ಭಾರತದ ಪರ ಪದಾರ್ಪಣೆ ಮಾಡಿ ಪಾಕಿಸ್ತಾನ ಟೀಮ್​ನಲ್ಲಿ ಆಡಿದ ಕ್ರಿಕೆಟಿಗ

ಮೊದಲ ಟೆಸ್ಟ್ ನಲ್ಲಿ ಭಾರತ ಪಾಕಿಸ್ತಾನವನ್ನು ಬಗ್ಗು ಬಡಿಯಿತು. ಆದರೆ ಎರಡನೆ ಪಂದ್ಯದಲ್ಲಿ ಭರ್ಜರಿ ಕಂಬ್ಯಾಕ್ ಮಾಡಿದ ಪಾಕಿಸ್ತಾನ ಟೀಮ್ ಇಂಡಿಯಾಗೆ ಇನಿಂಗ್ಸ್​ ಸೋಲಿನ ರುಚಿ ತೋರಿಸಿತು .

ಭಾರತದ ಪರ ಪದಾರ್ಪಣೆ ಮಾಡಿ ಪಾಕಿಸ್ತಾನ ಟೀಮ್​ನಲ್ಲಿ ಆಡಿದ ಕ್ರಿಕೆಟಿಗ
india vs pakistan
Follow us
TV9 Web
| Updated By: ಝಾಹಿರ್ ಯೂಸುಫ್

Updated on: Sep 01, 2021 | 2:16 PM

ಕ್ರಿಕೆಟ್​ ಅಂಗಳದಲ್ಲಿ ಎರಡು ದೇಶಗಳ ಪರ ಆಡಿದ ಕೆಲವು ಆಟಗಾರರಿದ್ದಾರೆ. ಹೀಗೆ ಎರಡು ರಾಷ್ಟ್ರಗಳನ್ನು ಪ್ರತಿನಿಧಿಸಿದ್ದ ಪ್ರಸ್ತುತ ಸ್ಟಾರ್ ಆಟಗಾರ ಯಾರೆಂದು ಕೇಳಿದ್ರೆ ಕಣ್ಮುಂದೆ ಬರೋದು ಇಂಗ್ಲೆಂಡ್ ನಾಯಕ ಇಯಾನ್ ಮೋರ್ಗನ್. ಹೌದು, ಮೋರ್ಗನ್ ಐರ್ಲೆಂಡ್ ಹಾಗೂ ಇಂಗ್ಲೆಂಡ್ ರಾಷ್ಟ್ರೀಯ ತಂಡಗಳನ್ನು ಪ್ರತಿನಿಧಿಸಿದ್ದಾರೆ. ಹೀಗೆ ಎರಡು ದೇಶಗಳನ್ನು ಪ್ರತಿನಿಧಿಸಿದ ಹಲವು ಭಾರತೀಯ ಕ್ರಿಕೆಟಿಗರಿದ್ದಾರೆ ಎಂದರೆ ನಂಬಲೇಬೇಕು. ಹೀಗೆ ಅವರು ಭಾರತ ಹಾಗೂ ತನ್ನ ಸಂಪ್ರಾದಾಯಿಕ ಎದುರಾಳಿ ಪಾಕಿಸ್ತಾನ ತಂಡಗಳನ್ನು ಪ್ರತಿನಿಧಿಸಿರುವುದು ವಿಶೇಷ. ಹೌದು, ಇಂದು ಅಮೀರ್ ಎಲಾಹಿ ಅವರ ಜನ್ಮದಿನ. ಎಲಾಹಿ, ಸೆಪ್ಟೆಂಬರ್ 1, 1908 ರಲ್ಲಿ ಲಾಹೋರ್​ನಲ್ಲಿ ಜನಿಸಿದರು. ಸ್ವತಂತ್ರ್ಯ ಪೂರ್ವ ಭಾರತದಲ್ಲಿ ಅವರು ಕ್ರಿಕೆಟ್​ ಅನ್ನು ವೃತ್ತಿಜೀವನನ್ನಾಗಿ ಆಯ್ಕೆ ಮಾಡಿಕೊಂಡಿದ್ದರು.

