RCB vs RR IPL 2021 Match Prediction: ಬಲಿಷ್ಠ ಆರ್​ಸಿಬಿಗೆ ರಾಜಸ್ಥಾನ್ ಚಾಲೆಂಜ್! ಎಬಿಡಿ, ಕೊಹ್ಲಿ ಮೇಲಿದೆ ಸ್ಯಾಮ್ಸನ್ ಪಡೆಯ ಕಣ್ಣು

| Updated By: Skanda

Updated on: Apr 22, 2021 | 7:01 AM

IPL 2021: ಐಪಿಎಲ್ನಲ್ಲಿ ಇದುವರೆಗೂ ಆರ್ಸಿಬಿ ಮತ್ತು ರಾಜಸ್ಥಾನ್ 23 ಭಾರಿ ಮುಖಾಮುಖಿಯಾಗಿವೆ. ಇದ್ರಲ್ಲಿ ಉಭಯ ತಂಡಗಳು ತಲಾ 10 ಪಂದ್ಯಗಳಲ್ಲಿ ಗೆಲುವು ದಾಖಲಿಸಿ ಸಮಬಲ ಸಾಧಿಸಿದ್ರೆ, ಉಳಿದ ಮೂರು ಪಂದ್ಯ ಫಲಿತಾಂಶವಿಲ್ಲದೇ ಅಂತ್ಯ ಕಂಡಿದೆ.

RCB vs RR IPL 2021 Match Prediction: ಬಲಿಷ್ಠ ಆರ್​ಸಿಬಿಗೆ ರಾಜಸ್ಥಾನ್ ಚಾಲೆಂಜ್! ಎಬಿಡಿ, ಕೊಹ್ಲಿ ಮೇಲಿದೆ ಸ್ಯಾಮ್ಸನ್ ಪಡೆಯ ಕಣ್ಣು
ಕೊಹ್ಲಿ ನಂತರ, ಭಾರತೀಯ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಟಿ 20 ಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ರೋಹಿತ್ 351 ಪಂದ್ಯಗಳ 338 ಇನ್ನಿಂಗ್ಸ್ ಗಳಲ್ಲಿ ಒಟ್ಟು 9348 ರನ್ ಗಳಿಸಿದ್ದಾರೆ. ಈ ಸಮಯದಲ್ಲಿ, ಹಿಟ್ಮ್ಯಾನ್ ಆರು ಶತಕಗಳು ಮತ್ತು 65 ಅರ್ಧ ಶತಕಗಳನ್ನು ಗಳಿಸಿದ್ದಾರೆ.
Follow us on

ಈ ಬಾರಿ ಐಪಿಎಲ್ ಸೀಸನ್​ನಲ್ಲಿ ಗೆಲುವಿನ ನಾಗಾಲೋಟ ಮುಂದುವರಿಸಿರುವ ಆರ್​ಸಿಬಿ, ಇಂದು ಮುಂಬೈನಲ್ಲಿ ಮೊದಲ ಪಂದ್ಯವನ್ನಾಡುತ್ತಿದೆ. ಚೆನ್ನೈನ ಸ್ಪಿನ್ ಟ್ರ್ಯಾಕ್​ನಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿರುವ ಆರ್​ಸಿಬಿ, ವಾಂಖೆಡೆಯಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಮುಖಾಮುಖಿಯಾಗುತ್ತಿದೆ. ಚೆನ್ನೈನಲ್ಲಿ ಬ್ಯಾಟ್ಸ್​ಮನ್​ಗಳು ರನ್​ಗಳಿಸಲು ತಿಣುಕಾಡುತ್ತಿದ್ದರು. ಆದರೆ ವಾಂಖೆಡೆ ಪಿಚ್ ಹಾಗಲ್ಲ. ಸಂಪೂರ್ಣವಾಗಿ ಬ್ಯಾಟ್ಸ್​ಮನ್​ಗಳಿಗೆ ನೆರವಾಗಲಿದೆ. ಹೀಗಾಗಿ ಇಂದು ಆರ್​ಸಿಬಿ ಮತ್ತು ಆರ್​ಆರ್​ ನಡುವಿನ ಪಂದ್ಯದಲ್ಲಿ ರನ್ ಮಳೆ ಹರಿಯುವ ಸಾಧ್ಯತೆ ಇದೆ.

