AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021: 2019ರಲ್ಲೇ ಆರ್​ಸಿಬಿ ನಾಯಕತ್ವ ಬಿಡುವ ಬಗ್ಗೆ ಡಿವಿಲಿಯರ್ಸ್ ಜೊತೆ ಚರ್ಚಿಸಿದ್ದೆ; ಕಿಂಗ್ ಕೊಹ್ಲಿ

IPL 2021: ವಿರಾಟ್ ಕೊಹ್ಲಿ ಅದ್ಭುತ ನಾಯಕ. ಅವರ ಅಡಿಯಲ್ಲಿ ಆಡುವುದು ಒಂದು ಗೌರವ. ನಾನು ಅವರ ಅಭಿಮಾನಿಯಾಗಿದ್ದೇನೆ

IPL 2021: 2019ರಲ್ಲೇ ಆರ್​ಸಿಬಿ ನಾಯಕತ್ವ ಬಿಡುವ ಬಗ್ಗೆ ಡಿವಿಲಿಯರ್ಸ್ ಜೊತೆ ಚರ್ಚಿಸಿದ್ದೆ; ಕಿಂಗ್ ಕೊಹ್ಲಿ
ಕೊಹ್ಲಿಯ ನಾಯಕತ್ವವನ್ನು ಎಬಿ ಡಿವಿಲಿಯರ್ಸ್ ಶ್ಲಾಘಿಸಿದ್ದಾರೆ
TV9 Web
| Updated By: ಪೃಥ್ವಿಶಂಕರ|

Updated on: Oct 09, 2021 | 4:11 PM

Share

ವಿರಾಟ್ ಕೊಹ್ಲಿ ಇತ್ತೀಚೆಗೆ ಭಾರತೀಯ ಟಿ 20 ತಂಡದ ನಾಯಕತ್ವವನ್ನು ತೊರೆದರು. ನಂತರ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ನಾಯಕತ್ವದಿಂದ ಕೆಳಗಿಳಿಯುವುದಾಗಿ ಘೋಷಿಸಿದ್ದರು. ಆದಾಗ್ಯೂ, ವಿರಾಟ್ ಕೊಹ್ಲಿ ಅವರು ತಮ್ಮ ಕೊನೆಯ ಉಸಿರು ಇರುವವರೆಗೂ ಐಪಿಎಲ್‌ನಲ್ಲಿ ಆರ್‌ಸಿಬಿಗೆ ಆಡುವುದನ್ನು ಮುಂದುವರಿಸುವುದಾಗಿ ಹೇಳಿದರು. ಮುಂದಿನ ವರ್ಷದ ಋತುವಿನ ಮೊದಲು ಐಪಿಎಲ್‌ನಲ್ಲಿ ಮೆಗಾ ಹರಾಜು ನಡೆಯಲಿದೆ. ಇಂತಹ ಪರಿಸ್ಥಿತಿಯಲ್ಲಿ, ಅವರು ಆರ್‌ಸಿಬಿಯ ಭಾಗವಾಗುತ್ತಾರೆಯೇ ಅಥವಾ ಹೊಸ ತಂಡದ ಭಾಗವಾಗುತ್ತಾರೆಯೇ ಎಂದು ನೋಡಬೇಕು. ಈಗ ಆರ್‌ಸಿಬಿ ತಂಡದ ನಾಯಕ, ಉತ್ತಮ ಸ್ನೇಹಿತ ಎಬಿ ಡಿವಿಲಿಯರ್ಸ್ ಜೊತೆ ಆರ್‌ಸಿಬಿಯ ನಾಯಕತ್ವವನ್ನು ಬಿಡುವ ಬಗ್ಗೆ ಮಾತನಾಡಿದ್ದೇನೆ ಎಂದು ಕೊಹ್ಲಿ ಹೇಳಿದ್ದಾರೆ.

