BEST CATCH of IPL 2022: ಐಪಿಎಲ್ ಸೀಸನ್ 15 ನಲ್ಲಿ ಆರೆಂಜ್ ಕ್ಯಾಪ್ ಯಾರಿಗೆ, ಪರ್ಪಲ್ ಕ್ಯಾಪ್ ಯಾರಿಗೆ ಸಿಗಲಿದೆ ಎಂಬುದರ ಸ್ಪಷ್ಟ ಚಿತ್ರಣ ಪ್ಲೇಆಫ್ ಹಂತದ ಪಂದ್ಯಗಳ ವೇಳೆಯೇ ಲಭಿಸಿತ್ತು. ನಿರೀಕ್ಷೆಯಂತೆ ಬ್ಯಾಟಿಂಗ್ ಮೂಲಕ ಇಡೀ ಸೀಸನ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಜೋಸ್ ಬಟ್ಲರ್ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದರು. ಇನ್ನು ಬೌಲಿಂಗ್ನಲ್ಲಿ 27 ವಿಕೆಟ್ ಪಡೆದ ಯುಜುವೇಂದ್ರ ಚಹಲ್ ಪರ್ಪಲ್ ಕ್ಯಾಪ್ ಪಡೆದಿದ್ದಾರೆ.
ಅದೇ ರೀತಿ ಅತೀ ಹೆಚ್ಚು ಸಿಕ್ಸ್ ಸಿಡಿಸಿದ ಆಟಗಾರನಿಗೆ ನೀಡಲಾಗುವ ಪ್ರಶಸ್ತಿಯನ್ನು 45 ಸಿಕ್ಸ್ ಬಾರಿಸಿದ ಜೋಸ್ ಬಟ್ಲರ್ ಪಡೆದಿದ್ದಾರೆ. ಇದಾಗ್ಯೂ ಐಪಿಎಲ್ ಸೀಸನ್ನಲ್ಲಿ ಬೆಸ್ಟ್ ಕ್ಯಾಚ್ ಪ್ರಶಸ್ತಿಗೆ ಕೊನೆಯವರೆಗೂ ಪೈಪೋಟಿ ಇತ್ತು. ಏಕೆಂದರೆ ಪಂದ್ಯದ ಅಂತಿಮ ಎಸೆತದ ವೇಳೆ ಅದ್ಭುತ ಕ್ಯಾಚ್ ಹಿಡಿದರೂ ಬೆಸ್ಟ್ ಕ್ಯಾಚ್ ಪ್ರಶಸ್ತಿಯನ್ನು ನೀಡಬಹುದಾಗಿತ್ತು. ಆದರೆ ಇಂತಹ ಯಾವುದೇ ಕ್ಯಾಚ್ ಫೈನಲ್ ಪಂದ್ಯದ ವೇಳೆ ಕಂಡು ಬಂದಿಲ್ಲ.
ಈ ಬಾರಿ ಹಲವು ಆಟಗಾರರು ಅದ್ಭುತ ಕ್ಯಾಚ್ಗಳನ್ನು ಹಿಡಿದಿದ್ದರು. ಅದರಲ್ಲೂ ಅತ್ಯುತ್ತಮ ಕ್ಯಾಚ್ಗಳ ಪಟ್ಟಿಯಲ್ಲಿ ಅಂಬಾಟಿ ರಾಯುಡು ಹಿಡಿದ ಡೈವಿಂಗ್ ಕ್ಯಾಚ್, ರಾಹುಲ್ ತ್ರಿಪಾಠಿಯ ಸ್ಟನ್ನಿಂಗ್ ಕ್ಯಾಚ್, ಹರ್ಪ್ರೀತ್ ಬ್ರಾರ್ ಅವರ ಟೈಮಿಂಗ್ ಕ್ಯಾಚ್, ಗ್ಲೆನ್ ಮ್ಯಾಕ್ಸ್ವೆಲ್ ಅವರ ಮೂವಿಂಗ್ ಕ್ಯಾಚ್, ಎವಿನ್ ಲೂಯಿಸ್ ಅವರ ಸಿಂಗಲ್ ಹ್ಯಾಂಡ್ ಕ್ಯಾಚ್ ಎಲ್ಲರನ್ನು ನಿಬ್ಬೆರಗಾಗಿಸಿತ್ತು. ಹೀಗಾಗಿ ಅಧ್ಬುತ ಕ್ಯಾಚ್ ಅವಾರ್ಡ್ ಯಾರಿಗೆ ಸಿಗಲಿದೆ ಎಂಬ ಕುತೂಹಲ ಎಲ್ಲರಲ್ಲಿತ್ತು.
