IND vs ENG: ‘ಭಾರತದ ಆಟಗಾರರು ಕೆಲಸಕ್ಕೆ ಬಾರದವರು’ ಎಂದ ವಾನ್ಗೆ ತನ್ನ ಜರ್ಸಿ ಕಳುಹಿಸಿದ ಜಡೇಜಾ: ಯಾಕೆ ಗೊತ್ತಾ?
Ravindra Jadeja: ಜಡೇಜಾ ಅವರು ಟೀಮ್ ಇಂಡಿಯಾ ಆಟಗಾರರ ಹಸ್ತಾಕ್ಷರ ಇರುವ ತಮ್ಮ ಟೆಸ್ಟ್ ಕ್ರಿಕೆಟ್ ಸಮವಸ್ತ್ರವನ್ನು ಮೈಕಲ್ ವಾನ್ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.
ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ನಾಲ್ಕನೇ ಟೆಸ್ಟ್ ಪಂದ್ಯ ಸೆಪ್ಟೆಂಬರ್ 2 ರಿಂದ ಲಂಡನ್ನ ಕೆನ್ನಿಂಗ್ಟನ್ ಓವೆಲ್ನಲ್ಲಿ ನಡೆಯಲಿದೆ. ಈಗಾಗಲೇ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಉಭಯ ತಂಡಗಳು 1-1 ಅಂಕಗಳ ಸಮಬಲ ಸಾಧಿಸಿದ ಕಾರಣ ಉಳಿದಿರುವ ಎರಡೂ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ. ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ನೀಡಿದ ಅತ್ಯಂತ ಕಳಪೆ ಪ್ರದರ್ಶನಕ್ಕೆ ಸಾಕಷ್ಟು ಮಾತುಗಳು ಕೇಳಿಬಂದವು. ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ (Michael Vaughan) ಕೂಡ ಭಾರತ ತಂಡದ ಆಟಗಾರರನ್ನು ಕೆಲಸಕ್ಕೆ ಬಾರದವರು ಎಂದು ಕಟುವಾಗಿ ಟೀಕಿಸಿದ್ದರು. ಸದ್ಯ ಇದೇ ವಾನ್ಗೆ ಭಾರತದ ಪ್ರಮುಖ ಆಲ್ರೌಂಡರ್ ರವೀಂದ್ರ ಜಡೇಜಾ (Ravindra Jadeja) ತಮ್ಮ ಸಮವಸ್ತ್ರವನ್ನು ನೀಡಿ ಸುದ್ದಿಯಾಗಿದ್ದಾರೆ.
ಜಡೇಜಾ ಅವರು ಟೀಮ್ ಇಂಡಿಯಾ ಆಟಗಾರರ ಹಸ್ತಾಕ್ಷರ ಇರುವ ತಮ್ಮ ಟೆಸ್ಟ್ ಕ್ರಿಕೆಟ್ ಸಮವಸ್ತ್ರವನ್ನು ಮೈಕಲ್ ವಾನ್ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಆದರೆ, ಇದರ ಹಿಂದೆ ಒಂದೊಳ್ಳೆ ಉದ್ದೇಶವಿದೆ. ದತ್ತಿ ಹಣ ಸಂಗ್ರಹಿಸಲು ಜಡೇಜಾ ಅವರ ಸಮವಸ್ತ್ರವನ್ನು ವಾನ್ ಪಡೆದುಕೊಂಡಿದ್ದಾರಂತೆ. ಇದರಿಂದ ಎಷ್ಟು ಹಣ ಬಂದಿದೆ ಎಂಬುದು ಈವರೆಗೆ ತಿಳಿದುಬಂದಿಲ್ಲ.
ಜಡೇಜಾ ಅವರು ತಮಗೆ ಟೆಸ್ಟ್ ಜರ್ಸಿ ನೀಡಿದ ಬಗ್ಗೆ ಮೈಕಲ್ ವಾನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೋರಿ ಹಂಚಿಕೊಂಡಿದ್ದು ಧನ್ಯವಾದ ಎಂದು ತಿಳಿಸಿದ್ದಾರೆ.
