IPL 2022 Auction: 8.35 ಕೋಟಿ ಕಡಿಮೆ ಮೊತ್ತಕ್ಕೆ ಹರಾಜಾದ ಕನ್ನಡಿಗ

| Updated By: ಝಾಹಿರ್ ಯೂಸುಫ್

Updated on: Feb 13, 2022 | 1:30 PM

IPL 2022 Auction: ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿ ಕೆಎಲ್ ರಾಹುಲ್ ಇದ್ದಾರೆ.ಇದೀಗ ಡಿಕಾಕ್, ಮನೀಷ್ ಪಾಂಡೆ, ಜೇಸನ್ ಹೋಲ್ಡರ್ ದೀಪಕ್ ಹೂಡಾ, ಕೃಷ್ಣಪ್ಪ ಗೌತಮ್, ಅವೇಶ್ ಖಾನ್ ಹಾಗೂ ಕೃನಾಲ್ ಪಾಂಡ್ಯರಂತಹ ಸ್ಟಾರ್ ಲಕ್ನೋ ತಂಡದ ಪಾಲಾಗಿದ್ದಾರೆ.

IPL 2022 Auction: 8.35 ಕೋಟಿ ಕಡಿಮೆ ಮೊತ್ತಕ್ಕೆ ಹರಾಜಾದ ಕನ್ನಡಿಗ
Krishnappa Gowtham
Follow us on

ಐಪಿಎಲ್ ಸೀಸನ್​ 15 ಮೆಗಾ ಹರಾಜಿನ 2ನೇ ದಿನದಲ್ಲೂ ಫ್ರಾಂಚೈಸಿಗಳ ನಡುವೆ ಭರ್ಜರಿ ಪೈಪೋಟಿ ಕಂಡು ಬರುತ್ತಿದೆ. ಈಗಾಗಲೇ ಆಲ್​ರೌಂಡರ್​ಗಳ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದೆ. ಈ ಸುತ್ತಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ಕನ್ನಡಿಗ ಕೃಷ್ಣಪ್ಪ ಗೌತಮ್ ಅವರನ್ನು 90 ಲಕ್ಷಕ್ಕೆ ಖರೀದಿಸಿದೆ. ಇಲ್ಲಿ ವಿಶೇಷ ಎಂದರೆ ಕಳೆದ ಸೀಸನ್​ನಲ್ಲಿ ಅತೀ ಹೆಚ್ಚು ಮೊತ್ತಕ್ಕೆ ಹರಾಜಾದ ಭಾರತೀಯ ಆಟಗಾರ ಎಂಬ ದಾಖಲೆ ಕೃಷ್ಣಪ್ಪ ಗೌತಮ್ ಬರೆದಿದ್ದರು. ಕೆ. ಗೌತಮ್ ಅವರನ್ನು ಕಳೆದ ಸೀಸನ್​​ನಲ್ಲಿ ಸಿಎಸ್​ಕೆ ಬರೋಬ್ಬರಿ 9.25 ಕೋಟಿ ನೀಡಿ ಖರೀದಿಸಿತ್ತು. ಆದರೆ ಈ ಬಾರಿ ಕೃಷ್ಣಪ್ಪ ಗೌತಮ್ ಹರಾಜಾಗಿರುವುದು ಕೇವಲ 90 ಲಕ್ಷ ರೂ. ಗೆ ಎಂಬುದು ವಿಶೇಷ. ಅಂದರೆ ಕಳೆದ ಬಾರಿಗಿಂತ 8 ಕೋಟಿ 35 ಲಕ್ಷ ರೂ. ಕಡಿಮೆ ಮೊತ್ತ ಪಡೆದಿದ್ದಾರೆ.

