ದ್ವಿತೀಯಾರ್ಧದ ಐಪಿಎಲ್ ಆರಂಭಕ್ಕೂ ಮೊದಲು ರಾಜಸ್ಥಾನ ರಾಯಲ್ಸ್ ಭಾರೀ ಹಿನ್ನಡೆ ಅನುಭವಿಸಿದೆ. ತಂಡದ ಇಬ್ಬರು ಸ್ಟಾರ್ ಆಟಗಾರರು ತಂಡದಿಂದ ಹೊರನಡೆದಿದ್ದಾರೆ. ಈ ಆಟಗಾರರು ಜೋಸ್ ಬಟ್ಲರ್ ಮತ್ತು ಬೆನ್ ಸ್ಟೋಕ್ಸ್. ಸೆಪ್ಟೆಂಬರ್‌ನಲ್ಲಿ ಆರಂಭವಾಗುವ ಐಪಿಎಲ್ 2021 ರ ದ್ವಿತೀಯಾರ್ಧದಲ್ಲಿ ಇಬ್ಬರೂ ಆಡುವುದಿಲ್ಲ. ರಾಜಸ್ಥಾನ ರಾಯಲ್ಸ್ ಇಬ್ಬರಿಗೂ ಬದಲಿ ಆಟಗಾರರನ್ನು ಕಂಡುಕೊಂಡಿದೆ. ಬಟ್ಲರ್ ಮತ್ತು ಸ್ಟೋಕ್ಸ್ ಬದಲಿಗೆ ವೆಸ್ಟ್ ಇಂಡೀಸ್ನ ಎವಿನ್ ಲೂಯಿಸ್ ಮತ್ತು ಓಶಾನೆ ಥಾಮಸ್ ಸ್ಥಾನ ಪಡೆದಿದ್ದಾರೆ. ಬಟ್ಲರ್ ಮತ್ತು ಸ್ಟೋಕ್ಸ್ ಇಬ್ಬರೂ ರಾಜಸ್ಥಾನದ ಪ್ರಮುಖ ಆಟಗಾರರಲ್ಲಿ ಒಬ್ಬರು. ಅವರಿಲ್ಲದೆ, ತಂಡವು ತುಂಬಾ ದುರ್ಬಲವಾಗಿದೆ.
ಇಬ್ಬರೂ ಇಂಗ್ಲೆಂಡ್ ಆಟಗಾರರು ಐಪಿಎಲ್ 2021 ರಲ್ಲಿ ಬೇರೆ ಬೇರೆ ಕಾರಣಗಳಿಂದ ಆಡಲು ಸಾಧ್ಯವಾಗುತ್ತಿಲ್ಲ. ಬಟ್ಲರ್ ತಂದೆಯಾಗಲಿದ್ದಾರೆ. ಈ ಕಾರಣದಿಂದಾಗಿ, ಅವರು ಸ್ವಲ್ಪ ಸಮಯದವರೆಗೆ ಮನೆಯಲ್ಲಿಯೇ ಇರಲು ಬಯಸಿದ್ದಾರೆ. ಅದೇ ಸಮಯದಲ್ಲಿ, ಬೆನ್ ಸ್ಟೋಕ್ಸ್ ಮಾನಸಿಕ ಆರೋಗ್ಯದ ಕಾರಣಗಳಿಂದ ಕ್ರಿಕೆಟ್ ನಿಂದ ದೂರವಾಗಿದ್ದಾರೆ. ಅವರು ಐಪಿಎಲ್‌ನ ಮೊದಲಾರ್ಧವನ್ನು ಮಧ್ಯದಲ್ಲಿಯೇ ಬಿಡಬೇಕಾಯಿತು. ನಂತರ ಬೆರಳಿನ ಗಾಯದಿಂದಾಗಿ ಇಂಗ್ಲೆಂಡ್ಗೆ ವಾಪಸ್ಸಾಗಬೇಕಾಯ್ತು. ಬಟ್ಲರ್ ಸ್ಥಾನಕ್ಕೆ ಬಂದ ಎವಿನ್ ಲೂಯಿಸ್ ಮೊದಲ ಬಾರಿಗೆ ರಾಜಸ್ಥಾನ ಪರ ಆಡಲಿದ್ದಾರೆ. ಅವರು ಇದುವರೆಗೆ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದಾರೆ. ಅದೇ ಸಮಯದಲ್ಲಿ, ಸ್ಟೋಕ್ಸ್ ಬದಲಿಗೆ ಒಶಾನೆ ಥಾಮಸ್, ಈ ಹಿಂದೆಯೂ ರಾಯಲ್ಸ್ ಪರ ಆಡಿದ್ದರು. ಆದರೂ ಅವರು ಐಪಿಎಲ್ 2020 ರ ನಂತರ ತಂಡದಿಂದ ಹೊರಗುದ್ದರು.
