Tokyo Paralympics: ಪ್ಯಾರಾಲಿಂಪಿಕ್​ನಲ್ಲಿ ಭಾರತಕ್ಕೆ ಮೊದಲ ಚಿನ್ನ: ವಿಶ್ವ ದಾಖಲೆ ಬರೆದ ಅವನಿ

Avani Lekhara: ಅವನಿ ಶೂಟಿಂಗ್​ ಫೈನಲ್​ ಪಂದ್ಯದಲ್ಲಿ 249.6 ಸ್ಕೋರ್ ಮಾಡಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

Tokyo Paralympics: ಪ್ಯಾರಾಲಿಂಪಿಕ್​ನಲ್ಲಿ ಭಾರತಕ್ಕೆ ಮೊದಲ ಚಿನ್ನ: ವಿಶ್ವ ದಾಖಲೆ ಬರೆದ ಅವನಿ
Avani Lekhara
Follow us
TV9 Web
| Updated By: Vinay Bhat

Updated on:Aug 30, 2021 | 8:51 AM

ಟೋಕಿಯೊ ಪ್ಯಾರಾಲಿಂಪಿಕ್​ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ದಕ್ಕಿದೆ. ಮಹಿಳೆಯರ ಶೂಟಿಂಗ್ ಸ್ಪರ್ಧೆಯಲ್ಲಿ ಗೆದ್ದು ಅವನಿ ಲೆಕೇರಾ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಈ ಮೂಲಕ ಭಾರತದ ಪದಕಗಳ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಅವನಿ ಶೂಟಿಂಗ್​ ಫೈನಲ್​ ಪಂದ್ಯದಲ್ಲಿ 249.6 ಸ್ಕೋರ್ ಮಾಡಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 10 ಮೀಟರ್​ನ ಏರ್​ ರೈಫಲ್ ಶೂಟಿಂಗ್​ನಲ್ಲಿ ಚಿನ್ನ ಗೆದ್ದಿರುವ ಅವನಿ ಇಂದು ಬೆಳಗ್ಗೆ ರೌಂಡ್ 2 ನಲ್ಲಿ ಫೈನಲ್​ಗೆ ಆಯ್ಕೆಯಾಗಿದ್ದರು. ಪ್ಯಾರಾಲಿಂಪಿಕ್​ನ ಶೂಟಿಂಗ್​ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಪ್ಯಾರಾಥ್ಲೆಟಿಕ್ ಎಂಬ ಸಾಧನೆಯನ್ನು ಇವರು ಮಾಡಿದ್ದಾರೆ.

ಜೈಪುರ ಮೂಲದ 19 ವರ್ಷದ ಅವನಿ ಲೆಖಾರಾ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಈ ಬಾರಿ ಭಾಗವಹಿಸಿದ ಅತಿ ಕಿರಿಯ ಪ್ಯಾರಾ ಅಥ್ಲೀಟ್‌ ಎನಿಸಿಕೊಂಡಿದ್ದರು. ಇದೀಗ ಸ್ವರ್ಣ ಪದಕ ಬೇಟೆಯಾಡುವುದರೊಂದಿಗೆ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಮಹಿಳಾ ಕ್ರೀಡಾಪಟು ಎನ್ನುವ ದಾಖಲೆಯು ಅವನಿ ಪಾಲಾಗಿದೆ.

ಅವನಿ ಚಿನ್ನ ಗೆದ್ದಿರುವುದಕ್ಕೆ ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ. ಅಸಾಧಾರಣ ಪ್ರದರ್ಶನ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಅವನಿ ಲೇಖರಾ ಕಷ್ಟಪಟ್ಟು ಮತ್ತು ಅರ್ಹತೆಯಿಂದ ಚಿನ್ನದ ಪದ ಗೆದ್ದಿದ್ದು ಅವರಿಗೆ ಅಭಿನಂದನೆಗಳು, ನಿಮ್ಮ ಶ್ರಮಶೀಲ ಸ್ವಭಾವ ಮತ್ತು ಶೂಟಿಂಗ್ ಕಡೆಗೆ ಉತ್ಸಾಹದಿಂದಾಗಿ ಇದು ಸಾಧ್ಯವಾಗಿದೆ. ಭಾರತೀಯ ಕ್ರೀಡೆಗಳಿಗೆ ಇದು ನಿಜಕ್ಕೂ ವಿಶೇಷ ಕ್ಷಣ. ನಿಮ್ಮ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಕೆಗಳು” ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಅವನಿ ಲೇಖರಾ ಈ ಮೊದಲು 617.7 ಅಂಕಗಳೊಂದಿಗೆ 7ನೇ ಸ್ಪರ್ಧಿಯಾಗಿ ಫೈನಲ್‍ಗೆ ಲಗ್ಗೆ ಇಟ್ಟಿದ್ದರು. ಇವರ ಚಿನ್ನದ ಪದಕದೊಂದಿಗೆ ಭಾರತ ಈ ವರೆಗೆ 1 ಚಿನ್ನ, 2 ಬೆಳ್ಳಿ ಮತ್ತು 1 ಕಂಚಿನ ಪದಕದೊಂದಿಗೆ ಒಟ್ಟು 4 ಪದಕ ಗೆದ್ದಂತಾಗಿದೆ.

Published On - 8:15 am, Mon, 30 August 21