ಐದು ಟೆಸ್ಟ್‌ಗಳ ಸರಣಿಯ ಮೊದಲ ಮೂರೂ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆದಿದ್ದ ಜಡೇಜಾ, ಸೆಪ್ಟೆಂಬರ್ 2ರಂದು ದಿ ಓವಲ್ ಕ್ರೀಡಾಂಗಣದಲ್ಲಿ ಶುರುವಾಗಲಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ. ಸದ್ಯ ಮೊಣಕಾಲು ನೋವಿನಿಂದ ಬಳಲುತ್ತಿದ್ದಾರೆ.
ಜಡೇಜಾ ಗಾಯದ ಸಮಸ್ಯೆಯ ಗಂಭೀರತೆಯನ್ನು ತಿಳಿಯಲು ಹೆಚ್ಚಿನ ತಪಾಸಣೆಗೂ ಒಳಪಡಿಸಲಾಗಿದ್ದು, ಇದರ ಫಲಿತಾಂಶ ಬಂದ ಬಳಿಕಷ್ಟೇ ಟೆಸ್ಟ್ ಸರಣಿಯಲ್ಲಿ ಜಡೇಜಾ ಮುಂದುವರಿಯುತ್ತಾರೆಯೇ ಅಥವಾ ಇಲ್ಲವೇ ಎಂಬುದು ತಿಳಿಯಲಿದೆ. ಇವರ ಬದಲು ರವಿಚಂದ್ರ ಅಶ್ವಿನ್ಗೆ ಸ್ಥಾನ ಸಿಗುವ ಸಾಧ್ಯತೆಯಿದೆ. ಲೀಡ್ಸ್ ಟೆಸ್ಟ್ ಪಂದ್ಯದಲ್ಲಿ ಮೊದಲ ಇನಿಂಗ್ಸ್ ಬ್ಯಾಟಿಂಗ್ ವೈಫಲ್ಯದ ಕಾರಣ ಟೀಮ್ ಇಂಡಿಯಾ ಇನಿಂಗ್ಸ್ ಮತ್ತು 76 ರನ್‌ಗಳ ಹೀನಾಯ ಸೋಲುಂಡಿತು.
ಟೀಮ್ ಸೋಲಿನ ಬಗ್ಗೆ ಅನೇಕರು ಕಮೆಂಟ್ ಮಾಡಿದ್ದರು. ಈ ಪೈಕಿ ಮೈಕಲ್ ವಾನ್, “ಇಂಗ್ಲೆಂಡ್ ತಂಡದಿಂದ ಅದ್ಭುತ ಪ್ರದರ್ಶನ ಮೂಡಿಬಂದಿದೆ. ಲಾರ್ಡ್ಸ್ ಟೆಸ್ಟ್ ಹೀನಾಯ ಸೋಲಿನ ಬಳಿಕ ಇಂಗ್ಲೆಂಡ್ ನಾಯಕ ಜೋ ರೂಟ್ ಅತ್ಯುತ್ತಮ ಪಾತ್ರವನ್ನು ನಿರ್ವಹಿಸಿದ್ದಾರೆ. ಭಾರತ ಇದನ್ನು ಮರೆಯಲು ಇನ್ನು ಕೆಲವು ದಿನಗಳಾಗಬಹುದು. ನೀವು ನಿಜವಾಗಲೂ ಕೆಲಸಕ್ಕೆ ಬಾರದವರು’ ಎಂದು ವಾನ್ ಟ್ವೀಟ್ ಮಾಡಿದ್ದರು. ಇದಕ್ಕೆ ಭಾರತೀಯ ಅಭಿಮಾನಿಗಳು ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು.
Tokyo Paralympics 2020: ಕ್ವಾರ್ಟರ್ ಫೈನಲ್ನಲ್ಲಿ ಭಾವಿನಾ-ಸೋನಲ್ ಜೋಡಿಗೆ ಸೋಲು
Tokyo Paralympics: ಇತಿಹಾಸ ನಿರ್ಮಿಸಿದ ಭಾವಿನಾ ಪತಿ ಭಾರತದ ವಿಶ್ವಕಪ್ ತಂಡದ ಸದಸ್ಯ ಎಂಬುದು ನಿಮಗೆ ಗೊತ್ತೇ?
(India vs England Ravindra Jadeja gifted his Test jersey signed by Indian players to Michael Vaughan Here is the reason)