ಬ್ಯಾಟಿಂಗ್ ಪಿಚ್ ವಾಂಖೆಡೆಯಲ್ಲಿ ಹರಿಯಲಿದೆ ರನ್ ಮಳೆ!
ವಾಂಖೆಡೆಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ, 200ಕ್ಕೂ ಅಧಿಕ ರನ್ ಕಲೆಹಾಕಿದ್ರೆ ಮಾತ್ರ ಸೇಫ್ ಟಾರ್ಗೆಟ್ ಆಗುತ್ತೆ. ಯಾಕಂದ್ರೆ ಚೇಸಿಂಗ್ ಮಾಡುವ ತಂಡಕ್ಕೆ ಇಲ್ಲಿ ಅನುಕೂಲ ಹೆಚ್ಚು. ಸೆಕೆಂಡ್ ಬೌಲಿಂಗ್ ಮಾಡುವಾಗ ಮಂಜು ಬೀಳೋದ್ರಿಂದ, ಬೌಲರ್​ಗಳಿಗೆ ಬಾಲ್ ಮೇಲೆ ಹಿಡಿತ ಸಿಗುವುದಿಲ್ಲ. ಹೀಗಾಗಿ ಟಾಸ್ ಗೆದ್ದು ಚೇಸಿಂಗ್ ಮಾಡುವ ತಂಡಕ್ಕೆ ಇಲ್ಲಿ ಗೆಲುವಿನ ಅವಕಾಶ ಹೆಚ್ಚಿದೆ.

ವಾಂಖೆಡೆ ಪಿಚ್ ಬ್ಯಾಟ್ಸ್​ಮನ್​ಗಳಿಗೆ ಚೇಸಿಂಗ್ ಮಾಡಲು ನೆರವಾಗಿದ್ರೂ, ಚೆನ್ನೈ ಈ ಲೆಕ್ಕಾಚಾರವನ್ನ ರಾಜಸ್ಥಾನ್ ವಿರುದ್ಧ ಉಲ್ಟಾ ಮಾಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ರಾಜಸ್ಥಾನ್ ವಿರುದ್ಧ 188 ರನ್​ ಗಳಿಸಿತ್ತು. ಈ ಟಾರ್ಗೆಟ್ ಬೆನ್ನತ್ತಿದ ರಾಜಸ್ಥಾನ್ ತಂಡವನ್ನ 143 ರನ್ಗಳಿಗೆ ಕಟ್ಟಿ ಹಾಕಿ ಚೆನ್ನೈ ಗೆಲುವು ದಾಖಲಿಸಿದೆ. ಹೀಗಾಗಿ ವಾಂಖೆಡೆಯಲ್ಲಿ ಆರ್​ಸಿಬಿ ಮೊದಲು ಬ್ಯಾಟಿಂಗ್ ಮಾಡಿದ್ರೂ, ಗುರಿ ಕಾಪಾಡಿಕೊಳ್ಳುವ ಪ್ರಯತ್ನ ಮಾಡಬೇಕು.

ಎಬಿಡಿ, ಕೊಹ್ಲಿ ಮೇಲಿದೆ ಸ್ಯಾಮ್ಸನ್ ಪಡೆಯ ಕಣ್ಣು!
ವಾಂಖೆಡೆ ಮೈದಾನದಲ್ಲಿ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ರನ್ ಮಳೆ ಹರಿಸಿದ ದಾಖಲೆಯನ್ನ ಹೊಂದಿದ್ದಾರೆ. ಕೊಹ್ಲಿ ವಾಂಖೆಡೆಯಲ್ಲಿ 58ರ ಸ್ಟ್ರೈಕ್​ ರೇಟ್​ನಲ್ಲಿ 409 ರನ್​ಳಿಸಿದ್ದಾರೆ. ಇನ್ನು ವಾಂಖೆಡೆಯಲ್ಲಿ ಎಬಿ ಡಿವಿಲಿಯರ್ಸ್ 133 ರನ್​ ಗಳಿಸಿ ಅತ್ಯಧಿಕ ವೈಯಕ್ತಿಕ ರನ್ ಕಲೆಹಾಕಿದ ಬ್ಯಾಟ್ಸ್​ಮನ್​ ಎನಿಸಿಕೊಂಡಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ನಾಯಕ ಕೊಹ್ಲಿ ಮತ್ತು ಎಬಿಡಿ, ಆರ್​ಸಿಬಿ ತಂಡದ ಸ್ಕೋರ್ ನಿರ್ಧರಿಸುವ ಪ್ರಮುಖರಾಗಿ ಗುರುತಿಸಿಕೊಂಡಿದ್ದಾರೆ.

