ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜು (IPL 2022 Auction) ಇಂದು ಮತ್ತು ನಾಳೆ (ಫೆ.12, 13) ನಡೆಯಲಿದೆ. ಈ ಬಾರಿ ಹರಾಜಿನಲ್ಲಿ ಒಟ್ಟು 590 ಆಟಗಾರರಿದ್ದಾರೆ. ಇವರಲ್ಲಿ 217 ಆಟಗಾರರಿಗೆ ಅವಕಾಶ ಸಿಗಲಿದೆ. ಏಕೆಂದರೆ ಈಗಾಗಲೇ 10 ತಂಡಗಳು ಒಟ್ಟು 33 ಆಟಗಾರರನ್ನು ಉಳಿಸಿಕೊಂಡಿದೆ. ಅಂದರೆ ಒಂದು ತಂಡವು ಗರಿಷ್ಠ 25 ಆಟಗಾರರನ್ನು ಖರೀದಿಸಬಹುದು. ಅದರಂತೆ ಇದೀಗ ಉಳಿದಿರುವುದು 217 ಸ್ಥಾನಗಳು ಮಾತ್ರ. ಇಲ್ಲಿ ವಿದೇಶಿ ಆಟಗಾರರ ಖರೀದಿಗೂ ನಿಯಮವಿದೆ. ಅಂದರೆ ಒಂದು ಫ್ರಾಂಚೈಸಿ ಒಟ್ಟು 8 ವಿದೇಶಿ ಆಟಗಾರರನ್ನು ಮಾತ್ರ ಖರೀದಿಸಬಹುದು. 8 ಕ್ಕಿಂತ ಕಡಿಮೆ ಆಟಗಾರರನ್ನು ಖರೀದಿಸುವ ಅವಕಾಶವಿದ್ದರೂ, 8 ಕ್ಕಿಂತ ಹೆಚ್ಚಿನ ಆಟಗಾರರನ್ನು ಖರೀದಿಸುವಂತಿಲ್ಲ. ಈಗಾಗಲೇ 10 ತಂಡಗಳು ಕೆಲ ವಿದೇಶಿ ಆಟಗಾರರನ್ನು ರಿಟೈನ್ ಮಾಡಿಕೊಂಡಿದ್ದು, ಅದರಂತೆ ಮೆಗಾ ಹರಾಜಿನಲ್ಲಿ ಯಾವ ತಂಡ ಎಷ್ಟು ವಿದೇಶಿ ಆಟಗಾರರನ್ನು ಖರೀದಿಸಬಹುದು ಎಂದು ನೋಡೋಣ…
ಮುಂಬೈ ಇಂಡಿಯನ್ಸ್ – 7
ಚೆನ್ನೈ ಸೂಪರ್ ಕಿಂಗ್ಸ್- 7
ರಾಜಸ್ಥಾನ್ ರಾಯಲ್ಸ್ – 7
ಪಂಜಾಬ್ ಕಿಂಗ್ಸ್- 8
ಸನ್ ರೈಸರ್ಸ್ ಹೈದರಾಬಾದ್- 7
ಕೋಲ್ಕತ್ತಾ ನೈಟ್ ರೈಡರ್ಸ್- 6
ಡೆಲ್ಲಿ ಕ್ಯಾಪಿಟಲ್ಸ್ – 7
ರಾಯಲ್ ಚಾಲೆಂಜರ್ಸ್ ಬೆಂಗಳೂರು- 7
ಲಕ್ನೋ ಸೂಪರ್ ಜೈಂಟ್ಸ್- 7
ಗುಜರಾತ್ ಟೈಟಾನ್ಸ್ – 7
ಉಳಿಸಿಕೊಂಡಿರುವ ಆಟಗಾರರ ಪಟ್ಟಿ:
ಚೆನ್ನೈ ಸೂಪರ್ ಕಿಂಗ್ಸ್ (CSK) : ರವೀಂದ್ರ ಜಡೇಜಾ (16 ಕೋಟಿ), ಎಂಎಸ್ ಧೋನಿ (12 ಕೋಟಿ), ಮೊಯಿನ್ ಅಲಿ (8 ಕೋಟಿ), ರುತುರಾಜ್ ಗಾಯಕ್ವಾಡ್ (6 ಕೋಟಿ)
ಉಳಿದಿರುವ ಹರಾಜು ಮೊತ್ತ: 48 ಕೋಟಿ ರೂ
ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) : ಆಂಡ್ರೆ ರಸೆಲ್ (12 ಕೋಟಿ), ವರುಣ್ ಚಕ್ರವರ್ತಿ (8 ಕೋಟಿ), ವೆಂಕಟೇಶ್ ಅಯ್ಯರ್ (8 ಕೋಟಿ), ಸುನಿಲ್ ನರೈನ್ (6 ಕೋಟಿ)
ಉಳಿದಿರುವ ಹರಾಜು ಮೊತ್ತ: 48 ಕೋಟಿ ರೂ
ಸನ್‌ರೈಸರ್ಸ್ ಹೈದರಾಬಾದ್ (SRH) : ಕೇನ್ ವಿಲಿಯಮ್ಸನ್ (14 ಕೋಟಿ), ಅಬ್ದುಲ್ ಸಮದ್ (4 ಕೋಟಿ), ಉಮ್ರಾನ್ ಮಲಿಕ್ (4 ಕೋಟಿ)
