IPL 2022: ಐಪಿಎಲ್​ನ 10 ತಂಡಗಳಿಗೂ ಕೋಚ್ ಫಿಕ್ಸ್

IPL 2022 Mega Auction: ಳೆದ ಕೆಲವು ಸೀಸನ್​ಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಯಶಸ್ಸಿನ ಹಿಂದೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರ ಮಾಸ್ಟರ್ ಪ್ಲ್ಯಾನ್ ಅಡಗಿದೆ. ಐಪಿಎಲ್ 2020 ರಲ್ಲಿ ಫೈನಲ್‌ಗೆ ಪ್ರವೇಶಿಸಿದ್ದ ಡೆಲ್ಲಿ ಆ ಬಳಿಕ ಎರಡು ಸೀಸನ್​ನಲ್ಲಿ ಪ್ಲೇಆಫ್ ಪ್ರವೇಶಿಸಿತ್ತು.

IPL 2022: ಐಪಿಎಲ್​ನ 10 ತಂಡಗಳಿಗೂ ಕೋಚ್ ಫಿಕ್ಸ್
IPL 2022
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jan 04, 2022 | 4:53 PM

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ಮೆಗಾ ಹರಾಜಿಗೂ ಮುನ್ನ ಎಲ್ಲಾ ತಂಡಗಳು ತಮ್ಮ ಸಿಬ್ಬಂದಿ ವರ್ಗಗಳನ್ನು ಫೈನಲ್ ಮಾಡಿದೆ. ಅದರಂತೆ ಮುಂದಿನ ಸೀಸನ್ ಐಪಿಎಲ್​ನಲ್ಲಿ ಆರ್​ಸಿಬಿ ತಂಡದ ಕೋಚ್ ಆಗಿ ಟೀಮ್ ಇಂಡಿಯಾದ ಮಾಜಿ ಆಟಗಾರ ಸಂಜಯ್ ಬಂಗಾರ್ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಐಪಿಎಲ್​ನ ಹೊಸ ತಂಡಗಳಾದ ಲಕ್ನೋ ಹಾಗೂ ಅಹಮದಾಬಾದ್​ ತಂಡಗಳಿಗೂ ಕೋಚ್​ಗಳನ್ನು ಆಯ್ಕೆ ಮಾಡಿಕೊಂಡಿದೆ ಎಂದು ವರದಿಯಾಗಿದೆ. ಹಾಗಿದ್ರೆ ಯಾವ ತಂಡಕ್ಕೆ ಯಾರು ಕೋಚ್ ಎಂದು ನೋಡೋಣ…

ಲಕ್ನೋ ತಂಡದ ಕೋಚ್: ಆ್ಯಂಡಿ ಫ್ಲವರ್- ಜಿಂಬಾಬ್ವೆ ತಂಡದ ಮಾಜಿ ನಾಯಕ ಮತ್ತು ವಿಕೆಟ್‌ಕೀಪರ್ ಆ್ಯಂಡಿ ಫ್ಲವರ್ 2022 ರ ಐಪಿಎಲ್​ ಲೀಗ್​ನಲ್ಲಿ ಲಕ್ನೋ ತಂಡದ ಕೋಚ್ ಆಗಿ ನೇಮಕವಾಗಿದ್ದಾರೆ. ಫ್ಲವರ್ ಈ ಹಿಂದೆ ಪಂಜಾಬ್ ಕಿಂಗ್ಸ್‌ ತಂಡದ ಸಹಾಯಕ ಕೋಚ್ ಆಗಿದ್ದರು. ಇದೀಗ ಮುಖ್ಯ ಕೋಚ್ ಆಗಿ ಲಕ್ನೋ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್​: ಸ್ಟೀಫನ್ ಫ್ಲೆಮಿಂಗ್- ಚೆನ್ನೈ ಸೂಪರ್ ಕಿಂಗ್ಸ್ (CSK) ಈ ಬಾರಿ ಕೂಡ ಸ್ಟೀಫನ್ ಫ್ಲೆಮಿಂಗ್ ಅವರ ಸೇವೆಗಳೊಂದಿಗೆ ಮುಂದುವರಿಸಲಿದೆ. ಏಕೆಂದರೆ ಕಳೆದ ಸೀಸನ್​ನಲ್ಲಿ ಸಿಎಸ್​ಕೆ ಚಾಂಪಿಯನ್​ ಆಗುವಲ್ಲಿ ಫ್ಲೆಮಿಂಗ್ ಮಹತ್ತರ ಪಾತ್ರವಹಿಸಿದ್ದರು. ಹೀಗಾಗಿ ಈ ಬಾರಿ ಕೂಡ ಸಿಎಸ್​ಕೆ ಧೋನಿ-ಫ್ಲೆಮಿಂಗ್ ಜೋಡಿಯನ್ನೇ ಮುಂದುವರೆಸಲಿದೆ.

