IPL 2021, RR vs RCB: ಕೊಹ್ಲಿ ಪಡೆಯಲ್ಲಿ ಬದಲಾವಣೆ ಡೌಟ್: ಉಭಯ ತಂಡಗಳ ಪ್ಲೇಯಿಂಗ್ 11 ಹೀಗಿರಲಿದೆ

| Updated By: ಝಾಹಿರ್ ಯೂಸುಫ್

Updated on: Sep 29, 2021 | 2:38 PM

RCB vs RR Predicted Playing 11: ಮತ್ತೊಂದೆಡೆ ರಾಜಸ್ಥಾನವು ತಮ್ಮ ಮೊದಲ ಪಂದ್ಯದಲ್ಲಿ ಗೆದ್ದ ಬಳಿಕ ಎರಡು ಸತತ ಸೋಲನುಭವಿಸಿದೆ. ನಾಯಕ ಸಂಜು ಸ್ಯಾಮ್ಸನ್ ಮತ್ತು ಯಶಸ್ವಿ ಜೈಸ್ವಾಲ್ ಹೊರತುಪಡಿಸಿ ಉಳಿದ ಬ್ಯಾಟ್ಸ್​ಮನ್​ಗಳಿಂದ ಉತ್ತಮ ಆಟ ಮೂಡಿಬರುತ್ತಿಲ್ಲ.

IPL 2021, RR vs RCB: ಕೊಹ್ಲಿ ಪಡೆಯಲ್ಲಿ ಬದಲಾವಣೆ ಡೌಟ್: ಉಭಯ ತಂಡಗಳ ಪ್ಲೇಯಿಂಗ್ 11 ಹೀಗಿರಲಿದೆ
IPL 2021, RR vs RCB
Follow us on

ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ರಾಜಸ್ಥಾನ್ ರಾಯಲ್ಸ್ (Rajasthan royals)​​ ವಿರುದ್ದದ ಪಂದ್ಯಕ್ಕಾಗಿ ಆರ್​ಸಿಬಿ (RCB) ಸಜ್ಜಾಗಿದೆ. ಮುಂಬೈ ವಿರುದ್ದದ ಗೆಲುವಿನೊಂದಿಗೆ ಜಯದ ಲಯಕ್ಕೆ ಮರಳಿರುವ ಆರ್​ಸಿಬಿ ರಾಜಸ್ಥಾನ್ ರಾಯಲ್ಸ್​ ಅನ್ನು ಬಗ್ಗು ಬಡಿದು ಪ್ಲೇ ಆಫ್​ಗೇರುವ ತವಕದಲ್ಲಿದೆ. ಇನ್ನು ಈ ಮೈದಾನವು ಬ್ಯಾಟಿಂಗ್​ ಹಾಗೂ ಬೌಲಿಂಗ್​ಗೆ ಸಹಕಾರಿಯಾಗಿದ್ದರೂ, ಟಾಸ್ ಗೆಲ್ಲುವ ತಂಡಕ್ಕೆ ಹೆಚ್ಚು ಅನುಕೂಲಕರ. ಏಕೆಂದರೆ ಇಲ್ಲಿನ ಪಿಚ್‌ ಸಮಯೋಜಿತವಾಗಿದ್ದು, ಹೊಸ ಚೆಂಡಿನಲ್ಲಿ ವೇಗಿಗಳು ಈ ಪಿಚ್‌ನ ಲಾಭ ಪಡೆದುಕೊಳ್ಳಬಹುದಾಗಿದೆ. ಇನ್ನು ಪಂದ್ಯ ಸಾಗುತ್ತಿದ್ದಂತೆ ಬ್ಯಾಟಿಂಗ್ ಸ್ವಲ್ಪ ಸುಲಭವಾಗಲಿದೆ. ಇದಾಗ್ಯೂ ಕಳೆದ ಪಂದ್ಯದಲ್ಲಿ ಇದೇ ಮೈದಾನದಲ್ಲಿ ಮುಂಬೈ ಇಂಡಿಯನ್ಸ್​ ವಿರುದ್ದ ಆರ್​ಸಿಬಿ ಟಾಸ್ ಸೋತರೂ ಭರ್ಜರಿಯಾಗಿ ಇನಿಂಗ್ಸ್​ ಕಟ್ಟಿತ್ತು. ಅಲ್ಲದೆ ಮುಂಬೈ ತಂಡವನ್ನು 111 ರನ್​ಗಳಿಗೆ ಆಲೌಟ್ ಮಾಡಿ ಗೆಲುವಿನ ನಗೆ ಬೀರಿತ್ತು ಎಂಬುದನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಇನ್ನು ಇದೇ ಮೈದಾನದಲ್ಲಿ ಆರ್​ಆರ್​ ವಿರುದ್ದ ಎಸ್​ಆರ್​ಹೆಚ್​ ಎಚ್ಚರಿಕೆಯ ಆಟದೊಂದಿಗೆ 7 ವಿಕೆಟ್​ಗಳ ಜಯ ಸಾಧಿಸಿತ್ತು. ಹೀಗಾಗಿ ದುಬೈ ಕ್ರಿಕೆಟ್ ಸ್ಡೇಡಿಯಂನಲ್ಲಿ ಎಚ್ಚರಿಕೆಯ ಆಟದೊಂದಿಗೆ ಇನಿಂಗ್ಸ್​ ಕಟ್ಟುವುದು ಅನಿವಾರ್ಯ.