ಉಳಿದಿರುವ ಹರಾಜು ಮೊತ್ತ: 68 ಕೋಟಿ ರೂ
ಮುಂಬೈ ಇಂಡಿಯನ್ಸ್ (MI) : ರೋಹಿತ್ ಶರ್ಮಾ (16 ಕೋಟಿ), ಜಸ್ಪ್ರೀತ್ ಬುಮ್ರಾ (12 ಕೋಟಿ), ಸೂರ್ಯಕುಮಾರ್ ಯಾದವ್ (8 ಕೋಟಿ), ಕೀರಾನ್ ಪೊಲಾರ್ಡ್ (6 ಕೋಟಿ)
ಉಳಿದಿರುವ ಹರಾಜು ಮೊತ್ತ: 48 ಕೋಟಿ ರೂ
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB): ವಿರಾಟ್ ಕೊಹ್ಲಿ (15 ಕೋಟಿ), ಗ್ಲೆನ್ ಮ್ಯಾಕ್ಸ್‌ವೆಲ್ (11 ಕೋಟಿ), ಮೊಹಮ್ಮದ್ ಸಿರಾಜ್ (7 ಕೋಟಿ)
ಉಳಿದಿರುವ ಹರಾಜು ಮೊತ್ತ: 57 ಕೋಟಿ
ಡೆಲ್ಲಿ ಕ್ಯಾಪಿಟಲ್ಸ್ (DC) : ರಿಷಬ್ ಪಂತ್ (16 ಕೋಟಿ), ಅಕ್ಷರ್ ಪಟೇಲ್ (9 ಕೋಟಿ), ಪೃಥ್ವಿ ಶಾ (7.5 ಕೋಟಿ), ಅನ್ರಿಕ್ ನೋಕಿಯಾ (6.5 ಕೋಟಿ)
ಉಳಿದಿರುವ ಹರಾಜು ಮೊತ್ತ: 47.5 ಕೋಟಿ ರೂ.
ರಾಜಸ್ಥಾನ್ ರಾಯಲ್ಸ್ (RR) : ಸಂಜು ಸ್ಯಾಮ್ಸನ್ (14 ಕೋಟಿ), ಜೋಸ್ ಬಟ್ಲರ್ (10 ಕೋಟಿ), ಯಶಸ್ವಿ ಜೈಸ್ವಾಲ್ (4 ಕೋಟಿ)
ಉಳಿದಿರುವ ಹರಾಜು ಮೊತ್ತ: 62 ಕೋಟಿ ರೂ
ಪಂಜಾಬ್ ಕಿಂಗ್ಸ್ (PBKS): ಮಯಾಂಕ್ ಅಗರ್ವಾಲ್ (12 ಕೋಟಿ, 14 ಕೋಟಿ ಪರ್ಸ್‌ನಿಂದ ಕಡಿತಗೊಳಿಸಲಾಗುವುದು), ಅರ್ಷದೀಪ್ ಸಿಂಗ್ (4 ಕೋಟಿ)
ಉಳಿದಿರುವ ಹರಾಜು ಮೊತ್ತ: 72 ಕೋಟಿ ರೂ
ಗುಜರಾತ್ ಟೈಟಾನ್ಸ್ (GT): ಹಾರ್ದಿಕ್ ಪಾಂಡ್ಯ (15 ಕೋಟಿ), ರಶೀದ್ ಖಾನ್ (15 ಕೋಟಿ), ಶುಭಮನ್ ಗಿಲ್ (8 ಕೋಟಿ).
ಉಳಿದಿರುವ ಹರಾಜು ಮೊತ್ತ: 52 ಕೋಟಿ
ಲಕ್ನೋ ಸೂಪರ್ ಜೈಂಟ್ಸ್ (LSG): ಕೆಎಲ್ ರಾಹುಲ್ (17 ಕೋಟಿ), ಮಾರ್ಕಸ್ ಸ್ಟೋನಿಸ್ (9.2 ಕೋಟಿ) ರವಿ ಬಿಷ್ಣೋಯ್ (4 ಕೋಟಿ).
ಉಳಿದಿರುವ ಹರಾಜು ಮೊತ್ತ: 58 ಕೋಟಿ
ಇದನ್ನೂ ಓದಿ: IPL 2022 auction: ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 590 ಆಟಗಾರರ ಹೆಸರು ಇಲ್ಲಿದೆ
ಇದನ್ನೂ ಓದಿ: IPL 2022: ಐಪಿಎಲ್ ಹರಾಜಿನಲ್ಲಿ ಅತೀ ಹೆಚ್ಚು ಮೊತ್ತ ಖರ್ಚು ಮಾಡಿದ ತಂಡ ಯಾವುದು ಗೊತ್ತಾ?
ಇದನ್ನೂ ಓದಿ: Rohit Sharma: ಸಚಿನ್ ದಾಖಲೆ ಮುರಿದ ಹಿಟ್ಮ್ಯಾನ್ ರೋಹಿತ್ ಶರ್ಮಾ
Published On - 11:53 am, Sat, 12 February 22