India vs England: 4ನೇ ಟೆಸ್ಟ್ಗೆ ಬಲಿಷ್ಠ ಇಂಗ್ಲೆಂಡ್ ತಂಡ ಪ್ರಕಟ: 1 ವರ್ಷದ ಬಳಿಕ ಸ್ಟಾರ್ ಆಲ್ರೌಂಡರ್ ಕಮ್ಬ್ಯಾಕ್
India vs England 4th Test: ಅನುಭವಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಕಾರಣ ನಾಲ್ಕನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಇವರ ಜಾಗಕ್ಕೆ ಕೆಂಟ್ ತಂಡದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಸ್ಯಾಮ್ ಬಿಲ್ಲಿಂಗ್ಸ್ ಅವರು ಸ್ಥಾನ ಪಡೆದುಕೊಂಡಿದ್ದಾರೆ.
ಲಂಡನ್ನ ದಿ ಓವಲ್ ಮೈದಾನದಲ್ಲಿ ನಡೆಯಲಿರುವ ಭಾರತ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಪ್ರಕಟವಾಗಿದೆ. ಈಗಾಗಲೇ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಉಭಯ ತಂಡಗಳು ತಲಾ 1-1 ಅಂಕಗಳ ಅಂತರದ ಸಮಬಲ ಸಾಧಿಸಿದ್ದು, ಉಳಿದಿರುವ ಎರಡೂ ಪಂದ್ಯ ಮುಖ್ಯವಾಗಿದೆ. ಹೀಗಾಗಿ ಇಂಗ್ಲೆಂಡ್ ಕ್ರಿಕೆಟ್ ತಂಡದಲ್ಲಿ ಕೊಂಚ ಬದಲಾವಣೆ ಮಾಡಿ ಬಲಿಷ್ಠ ಆಟಗಾರರನ್ನೇ ಆಯ್ಕೆ ಮಾಡಿದೆ. ತಂಡದಿಂದ ಹೊರಗುಳಿದಿದ್ದ ಸ್ಟಾರ್ ಆಲ್ರೌಂಡರ್ ಕ್ರಿಸ್ ವೋಕ್ಸ್ ಕಮ್ಬ್ಯಾಕ್ ಮಾಡಿದ್ದು, ಆನೆಬಲ ಬಂದಂತಾಗಿದೆ.
ಕ್ರಿಸ್ ವೋಕ್ಸ್ ಕೊನೆಯದಾಗಿ 2020ರ ಜುಲೈನಲ್ಲಿ ಕಣಕ್ಕಿಳಿದಿದ್ದರು. ಪಾಕಿಸ್ತಾನ ವಿರುದ್ಧದ ಸರಣಿ ವೇಳೆ ವೋಕ್ಸ್ ಇಂಜುರಿಗೆ ತುತ್ತಾಗಿದ್ದರು. ಹಿಮ್ಮಡಿ ಗಾಯದ ಸಮ್ಯಸ್ಯೆ ಮತ್ತು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ತಂದ ಆಟಗಾರರ ರೊಟೇಷನ್ ಪಾಲಿಸಿ ಕಾರಣ ಕಳೆದ ಒಂದು ವರ್ಷದಿಂದ ವೋಕ್ಸ್ ಟೆಸ್ಟ್ ಕ್ರಿಕೆಟ್ ಆಡದೇ ಉಳಿಯಬೇಕಾಯಿತು. ಸದ್ಯ ನಾಲ್ಕನೇ ಟೆಸ್ಟ್ಗೆ ಆಯ್ಕೆಯಾಗಿದ್ದು ತಂಡ ಮತ್ತಷ್ಟು ಬಲಿಷ್ಠವಾಗಿದೆ.
ಇನ್ನೂ ಅನುಭವಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಕಾರಣ ನಾಲ್ಕನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಇವರ ಜಾಗಕ್ಕೆ ಕೆಂಟ್ ತಂಡದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಸ್ಯಾಮ್ ಬಿಲ್ಲಿಂಗ್ಸ್ ಅವರು ಸ್ಥಾನ ಪಡೆದುಕೊಂಡಿದ್ದಾರೆ. ಬಟ್ಲರ್ ಅನುಪಸ್ಥಿತಿಯಲ್ಲಿ ಜಾನಿ ಬೈರ್‌ಸ್ಟೋವ್ ವಿಕೆಟ್‌ಕೀಪಿಂಗ್ ಜವಾಬ್ದಾರಿ ಹೊರಲಿದ್ದಾರೆ ಎಂದು ಸಿಲ್ವರ್‌ವುಡ್ ಹೇಳಿದ್ದಾರೆ.
