‘ಅವರು ಧನಾತ್ಮಕ ಮನಸ್ಸು ಹೊಂದಿದ್ದಾರೆ’: ತಾಲಿಬಾನಿಗರನ್ನು ಹೊಗಳಿದ ಪಾಕ್ ಕ್ರಿಕೆಟಿಗ ಅಫ್ರಿದಿ
"ತಾಲಿಬಾನಿಗರು ಈಗ ಮಹಿಳೆಯರಿಗೆ ಹೊರಗೆ ಹೋಗಲು ಅನುಮತಿ ನೀಡುತ್ತಿದ್ದಾರೆ. ಅವರು ಕ್ರಿಕೆಟ್ ಅನ್ನೂ ಇಷ್ಟಪಡುತ್ತಾರೆ ಮತ್ತು ಬೆಂಬಲಿಸುತ್ತಿದ್ದಾರೆ. ಸಕಾರಾತ್ಮಕ ಮನೋಭಾವ ಹೊಂದಿದ್ದಾರೆ" ಎಂದು ಅಫ್ರಿದಿ ಹೇಳಿಕೆ ನೀಡಿದ್ದಾರೆ.
ಅಫ್ಘಾನಿಸ್ತಾನ(Afghanistan)ವನ್ನು ತಮ್ಮ ಕೈವಶ ಮಾಡಿಕೊಂಡಿರುವ ತಾಲಿಬಾನ್ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ (Shahid Afridi) ಹಾಡಿಹೊಗಳಿದ್ದಾರೆ. ತಾಲಿಬಾನಿಗರು ಈಗ ಸಕಾರಾತ್ಮಕ ಮನೋಭಾವ ಹೊಂದಿದ್ದಾರೆ, ಬದಲಾವಣೆಯೊಂದಿಗೆ ಬಂದಿದ್ದಾರೆ ಎಂದು ಅಫ್ರಿದಿ ಹೇಳಿದ್ದಾರೆ.
“ತಾಲಿಬಾನಿಗರು ಈಗ ಮಹಿಳೆಯರಿಗೆ ಹೊರಗೆ ಹೋಗಲು ಅನುಮತಿ ನೀಡುತ್ತಿದ್ದಾರೆ. ಅವರು ಕ್ರಿಕೆಟ್ ಅನ್ನೂ ಇಷ್ಟಪಡುತ್ತಾರೆ ಮತ್ತು ಬೆಂಬಲಿಸುತ್ತಿದ್ದಾರೆ. ಸಕಾರಾತ್ಮಕ ಮನೋಭಾವ ಹೊಂದಿದ್ದಾರೆ” ಎಂದು ಅಫ್ರಿದಿ ಹೇಳಿಕೆ ನೀಡಿದ್ದಾರೆ.
ಅಫ್ರಿದಿ ನೀಡಿರುವ ಈ ಹೇಳಿಕೆ ಟ್ರೋಲ್ ಗೊಳಗಾಗಿದೆ. ಬಹುಶಃ ಅಫ್ರಿದಿ ತಾಲಿಬಾನ್ ಪ್ರೀಮಿಯರ್ ಲೀಗ್ ಹುಟ್ಟುಹಾಕುವ ಉದ್ದೇಶ ಹೊಂದಿರಬೇಕು. ಅದಕ್ಕೇ ಉಗ್ರರನ್ನು ಬೆಂಬಲಿಸುತ್ತಿದ್ದಾರೆ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.
❝Taliban have come with a very positive mind. They’re allowing ladies to work. And I believe Taliban like cricket a lot❞ Shahid Afridi. He should be Taliban’s next PM. pic.twitter.com/OTV8zDw1yu
— Naila Inayat (@nailainayat) August 30, 2021
‘ಇನ್ನೂ ಇದೇವೇಳೆ ಮುಂದಿನ ಪಾಕಿಸ್ತಾನ ಸೂಪರ್ ಲೀಗ್ ಬಗ್ಗೆ ಮಾತನಾಡಿದ ಇವರು, ಇದು ನನ್ನ ಕೊನೆಯ ಕ್ರಿಕೆಟ್ ಪಂದ್ಯಾವಳಿಯಾಗಿರಲಿದೆ ಎಂದಿದ್ದಾರೆ. ಕ್ವೆಟ್ಟಾ ಗ್ಲಾಡಿಯೇಟರ್ಸ್‌ಗಾಗಿ ಆಡಲು ನಾನು ಇಷ್ಟಪಡುತ್ತೇನೆ ಎಂದು ಆಫ್ರೀದಿ ಹೇಳಿದ್ದಾರೆ. ಇನ್ನೂ ಸೀಮಿತ ಕ್ರಿಕೆಟ್ ಆಡುತ್ತಿದ್ದೀರಿ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಆಫ್ರೀದಿ ಬಯೋ ಬಬಲ್ ಒಳಗೆ ಅಭ್ಯಾಸ ಮಾಡುವುದು ಆಟಗಾರರಿಗೆ ತುಂಬಾ ಕಷ್ಟ ಎಂದು ಹೇಳಿದ್ದಾರೆ.
41 ವರ್ಷದ ಪಾಕ್ ಮಾಜಿ ಆಲ್‌ರೌಂಡರ್ ಆಫ್ರೀದಿ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಪಾಕಿಸ್ತಾನ ಪರ 37 ಟೆಸ್ಟ್, 398 ಏಕದಿನ ಮತ್ತು 99 ಟಿ-20 ಪಂದ್ಯಗಳನ್ನು ಆಡಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವ ಸರ್ಕಾರವನ್ನು ಹತ್ತಿಕ್ಕಿ ದೇಶದ ಬಹುಭಾಗವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿರುವ ತಾಲಿಬಾನಿಗಳು ಇದೀಗ ತಮಗೆ ಬೇಕಾದಂತಹ ಕಾನೂನು ರೂಪಿಸುವಲ್ಲಿ ನಿರತರಾಗಿದ್ದಾರೆ. ಅಫ್ಘಾನಿಸ್ತಾನದಿಂದ ಯುಎಸ್ ಸೇನೆ ಸಂಪೂರ್ಣವಾಗಿ ಹೊರನಡೆದಿದೆ. ಸೋಮವಾರ ರಾತ್ರಿ ಮೂರು ವಿಮಾನಗಳ ಮೂಲಕ ಅಮೆರಿಕ ಯೋಧರು ವಾಪಸ್ ತೆರಳಿದ್ದಾರೆ. ತನ್ಮೂಲಕ ಕಾಬೂಲ್ ವಿಮಾನ ನಿಲ್ದಾಣ ಕೂಡ ಸಂಪೂರ್ಣವಾಗಿ ಉಗ್ರರ ಕೈವಶವಾಗಿದೆ.
India vs England: ಟೀಮ್ ಇಂಡಿಯಾಕ್ಕೆ ನಿರಾಳ: ಕೊಹ್ಲಿಯ ಅತಿದೊಡ್ಡ ಶತ್ರು ನಾಲ್ಕನೇ ಟೆಸ್ಟ್ನಿಂದ ಹೊರಕ್ಕೆ
(Former Pak cricketer Shahid Afridi backs Taliban says it came with positive mindset)