ಅದರಂತೆ 1947 ರಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಸಿಡ್ನಿ ಟೆಸ್ಟ್ ಮೂಲಕ ಅಮೀರ್ ಎಲಾಹಿ ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು. ಬೌಲರ್ ಆಗಿ ತಂಡದಲ್ಲಿ ಸ್ಥಾನ ಪಡೆದರೂ ಬೌಲಿಂಗ್ ಮಾಡುವ ಅವಕಾಶ ಕೂಡ ದೊರೆತಿರಲಿಲ್ಲ. ಈ ಪಂದ್ಯದಲ್ಲಿ, ಲಾಲಾ ಅಮರನಾಥ್ ನೇತೃತ್ವದ ಭಾರತ ತಂಡ ಡಾನ್ ಬ್ರಾಡ್ಮನ್ ನೇತೃತ್ವದ ಆಸ್ಟ್ರೇಲಿಯಾ ತಂಡದ ವಿರುದ್ಧ ಮೊದಲ ಇನ್ನಿಂಗ್ಸ್ ನಲ್ಲಿ 81 ರನ್ ಮುನ್ನಡೆ ಸಾಧಿಸಿತ್ತು. ಆಸೀಸ್ ಪಡೆ ವಿರುದ್ದ ಗೆಲ್ಲುವ ಅವಕಾಶ ಹೊಂದಿದ್ದ ಭಾರತಕ್ಕೆ ವರುಣ ಅಡ್ಡಿಪಡಿಸಿದ. ಪರಿಣಾಮ ಪಂದ್ಯವು ರದ್ದಾಯಿತು.

ಅಂದು ತಂಡದಲ್ಲಿ ಬೌಲರ್ ಆಗಿ ಸ್ಥಾನ ಪಡೆದಿದ್ದ ಅಮೀರ್ ಎಲಾಹಿಗೆ ಚೆಂಡೆಸೆಯುವ ಅವಕಾಶ ದೊರೆತಿರಲಿಲ್ಲ. ಆದರೆ ಎರಡು ಬಾರಿ ಬ್ಯಾಟ್ ಮಾಡಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ ನಾಲ್ಕು ರನ್ ಗಳಿಸಿ ರನ್​ ಖಾತೆ ತೆರೆದಿದ್ದರು. ಎರಡನೇ ಇನ್ನಿಂಗ್ಸ್‌ನಲ್ಲಿ ವಿನೂ ಮಂಕಡ್‌ ಅವರೊಂದಿಗೆ ಇನಿಂಗ್ಸ್​ ಆರಂಭಿಸಿ 13 ರನ್ ಕಲೆಹಾಕಿದ್ದರು. ಹೀಗೆ ಭಾರತದ ಪರ ಪದಾರ್ಪಣೆ ಮಾಡಿದ್ದ ಅಮೀರ್ ಎಲಾಹಿ ಭಾರತೀಯ ಕ್ರಿಕೆಟ್ ತಂಡದ ಭಾಗವಾಗಿದ್ದರು.

1947, ಆಗಸ್ಟ್ 14…ಭಾರತದಿಂದ ಪಾಕಿಸ್ತಾನ ವಿಭಜನೆಯಾಯಿತು. ಅಮೀರ್ ಎಲಾಯಿ ಯಾವ ತಂಡದ ಪರ ಕ್ರಿಕೆಟ್ ಆಡುವುದು ಎಂಬ ಚಿಂತೆಯಲ್ಲಿದ್ದರು. ಅಂತಿಮವಾಗಿ ಪಾಕಿಸ್ತಾನಕ್ಕೆ ಹೋದರು. ಏಷ್ಯಾ ಖಂಡದಲ್ಲಿ ಎರಡು ಹೊಸ ತಂಡಗಳಾಗಿ ಭಾರತ-ಪಾಕಿಸ್ತಾನ ಕಾಣಿಸಿಕೊಂಡವು. 1952 ರಲ್ಲಿ ಭಾರತ ಪ್ರವಾಸಕ್ಕಾಗಿ ಪಾಕ್ ತಂಡ ಘೋಷಣೆಯಾಯಿತು. ಈ ತಂಡದಲ್ಲಿ ಅಮೀರ್ ಎಲಾಯಿ ಕೂಡ ಇದ್ದರು.

