AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021: ಇಷ್ಟರಲ್ಲೇ ಯುಎಇಗೆ ಹಾರಲಿದೆ ಧೋನಿ ತಂಡ; ಸಿಎಸ್​ಕೆ ತಂಡದ ಸಿಇಒ ಎಸ್. ವಿಶ್ವನಾಥನ್ ಹೇಳಿದಿಷ್ಟು

IPL 2021: ಲಭ್ಯವಿರುವ ಭಾರತೀಯ ಆಟಗಾರರು ಆಗಸ್ಟ್ 13 ರಂದು ಯುಎಇಗೆ ತೆರಳುವ ಸಾಧ್ಯತೆಯಿದೆ. ಯುಎಇಗೆ ತೆರಳುವ ಮೊದಲು ಆಟಗಾರರಿಗಾಗಿ ಚೆನ್ನೈನಲ್ಲಿ ಯಾವುದೇ ಕ್ಯಾಂಪ್ ಇರುವುದಿಲ್ಲ ಎಂದು ಹೇಳಿದ್ದಾರೆ.

IPL 2021: ಇಷ್ಟರಲ್ಲೇ ಯುಎಇಗೆ ಹಾರಲಿದೆ ಧೋನಿ ತಂಡ; ಸಿಎಸ್​ಕೆ ತಂಡದ ಸಿಇಒ ಎಸ್. ವಿಶ್ವನಾಥನ್ ಹೇಳಿದಿಷ್ಟು
ಚೆನ್ನೈಗೆ ಬಂದಿಳಿದ ಧೋನಿ
TV9 Web
| Updated By: ಪೃಥ್ವಿಶಂಕರ|

Updated on: Aug 12, 2021 | 6:34 PM

Share

ಮಹೇಂದ್ರ ಸಿಂಗ್ ಧೋನಿ ಮಂಗಳವಾರ ಚೆನ್ನೈ ತಲುಪಿದ್ದಾರೆ, ಅಲ್ಲಿಂದ ಅವರು ತಮ್ಮ ಐಪಿಎಲ್ ತಂಡ ಚೆನ್ನೈ ಸೂಪರ್ ಕಿಂಗ್ಸ್‌ನೊಂದಿಗೆ ಯುಎಇಗೆ ತೆರಳಲಿದ್ದಾರೆ. ಐಪಿಎಲ್ 2021 ರ ಉಳಿದ 31 ಪಂದ್ಯಗಳು ಯುಎಇಯಲ್ಲಿ ನಡೆಯಲಿವೆ. ಮೊದಲ 29 ಪಂದ್ಯಗಳನ್ನು ಭಾರತದಲ್ಲಿ ಆಡಲಾಗುತ್ತಿತ್ತು, ಆದರೆ ಕೊರೊನಾ ಸೋಂಕಿನಿಂದಾಗಿ ಲೀಗ್ ಅನ್ನು ನಿಲ್ಲಿಸಬೇಕಾಯಿತು. ಮಹೇಂದ್ರ ಸಿಂಗ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್​ನ ಭಾರತೀಯ ಆಟಗಾರರೊಂದಿಗೆ ಆಗಸ್ಟ್ 13 ರಂದು ಯುಎಇಗೆ ತೆರಳಲಿದ್ದಾರೆ ಎಂದು ವರದಿಯಾಗಿದೆ. ಈ ಮಾಹಿತಿಯನ್ನು CSK ಯ ಉನ್ನತ ಅಧಿಕಾರಿಯೊಬ್ಬರು ನೀಡಿದ್ದಾರೆ. ಐಪಿಎಲ್ 2021 ಕ್ಕೆ ಯುಎಇ ತಲುಪಿದ ಮೊದಲ ತಂಡಗಳಲ್ಲಿ ಸಿಎಸ್‌ಕೆ ಕೂಡ ಸೇರಿದೆ.

ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಎಸ್. ವಿಶ್ವನಾಥನ್ ಪಿಟಿಐಗೆ, ಲಭ್ಯವಿರುವ ಭಾರತೀಯ ಆಟಗಾರರು ಆಗಸ್ಟ್ 13 ರಂದು ಯುಎಇಗೆ ತೆರಳುವ ಸಾಧ್ಯತೆಯಿದೆ. ಯುಎಇಗೆ ತೆರಳುವ ಮೊದಲು ಆಟಗಾರರಿಗಾಗಿ ಚೆನ್ನೈನಲ್ಲಿ ಯಾವುದೇ ಕ್ಯಾಂಪ್ ಇರುವುದಿಲ್ಲ ಎಂದು ಹೇಳಿದ್ದಾರೆ.

ಐಪಿಎಲ್ 2021 ಭಾಗ 2 ಸೆಪ್ಟೆಂಬರ್ 19 ರಿಂದ ಆರಂಭವಾಗಲಿದೆ ಐಪಿಎಲ್ 2021 ರ ದ್ವಿತೀಯಾರ್ಧವು ಯುಎಇಯಲ್ಲಿ ಸೆಪ್ಟೆಂಬರ್ 19 ರಿಂದ ನಡೆಯಲಿದೆ. ಅದೇ ಸಮಯದಲ್ಲಿ, ಅದರ ಅಂತಿಮ ಪಂದ್ಯವು ಅಕ್ಟೋಬರ್ 10 ರಂದು ನಡೆಯಲಿದೆ. ಮೊದಲಾರ್ಧದಲ್ಲಿ ಚೆನ್ನೈ ತಂಡದ ಪ್ರದರ್ಶನ ಅತ್ಯುತ್ತಮವಾಗಿತ್ತು. ಪಾಯಿಂಟ್‌ಗಳ ಪಟ್ಟಿಯಲ್ಲಿ ಅಗ್ರ 2 ತಂಡಗಳಲ್ಲಿ ಒಂದಾಗಿದೆ. ಯುಎಇಯಲ್ಲಿ, ಸಿಎಸ್‌ಕೆ ಅದೇ ಗೆಲುವಿನ ಸರಣಿಯನ್ನು ಕಾಯ್ದುಕೊಳ್ಳಲು ಪ್ರಯತ್ನಿಸುತ್ತದೆ.

ಮುಂಬೈ ಮತ್ತು ಚೆನ್ನೈ ನಡುವಿನ ಪಂದ್ಯದೊಂದಿಗೆ ಅಭಿಯಾನ ಆರಂಭವಾಗಲಿದೆ ಯುಎಇಯಲ್ಲಿ ಐಪಿಎಲ್ 2021 ರ ದ್ವಿತೀಯಾರ್ಧವು ಮುಂಬೈ ಇಂಡಿಯನ್ಸ್ vs ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದೊಂದಿಗೆ ಆರಂಭವಾಗಲಿದೆ. ಅಂದರೆ, ಸೆಪ್ಟೆಂಬರ್ 19 ರಂದು ನಡೆಯುವ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ಎಂಎಸ್ ಧೋನಿ ಮುಖಾಮುಖಿಯಾಗಲಿದ್ದಾರೆ. ಟೂರ್ನಿಯಲ್ಲಿ 7 ಪಂದ್ಯಗಳನ್ನು ಆಡಿದ ನಂತರ ಮುಂಬೈ ಇಂಡಿಯನ್ಸ್ 10 ಅಂಕಗಳನ್ನು ಹೊಂದಿದೆ. ಅಂಕಪಟ್ಟಿಯಲ್ಲಿ ದೆಹಲಿ ಕ್ಯಾಪಿಟಲ್ಸ್ ನಂತರ ಎರಡನೇ ಸ್ಥಾನದಲ್ಲಿದೆ.