AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Neeraj Chopra: ಬಾಳ ಸಂಗಾತಿಯ ಬಗ್ಗೆಗಿರುವ ಕನಸುಗಳನ್ನು ರಿವೀಲ್ ಮಾಡಿದ ಒಲಂಪಿಕ್ಸ್ ಹೀರೋ ನೀರಜ್ ಚೋಪ್ರಾ!

Neeraj Chopra: ನಾನು ಮದುವೆಯಾಗುವ ಹುಡುಗಿ ನನ್ನಂತೆಯೇ ಕ್ರೀಡಾಪಟುವಾಗಿರಬೇಕು. ಅವಳು ತನ್ನ ಕುಟುಂಬವನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಗೌರವಿಸಬೇಕು ಎಂದು ನೀರಜ್ ಉತ್ತರಿಸಿದರು.

Neeraj Chopra: ಬಾಳ ಸಂಗಾತಿಯ ಬಗ್ಗೆಗಿರುವ ಕನಸುಗಳನ್ನು ರಿವೀಲ್ ಮಾಡಿದ ಒಲಂಪಿಕ್ಸ್ ಹೀರೋ ನೀರಜ್ ಚೋಪ್ರಾ!
ನೀರಜ್ ಚೋಪ್ರಾ
Follow us
TV9 Web
| Updated By: ಪೃಥ್ವಿಶಂಕರ

Updated on: Sep 29, 2021 | 10:07 PM

ಆಗಸ್ಟ್ 7, 2021 ರಂದು, ಹಳ್ಳಿಯಿಂದ ನಗರಗಳವರೆಗೆ ಭಾರತದಲ್ಲಿ ಎಲ್ಲೆಡೆಯೂ ಅದೇ ಹೆಸರು ಕೇಳಿಬರುತ್ತಿತ್ತು. ಸೋಶಿಯಲ್ ಮೀಡಿಯಾದಲ್ಲಿ ಅದೇ ವ್ಯಕ್ತಿಯ ಫೋಟೋಗಳ ಮಳೆ ಸುರಿಯುತ್ತಿತ್ತು. ಆ ವ್ಯಕ್ತಿ ಮತ್ತ್ಯಾರು ಅಲ್ಲ,,, ನಮ್ಮ ಒಲಂಪಿಕ್ಸ್ ಹೀರೋ ನೀರಜ್ ಚೋಪ್ರಾ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನೀರಜ್ ಭಾರತಕ್ಕೆ ಮೊದಲ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದರು. ಇದು ನಡೆದು ಒಂದು ತಿಂಗಳಿಗಿಂತ ಹೆಚ್ಚು ದಿನ ಕಳೆದಿದೆ. ಆದರೆ ಇನ್ನೂ ನೀರಜ್ ಹವಾ ಕಡಿಮೆಯಾಗಿಲ್ಲ. ನೀರಜ್ ಅವರ ಅಭಿಮಾನಿಗಳು ದೇಶದಾದ್ಯಂತ ಇದ್ದಾರೆ ಮತ್ತು ನೀರಜ್ ಯುವತಿಯರ ಹಾಟ್ ಫೇವರೆಟ್ ಆಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಅವಿವಾಹಿತ ನೀರಜ್ ಮದುವೆಯಾಗುವ ಹುಡುಗಿ ಹೇಗಿರಬೇಕು ಎಂಬ ಪ್ರಶ್ನೆಯು ಅನೇಕ ಯುವತಿಯರನ್ನು ಕಾಡುತ್ತಿರಬಹುದು. ಅಂತಃ ಪ್ರಶ್ನೆಗೆ ಸ್ವತಃ ನೀರಜ್ ಅವರೇ ಉತ್ತರಿಸಿದ್ದಾರೆ.

ಕೆಲವು ದಿನಗಳ ಹಿಂದೆ, ಸಿಆರ್‌ಇಡಿ ಕಂಪನಿಯ ಜಾಹೀರಾತಿನಲ್ಲಿ ಅದ್ಭುತ ಪ್ರದರ್ಶನ ನೀಡಿ ಎಲ್ಲರ ಹೃದಯ ಗೆದ್ದ ನೀರಜ್, ಕೋನ್ ಬನೇಗಾ ಕರೋಡ್ಪತಿ (ಕೆಬಿಸಿ 13) ಕಾರ್ಯಕ್ರಮದಲ್ಲೂ ಕೂಡ ಕಾಣಿಸಿಕೊಂಡಿದ್ದರು. ಅದರ ನಂತರ, ನೀರಜ್ ಈಗ ಡ್ಯಾನ್ಸ್ ರಿಯಾಲಿಟಿ ಶೋ ಡ್ಯಾನ್ಸ್ +6 ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನೀರಜ್ ಚೋಪ್ರಾ ಇತ್ತೀಚೆಗೆ ಡಾನ್ಸ್ ಪ್ಲಸ್ 6 ವೇದಿಕೆಯ ಮೇಲೆ ಬಂದಿದ್ದರು. ಕಾರ್ಯಕ್ರಮದ ಸಮಯದಲ್ಲಿ, ಅವರು ಕೆಲವು ಕಷ್ಟಕರ ಪ್ರಶ್ನೆಗಳಿಗೆ ಉತ್ತರಿಸಿದರು.