ಇದಕ್ಕೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್​ ತಂಡವು ಕ್ವಿಂಟನ್ ಡಿಕಾಕ್ ( 6.75 ಕೋಟಿ), ಕನ್ನಡಿಗ ಮನೀಷ್ ಪಾಂಡೆ(4.60 ಕೋಟಿ) ಯನ್ನು ಸಹ ಖರೀದಿಸಿದೆ. ಅಷ್ಟೇ ಅಲ್ಲದೆ ವೆಸ್ಟ್ ಇಂಡೀಸ್​ನ ಜೇಸನ್ ಹೋಲ್ಡರ್ ಕೂಡ 8.75 ಕೋಟಿಗೆ ಲಕ್ನೋ ಪಾಲಾಗಿದೆ. ಹಾಗೆಯೇ ಟೀಮ್ ಇಂಡಿಯಾ ಆಟಗಾರ ದೀಪಕ್ ಹೂಡಾ ( 5.75 ಕೋಟಿ) ಕೂಡ ಲಕ್ನೋ ಸೂಪರ್ ಜೈಂಟ್ಸ್​ ಪಾಲಾಗಿದ್ದಾರೆ. ವಿಶೇಷ ಎಂದರೆ ದೀಪಕ್ ಹೂಡಾ ಹಾಗೂ ಜೇಸನ್ ಹೋಲ್ಡರ್ ಆಲ್​ರೌಂಡರ್​ಗಳು. ಇವರ ಜೊತೆಗೆ ಆಲ್​ರೌಂಡರ್​ ಕೃನಾಲ್ ಪಾಂಡ್ಯರನ್ನು ಕೂಡ 8.25 ಕೋಟಿ ನೀಡಿ ಲಕ್ನೋ ಖರೀದಿಸಿದೆ.

ಇದೀಗ ಆಲ್​ರೌಂಡರ್ ಕೃಷ್ಣಪ್ಪ ಗೌತಮ್ ಅವರನ್ನೂ ಸಹ ಲಕ್ನೋ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಈ ಹಿಂದೆ ಲಕ್ನೋ ಆಸ್ಟ್ರೇಲಿಯಾದ ಆಲ್​ರೌಂಡರ್ ಮಾರ್ಕಸ್ ಸ್ಟೋಯಿನಿಸ್ ರನ್ನು ಆಯ್ಕೆ ಮಾಡಿಕೊಂಡಿತು. ಇದೀಗ ಆಲ್​ರೌಂಡರ್​ಗಳಾದ ಜೇಸನ್ ಹೋಲ್ಡರ್, ದೀಪಕ್ ಹೂಡಾ, ಕೃನಾಲ್ ಪಾಂಡ್ಯ ಹಾಗೂ ಕೃಷ್ಣಪ್ಪ ಗೌತಮ್ ಕೂಡ ಲಕ್ನೋ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಇನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿ ಕೆಎಲ್ ರಾಹುಲ್ ಇದ್ದಾರೆ.ಇದೀಗ ಡಿಕಾಕ್, ಮನೀಷ್ ಪಾಂಡೆ, ಜೇಸನ್ ಹೋಲ್ಡರ್ ದೀಪಕ್ ಹೂಡಾ, ಕೃಷ್ಣಪ್ಪ ಗೌತಮ್, ಅವೇಶ್ ಖಾನ್ ಹಾಗೂ ಕೃನಾಲ್ ಪಾಂಡ್ಯರಂತಹ ಸ್ಟಾರ್ ಲಕ್ನೋ ತಂಡದ ಪಾಲಾಗಿದ್ದಾರೆ. ಹಾಗೆಯೇ ಸ್ಪೆಷಲ್ ಪಿಕ್ ಆಯ್ಕೆಯ ಮೂಲಕ ರವಿ ಬಿಷ್ನೋಯ್​ ಅವರನ್ನು ಆಯ್ಕೆ ಮಾಡಿಕೊಂಡಿದೆ. ಇನ್ನು ತಂಡದ ಕೋಚ್ ಆಗಿ ಜಿಂಬಾಬ್ವೆಯ ಮಾಜಿ ಆಟಗಾರ ಆ್ಯಂಡಿ ಫ್ಲವರ್ ಇದ್ದಾರೆ. ಜೊತೆಗೆ ತಂಡದ ಮೆಂಟರ್​ ಆಗಿ ಗೌತಮ್ ಗಂಭೀರ್ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: IPL 2022 RCB Players: Rcb ತಂಡಕ್ಕೆ ಎಂಟ್ರಿ ಕೊಟ್ಟ ಹೊಸ ಆಟಗಾರರು ಇವರೇ..!

ಇದನ್ನೂ ಓದಿ: IPL 2022 Auction: ಹರಾಜಾದ ಮತ್ತು ಹರಾಜಾಗದ ಆಟಗಾರರ ಸಂಪೂರ್ಣ ಪಟ್ಟಿ ಹೀಗಿದೆ

(IPL 2022 Auction: Krishnappa Gowtham Sold To LSG)

Published On - 1:27 pm, Sun, 13 February 22