IPL 2022: ರಂಗೇರಲಿದೆ ಈ ಬಾರಿಯ ಐಪಿಎಲ್​ ಫೈನಲ್

| Updated By: ಝಾಹಿರ್ ಯೂಸುಫ್

Updated on: Apr 16, 2022 | 5:00 PM

IPL 2022: 2019 ರಲ್ಲಿ ಮೊದಲ ಬಾರಿಗೆ ಐಪಿಎಲ್ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿಲ್ಲ. ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಲ್ಲದೆ ಈ ಹಣವನ್ನು ಹುತಾತ್ಮ ಯೋಧರ ಕುಟುಂಬಗಳಿಗೆ ನೀಡಲು ಮಂಡಳಿ ನಿರ್ಧರಿಸಿತ್ತು.

IPL 2022: ರಂಗೇರಲಿದೆ ಈ ಬಾರಿಯ ಐಪಿಎಲ್​ ಫೈನಲ್
IPL 2022
Follow us on

IPL 2022: ಐಪಿಎಲ್ ಸೀಸನ್ 15 ಇಲ್ಲಿಯವರೆಗೆ ಯಾವುದೇ ಆತಂಕವಿಲ್ಲದೆ ಜರುಗಿದೆ. ಕೊರೋನಾ ಕಾರಣದಿಂದ ಈ ಬಾರಿ ನಾಲ್ಕು ಸ್ಟೇಡಿಯಂಗಳಲ್ಲಿ ಮಾತ್ರ ಟೂರ್ನಿ ನಡೆಯುತ್ತಿದೆ. ಮತ್ತೊಂದೆಡೆ ಶೇ.50 ರಷ್ಟು ಪ್ರೇಕ್ಷಕರಿಗೂ ಅವಕಾಶ ನೀಡಲಾಗಿದೆ. ಈ ಬಾರಿ ಒಟ್ಟು 10 ತಂಡಗಳಿರುವ ಕಾರಣ ಪಂದ್ಯಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಅದರಂತೆ ಟೂರ್ನಿಯಲ್ಲಿ ಭರ್ಜರಿ ಪೈಪೋಟಿ ಕಂಡು ಬರುತ್ತಿದೆ. ಇನ್ನು ಫೈನಲ್​ ಪಂದ್ಯವು ಮೇ 29 ರಂದು ನಡೆಯಲಿದ್ದು, ಈ ವೇಳೆ ವಿಶೇಷ ಕಾರ್ಯಕ್ರಮ ನಡೆಸಲು ಬಿಸಿಸಿಐ ಪ್ಲ್ಯಾನ್ ರೂಪಿಸಿದೆ. ಅದರಂತೆ ಈ ಬಾರಿಯ ಐಪಿಎಲ್​ನ ಫೈನಲ್ ಡೇ ಸಮಾರೋಪ ಸಮಾರಂಭಗಳು ನಡೆಯಲಿದೆ. 2018 ರಿಂದ ಐಪಿಎಲ್​ನಲ್ಲಿ ಉದ್ಘಾಟನಾ ಮತ್ತು ಸಮಾರೋಪ ಸಮಾರಂಭಗಳು ನಡೆಯುತ್ತಿಲ್ಲ. ಆದರೆ ಈ ವರ್ಷ ಸಮಾರೋಪ ಸಮಾರಂಭವನ್ನು ಆಯೋಜಿಸಲು ಮಂಡಳಿ ನಿರ್ಧರಿಸಿದೆ. ಇದಕ್ಕಾಗಿ ಮಂಡಳಿ ಟೆಂಡರ್‌ ಕೂಡ ಆಹ್ವಾನಿಸಿದೆ.

