AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs England: ಟೀಮ್ ಇಂಡಿಯಾಕ್ಕೆ ನಿರಾಳ: ಕೊಹ್ಲಿಯ ಅತಿದೊಡ್ಡ ಶತ್ರು ನಾಲ್ಕನೇ ಟೆಸ್ಟ್​ನಿಂದ ಹೊರಕ್ಕೆ

ಕಳೆದ ಮೂರು ವಾರದೊಳಗೆ ಮೂರು ಟೆಸ್ಟ್ ಪಂದ್ಯ ನಡೆದಿವೆ. ಇದರಿಂದ ಆಟಗಾರರು ಸಾಕಷ್ಟು ದಣಿವಾಗಿದ್ದಾರೆ. ಅಲ್ಲದೆ ಮುಂದಿನ ಕೆಲವೇ ದಿನಗಳಲ್ಲಿ ಇನ್ನಷ್ಟು ಪಂದ್ಯಗಳು ನಡೆಯಲಿವೆ. ಹೀಗಾಗಿ ತಂಡದಲ್ಲಿ ಬದಲಾವಣೆ ಮಾಡುವ ಅಗತ್ಯವಿದೆ ಎಂದು ಸಿಲ್ವರ್​ವುಡ್ ಹೇಳಿದ್ದಾರೆ.

India vs England: ಟೀಮ್ ಇಂಡಿಯಾಕ್ಕೆ ನಿರಾಳ: ಕೊಹ್ಲಿಯ ಅತಿದೊಡ್ಡ ಶತ್ರು ನಾಲ್ಕನೇ ಟೆಸ್ಟ್​ನಿಂದ ಹೊರಕ್ಕೆ
Virat Kohli Team India
TV9 Web
| Updated By: Vinay Bhat|

Updated on:Aug 31, 2021 | 11:16 AM

Share

ಸೆಪ್ಟೆಂಬರ್ 2 ರಿಂದ ಲಂಡನ್​ನ ಕೆನ್ನಿಂಗ್ಟನ್ ಓವೆಲ್ ಮೈದಾನದಲ್ಲಿ ಆರಂಭವಾಗಲಿರುವ ಇಂಗ್ಲೆಂಡ್ (England) ವಿರುದ್ಧದ ನಾಲ್ಕನೇ ಟೆಸ್ಟ್​ಗೂ ಮುನ್ನ ಟೀಮ್ ಇಂಡಿಯಾಕ್ಕೆ (Team India) ಶುಭಸುದ್ದಿಯೊಂದು ಹೊರಬಿದ್ದಿದೆ. ಭಾರತ ತಂಡಕ್ಕೆ ಮಾರಕವಾಗಿದ್ದ, ಅದರಲ್ಲೂ ನಾಯಕ ವಿರಾಟ್ ಕೊಹ್ಲಿಗೆ (Virat Kohli) ಕಂಟಕವಾಗಿದ್ದ ಇಂಗ್ಲೆಂಡ್ ಸ್ಟಾರ್ ವೇಗಿ ಜೇಮ್ಸ್ ಆಂಡರ್ಸನ್ (James Anderson) ನಾಲ್ಕನೇ ಟೆಸ್ಟ್​ ಪಂದ್ಯದಲ್ಲಿ ಕಣಕ್ಕಿಳಿಯುತ್ತಿಲ್ಲ. ಆಂಡರ್ಸನ್ ಅಲಭ್ಯತೆ ಭಾರತಕ್ಕೆ ಅತಿ ದೊಡ್ಡ ಪ್ಲಸ್ ಪಾಯಿಂಟ್ ಆಗಿದ್ದು ಕೊಂಚ ನಿರಾಳವಾಗಿದೆ. ಆಂಡರ್ಸನ್ ಹೊರಗುಳಿಯುವ ಬಗ್ಗೆ ಇಂಗ್ಲೆಂಡ್ ತಂಡದ ಕೋಚ್ ಕ್ರಿಸ್ ಸಿಲ್ವರ್​ವುಡ್ ಮಾಹಿತಿ ಹಂಚಿಕೊಂಡಿದ್ದಾರೆ.

