ಐಪಿಎಲ್ 2021: ಗಾಯಾಳು ಮುಂಬೈ ಇಂಡಿಯನ್ಸ್ ವೇಗದ ಬೌಲರ್ ಅರ್ಜುನ್ ತೆಂಡೂಲ್ಕರ್ ಬದಲಿಗೆ ಟೀಮ್ ಸೇರಿದ ಸಿಮರ್ಜೀತ್ ಸಿಂಗ್

ಅರ್ಜುನ್ ಅವರ ಗಾಯದ ಬಗ್ಗೆಯಾಗಲಿ ಅಥವಾ ಅವರ ರಿಪ್ಲೇಸ್ ಮೆಂಟ್ ಆಗಿ ಸಿಂಗ್ ಅವರನ್ನು ಮಿಕ್ಕಿದ ಐಪಿಎಲ್ ಸೀಸನ್​ಗೆ ಕಳಿಸಬೇಕಾದ ಅನಿವಾರ್ಯತೆ ಬಗ್ಗೆಯಾಗಲೀ ಮುಂಬೈ ಇಂಡಿಯನ್ಸ್ ವಿವರಗಳನ್ನು ಬಹಿರಂಗಪಡಿಸಿಲ್ಲ.

ಐಪಿಎಲ್ 2021: ಗಾಯಾಳು ಮುಂಬೈ ಇಂಡಿಯನ್ಸ್ ವೇಗದ ಬೌಲರ್ ಅರ್ಜುನ್ ತೆಂಡೂಲ್ಕರ್ ಬದಲಿಗೆ ಟೀಮ್ ಸೇರಿದ ಸಿಮರ್ಜೀತ್ ಸಿಂಗ್
ಅರ್ಜುನ್ ತೆಂಡೂಲ್ಕರ್
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Sep 30, 2021 | 12:34 AM

ಮುಂಬೈ ಇಂಡಿಯನ್ಸ್ ತಂಡದ ಆಲ್-ರೌಂಡರ್ ಅರ್ಜುನ್ ತೆಂಡೂಲ್ಕರ್ ಅವರ ಹಣೆಬರಹವೇ ಸರಿ ಇದ್ದಂತಿಲ್ಲ. ಲೆಜೆಂಡರಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಅವರ ಮಗನಾಗಿದ್ದರೂ ಅರ್ಜುನ ಕರೀಯರ್ ಟೇಕಾಫ್ ಅಗುತ್ತಿಲ್ಲ. ಮುಂಬೈ ಇಂಡಿಯನ್ಸ್ ಬುಧವಾರದಂದು ಬಿಡುಗಡೆ ಮಾಡಿರುವ ಪ್ರಕಟಣೆಯೊಂದರ ಪ್ರಕಾರ ಅರ್ಜುನ್ ಗಾಯಗೊಂಡು ಭಾರತಕ್ಕೆ ವಾಪಸ್ಸಾಗುತ್ತಿದ್ದಾರೆ ಮತ್ತು ಅವರ ರಿಪ್ಲೇಸ್ ಮೆಂಟ್ ಆಗಿ ದೆಹಲಿಯ ವೇಗದ ಬೌಲರ್ ಸಿಮರ್ಜೀತ್ ಸಿಂಗ್ ಅವರನ್ನು ದುಬೈಗೆ ಕಳಿಸಲಾಗಿದೆ. ಬಲಗೈ ವೇಗದ ಬೌಲರ್ ಸಿಮರ್ ಜೀತ್ ಐಪಿಎಲ್ ಮಾರ್ಗಸೂಚಿಯ ಪ್ರಕಾರ ಕಡ್ಡಾಯ ಕ್ವಾರಂಟೀನ್ ಅವಧಿ ಮುಗಿಸಿಕೊಂಡು ಟೀಮಿನ ಜೊತೆ ಅಭ್ಯಾಸ ಆರಂಭಿಸಿದ್ದಾರೆ ಎಂದು ಫ್ರಾಂಚೈಸಿಯ ಪ್ರಕಟಣೆ ತಿಳಿಸಿದೆ.