ಆರ್ಚರ್ ಈಗಾಗಲೇ ಹೊರಗಿದ್ದಾರೆ, ಲಿವಿಂಗ್ಸ್ಟೋನ್ ಡೌಟ್
ಈ ಬಾರಿ ರಾಜಸ್ಥಾನ ತಂಡವು ಸಂಜು ಸ್ಯಾಮ್ಸನ್ ನಾಯಕತ್ವದಲ್ಲಿ ಆಡುತ್ತಿದೆ. ಆದರೆ ಯುಎಇಯಲ್ಲಿ ದ್ವಿತೀಯಾರ್ಧದ ಪಂದ್ಯಗಳ ಮೊದಲು, ಅವರು ಅನೇಕ ದೊಡ್ಡ ಆಟಗಾರರನ್ನು ಕಳೆದುಕೊಂಡಿದ್ದಾರೆ. ಇವುಗಳಲ್ಲಿ ಜೋಫ್ರಾ ಆರ್ಚರ್ ಸೇರಿದ್ದಾರೆ. ಮೊಣಕೈ ಗಾಯದಿಂದಾಗಿ ಅವರು ತಂಡದಿಂದ ದೂರವಾಗಿದ್ದಾರೆ. ಆರ್ಚರ್ ಸ್ಥಾನದಲ್ಲಿ ತಬ್ರೇಜ್ ಶಮ್ಸಿಯನ್ನು ಆಡಿಸಲಾಗುತ್ತಿದೆ. ರಾಜಸ್ಥಾನದ ಇನ್ನೊಬ್ಬ ಆಂಗ್ಲ ಆಟಗಾರ ಲಿಯಾಮ್ ಲಿವಿಂಗ್ ಸ್ಟೋನ್ ಕೂಡ ಗಾಯದ ಭೀತಿಯಲ್ಲಿದ್ದಾರೆ. ಅವರು ಐಪಿಎಲ್ ಆಡುತ್ತಾರೋ ಇಲ್ಲವೋ ಎಂಬುದನ್ನು ನೋಡಬೇಕು. ಲಿವಿಂಗ್‌ಸ್ಟೋನ್ ಇನ್ನೂ ಉತ್ತಮ ಫಾರ್ಮ್‌ನಲ್ಲಿದ್ದಾರೆ ಆದರೆ ಆಗಸ್ಟ್ 30 ರಂದು ಕೌಂಟಿ ಕ್ರಿಕೆಟ್ ಆಡುವಾಗ ಅವರು ಗಾಯಗೊಂಡರು. ಐಪಿಎಲ್‌ನ ಮೊದಲಾರ್ಧದಲ್ಲಿ ಬಯೋಬಬಲ್ ಕಾರಣದಿಂದಾಗಿ, ಅವರು ಪಂದ್ಯಾವಳಿಯನ್ನು ಮಧ್ಯದಲ್ಲಿಯೇ ಬಿಟ್ಟರು.
ಮೊದಲ ಋತುವಿನ ಚಾಂಪಿಯನ್ ತಂಡ ರಾಜಸ್ಥಾನದ ಪ್ರದರ್ಶನವು ಐಪಿಎಲ್ 2021 ರಲ್ಲಿ ಅಷ್ಟಾಗಿ ಉತ್ತಮವಾಗಿರಲಿಲ್ಲ. ಏಳು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು, ನಾಲ್ಕರಲ್ಲಿ ಸೋತಿದೆ. ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.
OFFICIAL: Evin Lewis is a Royal. ?
Thanks bro @CricCrazyJohns ??#RoyalsFamily https://t.co/zA7UlcZM6w pic.twitter.com/u9MZMZLfRa
— Rajasthan Royals (@rajasthanroyals) August 31, 2021
ಇದನ್ನೂ ಓದಿ:IPL 2022: ಐಪಿಎಲ್ ಹೊಸ ತಂಡಗಳಿಗೆ ಮೂಲ ಬೆಲೆ ಫಿಕ್ಸ್: ಇಷ್ಟು ಮೊತ್ತ ನೀಡಿ ಖರೀದಿಸುವವರು ಯಾರು?