ಕಳೆದ ಮೂರು ವಾರದೊಳಗೆ ಮೂರು ಟೆಸ್ಟ್ ಪಂದ್ಯ ನಡೆದಿವೆ. ಇದರಿಂದ ಆಟಗಾರರು ಸಾಕಷ್ಟು ದಣಿವಾಗಿದ್ದಾರೆ. ಅಲ್ಲದೆ ಮುಂದಿನ ಕೆಲವೇ ದಿನಗಳಲ್ಲಿ ಇನ್ನಷ್ಟು ಪಂದ್ಯಗಳು ನಡೆಯಲಿವೆ. ಹೀಗಾಗಿ ತಂಡದಲ್ಲಿ ಬದಲಾವಣೆ ಮಾಡುವ ಅಗತ್ಯವಿದೆ ಎಂದು ಸಿಲ್ವರ್​ವುಡ್ ಹೇಳಿದ್ದಾರೆ. ಈ ಮೂಲಕ ಮೂರೂ ಟೆಸ್ಟ್ ಪಂದ್ಯದಲ್ಲಿ ಸಾಕಷ್ಟು ಶ್ರಮವಹಿಸಿರುವ ವೇಗಿಗಳಾದ ಜೇಮ್ಸ್ ಆಂಡರ್ಸನ್ ಮತ್ತು ಓಲ್ಲಿ ರಾಬಿನ್ಸನ್ ಅವರಿಗೆಗೆ ನಾಲ್ಕನೇ ಟೆಸ್ಟ್​ನಿಂದ ವಿಶ್ರಾಂತಿ ನೀಡುವುದು ಖಚಿತವಾಗಿದೆ.

39 ವರ್ಷ ಪ್ರಾಯದ ಜೇಮ್ಸ್ ಆಂಡರ್ಸನ್ ಮೊದಲ ಮೂರು ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಬೌಲರ್​ಗಳು ಯಾರೂ ಮಾಡದಷ್ಟು ಬೌಲಿಂಗ್ ಮಾಡಿದ್ದಾರೆ. ಒಟ್ಟು 116.3 ಓವರ್ ಆಂಡರ್ಸನ್ ಬೌಲಿಂಗ್ ಮಾಡಿದ್ದರೆ, ರಾಬಿನ್ಸನ್ 116.5 ಓವರ್ ಮಾಡಿದ್ದಾರೆ. ಸಾಕಷ್ಟು ಒತ್ತಡದಿಂದಿರುವ ಇವರಿಗೆ ಮುಂದಿನ ಟೆಸ್ಟ್​ನಲ್ಲಿ ವಿಶ್ರಾಂತಿ ನೀಡುತ್ತೇವೆ ಎಂದು ಕೋಚ್ ಹಿಂಟ್ ಕೊಟ್ಟಿದ್ದಾರೆ. ಹೀಗಾಗಿ ನಾಲ್ಕನೇ ಟೆಸ್ಟ್​ನಲ್ಲಿ ಕೊಹ್ಲಿ-ಆಂಡರ್ಸನ್ ಕಾಳಗ ಅಭಿಮಾನಿಗಳಿಗೆ ನೋಡಲು ಸಿಗುವುದು ಅನುಮಾನ.

ಇನ್ನೂ ಇಂಗ್ಲೆಂಡ್ ತಂಡದ ಆಲ್ರೌಂಡರ್ ಸ್ಯಾಮ್ ಕುರ್ರನ್ ಬ್ಯಾಟಿಂಗ್ – ಬೌಲಿಂಗ್ ಎರಡರಲ್ಲೂ ಮಿಂಚುತ್ತಿಲ್ಲ. ಹೀಗಾಗಿ ಇವರ ಜಾಗಕ್ಕೆ ಒಂದು ವರ್ಷದ ಬಳಿಕ ತಂಡಕ್ಕೆ ಕಮ್​ಬ್ಯಾಕ್ ಮಾಡಿರುವ ಕ್ರಿಸ್ ವೋಕ್ಸ್ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ.

