ಡ್ರೆಸ್ಸಿಂಗ್ ರೂಂಗೆ ಹೋದವನೇ ಅಳುತ್ತಾ ಕುಳಿತೆ; ಗಾಯದಿಂದಾಗಿ ನರಳಿದ ದಿನಗಳನ್ನು ನೆನೆದ ಶ್ರೇಯಸ್ ಅಯ್ಯರ್

Shreyas Iyer: ಗಾಯಗೊಂಡಾಗ ನನಗೆ ತುಂಬಾ ನಿರಾಶೆಯಾಯಿತು. ನನಗೆ ಏನು ಮಾಡಬೇಕೆಂದು ಅರ್ಥವಾಗಲಿಲ್ಲ. ಹೀಗಾಗಿ ಡ್ರೆಸ್ಸಿಂಗ್ ರೂಂಗೆ ಹೋದವ ನೇ ಅಲ್ಲಿ ಅಳಲು ಆರಂಭಿಸಿದೆ.

ಡ್ರೆಸ್ಸಿಂಗ್ ರೂಂಗೆ ಹೋದವನೇ ಅಳುತ್ತಾ ಕುಳಿತೆ; ಗಾಯದಿಂದಾಗಿ ನರಳಿದ ದಿನಗಳನ್ನು ನೆನೆದ ಶ್ರೇಯಸ್ ಅಯ್ಯರ್
ಶ್ರೇಯಸ್ ಅಯ್ಯರ್
Follow us
TV9 Web
| Updated By: ಪೃಥ್ವಿಶಂಕರ

Updated on: Aug 29, 2021 | 6:21 PM

ಭಾರತದ ಸ್ಟಾರ್ ಬ್ಯಾಟ್ಸ್​ಮನ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಬಹಳ ದಿನಗಳ ನಂತರ ಕ್ರಿಕೆಟ್ ಮೈದಾನಕ್ಕೆ ಮರಳಲು ಸಿದ್ಧರಾಗಿದ್ದಾರೆ. ಗಾಯದಿಂದಾಗಿ, ಅಯ್ಯರ್ ಅವರು ಮೈದಾನದಿಂದ ಮತ್ತು ಭಾರತೀಯ ತಂಡದಿಂದ ದೀರ್ಘಕಾಲ ಹೊರಗಿರಬೇಕಾಯಿತು, ಆದರೆ ಈಗ ಈ ಬ್ಯಾಟ್ಸ್‌ಮನ್ ಐಪಿಎಲ್ (ಐಪಿಎಲ್ 2021)ನಲ್ಲಿ ಮಿಂಚಲು ಸಿದ್ಧರಾಗಿದ್ದಾರೆ.ಮಾರ್ಚ್ 23 ರಂದು ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಭುಜದ ಗಾಯಕ್ಕೆ ತುತ್ತಾದರು. ಇದರ ನಂತರ ಅವರು ಬ್ರಿಟನ್ನಲ್ಲಿ ಆಪರೇಷನ್​ಗೆ ಒಳಗಾಗಬೇಕಾಯಿತು. ಅದರ ನಂತರ ಅವರು ಸ್ವಲ್ಪ ಸಮಯದಿಂದ ಕ್ರಿಕೆಟ್​ನಿಂದ ದೂರವಾಗಿದ್ದಾರೆ. ಆದಾಗ್ಯೂ, ಐಪಿಎಲ್‌ಗಾಗಿ ಯುಎಇಗೆ ತೆರಳುವ ಮೊದಲು ಅಯ್ಯರ್ ಒಂದು ವಾರ ಬೆಂಗಳೂರಿನಲ್ಲಿ ಉಳಿದುಕೊಂಡರು, ಅಲ್ಲಿ ಅವರಿಗೆ ಫಿಟ್‌ನೆಸ್ ಪ್ರಮಾಣಪತ್ರ ನೀಡಲಾಯಿತು. ಅವರು ಈಗಾಗಲೇ ತಮ್ಮ ತಂಡಕ್ಕೆ ಮುಂಚಿತವಾಗಿ ಯುಎಇಗೆ ತೆರಳಿ, ಸಿದ್ಧತೆಯಲ್ಲಿ ನಿರತರಾಗಿದ್ದಾರೆ.