ಸ್ಟಾರ್ ಸ್ಪೋರ್ಟ್ಸ್ ಜೊತೆಗಿನ ಸಂಭಾಷಣೆಯಲ್ಲಿ, ವಿರಾಟ್ ಕೊಹ್ಲಿ, ನಾನು 2019 ರಲ್ಲಿ ಎಬಿ ಜೊತೆ ಈ ನಿರ್ಧಾರದ ಬಗ್ಗೆ ಮಾತನಾಡಿದ್ದೇನೆ ಎಂದು ಹೇಳಿದರು. ಐಪಿಎಲ್‌ನಲ್ಲಿ ನಾನು ಯಾವಾಗಲೂ ಶಾಂತಿಯುತ ವಾತಾವರಣದಲ್ಲಿರಲು ಬಯಸುತ್ತೇನೆ. ಅದಕ್ಕಾಗಿ ನಾನು ನಾಯಕತ್ವದ ಬಗ್ಗೆ ಎಬಿಡಿ ಜೊತೆ ಮಾತನಾಡಿದ್ದೇ. ನಾಮತರ ಇದನ್ನು ಒಂದು ವರ್ಷ ಮುಂದುವರೆಸುವ ಬಗ್ಗೆ ನಿರ್ದಾರ ತೆಗೆದುಕೊಂಡಿದ್ದವು. ನಂತರ ನಿರ್ವಹಣೆಯಲ್ಲಿ ಬದಲಾವಣೆಯಾಯಿತು ಎಂದಿದ್ದಾರೆ. ಕೊಹ್ಲಿ ನಾಯಕತ್ವದಲ್ಲಿ, ಆರ್‌ಸಿಬಿ ಐಪಿಎಲ್ 2020 ರಲ್ಲಿ ಪ್ಲೇಆಫ್ ತಲುಪಿತು. ಆದರೆ, ಇದಕ್ಕಿಂತ ಮುಂದೆ ಹೋಗಲು ಸಾಧ್ಯವಾಗಲಿಲ್ಲ. ಅದೇ ಸಮಯದಲ್ಲಿ, ತಂಡವು ಐಪಿಎಲ್ 2021 ರಲ್ಲೂ ಉತ್ತಮ ಆಟವನ್ನು ತೋರಿಸಿದೆ. ಈ ವರ್ಷ, ಆರ್‌ಸಿಬಿ ಗುಂಪು ಹಂತದಲ್ಲಿ ಮೂರನೇ ಸ್ಥಾನದಲ್ಲಿ ಉಳಿಯುವ ಮೂಲಕ ಪ್ಲೇಆಫ್‌ಗೆ ಪ್ರವೇಶಿಸಿದೆ.

ಈ ಮೂಲಕ, ಆರ್‌ಸಿಬಿ ಸತತ ಎರಡನೇ ವರ್ಷ ಪ್ಲೇಆಫ್‌ಗೆ ತಲುಪಿದೆ. ಈ ಬಾರಿಯ ಐಪಿಎಲ್ ಗೆಲ್ಲುವ ಬರ ಕೊನೆಗೊಳ್ಳುತ್ತದೆ ಎಂದು ತಂಡವು ಆಶಿಸುತ್ತಿದೆ. ಆರ್‌ಸಿಬಿ ಮೂರು ಬಾರಿ ಫೈನಲ್‌ಗೆ ಹೋಗಿದ್ದರೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ.

ಕೊಹ್ಲಿಯನ್ನು ಹೊಗಳಿದ ಡಿವಿಲಿಯರ್ಸ್ ಕೊಹ್ಲಿಯ ನಾಯಕತ್ವವನ್ನು ಎಬಿ ಡಿವಿಲಿಯರ್ಸ್ ಶ್ಲಾಘಿಸಿದ್ದಾರೆ. ವಿರಾಟ್ ಕೊಹ್ಲಿ ಅದ್ಭುತ ನಾಯಕ. ಅವರ ಅಡಿಯಲ್ಲಿ ಆಡುವುದು ಒಂದು ಗೌರವ. ನಾನು ಅವರ ಅಭಿಮಾನಿಯಾಗಿದ್ದೇನೆ ಏಕೆಂದರೆ ಕಳೆದ ಕೆಲವು ವರ್ಷಗಳಲ್ಲಿ ಅವರು ಭಾರತ ತಂಡ ಮತ್ತು ಐಪಿಎಲ್​ನಿಂದ ಸಾಕಷ್ಟು ಒತ್ತಡವನ್ನು ಎದುರಿಸಿದ್ದಾರೆ. ಅವರು ಈ ಪರಿಸರದಲ್ಲಿ ಸ್ವಲ್ಪ ಮೋಜು ಮಾಡಬಹುದು ಎಂದು ನಾನು ಭಾವಿಸುತ್ತೇನೆ. ಭಾರತೀಯ ಕ್ರಿಕೆಟ್‌ನಿಂದ ದೂರವಿರುವಾಗ, ಐಪಿಎಲ್‌ನಲ್ಲಿ ಸ್ನೇಹಿತರೊಂದಿಗೆ ಟಿ 20 ಕ್ರಿಕೆಟ್‌ನಲ್ಲಿ ಮೋಜು ಮಾಡುವುದು ಮತ್ತು ನಂತರ ಎಲ್ಲಾ ಫಾರ್ಮ್ಯಾಟ್‌ಗಳಲ್ಲಿ ಭಾರತಕ್ಕಾಗಿ ಸಂಪೂರ್ಣ ಒತ್ತಡದಿಂದ ಆಟವಾಡುವುದನ್ನು ಈ ರೀತಿ ಅರ್ಥಮಾಡಿಕೊಳ್ಳಬಹುದು ಎಂದಿದ್ದಾರೆ.

ಇದನ್ನೂ ಓದಿ:IPL 20201: ಆರ್​ಸಿಬಿಯಲ್ಲಿ ಮ್ಯಾಕ್ಸ್​ವೆಲ್ ಹಾಗೂ ಡಿವಿಲಿಯರ್ಸ್​ ಬದಲಿಗೆ ಈತನನ್ನು ಆಡಿಸಬಹುದು; ಕೋಚ್ ಮೈಕ್ ಹೆಸ್ಸನ್