ಇನ್ನು ಮುಂಬೈ ವಿರುದ್ದ 54 ರನ್​ಗಳ ಭರ್ಜರಿ ಜಯ ಸಾಧಿಸಿರುವ ಆರ್​ಸಿಬಿ ಈ ಬಾರಿ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅನುಮಾನ. ಏಕೆಂದರೆ ಕೊನೆಯ ಪಂದ್ಯದಲ್ಲಿ ಆರ್​ಸಿಬಿ ತಂಡದಿಂದ ಬ್ಯಾಟಿಂಗ್ ಮತ್ತು ಬೌಲಿಂಗ್​​ನಲ್ಲಿ ಉತ್ತಮ ಪ್ರದರ್ಶನ ಮೂಡಿಬಂದಿತ್ತು. ಹೀಗಾಗಿ ಅದೇ ಪ್ಲೇಯಿಂಗ್ ಇಲೆವೆನ್​ ಅನ್ನು ರಾಜಸ್ಥಾನ್ ರಾಯಲ್ಸ್​ ವಿರುದ್ದ ಕೂಡ ಕಣಕ್ಕಿಳಿಸಲಿದೆ.

ಅದರಂತೆ ಆರ್​ಸಿಬಿ ಪರ ಆರಂಭಿಕರಾಗಿ ದೇವದತ್ ಪಡಿಕ್ಕಲ್ ಹಾಗೂ ವಿರಾಟ್ ಕೊಹ್ಲಿ ಇನಿಂಗ್ಸ್​ ಆರಂಭಿಸಲಿದ್ದಾರೆ. ಇನ್ನು 3ನೇ ಕ್ರಮಾಂಕದಲ್ಲಿ ಭರತ್ ಆಡುವುದು ಖಚಿತ. ಹಾಗೆಯೇ ಮ್ಯಾಕ್ಸ್​ವೆಲ್ ಹಾಗೂ ಎಬಿಡಿ 4 ಮತ್ತು 5ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಆಲ್​ರೌಂಡರ್​ಗಳಾಗಿ ಡೇನಿಯಲ್ ಕ್ರಿಶ್ಚಿಯನ್ ಹಾಗೂ ಶಹಬಾಜ್ ಅಹ್ಮದ್​​ಗೆ ಸ್ಥಾನ ಸಿಗಬಹುದು. ಸ್ಪಿನ್ನರ್​ಗಳಾಗಿ ಚಹಲ್ ತಂಡದಲ್ಲಿರಲಿದ್ದು, ಅವರಿಗೆ ಮ್ಯಾಕ್ಸ್​​ವೆಲ್ ಸಾಥ್ ನೀಡಲಿದ್ದಾರೆ. ವೇಗಿಳಾಗಿ ಹರ್ಷಲ್ ಪಟೇಲ್, ಸಿರಾಜ್ ಹಾಗೂ ಜೇಮಿಸನ್​ ತಂಡದಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ.

