IPL 2022 Auction: 9 ಕೋಟಿಯಲ್ಲಿ 7 ಆಟಗಾರರ ಟಾರ್ಗೆಟ್: RCBಗೆ ಸಂಕಷ್ಟ ಶುರು

| Updated By: ಝಾಹಿರ್ ಯೂಸುಫ್

Updated on: Feb 13, 2022 | 11:56 AM

IPL 2022 Auction: ಶಹಬಾಜ್ ಅಹಮದ್ ಅವರನ್ನು 2. 40 ಕೋಟಿ ರೂ.ಗೆ ಹಾಗೂ ಆಕಾಶ್ ದೀಪ್ ಅವರನ್ನು 20 ಲಕ್ಷ ರೂ.ಗೆ ಆರ್​ಸಿಬಿ ಖರೀದಿಸಿದೆ. ಅಲ್ಲಿಗೆ ಮೊದಲ ದಿನವೇ ಆರ್​ಸಿಬಿ ತಂಡವು ಕೇವಲ 8 ಆಟಗಾರರಿಗೆ 47 ಕೋಟಿ 75 ಲಕ್ಷ ರೂ. ಖರ್ಚು ಮಾಡಿದೆ.

IPL 2022 Auction: 9 ಕೋಟಿಯಲ್ಲಿ 7 ಆಟಗಾರರ ಟಾರ್ಗೆಟ್: RCBಗೆ ಸಂಕಷ್ಟ ಶುರು
Rcb
Follow us on

ಐಪಿಎಲ್ ಮೆಗಾ ಹರಾಜಿನ ಮೊದಲ ದಿನದಲ್ಲಿ 96 ಆಟಗಾರರು ಹರಾಜಾಗಿದ್ದಾರೆ. ಇವರಲ್ಲಿ ಕೆಲ ಆಟಗಾರರು ಹರಾಜಾಗದೇ ಉಳಿದರೇ, ಬಹುತೇಕ ಆಟಗಾರರನ್ನು ಬಿಕರಿಯಾಗಿದ್ದಾರೆ. ಹೀಗೆ ಆರ್​ಸಿಬಿ ಕೂಡ ಮೊದಲ ದಿನ 8 ಆಟಗಾರರನ್ನು ಖರೀದಿಸಿದೆ. ಅಚ್ಚರಿ ಎಂದರೆ 57 ಕೋಟಿಯೊಂದಿಗೆ ಹರಾಜಿನಲ್ಲಿ ಕಾಣಿಸಿಕೊಂಡ ಆರ್​ಸಿಬಿ ಮೊದಲ ದಿನವೇ ಬಹುತೇಕ ಮೊತ್ತವನ್ನು ಖರ್ಚು ಮಾಡಿದೆ.

ಅಂದರೆ ಆರ್​ಸಿಬಿ ಖರೀದಿಸಿದ ಮೊದಲ ಆಟಗಾರ ಫಾಫ್​ ಡುಪ್ಲೆಸಿಸ್​ಗೆ 7 ಕೋಟಿ ನೀಡಿದರೆ, ಹರ್ಷಲ್ ಪಟೇಲ್​ಗೆ 10.75 ಕೋಟಿ ನೀಡಿದೆ. ಅಚ್ಚರಿ ಎಂದರೆ ಆರ್​ಸಿಬಿ ವನಿಂದು ಹಸರಂಗ ಅವರನ್ನು 10.75 ಕೋಟಿ ನೀಡಿ ಖರೀದಿಸಿರುವುದು. ಇನ್ನು ದಿನೇಶ್ ಕಾರ್ತಿಕ್ 5.50 ಕೋಟಿ ನೀಡಿದೆ. ಹಾಗೆಯೇ ಯುವ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಅನೂಜ್ ರಾವತ್​ ಅವರನ್ನೂ ಕೂಡ 3.40 ಕೋಟಿ ನೀಡಿ ಖರೀದಿಸಿ ಅಚ್ಚರಿ ಮೂಡಿಸಿದೆ. ಇನ್ನು ಆಸ್ಟ್ರೇಲಿಯಾ ವೇಗಿ ಜೋಶ್ ಹ್ಯಾಝಲ್​ವುಡ್ ಅವರನ್ನು​ 7.75 ಕೋಟಿ ರೂ. ನೀಡಿ ತನ್ನದಾಗಿಸಿಕೊಂಡಿದೆ.

