T20 World Cup: ಪಾಕ್ ತಂಡಕ್ಕೆ ಆಘಾತ; ಗಾಯದಿಂದಾಗಿ ತಂಡದ ಸ್ಫೋಟಕ ಬ್ಯಾಟರ್ ವಿಶ್ವಕಪ್​ ತಂಡದಿಂದ ಔಟ್

T20 World Cup: ಕ್ರಿಕೆಟ್ ವೆಬ್‌ಸೈಟ್ ಇಎಸ್‌ಪಿಎನ್-ಕ್ರಿಕ್‌ಇನ್‌ಫೊ ವರದಿಯ ಪ್ರಕಾರ, ಮಕ್ಸೂದ್ ರಾಷ್ಟ್ರೀಯ ಟಿ 20 ಕಪ್‌ನಲ್ಲಿ ಅಕ್ಟೋಬರ್ 6 ರಂದು ನಡೆದ ಪಂದ್ಯದ ವೇಳೆ ಬೆನ್ನಿಗೆ ಗಾಯವಾಗಿತ್ತು.

T20 World Cup: ಪಾಕ್ ತಂಡಕ್ಕೆ ಆಘಾತ; ಗಾಯದಿಂದಾಗಿ ತಂಡದ ಸ್ಫೋಟಕ ಬ್ಯಾಟರ್ ವಿಶ್ವಕಪ್​ ತಂಡದಿಂದ ಔಟ್
ಸೋಹೈಬ್ ಮಕ್ಸೂದ್

ಪಾಕಿಸ್ತಾನ ಕ್ರಿಕೆಟ್ ತಂಡವು ಟಿ 20 ವಿಶ್ವಕಪ್​ಕ್ಕೂ ಮುನ್ನ ನಿರಂತರ ಚರ್ಚೆಯಲ್ಲಿದೆ. ಬಾಬರ್ ಅಜಮ್ ಅವರ ನಾಯಕತ್ವ ತಂಡವು ವಿಶ್ವಕಪ್‌ಗೆ ಮುನ್ನ ವಿಭಿನ್ನ ಸನ್ನಿವೇಶಗಳನ್ನು ಎದುರಿಸುತ್ತಿದೆ. ಮುಖ್ಯ ತರಬೇತುದಾರ ಮಿಸ್ಬಾ ಉಲ್ ಹಕ್ ಮತ್ತು ಬೌಲಿಂಗ್ ತರಬೇತುದಾರ ವಕಾರ್ ಯೂನಿಸ್ ಅವರ ಹಠಾತ್ ರಾಜೀನಾಮೆ. ನಂತರ ನ್ಯೂಜಿಲ್ಯಾಂಡ್-ಇಂಗ್ಲೆಂಡ್ ನಂತಹ ತಂಡಗಳಿಂದ ಟಿ 20 ಸರಣಿಯನ್ನು ರದ್ದುಗೊಳಿಸಿದ ಆಘಾತ. ಈಗ ಜೊತೆಗೆ ತಂಡದ ಪ್ರಮುಖ ಆಟಗಾರ ಗಾಯಗೊಂಡು ವಿಶ್ವಕಪ್​ ತಂಡದಿಂದ ಹೊರಗುಳಿದಿದ್ದಾರೆ. ಪಾಕಿಸ್ತಾನದ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಸೊಹೈಬ್ ಮಕ್ಸೂದ್ ಭಾರತ ವಿರುದ್ಧದ ಮೊದಲ ಪಂದ್ಯಕ್ಕೆ ಎರಡು ವಾರಗಳ ಮೊದಲು ಗಾಯದಿಂದಾಗಿ ಟೂರ್ನಿಯಿಂದ ಹೊರಗುಳಿದಿದ್ದಾರೆ. ಮಕ್ಸೂದ್ ಕೆಲ ದಿನಗಳ ಹಿಂದೆ ಬೆನ್ನಿಗೆ ಗಾಯ ಮಾಡಿಕೊಂಡಿದ್ದರು.

ಕ್ರಿಕೆಟ್ ವೆಬ್‌ಸೈಟ್ ಇಎಸ್‌ಪಿಎನ್-ಕ್ರಿಕ್‌ಇನ್‌ಫೊ ವರದಿಯ ಪ್ರಕಾರ, ಮಕ್ಸೂದ್ ರಾಷ್ಟ್ರೀಯ ಟಿ 20 ಕಪ್‌ನಲ್ಲಿ ಅಕ್ಟೋಬರ್ 6 ರಂದು ನಡೆದ ಪಂದ್ಯದ ವೇಳೆ ಬೆನ್ನಿಗೆ ಗಾಯವಾಗಿತ್ತು. ಈ ದಿನಗಳಲ್ಲಿ ದೇಶೀಯ ಟಿ 20 ಪಂದ್ಯಾವಳಿಯನ್ನು ಪಾಕಿಸ್ತಾನದಲ್ಲಿ ಆಡಲಾಗುತ್ತಿದೆ. ಅಂದಿನಿಂದ ಅವರು ಪಂದ್ಯಾವಳಿಯಿಂದ ಹೊರಗಿದ್ದರು ಮತ್ತು ಪಿಸಿಬಿಯ ವೈದ್ಯಕೀಯ ತಂಡವು ಅವರನ್ನು ಪರೀಕ್ಷಿಸುತ್ತಿತ್ತು. ಅಂದಿನಿಂದ, ವಿಶ್ವಕಪ್‌ಗಾಗಿ ಅವರ ಸ್ಥಾನದ ಬಗ್ಗೆ ಅನುಮಾನಗಳು ಹುಟ್ಟಿಕೊಂಡವು, ಆದರೆ MRI ಸ್ಕ್ಯಾನ್‌ನ ವರದಿಗಾಗಿ ಕಾಯುವ ಕಾರಣ ಪಾಕಿಸ್ತಾನದ ಆಯ್ಕೆಗಾರರು ಯಾವುದೇ ನಿರ್ಧಾರ ತೆಗೆದುಕೊಳ್ಳಲಿಲ್ಲ. ಈಗ ಸೊಹೇಬ್ ಅವರ ವರದಿ ಬಂದಿದ್ದು, ಇದರಲ್ಲಿ ಅವರು ವಿಶ್ವಕಪ್​ನಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ.

