IPL 2022: RCB ಈ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಬಹುದು..!

| Updated By: ಝಾಹಿರ್ ಯೂಸುಫ್

Updated on: Nov 01, 2021 | 9:41 PM

IPL 2022 RCB: ಚಹಲ್ ಆರ್​ಸಿಬಿ ಪರ ಉತ್ತಮ ಪ್ರದರ್ಶನ ನೀಡಿದ್ದಾರೆ. ಐಪಿಎಲ್​ನ ಬೆಸ್ಟ್ ಸ್ಪಿನ್ನರ್​ ಎನಿಸಿಕೊಂಡಿರುವ ಚಹಲ್ ಅವರ ಖರೀದಿಗಾಗಿ ಇತರೆ ತಂಡಗಳೂ ಕೂಡ ಎದುರು ನೋಡುತ್ತಿರುತ್ತವೆ.

IPL 2022: RCB ಈ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಬಹುದು..!
RCB
Follow us on

ಇಂಡಿಯನ್ ಪ್ರೀಮಿಯರ್ ಸೀಸನ್ 15 ಗಾಗಿ (IPL 2022) ಸಿದ್ದತೆಗಳು ಶುರುವಾಗಿದೆ. ಮುಂದಿನ ಸೀಸನ್​ ಮೆಗಾ ಹರಾಜು ನಡೆಯಲಿದ್ದು, ಅದಕ್ಕೂ ಮುನ್ನ ಪ್ರತಿಯೊಂದು ತಂಡಗಳಿಗೆ ನಾಲ್ಕು ಆಟಗಾರರನ್ನು ರಿಟೈನ್ ಮಾಡಿಕೊಳ್ಳುವ ಅವಕಾಶ ನೀಡಲಾಗುತ್ತಿದೆ. ಹಾಗೆಯೇ ಹೊಸ ಎರಡು ತಂಡಗಳಿಗೆ ಮೂವರು ಆಟಗಾರರನ್ನು ನೇರವಾಗಿ ಆರಿಸಿಕೊಳ್ಳುವ ಆಯ್ಕೆ ಇರಲಿದೆ. ಅದರಂತೆ ರಾಯಲ್ ಚಾಲೆಂಜರ್ಸ್​ ಬೆಂಗಳೂರು (RCB) ತಂಡ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ಏಕೆಂದರೆ ಮುಂದಿನ ಸೀಸನ್​ನಲ್ಲಿ ಒಟ್ಟು 10 ತಂಡಗಳಿರಲಿದ್ದು, ಇದರಿಂದ ಆಟಗಾರರ ಖರೀದಿಗೆ ಹೆಚ್ಚಿನ ಪೈಪೋಟಿ ಕಂಡು ಬರಲಿದೆ. ಹೀಗಾಗಿ ಸ್ಟಾರ್ ಆಟಗಾರರನ್ನು ತಂಡದಲ್ಲೇ ಉಳಿಸಿಕೊಳ್ಳಲು ಆರ್​ಸಿಬಿ ತಂಡ ಸೇರಿದಂತೆ ಎಲ್ಲಾ ತಂಡಗಳು ಮುಂದಾಗಲಿದೆ.

ಇನ್ನು ಆಟಗಾರರನ್ನು ಉಳಿಸಿಕೊಳ್ಳಲು ಎರಡು ಆಯ್ಕೆಗಳನ್ನು ನೀಡಲಾಗುತ್ತಿದ್ದು, ಅದರಂತೆ ಮೂವರು ಭಾರತೀಯ ಆಟಗಾರರು+ ಒಬ್ಬ ವಿದೇಶಿ ಆಟಗಾರನನ್ನು ಉಳಿಸಿಕೊಳ್ಳಬಹುದು. ಅಥವಾ ಇಬ್ಬರು ಭಾರತೀಯ ಆಟಗಾರರು + ಇಬ್ಬರು ವಿದೇಶಿ ಆಟಗಾರರನ್ನು ರಿಟೈನ್ ಮಾಡಿಕೊಳ್ಳಬಹುದು. ಇಲ್ಲಿ ಆರ್​ಸಿಬಿ 2+2 ಆಯ್ಕೆ ಮಾಡಬಹುದು.

ಅದರಂತೆ ಆರ್​ಸಿಬಿ ತಂಡ ಉಳಿಸಿಕೊಳ್ಳಲಿರುವ ಆಟಗಾರರ ಪಟ್ಟಿಯಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ತಂಡದ ಬ್ರಾಂಡ್ ವ್ಯಾಲ್ಯೂ ಉಳಿಸಿಕೊಳ್ಳಲು ಕೊಹ್ಲಿಯನ್ನು ರಿಟೈನ್ ಮಾಡಿಕೊಳ್ಳುವುದು ಬಹುತೇಕ ಖಚಿತ.

ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎರಡನೇ ಆಯ್ಕೆ ಗ್ಲೆನ್ ಮ್ಯಾಕ್ಸ್​ವೆಲ್. ಕಳೆದ ಸೀಸನ್​ ಐಪಿಎಲ್​ನಲ್ಲಿ ಭರ್ಜರಿ ಪರ ಭರ್ಜರಿ ಆಲ್​ರೌಂಡರ್ ಪ್ರದರ್ಶನ ನೀಡಿರುವ ಗ್ಲೆನ್ ಮ್ಯಾಕ್ಸ್​ವೆಲ್ ಮುಂದಿನ ಸೀಸನ್​ನಲ್ಲೂ ತಂಡದ ಭಾಗವಾಗಲಿದ್ದಾರೆ. ಏಕೆಂದರೆ ಕಳೆದ ಸೀಸನ್​ ಹರಾಜಿನ ವೇಳೆ ಮ್ಯಾಕ್ಸ್​ವೆಲ್ ಖರೀದಿಗೆ ಭರ್ಜರಿ ಪೈಪೋಟಿ ಕಂಡು ಬಂದಿತ್ತು. ಹೀಗಾಗಿ ಈ ಬಾರಿ ರಿಲೀಸ್ ಮಾಡುವ ಸಾಧ್ಯತೆ ಕಡಿಮೆ.

ಹಾಗೆಯೇ ಮೂರನೇ ಆಟಗಾರನಾಗಿ ಎಬಿ ಡಿವಿಲಿಯರ್ಸ್​ ಅವರನ್ನು ರಿಟೈನ್ ಮಾಡಿಕೊಳ್ಳಬಹುದು. ಏಕೆಂದರೆ ಆರ್​ಸಿಬಿ ಪರ ಸ್ಥಿರ ಪ್ರದರ್ಶನ ನೀಡಿದ ಆಟಗಾರರಲ್ಲಿ ಎಬಿಡಿ ಕೂಡ ಒಬ್ಬರು. ಒಂದು ವೇಳೆ ಎಬಿಡಿಯನ್ನು ಬಿಡುಗಡೆ ಮಾಡಿದರೆ ಉಳಿದ ತಂಡಗಳು ಖರೀದಿಗಾಗಿ ಪೈಪೋಟಿ ನಡೆಸಲಿದೆ. ಹೀಗಾಗಿ ಆರ್​ಸಿಬಿ ಅಂತಹ ಸಾಹಸ ಮಾಡುವುದು ಡೌಟ್ ಎಂದೇ ಹೇಳಬಹುದು.

ನಾಲ್ಕನೇ ಆಟಗಾರನಾಗಿ ಯುಜುವೇಂದ್ರ ಚಹಲ್ ಅವರನ್ನು ಉಳಿಸಿಕೊಳ್ಳಬಹುದು. ಚಹಲ್ ಆರ್​ಸಿಬಿ ಪರ ಉತ್ತಮ ಪ್ರದರ್ಶನ ನೀಡಿದ್ದಾರೆ. ಐಪಿಎಲ್​ನ ಬೆಸ್ಟ್ ಸ್ಪಿನ್ನರ್​ಗಳಲ್ಲಿ ಚಹಲ್ ಕೂಡ ಒಬ್ಬರು. ಹಾಗಾಗಿ ಚಹಲ್ ಅವರ ಖರೀದಿಗಾಗಿ ಇತರೆ ತಂಡಗಳೂ ಕೂಡ ಎದುರು ನೋಡುತ್ತಿರುತ್ತವೆ. ಒಂದು ವೇಳೆ ರಿಲೀಸ್ ಮಾಡಿದರೆ ಮತ್ತೆ ಖರೀದಿಸಲು ಭರ್ಜರಿ ಪೈಪೋಟಿ ಕಂಡು ಬರಲಿದೆ. ಹೀಗಾಗಿ 2ನೇ ಭಾರತೀಯ ಆಟಗಾರನಾಗಿ ಯುಜುವೇಂದ್ರ ಚಹಲ್​ಗೆ ಆರ್​ಸಿಬಿ ಮಣೆಹಾಕುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: IPL 2022: ನಾಲ್ವರು ಆಟಗಾರರಿಗೆ 42 ಕೋಟಿ ರೂ. ನಿಗದಿ: ಐಪಿಎಲ್ ಹೊಸ ರಿಟೈನ್ ನಿಯಮ

ಇದನ್ನೂ ಓದಿ: ICC T20 Batter Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಟೀಮ್ ಇಂಡಿಯಾದ ಇಬ್ಬರ ಸ್ಥಾನ ಕುಸಿತ

(IPL 2022: 4 Players RCB Can Retain Ahead Of The Mega Auction)