AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021: ಮ್ಯಾಕ್ಸ್​ವೆಲ್​ ಸಿಡಿಲಬ್ಬರದ ಅರ್ಧಶತಕ! ರಾಜಸ್ಥಾನ್ ವಿರುದ್ಧ ಆರ್​ಸಿಬಿಗೆ 7 ವಿಕೆಟ್​ಗಳ ಜಯ

IPL 2021: ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ 150 ರನ್​ಗಳ ಗುರಿ ಬೆನ್ನತ್ತಿದ ಆರ್ ಸಿಬಿಗೆ ಶೀಘ್ರ ಆರಂಭ ನೀಡಿದರು. ಪವರ್ ಪ್ಲೇನಲ್ಲಿ ಬೆಂಗಳೂರು 1 ವಿಕೆಟ್​ಗೆ 54 ರನ್ ಗಳಿಸಿತು. ಗ್ಲೆನ್ ಮ್ಯಾಕ್ಸ್​ವೆಲ್ 30 ಎಸೆತಗಳಲ್ಲಿ 50 ರನ್​ಗಳ ಬಿರುಸಿನ ಇನ್ನಿಂಗ್ಸ್ ಆಡಿದರು.

IPL 2021: ಮ್ಯಾಕ್ಸ್​ವೆಲ್​ ಸಿಡಿಲಬ್ಬರದ ಅರ್ಧಶತಕ! ರಾಜಸ್ಥಾನ್ ವಿರುದ್ಧ ಆರ್​ಸಿಬಿಗೆ 7 ವಿಕೆಟ್​ಗಳ ಜಯ
ಆರ್​ಸಿಬಿ ತಂಡ
TV9 Web
| Edited By: |

Updated on:Sep 29, 2021 | 11:23 PM

Share

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ದುಬೈನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2021) ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು 7 ವಿಕೆಟ್ ಗಳಿಂದ ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ 149 ರನ್ ಗಳಿಸಿತ್ತು, ಇದನ್ನು ಆರ್ಸಿಬಿ 17. 1 ಓವರ್ ನಲ್ಲಿ 3 ವಿಕೆಟ್ ನಷ್ಟಕ್ಕೆ ಬೆನ್ನಟ್ಟಿತು. ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ 150 ರನ್​ಗಳ ಗುರಿ ಬೆನ್ನತ್ತಿದ ಆರ್ ಸಿಬಿಗೆ ಶೀಘ್ರ ಆರಂಭ ನೀಡಿದರು. ಪವರ್ ಪ್ಲೇನಲ್ಲಿ ಬೆಂಗಳೂರು 1 ವಿಕೆಟ್​ಗೆ 54 ರನ್ ಗಳಿಸಿತು. ಗ್ಲೆನ್ ಮ್ಯಾಕ್ಸ್​ವೆಲ್ 30 ಎಸೆತಗಳಲ್ಲಿ 50 ರನ್​ಗಳ ಬಿರುಸಿನ ಇನ್ನಿಂಗ್ಸ್ ಆಡಿದರು. ಮೊದಲು ಬ್ಯಾಟಿಂಗ್ ಮಾಡಲು ಬಂದ ರಾಜಸ್ಥಾನ ರಾಯಲ್ಸ್ ತಂಡದ ಬ್ಯಾಟ್ಸ್‌ಮನ್‌ಗಳ ವಿರುದ್ಧ ಆರ್‌ಸಿಬಿ ಬೌಲರ್‌ಗಳು ಮೇಲುಗೈ ಸಾಧಿಸಿದರು.

ಸ್ಪಿನ್ ಜೋಡಿ ಯುಜ್ವೇಂದ್ರ ಚಾಹಲ್ ಮತ್ತು ಶಹಬಾಜ್ ಅಹ್ಮದ್ ಉತ್ತಮ ಆರಂಭದ ಲಾಭವನ್ನು ಪಡೆಯಲು ರಾಜಸ್ಥಾನ ರಾಯಲ್ಸ್‌ಗೆ ಅವಕಾಶ ನೀಡಲಿಲ್ಲ. ರಾಯಲ್ಸ್ 11 ಓವರ್​ಗಳಲ್ಲಿ 100 ರನ್ ಗಳಿಸಿತ್ತು, ಆದರೆ ಕೊನೆಯ ಒಂಬತ್ತು ಓವರ್ ಗಳಲ್ಲಿ ಕೇವಲ 49 ರನ್ ಗಳಿಸಲು ಸಾಧ್ಯವಾಯಿತು ಮತ್ತು ಅಷ್ಟರಲ್ಲಿ ಅವರು ಎಂಟು ವಿಕೆಟ್ ಕಳೆದುಕೊಂಡರು. ಎವಿನ್ ಲೂಯಿಸ್ (37 ಎಸೆತಗಳಲ್ಲಿ 58, ಐದು ಬೌಂಡರಿ, ಮೂರು ಸಿಕ್ಸರ್) ಮತ್ತು ಯಶಸ್ವಿ ಜೈಸ್ವಾಲ್ (22 ಎಸೆತಗಳಲ್ಲಿ 31) ಮೊದಲ ವಿಕೆಟ್​ಗೆ 77 ರನ್ ಸೇರಿಸುವ ಮೂಲಕ ರಾಯಲ್ಸ್ ತಂಡಕ್ಕೆ ಉತ್ತಮ ಆರಂಭ ನೀಡಿದರು.

