Washington Sundar: ಐಪಿಎಲ್ ಆರಂಭಕ್ಕೂ ಮುನ್ನ ಆರ್ಸಿಬಿಗೆ ಬಿಗ್ ಶಾಕ್: ಭಾರತದ ಸ್ಟಾರ್ ಸ್ಪಿನ್ನರ್ ಟೂರ್ನಿಯಿಂದ ಔಟ್
IPL 2021: RCB ತಂಡದ ಸ್ಟಾರ್ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಐಪಿಎಲ್ 2021 ಟೂರ್ನಿಯಿಂದಲೇ ಹೊರಬಿದ್ದಾರೆ. ಕೈ ಬೆರಳಿಗೆ ಗಾಯವಾದ ಕಾರಣ ಇವರು ಐಪಿಎಲ್ 2021 ಟೂರ್ನಿಗೆ ಲಭ್ಯರಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ.
ಅರ್ಧಕ್ಕೆ ನಿಂತಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ 14ನೇ (IPL 2021) ಆವೃತ್ತಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ಬಹುತೇಕ ಎಲ್ಲ ಫ್ರಾಂಚೈಸಿ ಯುಎಇಗೆ ತೆರಳಿದ್ದು ಕೆಲವು ತಂಡಗಳು ಕ್ವಾರಂಟೈನ್ನಲ್ಲಿದ್ದರೆ, ಇನ್ನೂ ಕೆಲ ತಂಡದ ಆಟಗಾರರು ಅಭ್ಯಾಸ ಶುರು ಮಾಡಿದೆ. ಆರ್ಸಿಬಿ (RCB) ಫ್ರಾಂಚೈಸಿ ನಿನ್ನೆಯಷ್ಟೆ ದುಬೈ ಫ್ಲೈಟ್ ಏರದೆ. ಆದರೆ, ಸದ್ಯ ಕೊಹ್ಲಿ ಪಡೆಗೆ ದೊಡ್ಡ ಆಘಾತ ಉಂಟಾಗಿದೆ. ತಂಡದ ಸ್ಟಾರ್ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ (Washington Sundar) ಐಪಿಎಲ್ 2021 ಟೂರ್ನಿಯಿಂದಲೇ ಹೊರಬಿದ್ದಾರೆ. ಕೈ ಬೆರಳಿಗೆ ಗಾಯವಾದ ಕಾರಣ ಇವರು ಐಪಿಎಲ್ 2021 ಟೂರ್ನಿಗೆ ಲಭ್ಯರಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ. ಇವರ ಜಾಗಕ್ಕೆ ನೆಟ್ ಬೌಲರ್ ಆಗಿದ್ದ ಆಕಾಶ್ ದೀಪ್ ಸಿಂಗ್ ಆಯ್ಕೆಯಾಗಿದ್ದಾರೆ.
21 ವರ್ಷದ ಸುಂದರ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಂಗ್ಲರ ನಾಡಿಗೆ ತೆರಳಿದ್ದರು. ಇಲ್ಲಿ ಅಭ್ಯಾಸ ಪಂದ್ಯದ ವೇಳೆ ಕೈಗೆ ಪೆಟ್ಟುಮಾಡಿಕೊಂಡಿದ್ದರು. ಹೀಗಾಗಿ ಈ ಸಂದರ್ಭ ಇಂಜುರಿಗೆ ತುತ್ತಾದ ಶುಭ್ಮನ್ ಗಿಲ್, ಆವೇಶ ಖಾನ್ ಜೊತೆ ಸುಂದರ್ ಕೂಡ ಭಾರತಕ್ಕೆ ಹಿಂತಿರುಗಿದ್ದರು. ಐಪಿಎಲ್ 2021 ಮೊದಲ ಚರಣದಲ್ಲಿ ಆರು ಪಂದ್ಯಗಳನ್ನು ಆಡಿದ್ದ ಸುಂದರ್ 3 ವಿಕೆಟ್ ಕಿತ್ತಿದ್ದರು.
