅರ್ಜುನ್ ತೆಂಡೂಲ್ಕರ್ ಬದಲಿಗೆ ಟೀಮ್ ಸೇರಿದ ಸಿಮರ್ಜೀತ್ ಸಿಂಗ್

(IPL 2021 Match 44 between Sunrisers Hyderabad vs Chennai Super Kings)

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?