ಭಾರತ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಈಗಾಗಲೇ ಇಂಗ್ಲೆಂಡ್ ತಂಡ ಪ್ರಕಟವಾಗಿದೆ. ತಂಡದಿಂದ ಹೊರಗುಳಿದಿದ್ದ ಸ್ಟಾರ್ ಆಲ್ರೌಂಡರ್ ಕ್ರಿಸ್ ವೋಕ್ಸ್ ಕಮ್​ಬ್ಯಾಕ್ ಮಾಡಿದ್ದು, ಆನೆಬಲ ಬಂದಂತಾಗಿದೆ. ಕ್ರಿಸ್ ವೋಕ್ಸ್ ಕೊನೆಯದಾಗಿ 2020ರ ಜುಲೈನಲ್ಲಿ ಕಣಕ್ಕಿಳಿದಿದ್ದರು. ಇನ್ನೂ ಅನುಭವಿ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಜೋಸ್‌ ಬಟ್ಲರ್‌ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಕಾರಣ ನಾಲ್ಕನೇ ಟೆಸ್ಟ್‌ ಪಂದ್ಯದಿಂದ ಹೊರಗುಳಿದಿದ್ದಾರೆ. ಇವರ ಜಾಗಕ್ಕೆ ಕೆಂಟ್‌ ತಂಡದ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಸ್ಯಾಮ್‌ ಬಿಲ್ಲಿಂಗ್ಸ್‌ ಅವರು ಸ್ಥಾನ ಪಡೆದುಕೊಂಡಿದ್ದಾರೆ.

ನಾಲ್ಕನೇ ಟೆಸ್ಟ್‌ ಪಂದ್ಯಕ್ಕೆ ಇಂಗ್ಲೆಂಡ್‌ ತಂಡ:

ಜೋ ರೂಟ್‌ (ನಾಯಕ), ಮೊಯೀನ್ ಅಲಿ, ಜೇಮ್ಸ್‌ ಆಂಡರ್ಸನ್‌, ಜಾನಿ ಬೈರ್‌ಸ್ಟೋವ್‌, ಸ್ಯಾಮ್‌ ಬಿಲ್ಲಿಂಗ್ಸ್‌, ರೋರಿ ಬರ್ನ್ಸ್‌, ಸ್ಯಾಮ್‌ ಕರ್ರನ್, ಹಸೀಬ್ ಹಮೀದ್‌, ಡ್ಯಾನ್‌ ಲಾರೆನ್ಸ್‌, ಡಾವಿಡ್‌ ಮಲಾನ್, ಕ್ರೈಗ್ ಓವರ್ಟನ್, ಓಲ್ಲೀ ಪೋಪ್, ಓಲ್ಲೀ ರಾಬಿನ್ಸನ್, ಕ್ರಿಸ್‌ ವೋಕ್ಸ್‌, ಮಾರ್ಕ್‌ ವುಡ್‌.

IND vs ENG: ‘ಭಾರತದ ಆಟಗಾರರು ಕೆಲಸಕ್ಕೆ ಬಾರದವರು’ ಎಂದ ವಾನ್​ಗೆ ತನ್ನ ಜರ್ಸಿ ಕಳುಹಿಸಿದ ಜಡೇಜಾ: ಯಾಕೆ ಗೊತ್ತಾ?

Tokyo Paralympics 2020: ಕ್ವಾರ್ಟರ್ ಫೈನಲ್​ನಲ್ಲಿ ಭಾವಿನಾ-ಸೋನಲ್ ಜೋಡಿಗೆ ಸೋಲು

(India vs England 4th Test Team India Virat Kohlis biggest enemy James Anderson and Ollie Robinson may miss fourth test)

Published On - 11:04 am, Tue, 31 August 21