IPL 2022: ಐಪಿಎಲ್ ಕಠಿಣ ಬಯೋಬಬಲ್ ನಿಯಮ: ಉಲ್ಲಂಘಿಸಿದ್ರೆ 1 ಕೋಟಿ ರೂ. ದಂಡ..!

| Updated By: ಝಾಹಿರ್ ಯೂಸುಫ್

Updated on: Mar 15, 2022 | 6:56 PM

IPL 2022: Bio-Bubble Rules: ಆಟಗಾರ ಮೊದಲ ಬಾರಿಗೆ ಬಯೋ ಬಬಲ್ ಅನ್ನು ಉಲ್ಲಂಘಿಸಿದರೆ, ಆ ಆಟಗಾರ 7 ದಿನಗಳವರೆಗೆ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ.

IPL 2022: ಐಪಿಎಲ್ ಕಠಿಣ ಬಯೋಬಬಲ್ ನಿಯಮ: ಉಲ್ಲಂಘಿಸಿದ್ರೆ 1 ಕೋಟಿ ರೂ. ದಂಡ..!
IPL 2022
Follow us on

IPL 2022 ಮಾರ್ಚ್ 26 ರಿಂದ ಶುರುವಾಗಲಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗಲಿದೆ. ಇದಕ್ಕೂ ಮುನ್ನ ಬಿಸಿಸಿಐ ಸರಾಗವಾಗಿ ಟೂರ್ನಿ ನಡೆಸಲು ಈ ಬಾರಿ ಕಠಿಣ ಬಯೋಬಬಲ್ ನಿಯಮಗಳನ್ನು ರೂಪಿಸಿದೆ. ಮಾಧ್ಯಮ ವರದಿಗಳ ಪ್ರಕಾರ, ಬಯೋ ಬಬಲ್‌ನ ನಿಯಮಗಳನ್ನು ಉಲ್ಲಂಘಿಸಿದರೆ, ಆ ಆಟಗಾರನ ಮೇಲೆ ಒಂದು ಪಂದ್ಯದ ನಿಷೇಧ ಹೇರಲಾಗುತ್ತದೆ. ಅಷ್ಟೇ ಅಲ್ಲದೆ ತಂಡದ ಅಂಕಗಳನ್ನು ಕಡಿತಗೊಳಿಸುತ್ತದೆ. ಜೊತೆಗೆ ಒಂದು ಕೋಟಿ ರೂಪಾಯಿಗಳವರೆಗೆ ದಂಡ ವಿಧಿಸುವ ನಿಬಂಧನೆಯನ್ನು ರೂಪಿಸಿದೆ. ಕಳೆದ ಸೀಸನ್​ ಐಪಿಎಲ್ ವೇಳೆ ಆಟಗಾರರು ಬಯೋ ಬಬಲ್‌ನಲ್ಲಿ ಹೊರಹೋದ ಪರಿಣಾಮ ಇಡೀ ಟೂರ್ನಿಯನ್ನು ಮುಂದೂಡಬೇಕಾಯಿತು. ಅಷ್ಟೇ ಅಲ್ಲದೆ ಟೂರ್ನಿಯ ದ್ವಿತಿಯಾರ್ಧವನ್ನು ಯುಎಇಯಲ್ಲಿ ನಡೆಸಲಾಯಿತು. ಆದರೆ ಈ ಬಾರಿ ಅಂತಹ ಯಾವುದೇ ತಪ್ಪುಗಳು ನಡೆದಂತೆ ಮುನ್ನೆಚ್ಚರಿಕೆವಹಿಸಲು ಬಿಸಿಸಿಐ ಕಠಿಣ ನಿಯಮಗಳನ್ನು ಜಾರಿಗೊಳಿಸಲಿದೆ.

ಕ್ರಿಕ್‌ಬಜ್‌ನ ವರದಿಯ ಪ್ರಕಾರ, ಬಯೋ ಬಬಲ್‌ನಲ್ಲಿ ಯಾವುದೇ ಆಟಗಾರ ಅಥವಾ ಅವರ ಕುಟುಂಬದ ಸದಸ್ಯರು ಇದ್ದು, ತಂಡದ ಮಾಲೀಕರು ಅಥವಾ ಅವರೊಂದಿಗೆ ಸಂಬಂಧ ಹೊಂದಿರುವ ಮಂದಿ ಜೈವಿಕ ಬಬಲ್ ಅನ್ನು ಉಲ್ಲಂಘಿಸಿದರೆ, ಅದರ ಸಂಪೂರ್ಣ ಜವಾಬ್ದಾರಿ ಫ್ರಾಂಚೈಸಿಗಳು ತೆಗೆದುಕೊಳ್ಳಬೇಕಾಗುತ್ತದೆ. ಅದರಂತೆ ಬಯೋ ಬಬಲ್ ಅನ್ನು ಉಲ್ಲಂಘಿಸಿದ್ದಕ್ಕಾಗಿ ಆಟಗಾರನನ್ನು ಒಂದು ಪಂದ್ಯಕ್ಕೆ ನಿಷೇಧಿಸಲಾಗುತ್ತದೆ. ಅಷ್ಟೇ ಅಲ್ಲದೆ ಆ ಆಟಗಾರ 7 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ ಎಂದು ಬಿಸಿಸಿಐ ತಿಳಿಸಿದೆ. ಆಟಗಾರನ ಕುಟುಂಬ ಅಥವಾ ಪಂದ್ಯದ ಅಧಿಕಾರಿ= ಬಯೋ ಬಬಲ್ ಅನ್ನು ಉಲ್ಲಂಘಿಸಿದರೆ, ಅವರ ವಿರುದ್ಧ ಕೂಡ ಗಂಭೀರ ಕ್ರಮ ಕೈಗೊಳ್ಳಲಾಗುತ್ತದೆ.