ನನಗೆ ಇಂತಹ ಹೆಂಡತಿ ಬೇಕು ಡಾನ್ಸ್ +6 ಕಾರ್ಯಕ್ರಮದ ಸಮಯದಲ್ಲಿ, ಕಾರ್ಯಕ್ರಮದ ನಿರೂಪಕ ರಾಘವ್ ಜುಯಾಲ್, ನೀರಜ್ ಅಭಿಮಾನಿಗಳಿಂದ ಅಂತರ್ಜಾಲದಲ್ಲಿ ಹೆಚ್ಚು ಹುಡುಕಿದ ಪ್ರಶ್ನೆಗಳಿಗೆ ಉತ್ತರವನ್ನು ಕೇಳಿದರು. ಇದರಲ್ಲಿ ನೀರಜ್ ಗೆಳತಿಯ ಹೆಸರೇನು?. ಹಾಗೆಯೇ, ನೀರಜ್ ಜೊತೆ ಜಾತಕ ಹೇಗೆ ಹೊಂದುತ್ತದೆ? ಎಂಬಂತಹ ಪ್ರಶ್ನೆಯನ್ನು ಕೇಳಲಾಯಿತು. ನೀರಜ್ ಅವರು ಸಂಕೋಚದ ಜಾತಕದ ಬಗ್ಗೆ ಹೆಚ್ಚು ತಿಳಿದಿಲ್ಲ ಎಂದು ಉತ್ತರಿಸಿದರು. ಆದರೆ ನಂತರ ತೀರ್ಪುಗಾರರಲ್ಲಿ ಒಬ್ಬರಾದ ಪುನೀತ್ ಅವರು ನೀರಜ್ ಎಂತಹ ಹುಡುಗಿಯನ್ನು ಮದುವೆಯಾಗಲು ಬಯಸುತ್ತಾರೆ ಎಂಬ ನೇರ ಪ್ರಶ್ನೆಯನ್ನು ಕೇಳಿದರು. ಅದಕ್ಕೆ ನೀರಜ್, ನಾನು ಮದುವೆಯಾಗುವ ಹುಡುಗಿ ನನ್ನಂತೆಯೇ ಕ್ರೀಡಾಪಟುವಾಗಿರಬೇಕು. ಅವಳು ತನ್ನ ಕುಟುಂಬವನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಗೌರವಿಸಬೇಕು ಎಂದು ನೀರಜ್ ಉತ್ತರಿಸಿದರು.

ಒಲಂಪಿಕ್ಸ್​ನಲ್ಲಿ ನೀರಜ್ ಚಿನ್ನದ ಪದಕ ಜಾವೆಲಿನ್ ಎಸೆತದಲ್ಲಿ ನೀರಜ್ ಚೋಪ್ರಾ ಅಬ್ಬರದಿಂದ ಆರಂಭಿಸಿದರು. ಮೊದಲ ಪ್ರಯತ್ನದಲ್ಲಿ ನೀರಜ್ 87.03 ಎಸೆದರು. ಎರಡನೇ ಬಾರಿ ಅವರು ತಮ್ಮ ಮೊದಲ ಸ್ಥಾನವನ್ನು ಉಳಿಸಿಕೊಳ್ಳಲು 87.58 ಮೀಟರ್ ದೂರವನ್ನು ಎಸೆದರು. ಮೂರನೇ ಎಸೆತದಲ್ಲಿ ಅವರು 76.79 ಮೀಟರ್ ಎಸೆದರು ಆದರೆ ಅವರ ಮುನ್ನಡೆ ಕಾಯ್ದುಕೊಂಡರು. ಅವರ ನಾಲ್ಕನೇ ಮತ್ತು ಐದನೇ ಎಸೆತಗಳನ್ನು ಫೌಲ್ ಮಾಡಲಾಯಿತು. ಆದರೆ ಆರನೇ ಪ್ರಯತ್ನದ ಮೊದಲು ಅವರು ಚಿನ್ನದ ಪದಕವನ್ನು ಜೇಬಿಗಿಳಿಸಿಕೊಂಡಿದ್ದರು. ಆದ್ದರಿಂದ ನೀರಜ್ ಅವರ 84 ಮೀಟರ್ ಆರನೇ ಥ್ರೋ ಕೇವಲ ಔಪಚಾರಿಕತೆಯಾಗಿತ್ತು. ಇದು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಮೊದಲ ಚಿನ್ನದ ಪದಕವಾಗಿದೆ.

ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಸರಣಿ ಅಪಘಾತ, 4 ಕಾರುಗಳು ಜಖಂ
ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಸರಣಿ ಅಪಘಾತ, 4 ಕಾರುಗಳು ಜಖಂ
ಸ್ತ್ರೀಯರು ಗರ್ಭಾವಸ್ಥೆಯಲ್ಲಿ ನೀತಿಕತೆಗಳನ್ನು ಯಾಕೆ ಕೇಳಬೇಕು?
ಸ್ತ್ರೀಯರು ಗರ್ಭಾವಸ್ಥೆಯಲ್ಲಿ ನೀತಿಕತೆಗಳನ್ನು ಯಾಕೆ ಕೇಳಬೇಕು?
ಮೇಷ ರಾಶಿಯವರಿಗಿಂದು ಐದು ರಾಶಿಗಳ ಶುಭ ಫಲ: ಉಳಿದ ರಾಶಿಗಳ ಫಲಾಫಲವೂ ಇಲ್ಲಿದೆ
ಮೇಷ ರಾಶಿಯವರಿಗಿಂದು ಐದು ರಾಶಿಗಳ ಶುಭ ಫಲ: ಉಳಿದ ರಾಶಿಗಳ ಫಲಾಫಲವೂ ಇಲ್ಲಿದೆ
ಕಾಲು ನೋವಿದ್ದರೂ ವೈಭವ್ ಶತಕಕ್ಕೆ ದ್ರಾವಿಡ್ ಸಂಭ್ರಮ ನೋಡಿ
ಕಾಲು ನೋವಿದ್ದರೂ ವೈಭವ್ ಶತಕಕ್ಕೆ ದ್ರಾವಿಡ್ ಸಂಭ್ರಮ ನೋಡಿ
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್