ಚಾಹಲ್ ನಾಲ್ಕು ಓವರ್​ಗಳಲ್ಲಿ 18 ಕ್ಕೆ 2 ವಿಕೆಟ್ ಪಡೆದರೆ, ಶಹಬಾಜ್ ಎರಡು ಓವರ್​ಗಳಲ್ಲಿ 10 ರನ್ ನೀಡಿ ಎರಡು ವಿಕೆಟ್ ಪಡೆದರು. ಕಳೆದ ಪಂದ್ಯದಲ್ಲಿ ಹ್ಯಾಟ್ರಿಕ್ ಪಡೆದ ಹರ್ಷಲ್ ಪಟೇಲ್ (34 ಕ್ಕೆ 3), ಕೊನೆಯ ಓವರ್​ನಲ್ಲಿ ಮತ್ತೊಮ್ಮೆ ಈ ಸಾಧನೆಯನ್ನು ತೋರಿಸುವ ಸನಿಹಕ್ಕೆ ಬಂದರು.

ಮ್ಯಾಕ್ಸ್‌ವೆಲ್ ಮತ್ತು ಭರತ್ ಅದ್ಭುತ ಇನ್ನಿಂಗ್ಸ್ ಗುರಿ ಚಿಕ್ಕದಾಗಿತ್ತು ಮತ್ತು ಆದ್ದರಿಂದ ಭರತ್ ಮತ್ತು ಮ್ಯಾಕ್ಸ್‌ವೆಲ್ ಸುಲಭವಾಗಿ ಬ್ಯಾಟಿಂಗ್ ಮಾಡಿದರು. ಭರತ್, 13 ನೇ ಓವರಿನಲ್ಲಿ, ಕ್ರಿಸ್ ಮೋರಿಸ್ ಇನ್ನಿಂಗ್ಸ್‌ನ ಮೊದಲ ಸಿಕ್ಸರ್ ಅನ್ನು ಡೀಪ್ ಸ್ಕ್ವೇರ್ ಲೆಗ್‌ನಲ್ಲಿ ಹೊಡೆದು ಸ್ಕೋರ್ 100 ರ ಗಡಿ ದಾಟಿಸಿದರು. ಆದರೆ ಅವರು ಅರ್ಧಶತಕವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಮ್ಯಾಕ್ಸ್ ವೆಲ್ ತನ್ನ ಅರ್ಧಶತಕದಾಟದಲ್ಲಿ ಮಾರಿಸ್ ಓವರ್​ನಲ್ಲಿ ಮೊದಲ ಸಿಕ್ಸರ್ ಹಾಗೂ ನಂತರ ಮೂರು ಬೌಂಡರಿಗಳನ್ನು ಹೊಡೆದರೆ, ಎಬಿ ಡಿವಿಲಿಯರ್ಸ್ (ಔಟಾಗದೆ ನಾಲ್ಕು) ಗೆಲುವಿನ ಬೌಂಡರಿ ಹೊಡೆದರು. ಮಾರಿಸ್ ದುಬಾರಿಯಾದರು ಅವರು ನಾಲ್ಕು ಓವರ್‌ಗಳಲ್ಲಿ 50 ರನ್ ನೀಡಿದರು.

ಮೂರನೇ ಸ್ಥಾನದಲ್ಲಿ ಆರ್‌ಸಿಬಿ ಇದು ಆರ್‌ಸಿಬಿಗೆ 11 ಪಂದ್ಯಗಳಲ್ಲಿ ಏಳನೇ ಗೆಲುವು, 14 ಪಾಯಿಂಟ್‌ಗಳಿಗೆ ತಲುಪಿದೆ. ಅವರು ಮೂರನೇ ಸ್ಥಾನದಲ್ಲಿ ಉಳಿದಿದ್ದಾರೆ. ರಾಯಲ್ಸ್ 11 ನೇ ಪಂದ್ಯದಲ್ಲಿ ಏಳನೇ ಸೋಲು ಅನುಭವಿಸಿತು. ಅವರು ಎಂಟು ಪಾಯಿಂಟ್‌ಗಳೊಂದಿಗೆ ಏಳನೇ ಸ್ಥಾನದಲ್ಲಿದ್ದಾರೆ ಮತ್ತು ಪ್ಲೇಆಫ್‌ಗೆ ಹೋಗುವ ದಾರಿ ಕಷ್ಟಕರವಾಗಿದೆ.

Published On - 11:14 pm, Wed, 29 September 21

ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಸ್ಥಳೀಯರಿಂದ ಬಿತ್ತು ಗೂಸಾ
ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಸ್ಥಳೀಯರಿಂದ ಬಿತ್ತು ಗೂಸಾ
ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್
ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್
ನಾನು ಸತ್ತು 47 ವರ್ಷವಾಗಿದೆ ಎಂದು ಕೂಗುತ್ತಾ ಪ್ರತಿಭಟಿಸಿದ ಇರಾನ್ ಮಹಿಳೆ
ನಾನು ಸತ್ತು 47 ವರ್ಷವಾಗಿದೆ ಎಂದು ಕೂಗುತ್ತಾ ಪ್ರತಿಭಟಿಸಿದ ಇರಾನ್ ಮಹಿಳೆ