ರಾಜಸ್ಥಾನ್ ರಾಯಲ್ಸ್​: ಕುಮಾರ್ ಸಂಗಕ್ಕಾರ- ಶ್ರೀಲಂಕಾದ ದಿಗ್ಗಜ ಕುಮಾರ ಸಂಗಕ್ಕಾರ ಅವರನ್ನು ‘ರಾಜಸ್ಥಾನ್ ರಾಯಲ್ಸ್ ಡೈರೆಕ್ಟರ್ ಆಫ್ ಕ್ರಿಕೆಟ್’ನಿಂದ ಮುಖ್ಯ ಕೋಚ್ ಆಗಿ ನೇಮಕ ಮಾಡಿದೆ. ಇದೀಗ ಆರ್​ಆರ್ ತಂಡದ ಟ್ರಯಲ್ಸ್​ನಲ್ಲಿ ಸಂಗಕ್ಕಾರ ಕಾಣಿಸಿಕೊಂಡಿದ್ದು, ಹೀಗಾಗಿ ಕೋಚ್ ಆಗಿ ಕುಮಾರ್ ಸಂಗಕ್ಕಾರ ಮುಂದುವರೆಯಲಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್​: ರಿಕಿ ಪಾಂಟಿಂಗ್- ಕಳೆದ ಕೆಲವು ಸೀಸನ್​ಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಯಶಸ್ಸಿನ ಹಿಂದೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರ ಮಾಸ್ಟರ್ ಪ್ಲ್ಯಾನ್ ಅಡಗಿದೆ. ಐಪಿಎಲ್ 2020 ರಲ್ಲಿ ಫೈನಲ್‌ಗೆ ಪ್ರವೇಶಿಸಿದ್ದ ಡೆಲ್ಲಿ ಆ ಬಳಿಕ ಎರಡು ಸೀಸನ್​ನಲ್ಲಿ ಪ್ಲೇಆಫ್ ಪ್ರವೇಶಿಸಿತ್ತು. ಹೀಗಾಗಿ ರಿಕಿ ಪಾಂಟಿಂಗ್ ಅವರನ್ನೇ ಕೋಚ್ ಆಗಿ ಮುಂದುವರೆಸಲು ಡೆಲ್ಲಿ ಫ್ರಾಂಚೈಸಿ ಮುಂದಾಗಿದೆ.

ಸನ್​ರೈಸರ್ಸ್​ ಹೈದರಾಬಾದ್: ಟಾಮ್ ಮೂಡಿ- ಸನ್‌ರೈಸರ್ಸ್ ಹೈದರಾಬಾದ್ ತಂಡವು ಮುಂದಿನ ಸೀಸನ್​ನಲ್ಲಿ ತಮ್ಮ ಹಳೆಯ ಕೋಚ್ ಟಾಮ್ ಮೂಡಿ ಅವರನ್ನೇ ಮತ್ತೊಮ್ಮೆ ನೇಮಕ ಮಾಡಿದೆ. ಅದರಂತೆ ಈ ಬಾರಿ ಮತ್ತೆ ಎಸ್​ಆರ್​ಹೆಚ್ ತಂಡವು ಪುಟಿದೇಳುವ ವಿಶ್ವಾಸದಲ್ಲಿದೆ ಫ್ರಾಂಚೈಸಿ.

ಮುಂಬೈ ಇಂಡಿಯನ್ಸ್​: ಮಹೇಲಾ ಜಯವರ್ಧನೆ- ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಮಹೇಲಾ ಜಯವರ್ಧನೆ ಅವರನ್ನೇ ಈ ಬಾರಿ ಕೂಡ ಮುಂದುವರೆಸಲು ಮುಂಬೈ ಫ್ರಾಂಚೈಸಿ ಬಯಸಿದೆ. ಏಕೆಂದರೆ 2020ರಲ್ಲಿ ಜಯವರ್ಧನೆ ಕೋಚಿಂಗ್​ನಲ್ಲಿ ಟೀಮ್ ಚಾಂಪಿಯನ್​ ಪಟ್ಟಕ್ಕೇರಿತ್ತು. ಇದಾಗ್ಯೂ ಕಳೆದ ಸೀಸನ್​ನಲ್ಲಿ ವೈಫಲ್ಯವನ್ನು ಬದಿಗಿಟ್ಟು ಲಂಕಾ ಮಾಜಿ ನಾಯಕನನ್ನೇ ಕೋಚ್ ಆಗಿ ಮುಂದುವರೆಸಲು ನಿರ್ಧರಿಸಲಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸಂಜಯ್ ಬಂಗಾರ್- ಕಳೆದ ಸೀಸನ್​ನಲ್ಲಿ RCB ತಂಡದ ಬ್ಯಾಟಿಂಗ್ ಸಲಹೆಗಾರರಾಗಿದ್ದ ಸಂಜಯ್ ಬಂಗಾರ್ ಅವರನ್ನು ಮುಂದಿನ ಸೀಸನ್​ಗೆ ಮುಖ್ಯ ಕೋಚ್ ಆಗಿ ಆಯ್ಕೆ ಮಾಡಲಾಗಿದೆ.