ಅದರಂತೆ ಅಂತಿಮವಾಗಿ ಬೆಸ್ಟ್ ಕ್ಯಾಚ್ ಅವಾರ್ಡ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ಎವಿನ್ ಲೂಯಿಸ್ ಅವರಿಗೆ ಸಿಕ್ಕಿದೆ. ಏಕೆಂದರೆ ಲೂಯಿಸ್ ಹಿಡಿದ ಕ್ಯಾಚ್ ಇಡೀ ಪಂದ್ಯದ ಚಿತ್ರಣವನ್ನೇ ಬದಲಿಸಿತು. ಹೌದು, ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಕೆಕೆಆರ್ ನಡುವಣ ಪಂದ್ಯದಲ್ಲಿ ಕೇವಲ 14 ಎಸೆತಗಳಲ್ಲಿ 40 ರನ್ ಬಾರಿಸಿ ರಿಂಕು ಸಿಂಗ್ ಅಬ್ಬರಿಸಿದ್ದರು. ಮಾರ್ಕಸ್ ಸ್ಟೋಯಿನಿಸ್ ಅವರ ಕೊನೆಯ ಓವರ್ನಲ್ಲಿ ಇನ್ನೇನು ರಿಂಕು ಸಿಂಗ್ ಪಂದ್ಯ ಗೆಲ್ಲಿಸಿಕೊಡಲಿದ್ದಾರೆ ಅನ್ನುವಷ್ಟರಲ್ಲಿ ರಿಂಕು ಸಿಂಗ್ ಬಾರಿಸಿದ ಚೆಂಡನ್ನು ಓಡಿ ಬಂದು ಒಂದೇ ಕೈಯಲ್ಲಿ ಹಿಡಿಯುವ ಮೂಲಕ ಎವಿನ್ ಲೂಯಿಸ್ ಎಲ್ಲರನ್ನೂ ದಂಗಾಗಿಸಿದ್ದರು. ಪರಿಣಾಮ ಆ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ 2 ರನ್ಗಳಿಂದ ರೋಚಕ ಜಯ ಸಾಧಿಸಿತು.
Evin Lewis takes unbelievable catch.
gautam gambhir reaction also unbelievable #LSGvsKKR #IPL2022 #EvinLewis #KLRahul pic.twitter.com/bunaMkyN6S— Vineet Sharma (@Vineetsharma906) May 19, 2022
ಹೀಗೆ ಒಂದು ಕ್ಯಾಚ್ ಮೂಲಕ ಇಡೀ ಪಂದ್ಯದ ಫಲಿತಾಂಶವನ್ನೇ ಬದಲಿಸಿ ಎವಿನ್ ಲೂಯಿಸ್ ಅವರ ಅದ್ಭುತ ಕ್ಯಾಚ್ಗೆ ಈ ಬಾರಿಯ ಐಪಿಎಲ್ನ ಬೆಸ್ಟ್ ಕ್ಯಾಚ್ ಅವಾರ್ಡ್ ಲಭಿಸಿದೆ.
Still thinking about that stunning Evin Lewis catch. #IPL2022 #LSGvsKKR #Lewis pic.twitter.com/dkWLSlTKES
— Abhinav singh (@Abhinav_tmk) May 19, 2022
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.