Tokyo Paralympics: ಭಾರತಕ್ಕೆ ಪದಕಗಳ ಸುರಿಮಳೆ: ಜಾವೆಲಿನ್ ಥ್ರೋನಲ್ಲಿ ಬೆಳ್ಳಿ ಪದಕ ಗೆದ್ದ ದೇವೇಂದ್ರ
Devendra Jhajharia: ಪುರುಷರ ಜಾವೆಲಿನ್ ಥ್ರೋನ ಥ್ರೋನ ಎಫ್ 46 ಫೈನಲ್ ವಿಭಾಗದಲ್ಲಿ ದೇವೇಂದ್ರ 64.35 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಎರಡನೇ ಸ್ಥಾನ ಪಡೆದು ಬೆಳ್ಳಿಗೆ ಮುತ್ತಿಕ್ಕಿದ್ದಾರೆ.
ಟೋಕಿಯೊ ಪ್ಯಾರಾಲಿಂಪಿಕ್ನಲ್ಲಿ ಭಾರತ ಪದಕಗಳ ಬೇಟೆ ಭರ್ಜರಿಯಾಗಿ ನಡೆಯುತ್ತಿದೆ. ಸೋಮವಾರದ ಆರಂಭದಲ್ಲೇ ಮಹಿಳೆಯರ ಶೂಟಿಂಗ್ ಸ್ಪರ್ಧೆಯಲ್ಲಿ ಗೆದ್ದು ಅವನಿ ಲೆಕೇರಾ ಚಿನ್ನದ ಪದಕಕ್ಕೆ ಕೊರಳೊಡ್ಡಿದರೆ ನಂತರದಲ್ಲಿ ಪುರುಷರ ಡಿಸ್ಕಸ್ ಥ್ರೋನ ಎಫ್ 56 ವಿಭಾಗದಲ್ಲಿ ಯೋಗೇಶ್ ಕಥುನಿಯಾ ಬೆಳ್ಳೆ ಪದಕಕ್ಕೆ ಮುತ್ತಿಕ್ಕಿದರು. ಸದ್ಯ ಜಾವೆಲಿನ್ ಥ್ರೋ ಸ್ಫರ್ಧೆಯಲ್ಲಿ ದೇವೇಂದ್ರ ಜಜರಿಯಾ ಫೈನಲ್ನಲ್ಲಿ ಗೆದ್ದು ಬೆಳ್ಳಿ ಪದಕ ತಮ್ಮದಾಗಿಸಿದ್ದಾರೆ.
ಪುರುಷರ ಜಾವೆಲಿನ್ ಥ್ರೋನ ಥ್ರೋನ ಎಫ್ 46 ಫೈನಲ್ ವಿಭಾಗದಲ್ಲಿ ದೇವೇಂದ್ರ 64.35 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಎರಡನೇ ಸ್ಥಾನ ಪಡೆದು ಬೆಳ್ಳಿಗೆ ಮುತ್ತಿಕ್ಕಿದ್ದಾರೆ. ಇದರ ಜೊತೆಗೆ ಸುಂದರ್ ಸಿಂಗ್ ಗುರ್ಜರ್ 64.01 ಮೀಟರ್ ದೂರ ಜಾವೆಲಿನ್ ಎಸೆದು ಕಂಚಿನ ಪದಕ ಗೆದ್ದಿದ್ದಾರೆ.
One more medal for #IND Devendra Jhajharia wins #SILVER in Men’s Javelin Throw F46 Final #Paralympics #Tokyo2020 pic.twitter.com/Lk47DaxL0X
— Doordarshan Sports (@ddsportschannel) August 30, 2021
ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಫೈನಲ್ ಸುತ್ತಿನಲ್ಲಿ ಲಂಕಾದ ದಿನೇಶ್ ಪ್ರಿಯನ್, ದೇವೆಂದ್ರ, ಸುಂದರ್ ಸಿಂಗ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಆದ್ರೆ, ಲಂಕಾದ ದಿನೇಶ್ ಪ್ರಿಯನ್ 67.79 ಮೀಟರ್ನೊಂದಿಗೆ ಮೊದಲ ಸ್ಥಾನ ಕಾಯ್ದುಕೊಂಡರೆ, 64.35 ಮೀಟರ್ ದೂರ ಎಸೆದ ದೇವೇಂದ್ರ 2ನೇ ಸ್ಥಾನಕ್ಕೆ ತೃಪ್ತಿಪಟ್ಟರು, ಇನ್ನೂ 64.01 ಮೀಟರ್ ದೂರ ಎಸೆದಿದ್ದ ಸುಂದರ್ ಗುರ್ಜರ್ ಸಿಂಗ್ 3ನೇ ಸ್ಥಾನ ಕಾಯ್ದುಕೊಂಡು ಕಂಚಿಗೆ ತೃಪ್ತಿಪಟ್ಟರು. ಇವರ ಬೆಳ್ಳಿಯ ಪದಕದೊಂದಿಗೆ ಭಾರತ ಈ ವರೆಗೆ 1 ಚಿನ್ನ, 4 ಬೆಳ್ಳಿ ಮತ್ತು 2 ಕಂಚಿನ ಪದಕದೊಂದಿಗೆ ಒಟ್ಟು 7 ಪದಕ ಗೆದ್ದಂತಾಗಿದೆ.
Published On - 9:01 am, Mon, 30 August 21