ಪಾಕಿಸ್ತಾನದ ತಂಡದಲ್ಲಿ ಮತ್ತೆ ಬದಲಾವಣೆಗಳಾಗಬಹುದು
ಅಕ್ಟೋಬರ್ 8 ರ ಶುಕ್ರವಾರದಂದು ವಿಶ್ವಕಪ್‌ಗೆ ಆಯ್ಕೆಯಾದ 15 ಸದಸ್ಯರ ತಂಡವನ್ನು ಪಿಸಿಬಿ ಪುನರ್ರಚಿಸಿತ್ತು. ಆದರೆ ಮಕ್ಸೂದ್ ಅವರ ಸ್ಥಾನವನ್ನು ಅದರಲ್ಲಿ ಉಳಿಸಿಕೊಳ್ಳಲಾಯಿತು. ಈಗ ಬದಲಾದ ಪರಿಸ್ಥಿತಿಯಲ್ಲಿ, ಪಾಕಿಸ್ತಾನದ ಬೋರ್ಡ್ ಮತ್ತೊಮ್ಮೆ ಹೊಸ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳಬೇಕಾಗುತ್ತದೆ. ವಿಶ್ವಕಪ್‌ಗಾಗಿ ತಂಡಗಳ ಬದಲಾವಣೆಗೆ ಅಕ್ಟೋಬರ್ 10 ಕೊನೆಯ ದಿನಾಂಕವಾಗಿದೆ. ಪಿಸಿಬಿ ಶುಕ್ರವಾರ 3 ಆಟಗಾರರನ್ನು ವಿನಿಮಯ ಮಾಡಿಕೊಂಡಿತ್ತು, ನಂತರ ಮಾಜಿ ನಾಯಕ ಸರ್ಫರಾಜ್ ಅಹ್ಮದ್, ಬ್ಯಾಟ್ಸ್‌ಮನ್ ಫಖರ್ ಜಮಾನ್ ಮತ್ತು ಹೈದರ್ ಅಲಿ ತಂಡಕ್ಕೆ ಮರಳಿದರು.

ಇದು ಮಕ್ಸೂದ್ ವೃತ್ತಿಜೀವನ
ಸೊಹೈಬ್ ಮಕ್ಸೂದ್ 34 ವರ್ಷದ ಆಕ್ರಮಣಕಾರಿ ಬ್ಯಾಟ್ಸ್‌ಮನ್, ಅವರು ಸಾಮಾನ್ಯವಾಗಿ ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಾರೆ. ಅವರು ಗಾಯಗೊಳ್ಳುವ ಮೊದಲು ದಕ್ಷಿಣ ಪಂಜಾಬ್ ತಂಡವನ್ನು ರಾಷ್ಟ್ರೀಯ ಕಪ್‌ನಲ್ಲಿ ಮುನ್ನಡೆಸಿದರು ಮತ್ತು ಸತತ ಎರಡು ಪಂದ್ಯಗಳಲ್ಲಿ ಅರ್ಧಶತಕಗಳನ್ನು ಗಳಿಸಿದರು. ಮಕ್ಸೂದ್ ಸುಮಾರು 5 ವರ್ಷಗಳ ನಂತರ ಈ ವರ್ಷ ಪಾಕಿಸ್ತಾನದ ತಂಡಕ್ಕೆ ಮರಳಿದರು ಮತ್ತು ಕೆಲವು ಅಬ್ಬರದ ಇನ್ನಿಂಗ್ಸ್ ಆಡಿದರು. ಅವರು 26 ಟಿ 20 ಪಂದ್ಯಗಳಲ್ಲಿ 116 ಸ್ಟ್ರೈಕ್ ರೇಟ್​ನಲ್ಲಿ 273 ರನ್ ಗಳಿಸಿದ್ದಾರೆ. ಮತ್ತೊಂದೆಡೆ, ಒಟ್ಟಾರೆ ಟಿ 20 ದಾಖಲೆ ಉತ್ತಮವಾಗಿದೆ, ಅಲ್ಲಿ ಅವರು 148 ಪಂದ್ಯಗಳಲ್ಲಿ 134 ಸ್ಟ್ರೈಕ್ ರೇಟ್​ನಲ್ಲಿ 3565 ರನ್ ಗಳಿಸಿದ್ದಾರೆ.

Read Full Article

Click on your DTH Provider to Add TV9 Kannada