ಮತ್ತೊಂದೆಡೆ ರಾಜಸ್ಥಾನವು ತಮ್ಮ ಮೊದಲ ಪಂದ್ಯದಲ್ಲಿ ಗೆದ್ದ ಬಳಿಕ ಎರಡು ಸತತ ಸೋಲನುಭವಿಸಿದೆ. ನಾಯಕ ಸಂಜು ಸ್ಯಾಮ್ಸನ್ ಮತ್ತು ಯಶಸ್ವಿ ಜೈಸ್ವಾಲ್ ಹೊರತುಪಡಿಸಿ ಉಳಿದ ಬ್ಯಾಟ್ಸ್​ಮನ್​ಗಳಿಂದ ಉತ್ತಮ ಆಟ ಮೂಡಿಬರುತ್ತಿಲ್ಲ. ಬೌಲರ್‌ಗಳಲ್ಲಿ ಕಾರ್ತಿಕ್ ತ್ಯಾಗಿ (3 ವಿಕೆಟ್), ಚೇತನ್ ಸಕಾರಿಯಾ (4 ವಿಕೆಟ್) ಮತ್ತು ಮುಸ್ತಫಿಜುರ್ ರೆಹಮಾನ್ (3 ವಿಕೆಟ್) ತಂಡಕ್ಕೆ ಸಮಂಜಸವಾದ ಪ್ರದರ್ಶನ ನೀಡಿದ್ದಾರೆ. ಇದಾಗ್ಯೂ ತಂಡದಲ್ಲಿ ಆಲ್​ರೌಂಡರ್​ಗಳಾಗಿರುವ ರಾಹುಲ್ ತಿವಾಠಿಯಾ ಹಾಗೂ ರಿಯಾನ್ ಪರಾಗ್ ಸಂಪೂರ್ಣ ವಿಫಲರಾಗಿದ್ದಾರೆ. ಹೀಗಾಗಿ ಇವರಿಬ್ಬರಲ್ಲಿ ಒಬ್ಬರು ಇಂದು ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು. ಅದರಂತೆ ಪ್ಲೇಯಿಂಗ್​ ಇಲೆವೆನ್​ನಲ್ಲಿ ಶಿವಂ ದುಬೆ ಹಾಗೂ ಶ್ರೇಯಸ್ ಗೋಪಾಲ್​ಗೆ ಸ್ಥಾನ ಸಿಗುವ ಸಾಧ್ಯತೆಯಿದೆ.

ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಹೀಗಿರಲಿದೆ:

ರಾಯಲ್ ಚಾಲೆಂಜರ್ಸ್​ ಬೆಂಗಳೂರು ಸಂಭಾವ್ಯ ತಂಡ: ವಿರಾಟ್ ಕೊಹ್ಲಿ , ದೇವದತ್ ಪಡಿಕ್ಕಲ್ , ಶ್ರೀಕರ್ ಭರತ್ , ಗ್ಲೆನ್ ಮ್ಯಾಕ್ಸ್‌ವೆಲ್ , ಎಬಿ ಡಿ ವಿಲಿಯರ್ಸ್ , ಶಹಬಾಜ್ ಅಹ್ಮದ್ , ಡೇನಿಯಲ್ ಕ್ರಿಶ್ಚಿಯನ್ , ಕೈಲ್ ಜೇಮೀಸನ್ , ಹರ್ಷಲ್ ಪಟೇಲ್ , ಮೊಹಮ್ಮದ್ ಸಿರಾಜ್ , ಯುಜ್ವೇಂದ್ರ ಚಹಲ್

ರಾಜಸ್ಥಾನ್ ರಾಯಲ್ಸ್​ ಸಂಭಾವ್ಯ ತಂಡ: ಎವಿನ್ ಲೂಯಿಸ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಮಹಿಪಾಲ್ ಲೊಮರ್, ಶಿವಂ ದುಬೆ, ರಾಹುಲ್ ತಿವಾಟಿಯಾ, ಕ್ರಿಸ್ ಮೋರಿಸ್, ಚೇತನ್ ಸಕಾರಿಯಾ, ಶ್ರೇಯಸ್ ಗೋಪಾಲ್, ಮುಸ್ತಫಿಜುರ್ ರೆಹಮಾನ್

ಇದನ್ನೂ ಓದಿ: IPL 2021: ಇದು ಅಂತಿಂಥ ಗೆಲುವಲ್ಲ…ಮುಂಬೈ ದಾಖಲೆಯನ್ನು ಅಳಿಸಿ ಹಾಕಿದ RCB

ಇದನ್ನೂ ಓದಿ: IPL 2021: RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು ಇವರೇ..!

ಇದನ್ನೂ ಓದಿ: Crime News: ತಾಯಿಗೆ ಅನೈತಿಕ ಸಂಬಂಧ: ಅದನ್ನೇ ಬಂಡವಾಳ ಮಾಡಿಕೊಂಡ ಮಗಳು

(IPL 2021, RR vs RCB Predicted Playing 11)