ಆರ್ಸಿಬಿ ತಂಡದ ಪ್ರಮುಖ ಸ್ಪಿನ್ನರ್ ಆಗಿರುವ ಸುಂದರ್ ಪವರ್ ಪ್ಲೇ ಓವರ್ನಲ್ಲಿ ತಂಡಕ್ಕೆ ಸಾಕಷ್ಟು ಬಾರಿ ನೆರವಾಗಿದ್ದಾರೆ. 42 ಐಪಿಎಲ್ ಪಂದ್ಯಗಳನ್ನು ಆಡಿರುವ ಸುಂದರ್ 27 ವಿಕೆಟ್ಗಳನ್ನು ಕಿತ್ತಿದ್ದಾರೆ. ಆರ್ಸಿಬಿ ಐಪಿಎಲ್ 2021 ಎರಡನೇ ಚರಣಕ್ಕೆ ಒಟ್ಟು 5 ಬದಲಾವಣೆ ಮಾಡಿದಂತಾಗಿದೆ. ದುಷ್ಮಂತ ಚಮೀರಾ, ವನಿಂದು ಹಸರಂಗ, ಜಾರ್ಜ್ ಗಾರ್ಟನ್, ಟಿಮ್ ಡೇವಿಡ್ ಹಾಗೂ ಆಕಾಶ್ ದೀಪ್ ಸಿಂಗ್ ಹೊಸದಾಗಿ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಕೊರೊನಾ ವೈರಸ್ ಕಾರಣದಿಂದ ಕಳೆದ ಮೇ ತಿಂಗಳಲ್ಲಿ ಅರ್ಧಕ್ಕೆ ನಿಂತಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಗೆ (IPL 2021) ಇದೇ ಸೆಪ್ಟೆಂಬರ್ 19 ರಂದು ಕ್ವಿಕ್ ಸ್ಟಾರ್ಟ್ ಸಿಗಲಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (MI vs CSK) ನಡುವೆ ಹೈವೋಲ್ಟೇಜ್ ಪಂದ್ಯ ನಡೆಯುವ ಮೂಲಕ ಐಪಿಎಲ್ 2021ಕ್ಕೆ ಮತ್ತೆ ಚಾಲನೆ ಸಿಗಲಿದೆ.
ಆರ್ಸಿಬಿ ತಂಡ:
ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಲ್, ಕೈಲ್ ಜೆಮಿಸನ್, ಡೆನಿಯಲ್ ಕ್ರಿಶ್ಚಿಯನ್, ವನಿಂದು ಹಸರಂಗ, ದೇವದತ್ ಪಡಿಕ್ಕಲ್, ಗ್ಲೆನ್ ಮ್ಯಾಕ್ಸ್‌ವೆಲ್, ಟಿಮ್ ಡೇವಿಡ್, ಜಾರ್ಜ್ ಗಾರ್ಟನ್, ದುಷ್ಮಂತ ಚಮೀರಾ, ಕೆಎಸ್ ಭರತ್, ಸುಯಾಶ್ ಪ್ರಭುದೇಸಾಯ್, ಮೊಹಮ್ಮದ್ ಅಜರುದ್ದೀನ್, ರಜತ್ ಪಾಟಿದಾರ್, ನವದೀಪ್ ಸೈನಿ, ಹರ್ಷಲ್ ಪಟೇಲ್, ಆಕಾಶ್ ದೀಪ್ ಸಿಂಗ್, ಸಚಿನ್ ಬೇಬಿ, ಪವನ್ ದೇಶಪಾಂಡೆ, ಎಸ್ ಅಹ್ಮದ್.
Tokyo Paralympics: ಭಾರತಕ್ಕೆ ಪದಕಗಳ ಸುರಿಮಳೆ: ಜಾವೆಲಿನ್ ಥ್ರೋನಲ್ಲಿ ಬೆಳ್ಳಿ ಪದಕ ಗೆದ್ದ ದೇವೇಂದ್ರ
Tokyo Paralympics: ಭಾರತಕ್ಕೆ ಪದಕಗಳ ಸುರಿಮಳೆ: ಜಾವೆಲಿನ್ ಥ್ರೋನಲ್ಲಿ ಬೆಳ್ಳಿ ಪದಕ ಗೆದ್ದ ದೇವೇಂದ್ರ
(IPL 2021 RCBs Washington Sundar to miss UAE leg of IPL 2021 due to injury)
Published On - 10:27 am, Mon, 30 August 21