IPL 2021: ಡೆಲ್ಲಿ ತಂಡಕ್ಕೆ ಮರಳಿದ ಶ್ರೇಯಸ್ ಅಯ್ಯರ್; ನಾಯಕತ್ವ ಬಿಟ್ಟುಕೊಡ್ತಾರಾ ರಿಷಭ್ ಪಂತ್?

| Updated By: ಪೃಥ್ವಿಶಂಕರ

Updated on: Aug 30, 2021 | 9:30 PM

IPL 2021: ಯಸ್ ಅಯ್ಯರ್ ಫಿಟ್ ಆಗಿರುವುದು ನಮಗೆ ಒಳ್ಳೆಯ ಸುದ್ದಿ. ಆದರೆ ದೆಹಲಿ ಕ್ಯಾಪಿಟಲ್ಸ್ ಮ್ಯಾನೇಜ್‌ಮೆಂಟ್ ಪಂತ್ ಅವರ ನಾಯಕತ್ವವನ್ನು ಉಳಿಸಿಕೊಳ್ಳುವ ಮನಸ್ಥಿತಿಯಲ್ಲಿದ್ದು ಅಯ್ಯರ್‌ಗೆ ಚೇತರಿಸಿಕೊಳ್ಳಲು ಇನ್ನೂ ಸ್ವಲ್ಪ ಸಮಯ ನೀಡಿದೆ.

IPL 2021: ಡೆಲ್ಲಿ ತಂಡಕ್ಕೆ ಮರಳಿದ ಶ್ರೇಯಸ್ ಅಯ್ಯರ್; ನಾಯಕತ್ವ ಬಿಟ್ಟುಕೊಡ್ತಾರಾ ರಿಷಭ್ ಪಂತ್?
ರಿಷಭ್ ಪಂತ್, ಶ್ರೇಯಸ್ ಅಯ್ಯರ್
Follow us on

ಐಪಿಎಲ್ 2021 ರ ಎರಡನೇ ಹಂತಕ್ಕಾಗಿ ಎಲ್ಲಾ ತಂಡಗಳು ಯುಎಇ ತಲುಪಿದೆ. ದೆಹಲಿ ಕ್ಯಾಪಿಟಲ್ಸ್ ಅಲ್ಲಿಗೆ ತಲುಪಿ ತರಬೇತಿಯನ್ನು ಆರಂಭಿಸಿದೆ. ಆದರೆ ಎರಡನೇ ಹಂತದ ಆರಂಭದ ಮೊದಲು, ದೊಡ್ಡ ಪ್ರಶ್ನೆಯೆಂದರೆ ದೆಹಲಿ ಕ್ಯಾಪಿಟಲ್ಸ್‌ನ ನಾಯಕತ್ವದ ಬಗ್ಗೆ. ವಾಸ್ತವವಾಗಿ, ಶ್ರೇಯಸ್ ಅಯ್ಯರ್ ಗಾಯಗೊಂಡು ಪಂದ್ಯಾವಳಿಯಿಂದ ಹೊರಬಂದ ನಂತರ ದೆಹಲಿಯ ನಾಯಕತ್ವವನ್ನು ರಿಷಭ್ ಪಂತ್ಗೆ ನೀಡಲಾಗಿತ್ತು. ಈಗ ಶ್ರೇಯಸ್ ಅಯ್ಯರ್ ಎರಡನೇ ಹಂತದ ಪಂದ್ಯಾವಳಿಗಾಗಿ ತಂಡಕ್ಕೆ ಮರಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಎಲ್ಲರ ಮನಸ್ಸಿನಲ್ಲಿರುವ ಪ್ರಶ್ನೆಯೆಂದರೆ ಯಾರು ಕ್ಯಾಪ್ಟನ್ ಆಗುತ್ತಾರೆ ಎಂಬುದು?

ರಿಷಬ್ ಪಂತ್ ನಾಯಕ
ದೆಹಲಿ ಕ್ಯಾಪಿಟಲ್ಸ್ ಮೂಲಗಳಿಂದ ಪಡೆದಿರುವ ಮಾಹಿತಿಯ ಪ್ರಕಾರ, ಈ ಋತುವಿನ ಉಳಿದ ಪಂದ್ಯಗಳಲ್ಲೂ ರಿಷಬ್ ಪಂತ್ ಅವರನ್ನು ನಾಯಕನಾಗಿ ಉಳಿಸಿಕೊಳ್ಳಲು ಫ್ರಾಂಚೈಸ್ ಬಯಸಿದೆ. ಒಂದು ವಿಶ್ವಾಸಾರ್ಹ ಮೂಲದ ಪ್ರಕಾರ, ಶ್ರೇಯಸ್ ಅಯ್ಯರ್ ಫಿಟ್ ಆಗಿರುವುದು ನಮಗೆ ಒಳ್ಳೆಯ ಸುದ್ದಿ. ಆದರೆ ದೆಹಲಿ ಕ್ಯಾಪಿಟಲ್ಸ್ ಮ್ಯಾನೇಜ್‌ಮೆಂಟ್ ಪಂತ್ ಅವರ ನಾಯಕತ್ವವನ್ನು ಉಳಿಸಿಕೊಳ್ಳುವ ಮನಸ್ಥಿತಿಯಲ್ಲಿದ್ದು ಅಯ್ಯರ್‌ಗೆ ಚೇತರಿಸಿಕೊಳ್ಳಲು ಇನ್ನೂ ಸ್ವಲ್ಪ ಸಮಯ ನೀಡಿದೆ. ಆದರೆ ಇದು ಐಪಿಎಲ್‌ನ ಈ ಋತುವಿನ ಉಳಿದ ಪಂದ್ಯಗಳವರೆಗೆ ಮಾತ್ರ ನಡೆಯುತ್ತದೆ.

ಮುಂದಿನ ಋತುವಿನಲ್ಲಿ ಶ್ರೇಯಸ್ ಅಯ್ಯರ್ ನಾಯಕರಾಗಬಹುದು ಆದರೆ ಐಪಿಎಲ್ 2021 ಕ್ಕೆ ರಿಷಭ್ ಪಂತ್ ತಂಡದ ನಾಯಕತ್ವವನ್ನು ವಹಿಸಿಕೊಳ್ಳುತ್ತಾರೆ ಎಂದು ಮೂಲಗಳಿಂದ ಸ್ಪಷ್ಟವಾಗಿದೆ. ಪಂತ್ ನಾಯಕತ್ವದಲ್ಲಿ, ದೆಹಲಿ ಕ್ಯಾಪಿಟಲ್ಸ್ ಐಪಿಎಲ್ 2021 ರ ಮೊದಲ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. ತಂಡವು ಪಾಯಿಂಟ್ ಟೇಬಲ್ನಲ್ಲಿ ಮೇಲಿದೆ. ಆಡಿದ 8 ಪಂದ್ಯಗಳಲ್ಲಿ 6 ರಲ್ಲಿ ಗೆದ್ದಿದೆ, ಜೊತೆಗೆ 12 ಅಂಕಗಳನ್ನು ಸಂಗ್ರಹಿಸಲಾಗಿದೆ.