ಮೊದಲ ಟೆಸ್ಟ್ ನಲ್ಲಿ ಭಾರತ ಪಾಕಿಸ್ತಾನವನ್ನು ಬಗ್ಗು ಬಡಿಯಿತು. ಆದರೆ ಎರಡನೆ ಪಂದ್ಯದಲ್ಲಿ ಭರ್ಜರಿ ಕಂಬ್ಯಾಕ್ ಮಾಡಿದ ಪಾಕಿಸ್ತಾನ ಟೀಮ್ ಇಂಡಿಯಾಗೆ ಇನಿಂಗ್ಸ್​ ಸೋಲಿನ ರುಚಿ ತೋರಿಸಿತು. ಆದಾಗ್ಯೂ, ಈ ಪಂದ್ಯಗಳಲ್ಲಿ ಇಲಾಹಿ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಆದರೆ ಈ ಸರಣಿಯ ಮದ್ರಾಸ್‌ ಟೆಸ್ಟ್‌ನಲ್ಲಿ ಪಾಕಿಸ್ತಾನದ ಪರ ಎಲಾಯಿ 47 ರನ್ ಬಾರಿಸಿದರು. ಅಷ್ಟೇ ಅಲ್ಲದೆ ಶತಕದ ಜೊತೆಯಾಟದ ಕೊಡುಗೆ ನೀಡಿದರು.

ಅಮೀರ್ ಎಲಾಹಿ ಭಾರತ-ಪಾಕ್ ಸೇರಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಒಟ್ಟು 6 ಟೆಸ್ಟ್​ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 82 ರನ್ ಹಾಗೂ ಏಳು ವಿಕೆಟ್ ಪಡೆದಿದ್ದಾರೆ. ಮಧ್ಯಮ ವೇಗಿಯಾಗಿ ಕ್ರಿಕೆಟ್​ ವೃತ್ತಿಜೀವನವನ್ನು ಆರಂಭಿಸಿದ್ದ ಎಲಾಯಿ ಆ ಬಳಿಕ ಲೆಗ್ ಸ್ಪಿನ್ನರ್ ಆದರು. ಆ ಮೂಲಕ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದರು. ಅಂದಹಾಗೆ ಅಮೀರ್ ಎಲಾಯಿ ಭಾರತದಲ್ಲಿ ಬರೋಡಾ ಪರ ಕಣಕ್ಕಿಳಿಯುತ್ತಿದ್ದರು. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಅಮೀರ್ ಎಲಾಹಿ ಒಟ್ಟು 125 ಪಂದ್ಯಗಳನ್ನಾಡಿದ್ದಾರೆ. ಅದರಲ್ಲಿ ಪಡೆದಿರುವುದು ಬರೋಬ್ಬರಿ 513 ವಿಕೆಟ್. ಹಾಗೆಯೇ ಬ್ಯಾಟ್ ಮೂಲಕ 2562 ರನ್ ಗಳಿಸಿರುವುದು ಅವರ ಆಲ್​ರೌಂಡರ್ ಪ್ರದರ್ಶನಕ್ಕೆ ಹಿಡಿದ ಕನ್ನಡಿ ಎನ್ನಬಹುದು.

ಇದನ್ನೂ ಓದಿ: IPL 2022: ಐಪಿಎಲ್ ಹೊಸ ತಂಡಗಳಿಗೆ ಮೂಲ ಬೆಲೆ ಫಿಕ್ಸ್​: ಇಷ್ಟು ಮೊತ್ತ ನೀಡಿ ಖರೀದಿಸುವವರು ಯಾರು?

ಇದನ್ನೂ ಓದಿ: Cristiano Ronaldo: ಮ್ಯಾಚೆಂಸ್ಟರ್ ಯುನೈಟೆಡ್ ಒಪ್ಪಂದ: ಪ್ರತಿ ಸೆಕೆಂಡ್​ಗೆ ಕ್ರಿಸ್ಟಿಯಾನೊ ರೊನಾಲ್ಡೊ ಪಡೆಯುವ ಮೊತ್ತವೆಷ್ಟು ಗೊತ್ತಾ?

ಇದನ್ನೂ ಓದಿ: Afghanistan Cricket: ಅಫ್ಘಾನಿಸ್ತಾನದ ಕ್ರಿಕೆಟ್ ಕುರಿತಾಗಿ ಹೊಸ ಆದೇಶ ಹೊರಡಿಸಿದ ತಾಲಿಬಾನ್

(Amir Elahi birthday: former India and Pakistan cricketer born on this day)

ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?