ಸ್ಯಾಮ್ಸನ್, ಬಟ್ಲರ್​ಗೆ ಆರ್​ಸಿಬಿ ಚಹಲ್ ಭಯ!
ರಾಜಸ್ಥಾನ್ ತಂಡದ ಸೋಲು ಗೆಲುವು ನಿರ್ಧಾರವಾಗೋದೇ ನಾಯಕ ಸಂಜು ಸ್ಯಾಮ್ಸನ್ ಮತ್ತು ಜೋಸ್ ಬಟ್ಲರ್ ಪವರ್​ಫುಲ್​​ ಬ್ಯಾಟಿಂಗ್​ನಿಂದ. ಆದ್ರೆ ಇಬ್ಬರು ಸ್ಟಾರ್ ಆಟಗಾರರು ಐಪಿಎಲ್​ನಲ್ಲಿ, ಲೆಗ್ ಸ್ಪಿನ್ನರ್​ಗಳ ಮುಂದೆ ಮಂಕಾಗ್ತಾರೆ. ಅದ್ರಲ್ಲೂ ಆರ್​ಸಿಬಿಯ ಯುಜ್ವೇಂದರ್ ಚಹಲ್​ಗೆ ಕಳೆದ ಸೀಸನ್​ನಲ್ಲಿ ಇಬ್ಬರು ಬಲಿಯಾಗಿದ್ರು. ಹೀಗಾಗಿ ಇವತ್ತು ಆರ್​ಸಿಬಿ ಪರ ಯುಜ್ವೇಂದರ್ ಚಹಲ್ ಪ್ರಮುಖ ಪಾತ್ರವಹಿಸಲಿದ್ದಾರೆ..

ಶಹಬಾಜ್ ಅಹ್ಮದ್, ಸುಂದರ್ ಮೇಲೆ ಹೆಚ್ಚಿನ ನಿರೀಕ್ಷೆ!
ಚಹಲ್ ಜೊತೆಯಲ್ಲೇ ವಾಷಿಂಗ್ಟನ್ ಸುಂದರ್ ಮತ್ತು ಶಹಬಾಜ್ ಅಹ್ಮದ್ ಜೋಡಿ ತಮ್ಮ ಸ್ಪಿನ್ನಿಂಗ್ ಅಸ್ತ್ರದಿಂದ, ಪಂದ್ಯಕ್ಕೆ ತಿರುವು ದೊರಕಿಸಿಕೊಡಬಲ್ಲ ಸಾಮರ್ಥ್ಯ ಹೊಂದಿದ್ದು ಅವರ ಮೇಲೂ ನಿರೀಕ್ಷೆ ಹೆಚ್ಚಿದೆ.

ಐಪಿಎಲ್​ನಲ್ಲಿ RCB vs RR
ಐಪಿಎಲ್​ನಲ್ಲಿ ಇದುವರೆಗೂ ಆರ್​ಸಿಬಿ ಮತ್ತು ರಾಜಸ್ಥಾನ್ 23 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಉಭಯ ತಂಡಗಳು ತಲಾ 10 ಪಂದ್ಯಗಳಲ್ಲಿ ಗೆಲುವು ದಾಖಲಿಸಿ ಸಮಬಲ ಸಾಧಿಸಿದ್ದು, ಉಳಿದ ಮೂರು ಪಂದ್ಯ ಫಲಿತಾಂಶವಿಲ್ಲದೇ ಅಂತ್ಯ ಕಂಡಿವೆ.

ಹ್ಯಾಟ್ರಿಕ್ ಗೆಲುವಿನಿಂದ ಹೊಸ ಜೋಷ್​ನಲ್ಲಿರುವ ಕೊಹ್ಲಿ ಹುಡುಗರಿಗೆ, ವಾಂಖೆಡೆಯ ಬ್ಯಾಟಿಂಗ್​​ ಪಿಚ್​ನಲ್ಲಿ ಲಯ ಕಂಡುಕೊಳ್ಳುವುದು ಕಷ್ಟವೇನಲ್ಲ. ಮೊದಲೇ ರಾಜಸ್ಥಾನ್ ಆಡಿದ ಮೂರು ಪಂದ್ಯಗಳಲ್ಲಿ ಕೇವಲ 1 ರಲ್ಲಿ ಮಾತ್ರ ಗೆಲುವು ದಾಖಲಿಸಿದೆ. ಹೀಗಾಗಿ ಸ್ಯಾಮ್ಸನ್ ಪಡೆ, ವಿರಾಟ್ ಬಳಗಕ್ಕೆ ಭಾರೀ ಪೈಪೋಟಿ ಕೊಡುವ ನಿರೀಕ್ಷೆ ಕಡಿಮೆಯಿದೆ.