IPL 2021: ಪಂಜಾಬ್ ಕಿಂಗ್ಸ್ ಸೇರಿಕೊಂಡ ಇಂಗ್ಲೆಂಡ್ ತಂಡದ​ ಸ್ಟಾರ್ ಸ್ಪಿನ್ನರ್ ಆದಿಲ್ ರಶೀದ್

| Updated By: Vinay Bhat

Updated on: Aug 27, 2021 | 10:26 AM

Punjab Kings: ಕೆ. ಎಲ್ ರಾಹುಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ಇಂಗ್ಲೆಂಡ್‌ನ ಮಾರಕ ಸ್ಪಿನ್ನರ್ ಆದಿಲ್ ರಶೀದ್ ಅವರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.

IPL 2021: ಪಂಜಾಬ್ ಕಿಂಗ್ಸ್ ಸೇರಿಕೊಂಡ ಇಂಗ್ಲೆಂಡ್ ತಂಡದ​ ಸ್ಟಾರ್ ಸ್ಪಿನ್ನರ್ ಆದಿಲ್ ರಶೀದ್
Adil Rashid
Follow us on

ಅರ್ಧಕ್ಕೆ ನಿಂತಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (IPL 2021) 14ನೇ ಆವೃತ್ತಿಗೆ ಮತ್ತೆ ಚಾಲನೆ ಸಿಗುತ್ತಿದ್ದು, ಸೆಪ್ಟೆಂಬರ್ 19 ರಿಂದ ಆರಂಭವಾಗಲಿದೆ. ಅಕ್ಟೋಬರ್ 13ರ ವರೆಗೆ ಒಟ್ಟು 31 ಪಂದ್ಯಗಳು ಯುನೈಟೆಡ್ ಅರಬ್ ಎಮಿರೇಟ್ಸ್ (UAE)ನಲ್ಲಿ ನಡೆಯಲಿವೆ. ಮುಂಬೈ ಇಂಡಿಯನ್ಸ್ (Mumbai Indians) ತಂಡವು ತನ್ನ ಸಾಂಪ್ರದಾಯಿಕ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್‌ ಎದುರು ಸೆಪ್ಟೆಂಬರ್ 19ರಂದು ಮೊದಲ ಪಂದ್ಯವನ್ನು ಆಡಲಿದೆ.

ಟೂರ್ನಿ ಆರಂಭಕ್ಕೂ ಮುನ್ನ ಎಲ್ಲ ಫ್ರಾಂಚೈಸಿ ಲಭ್ಯವಿಲ್ಲದ ಆಟಗಾರರ ಸ್ಥಾನಕ್ಕೆ ಬದಲಿ ಆಟಗಾರರನ್ನು ಆಯ್ಕೆ ಮಾಡುತ್ತಿದೆ. ಸದ್ಯ ಇದೀಗ ಕೆ. ಎಲ್ ರಾಹುಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ಇಂಗ್ಲೆಂಡ್‌ನ ಮಾರಕ ಸ್ಪಿನ್ನರ್ ಆದಿಲ್ ರಶೀದ್ ಅವರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.

ರಶೀದ್ ಅವರು ಕೆಎಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡದಲ್ಲಿ ಆಡಲಿದ್ದಾರೆ ಎಂದು ಪಂಜಾಬ್ ಕಿಂಗ್ಸ್ ಟ್ವೀಟ್ ಮಾಡಿದೆ. ಜೇ ರಿಚರ್ಡ್‌ಸನ್‌ ಟೂರ್ನಿಗೆ ಲಭ್ಯರಿಲ್ಲದ ಕಾರಣ ಪಂಜಾಬ್ ಇವರನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿದೆ.

 

ಈ ಬಾರಿಯ ಐಪಿಎಲ್‌ನಲ್ಲಿಯೂ ಕೆಎಲ್ ರಾಹುಲ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡ ನೀರಸ ಪ್ರದರ್ಶನ ನೀಡುವ ಮೂಲಕ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದಾರೆ. ಟೂರ್ನಿ ಕೊರೊನಾ ವೈರಸ್‌ನ ಕಾರಣದಿಂದಾಗಿ ಮುಂದೂಡಿಕೆತಯಾಗುವ ಮುನ್ನ ಪಂಜಾಬ್ ಕಿಂಗ್ಸ್ ತಂಡ ಒಟ್ಟು 8 ಪಂದ್ಯಗಳನ್ನು ಆಡಿದ್ದು ಇದರಲ್ಲಿ ಕೇವಲ 3 ಪಂದ್ಯಗಳನ್ನು ಮಾತ್ರವೇ ಗೆದ್ದುಕೊಂಡಿದೆ. ಐದು ಪಂದ್ಯಗಳಲ್ಲಿ ಸೋಲಿನ ರುಚಿನ ಕಂಡಿದೆ.

ಕಳೆದ ಏಪ್ರಿಲ್ 9ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯದ ಮೂಲಕ ಆರಂಭವಾಗಿದ್ದ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಅರ್ಧಭಾಗ ಅತ್ಯಂತ ಯಶಸ್ವಿಯಾಗಿತ್ತು. ಆದರೆ ಬಯೋ ಬಬಲ್​ನೊಳಗಿದ್ದ ಕೆಲ ಆಟಗಾರರಿಗೆ ಹಾಗೂ ಸಹಾಯಕ ಸಿಬ್ಬಂದಿಗೆ ಕೋವಿಡ್ 19 ದೃಢಪಟ್ಟ ಹಿನ್ನೆಲೆಯಲ್ಲಿ ಮೇ.04ರಂದು ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. ಸದ್ಯ ಟೂರ್ನಿಯ ಮುಂದಿನ ಭಾಗ ಯುಎಇ ನಲ್ಲಿ ನಡೆಯಲಿದೆ. ಇದೇ ಸೆಪ್ಟೆಂಬರ್ 19ರಿಂದ ಐಪಿಎಲ್ 2021 ಪುನರಾರಂಭವಾಗಲಿದೆ.

Frederique Overdijk: ಟಿ-20 ಕ್ರಿಕೆಟ್​ನಲ್ಲಿ ಪುರುಷರೂ ಮಾಡಿರದ ವಿಶ್ವ ದಾಖಲೆ ನಿರ್ಮಿಸಿದ 21 ವರ್ಷದ ಮಹಿಳಾ ಆಟಗಾರ್ತಿ

Tokyo 2020 Paralympics: ಮಹಿಳಾ ಸಿಂಗಲ್ಸ್​ನಲ್ಲಿ ಕ್ವಾರ್ಟರ್ ಫೈನಲ್​ಗೆ ಲಗ್ಗೆಯಿಟ್ಟ ಭಾರತದ ಭಾವಿನಾ

(IPL 2021 Punjab Kings sign England spinner Adil Rashid for second phase of IPL 2021 in UAE)