ತಂಡಕ್ಕೆ 1 ಕೋಟಿ ದಂಡ, ಅಂಕ ಕೂಡ ಕಡಿತ!
ಐಪಿಎಲ್ 2022 ರ ಸಮಯದಲ್ಲಿ ತಂಡವು ಉದ್ದೇಶಪೂರ್ವಕವಾಗಿ ಹೊರಗಿನವರನ್ನು ಬಯೋ ಬಬಲ್​ಗೆ ಕರೆತಂದರೆ, ಆ ಫ್ರಾಂಚೈಸಿಗೆ ದಂಡವಾಗಿ ಒಂದು ಕೋಟಿ ರೂ. ವಿಧಿಸಲಾಗುತ್ತದೆ. ಅಲ್ಲದೆ, ಮತ್ತೆ ಅಂತಹ ತಪ್ಪು ಸಂಭವಿಸಿದರೆ, ತಂಡದ ಒಂದು ಅಥವಾ ಎರಡು ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.

ಆಟಗಾರನು ಬಯೋ ಬಬಲ್ ಉಲ್ಲಂಘಿಸಿದ್ರೆ?
ಆಟಗಾರ ಮೊದಲ ಬಾರಿಗೆ ಬಯೋ ಬಬಲ್ ಅನ್ನು ಉಲ್ಲಂಘಿಸಿದರೆ, ಆ ಆಟಗಾರ 7 ದಿನಗಳವರೆಗೆ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ, ಹಾಗೆಯೇ ಅವಧಿಯ ಪಂದ್ಯಗಳ ಸಂಭಾವನೆಯನ್ನು ನೀಡಲಾಗುವುದಿಲ್ಲ. ಇನ್ನು ಎರಡನೇ ಬಾರಿಗೆ ಅದೇ ತಪ್ಪು ಮಾಡಿದರೆ, ಆಟಗಾರನು ಏಳು ದಿನಗಳ ಕ್ವಾರಂಟೈನ್ ಮತ್ತು ಒಂದು ಪಂದ್ಯದ ನಿಷೇಧವನ್ನು ಎದುರಿಸಬೇಕಾಗುತ್ತದೆ. ಮೂರನೇ ಬಾರಿಗೆ ಅದೇ ತಪ್ಪನ್ನು ಪುನರಾವರ್ತಿಸಿದರೆ ಆ ಆಟಗಾರನನ್ನು ಇಡೀ ಸೀಸನ್​ನಿಂದ ಹೊರಹಾಕಲಾಗುತ್ತದೆ. ಅಲ್ಲದೆ ತಂಡಕ್ಕೆ ಯಾವುದೇ ಬದಲಿ ಆಟಗಾರನನ್ನು ಆಯ್ಕೆ ಮಾಡಲು ಅವಕಾ ನೀಡಲಾಗುವುದಿಲ್ಲ.

ಆಟಗಾರನ ಕುಟುಂಬವು ಬಯೋ ಬಬಲ್ ಉಲ್ಲಂಘಿಸಿದರೆ?
ಮೊದಲ ಬಾರಿಗೆ ಬಯೋ ಬಬಲ್ ಉಲ್ಲಂಘಿಸಿದರೆ, ಆಟಗಾರನ ಕುಟುಂಬದ ಸದಸ್ಯರು 7 ದಿನಗಳವರೆಗೆ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ. ಎರಡನೇ ಬಾರಿಗೆ ತಪ್ಪು ಮಾಡಿದ್ರೆ, ಆಟಗಾರನ ಕುಟುಂಬ, ಸ್ನೇಹಿತರನ್ನು ಬಯೋ ಬಬಲ್‌ನಿಂದ ಹೊರಹಾಕಲಾಗುತ್ತದೆ. ಅವರೊಂದಿಗೆ ಸಂಬಂಧಿಸಿದ ಆಟಗಾರನನ್ನು 7 ದಿನಗಳವರೆಗೆ ಕ್ವಾರಂಟೈನ್‌ನಲ್ಲಿ ಇರಿಸಲಾಗುತ್ತದೆ.

ಬಯೋ ಬಬಲ್‌ಗೆ ಹೊರಗಿನಿಂದ ಎಂಟ್ರಿ ಕೊಟ್ಟರೆ?
ತಂಡದ ಬಯೋ ಬಬಲ್​ಗೆ ಹೊರಗಿನವರು ಎಂಟ್ರಿ ಕೊಟ್ಟರೆ, ಮೊದಲ ಬಾರಿಗೆ ತಂಡಕ್ಕೆ ಒಂದು ಕೋಟಿ ರೂಪಾಯಿ ದಂಡ ವಿಧಿಸಲಾಗುತ್ತದೆ. ಎರಡನೇ ಬಾರಿಗೆ ಅದೇ ತಪ್ಪನ್ನು ಮಾಡಿದರೆ ತಂಡದ ಒಂದು ಅಂಕ ಮತ್ತು ಮೂರನೇ ಬಾರಿಗೆ ಅದೇ ಪುನರಾವರ್ತಿಸಿದರೆ 2 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.

ಇದನ್ನೂ ಓದಿ: IPL 2022: ಐಪಿಎಲ್​ಗೆ ಕಂಬ್ಯಾಕ್ ಮಾಡಬಲ್ಲ 5 ಆಟಗಾರರು..!

ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!

ಇದನ್ನೂ ಓದಿ: IPL ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಆರೋನ್ ಫಿಂಚ್