ಗಾಯದಿಂದಾಗಿ ಅಳುತ್ತಿದ್ದೆ-ಶ್ರೇಯಸ್ ಅಯ್ಯರ್ ಅಯ್ಯರ್ ಈಗ ತಮ್ಮ ಮರಳುವಿಕೆಯ ಬಗ್ಗೆ ತುಂಬಾ ಉತ್ಸುಕರಾಗಿದ್ದಾರೆ. ಈ ಬಗ್ಗೆ ಮಾತನಾಡಿದ ಅಯ್ಯರ್, ನಾನು ಈಗ ಸಿದ್ದನಾಗಿದ್ದೇನೆ. ನಾನು ಗಾಯಗೊಂಡಾಗ ನನಗೆ ತುಂಬಾ ನಿರಾಶೆಯಾಯಿತು. ನನಗೆ ಏನು ಮಾಡಬೇಕೆಂದು ಅರ್ಥವಾಗಲಿಲ್ಲ. ಹೀಗಾಗಿ ಡ್ರೆಸ್ಸಿಂಗ್ ರೂಂಗೆ ಹೋದವನೆ ಅಲ್ಲಿ ಅಳಲು ಆರಂಭಿಸಿದೆ. ನನಗೆ ಅದನ್ನು ನಂಬಲು ಸಾಧ್ಯವಾಗಲಿಲ್ಲ. ಆದರೆ ನೀವು ಈ ಎಲ್ಲ ಘಟನೆಗಳನ್ನು ಎದುರಿಸಬೇಕು. ಆಗಲೇ ನಿಮ್ಮಲ್ಲಿ ಆಡುವ ಛಲ ಹುಟ್ಟುವುದು ಎಂದಿದ್ದಾರೆ

ಅಯ್ಯರ್ ಅವರು ಶಸ್ತ್ರಚಿಕಿತ್ಸೆಯ ಬಗ್ಗೆ ಕೇಳಿದಾಗ ತುಂಬಾ ಆಶ್ಚರ್ಯವಾಯಿತು ಎಂದು ಹೇಳಿದರು. ಇಂಡಿಯಾ ಟುಡೇ ಜೊತೆಗಿನ ಸಂಭಾಷಣೆಯಲ್ಲಿ ಅವರು, ನನಗೆ ಆಪರೇಷನ್ ಮಾಡಬೇಕಾಗುತ್ತದೆ ಎಂದು ತಿಳಿದಾಗ, ನನಗೆ ಇದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಗಾಯದ ಮೊದಲು, ನನ್ನ ಫಿಟ್ನೆಸ್ ಅತ್ಯುತ್ತಮವಾಗಿತ್ತು. ಆದರೆ ಇದು ನೀವು ಸ್ವೀಕರಿಸಬೇಕಾದ ಆಟಗಾರನ ಜೀವನದ ಒಂದು ಭಾಗವಾಗಿದೆ ಎಂದಿದ್ದಾರೆ. ಅಯ್ಯರ್ ಅವರು ತಮ್ಮ ಬಾಲ್ಯದ ತರಬೇತುದಾರ ಪ್ರವೀಣ್ ಆಮ್ರೆ ಅವರೊಂದಿಗೆ ದೆಹಲಿ ತಂಡಕ್ಕೂ ಒಂದು ವಾರ ಮುಂಚಿತವಾಗಿ ದುಬೈ ತಲುಪಿದ್ದರು.

ಅಯ್ಯರ್ ನಾಯಕತ್ವದಲ್ಲಿ ಡೆಲ್ಲಿ ಫೈನಲ್ ತಲುಪಿತು ಅಯ್ಯರ್ ನಾಯಕತ್ವದಲ್ಲಿ ಕಳೆದ ಋತುವಿನಲ್ಲಿ, ದೆಹಲಿ ತಂಡವು ಮೊದಲ ಬಾರಿಗೆ ಐಪಿಎಲ್‌ನ ಫೈನಲ್ ತಲುಪಿತು. ಆದಾಗ್ಯೂ, ಈ ವರ್ಷ ಅಯ್ಯರ್ ಅನುಪಸ್ಥಿತಿಯಲ್ಲಿ, ರಿಷಬ್ ಪಂತ್‌ಗೆ ಹೆಚ್ಚಿನ ಜವಾಬ್ದಾರಿ ನೀಡಲಾಯಿತು. ನಾಯಕತ್ವಕ್ಕೆ ಸಂಬಂಧಿಸಿದಂತೆ ದೆಹಲಿ ಇನ್ನೂ ಏನನ್ನೂ ಸ್ಪಷ್ಟಪಡಿಸಿಲ್ಲ.