ಅರ್ಜುನ್ ಅವರ ಗಾಯದ ಬಗ್ಗೆಯಾಗಲಿ ಅಥವಾ ಅವರ ರಿಪ್ಲೇಸ್ ಮೆಂಟ್ ಆಗಿ ಸಿಂಗ್ ಅವರನ್ನು ಮಿಕ್ಕಿದ ಐಪಿಎಲ್ ಸೀಸನ್​ಗೆ ಕಳಿಸಬೇಕಾದ ಅನಿವಾರ್ಯತೆ ಬಗ್ಗೆಯಾಗಲೀ ಮುಂಬೈ ಇಂಡಿಯನ್ಸ್ ವಿವರಗಳನ್ನು ಬಹಿರಂಗಪಡಿಸಿಲ್ಲ.

ಪ್ರಸಕ್ತ ಚಾಂಪಿಯನ್ ಮುಂಬೈ ಇಂಡಿಯನ್ಸ್ ಈ ವರ್ಷದ ಆರಂಭದಲ್ಲಿ ನಡೆದ ಮಿನಿ ಹರಾಜಿನಲ್ಲಿ ಅರ್ಜುನ್ ಅವರನ್ನು ಮೂಲ ಬೆಲೆ ರೂ. 20 ಲಕ್ಷಗಳಿಗೆ ಖರೀದಿಸಿತು. ಭಾರತೀಯ ತಂಡದ ನೆಟ್ಸ್ನಲ್ಲಿ ಹಲವಾರು ಬಾರಿ ಬೌಲಿಂಗ್ ಮಾಡಿರುವ ಅರ್ಜುನ್ಗೆ ಇದುವರೆಗೆ ಐಪಿಎಲ್ ನಲ್ಲಿ ಆಡುವ ಅವಕಾಶ ಸಿಕ್ಕಿಲ್ಲ. ಸೀನಿಯರ್ ಮುಂಬೈ ಟಿ20 ತಂಡದ ಪರವಾಗಿ ಅವರು ಈ ವರ್ಷ ಜನೆವರಿಯಲ್ಲಿ ನಡೆದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಡಿದರು.

ಸಿಮರ್ಜೀತ್ ಸಿಂಗ್ ಬಗ್ಗೆ ಹೇಳುವುದಾದರೆ, ಅವರು ಇತ್ತೀಚಿಗೆ 6 ಸೀಮಿತ ಓವರ್ ಪಂದ್ಯಗಳ ಸರಣಿಗಳಿಗೆ ಶ್ರೀಲಂಕಾ ಪ್ರವಾಸ ಬೆಳಸಿದ್ದ ಭಾರತೀಯ ತಂಡದ ಭಾಗವಾಗಿದ್ದರು. ಅವರಿಗೆ ಅಲ್ಲಿ ಯಾವುದೇ ಪಂದ್ಯ ಆಡುವ ಅವಕಾಶ ಸಿಗಲಿಲ್ಲವಾದರೂ, ಸೀನಿಯರ್ ಬೌಲರ್​​ಗಳಾದ ಭುವನೇಶ್ವರ ಕುಮಾರ್ ಮತ್ತು ದೀಪಕ್ ಚಹರ್ ಜೊತೆ ನೆಟ್ಸ್​​ನಲ್ಲಿ ಬೌಲ್ ಮಾಡುವ ಅವಕಾಶ ಸಿಕ್ಕಿತ್ತು.

ಈಗ ಜಾರಿಯಲ್ಲಿರುವ ಐಪಿಎಲ್ 2021 ಸೀಸನ್ ಪಾಯಿಂಟ್ಸ್ ಟೇಬಲ್​ನಲ್ಲಿ ಮುಂಬೈ ಇಂಡಿಯನ್ಸ್ 5ನೇ ಸ್ಥಾನದಲ್ಲಿದೆ. ಮಂಗಳವಾರ ನಡೆದ ಪಂದ್ಯದಲ್ಲಿ ಅದು ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿತು. ರೊಹಿತ್ ಶರ್ಮ ನೇತೃತ್ವದ ಅಂಬಾನಿಗಳ ತಂಡ 6ನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಹವಣಿಕೆಯಲ್ಲಿದೆ.

ಇದನ್ನೂ ಓದಿ:  ಐಪಿಎಲ್ ಮಾಧ್ಯಮ ಹಕ್ಕು ಖರೀದಿಗೆ ಟೆಂಡರ್‌ ಕರೆದ ಬಿಸಿಸಿಐ! ಕ್ರಿಕೆಟ್ ಬಿಗ್​ಬಾಸ್​ಗಳ ಆತುರದ ನಿರ್ಧಾರಕ್ಕೆ ಕಾರಣವೇನು?

Published On - 12:33 am, Thu, 30 September 21

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?