ಇನ್ನೂ ಎರಡನೇ ಟೆಸ್ಟ್ ಪಂದ್ಯದ ವೇಳೆ ಭುಜಕ್ಕೆ ಪೆಟ್ಟು ಮಾಡಿಕೊಂಡು ಇಂಜುರಿಗೆ ತುತ್ತಾಗಿದ್ದ ವೇಗಿ ಮಾರ್ಕ್ ವುಡ್ ಸ್ಥಾನ ಪಡೆದುಕೊಂಡಿದ್ದಾರೆಯಾದರೂ ಇನ್ನೂ ಸಂಪೂರ್ಣ ಚೇತರಿಸದ ಕಾರಣ ನಾಲ್ಕನೇ ಟೆಸ್ಟ್ ಪಂದ್ಯದಲ್ಲೂ ಆಡುವ ಹನ್ನೊಂದರ ಬಳಗದಿಂದ ಹೊರಗುಳಿಯುವ ಸಾಧ್ಯತೆ ಇದೆ.
ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡ:
ಜೋ ರೂಟ್ (ನಾಯಕ), ಮೊಯೀನ್ ಅಲಿ, ಜೇಮ್ಸ್ ಆಂಡರ್ಸನ್, ಜಾನಿ ಬೈರ್‌ಸ್ಟೋವ್, ಸ್ಯಾಮ್ ಬಿಲ್ಲಿಂಗ್ಸ್, ರೋರಿ ಬರ್ನ್ಸ್, ಸ್ಯಾಮ್ ಕರ್ರನ್, ಹಸೀಬ್ ಹಮೀದ್, ಡ್ಯಾನ್ ಲಾರೆನ್ಸ್, ಡಾವಿಡ್ ಮಲಾನ್, ಕ್ರೈಗ್ ಓವರ್ಟನ್, ಓಲ್ಲೀ ಪೋಪ್, ಓಲ್ಲೀ ರಾಬಿನ್ಸನ್, ಕ್ರಿಸ್ ವೋಕ್ಸ್, ಮಾರ್ಕ್ ವುಡ್.
Who’s excited to see these players in the fourth Test against @BCCI? ???
??????? #ENGvIND ??
— England Cricket (@englandcricket) August 29, 2021
ಇತ್ತ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲೂ ಬದಲಾವಣೆಯ ಗಾಳಿ ಬೀಸುವ ಅಂದಾಜಿದೆ. ನಾಯಕ ವಿರಾಟ್ ಕೊಹ್ಲಿ ಹೆಚ್ಚುವರಿ ಬ್ಯಾಟ್ಸ್‌ಮನ್ ಆಡಿಸುವ ಸಾಧ್ಯತೆಯನ್ನು ನಿರಾಕರಿಸಿದ್ದಾರೆ. ಆದರೆ, ಬೌಲಿಂಗ್‌ನಲ್ಲಿ ಬದಲಾವಣೆ ತರುವ ಸುಳಿವು ನೀಡಿದ್ದಾರೆ. ಮುಂದಿನ ಪಂದ್ಯಗಳಲ್ಲೂ ಐದು ಬೌಲರ್‌ಗಳನ್ನು ಆಡಿಸುವ ತಂತ್ರವನ್ನು ಮುಂದುವರಿಸುವುದಾಗಿ ಹೇಳಿರುವ ಕೊಹ್ಲಿ, ಆಟಗಾರರ ಮೇಲಿನ ಹೊರೆ ಕಡಿಮೆ ಮಾಡುವ ಉದ್ದೇಶದಿಂದ ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ತರುವುದಾಗಿ ಹೇಳಿದ್ದಾರೆ.
Tokyo Paralympics: ಸೂಪರ್ ಸಂಡೇ; ಪ್ಯಾರಾಲಂಪಿಕ್ಸ್ನಲ್ಲಿ ಭಾರತಕ್ಕೆ ಒಲಿದು ಬಂದವು 3 ಪದಕಗಳು! ಇಲ್ಲಿದೆ ವಿವರ
(India vs England Englands Squad For 4th Test Announced Mark Wood and Chris Woakes return)