ಇನ್ನು ಶಹಬಾಜ್ ಅಹಮದ್ ಅವರನ್ನು 2. 40 ಕೋಟಿ ರೂ.ಗೆ ಹಾಗೂ ಆಕಾಶ್ ದೀಪ್ ಅವರನ್ನು 20 ಲಕ್ಷ ರೂ.ಗೆ ಆರ್​ಸಿಬಿ ಖರೀದಿಸಿದೆ. ಅಲ್ಲಿಗೆ ಮೊದಲ ದಿನವೇ ಆರ್​ಸಿಬಿ ತಂಡವು ಕೇವಲ 8 ಆಟಗಾರರಿಗೆ 47 ಕೋಟಿ 75 ಲಕ್ಷ ರೂ. ಖರ್ಚು ಮಾಡಿದೆ. ಇದೀಗ ರಿಟೈನ್ ಆಟಗಾರರು ಸೇರಿದಂತೆ ಆರ್​ಸಿಬಿ ತಂಡದಲ್ಲಿ 11 ಆಟಗಾರರಿದ್ದಾರೆ. ಆದರೆ ಐಪಿಎಲ್ ನಿಯಮದ ಪ್ರಕಾರ ಒಂದು ತಂಡದಲ್ಲಿ ಕನಿಷ್ಠ 18 ಆಟಗಾರರು ಇರಲೇಬೇಕು. ಅಂದರೆ ಆರ್​ಸಿಬಿಗೆ ಇನ್ನೂ 7 ಆಟಗಾರರ ಅವಶ್ಯಕತೆಯಿದೆ.

ಇದೀಗ ಆರ್​ಸಿಬಿ ಬಳಿ ಉಳಿದಿರುವುದು 9.25 ಕೋಟಿ ಮಾತ್ರ. ಅಂದರೆ ಈ ಮೊತ್ತದಲ್ಲಿ ಒಟ್ಟು 7 ಆಟಗಾರರನ್ನು ಖರೀದಿಸಬೇಕಾಗುತ್ತದೆ. ಒಂದು ವೇಳೆ ಸ್ಟಾರ್​ ಆಟಗಾರರಿಗಾಗಿ ಆರ್​ಸಿಬಿ ಬಿಡ್ ಮಾಡಿದರೂ ಎದುರಾಳಿ ತಂಡದಿಂದ ಪೈಪೋಟಿ ಕಂಡು ಬರಲಿದೆ. ಇದರಿಂದ ಕಡಿಮೆ ಮೊತ್ತಕ್ಕೆ ಉತ್ತಮ ಆಟಗಾರರು ಕೂಡ ಸಿಗುವುದು ಡೌಟ್. ಒಂದು ವೇಳೆ ಒಂದಿಬ್ಬರು ಸ್ಟಾರ್ ಆಟಗಾರರ ಖರೀದಿಗೆ ಆರ್​ಸಿಬಿ ದೊಡ್ಡ ಮೊತ್ತ ಪಾವತಿಸಿದರೂ, ಆ ಬಳಿಕ ಕಡಿಮೆ ಮೊತ್ತ ಬೇಸ್ ಪ್ರೈಸ್ ಹೊಂದಿರುವ ಯುವ ಆಟಗಾರರ ಮೊರೆ ಹೋಗಬೇಕಾಗುತ್ತದೆ.

ಮೊದಲ ದಿನವೇ ಬಹುತೇಕ ಹಣ ಖರ್ಚು ಮಾಡಿರುವ ಆರ್​ಸಿಬಿಗೆ ಇದೀಗ 18 ಆಟಗಾರರನ್ನು ಕಂಪ್ಲೀಟ್ ಮಾಡುವುದು ದೊಡ್ಡ ಸವಾಲು. ಅದರಲ್ಲಿ ಸ್ಟಾರ್​ ಆಟಗಾರರನ್ನು ಟಾರ್ಗೆಟ್ ಮಾಡುವುದು ಅತೀ ದೊಡ್ಡ ಸವಾಲು ಎಂದೇ ಹೇಳಬಹುದು. ಒಟ್ಟಿನಲ್ಲಿ 9.25 ಕೋಟಿ ರೂ. ಹೊಂದಿರುವ ಆರ್​ಸಿಬಿ 2ನೇ ದಿನ ಹೇಗೆ ಬಿಡ್ಡಿಂಗ್ ನಡೆಸಲಿದೆ ಎಂಬುದೇ ಈಗ ಕುತೂಹಲ.

ಇದನ್ನೂ ಓದಿ: IPL 2022 RCB Players: Rcb ತಂಡಕ್ಕೆ ಎಂಟ್ರಿ ಕೊಟ್ಟ ಹೊಸ ಆಟಗಾರರು ಇವರೇ..!

ಇದನ್ನೂ ಓದಿ: IPL 2022 Auction: ಹರಾಜಾದ ಮತ್ತು ಹರಾಜಾಗದ ಆಟಗಾರರ ಸಂಪೂರ್ಣ ಪಟ್ಟಿ ಹೀಗಿದೆ

(IPL 2022 Auction: Rcb Purse remaining)