ಕೊಲ್ಕತ್ತಾ ನೈಟ್​ ರೈಡರ್ಸ್: ಬ್ರೆಂಡನ್ ಮೆಕಲಮ್- ಕೊಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮೆಕಲಮ್ ಅವರ ಕೋಚಿಂಗ್​ನಲ್ಲಿ ಐಪಿಎಲ್ 2021 ರ ಫೈನಲ್‌ಗೆ ಪ್ರವೇಶಿಸಿತ್ತು. ಹೀಗಾಗಿ ನ್ಯೂಜಿಲೆಂಡ್​ನ ಮಾಜಿ ನಾಯಕನನ್ನೇ ಕೋಚ್ ಆಗಿ ಮುಂದುವರೆಸಲಿದೆ.

ಪಂಜಾಬ್ ಕಿಂಗ್ಸ್​: ಅನಿಲ್ ಕುಂಬ್ಳೆ- ಪಂಜಾಬ್ ಕಿಂಗ್ಸ್ ತಂಡವು ಮುಂದಿನ ಸೀಸನ್​ನಲ್ಲೂ ಅನಿಲ್ ಕುಂಬ್ಳೆ ಅವರನ್ನೇ ಕೋಚ್ ಆಗಿ ಮುಂದುವರೆಸಲಿದೆ. ಇದೇ ಕಾರಣದಿಂದಾಗಿ ಆಟಗಾರರ ರಿಟೈನ್ ಪ್ರಕ್ರಿಯೆ ವೇಳೆ ಪಂಜಾಬ್ ಕಿಂಗ್ಸ್​ ಪರ ಅನಿಲ್ ಕುಂಬ್ಳೆ ಕಾಣಿಸಿಕೊಂಡಿದ್ದರು.

ಅಹಮದಾಬಾದ್ ತಂಡ: ಆಶಿಶ್ ನೆಹ್ರಾ- ಭಾರತದ ಮಾಜಿ ವೇಗದ ಬೌಲರ್ ಆಶಿಶ್ ನೆಹ್ರಾ ಅವರನ್ನು ಅಹಮದಾಬಾದ್ ಫ್ರಾಂಚೈಸಿಯ ಮುಖ್ಯ ಕೋಚ್ ಆಗಿ ನೇಮಕ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಮೌಖಿಕ ಒಪ್ಪಂದದ ಹೊರತಾಗಿ ಹೊಸ ತಂಡದ ಮಾಲೀಕರು ಇನ್ನೂ ಕೂಡ ಈ ಬಗ್ಗೆ ಅಧಿಕೃತ ಪ್ರಕಟಣೆಯನ್ನು ಹೊರಡಿಸಿಲ್ಲ. ಇದಾಗ್ಯೂ ನೆಹ್ರಾ ಅವರೊಂದಿಗೆ ಅಹಮದಾಬಾದ್ ಫ್ರಾಂಚೈಸಿ ಮಾತುಕತೆ ನಡೆಸಿದ್ದು, ಅದರಂತೆ ಕೋಚ್ ಆಗಿ ಟೀಮ್ ಇಂಡಿಯಾ ಮಾಜಿ ವೇಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ:  Virat Kohli: ವಿರಾಟ್ ಕೊಹ್ಲಿಯ ಗಾಯ, ರಾಹುಲ್ ದ್ರಾವಿಡ್ ಹೇಳಿಕೆ ಮತ್ತು 100ನೇ ಟೆಸ್ಟ್​..!

ಇದನ್ನೂ ಓದಿ:  Ravindra Jadeja: ಸ್ಟಾರ್ ಆಲ್​ರೌಂಡರ್ ಜಡೇಜಾರನ್ನು ಆಯ್ಕೆ ಮಾಡದಿರಲು ಇದುವೇ ಕಾರಣ..!

ಇದನ್ನೂ ಓದಿ: Rohit Sharma: ಫಿಟ್​ನೆಸ್​ ಅಥವಾ ಇನ್ನೇನಾದರೂ? ರೋಹಿತ್ ಶರ್ಮಾ ಕೈ ಬಿಡಲು ಕಾರಣವೇನು?

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?