ಕೊರೋನಾ ಭೀತಿ ಹಿನ್ನೆಲೆಯಲ್ಲಿ ಪ್ರಸಕ್ತ ಸೀಸನ್​ನಲ್ಲಿ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿಲ್ಲ. ಇದಾಗ್ಯೂ ಅದ್ದೂರಿಯಾಗಿ ಸಮಾರೋಪ ಸಮಾರಂಭ ನಡೆಸಲು ಬಿಸಿಸಿಐ ನಿರ್ಧರಿಸಿದೆ. ಇದರಿಂದ ಬಿಸಿಸಿಐಗೆ ಮತ್ತಷ್ಟು ಆದಾಯ ಬರಲಿದೆ. ಇದಕ್ಕಾಗಿ ಈಗಾಗಲೇ ಪ್ರಾಯೋಜಕತ್ವ ಟೆಂಡರ್ ಅನ್ನು ಕೂಡ ಆಹ್ವಾನಿಸಲಾಗಿದೆ.

ಸಮಾರೋಪ ಸಮಾರಂಭಕ್ಕೆ ಸಂಬಂಧಿಸಿದ ಟೆಂಡರ್​ಗಳನ್ನು ಏಪ್ರಿಲ್ 25 ರವರೆಗೆ ಖರೀದಿಸಬಹುದು ಎಂದು ಮಂಡಳಿಯ ಕಾರ್ಯದರ್ಶಿ ಜಯ್ ಷಾ ಬಿಡುಗಡೆ ಮಾಡಿದ್ದಾರೆ. ಟೆಂಡರ್ ಅರ್ಜಿ ಶುಲ್ಕವಾಗಿ ಒಂದು ಲಕ್ಷ ರೂಪಾಯಿ ನಿಗದಿ ಮಾಡಲಾಗಿದೆ. ಟೆಂಡರ್‌ನಲ್ಲಿ ಭಾಗವಹಿಸುವ ಕಂಪೆನಿಗಳು ಬಿಸಿಸಿಐಗೆ ಇ-ಮೇಲ್ ಮೂಲಕ ಈ ಬಗ್ಗೆ ತಿಳಿಸಬಹುದು. ಇದಾಗ್ಯೂ ಐಪಿಎಲ್‌ನ ಫೈನಲ್​ ಪಂದ್ಯದ ಸ್ಥಳವನ್ನು ಇನ್ನೂ ಪ್ರಕಟಿಸಲಾಗಿಲ್ಲ. ಆದರೆ ಈ ಬಾರಿಯ ಐಪಿಎಲ್​ನ ಕೊನೆಯ ಪಂದ್ಯವು ಗುಜರಾತ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಸಾಧ್ಯತೆಯಿದೆ.

ಪುಲ್ವಾಮಾ ದಾಳಿಯಿಂದಾಗಿ ಕಾರ್ಯಕ್ರಮ ರದ್ದು:
2019 ರಲ್ಲಿ ಮೊದಲ ಬಾರಿಗೆ ಐಪಿಎಲ್ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿಲ್ಲ. ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಲ್ಲದೆ ಈ ಹಣವನ್ನು ಹುತಾತ್ಮ ಯೋಧರ ಕುಟುಂಬಗಳಿಗೆ ನೀಡಲು ಮಂಡಳಿ ನಿರ್ಧರಿಸಿತ್ತು. 2020 ಮತ್ತು 2021 ರಲ್ಲಿ ಕೊರೋನಾ ಕಾರಣ, ಪಂದ್ಯಗಳು ಅಭಿಮಾನಿಗಳಿಲ್ಲದೆ ನಡೆದವು. ಇದೀಗ ಮತ್ತೆ ಫೈನಲ್ ದಿನದಂದು ಐಪಿಎಲ್​ನಲ್ಲಿ ರಂಗು ರಂಗಿನ ಕಾರ್ಯಕ್ರಮ ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ.

ಇದನ್ನೂ ಓದಿ: Hardik Pandya: ಪಾಂಡ್ಯ ಪವರ್: ಸಿಕ್ಸ್ ಸಿಡಿಸಿ ದಾಖಲೆ ಬರೆದ ಹಾರ್ದಿಕ್

ಇದನ್ನೂ ಓದಿ: ಐಪಿಎಲ್​ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್​ಗಳು ಯಾರು ಗೊತ್ತಾ?