IPL 2022: ಐಪಿಎಲ್ ಸೀಸನ್ 15 ನಲ್ಲಿ ಮುಂಬೈ ಇಂಡಿಯನ್ಸ್ (Mumbai Indians) 8 ಪಂದ್ಯಗಳಲ್ಲಿ ಸೋತಿದೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ದದ ಸೋಲಿನೊಂದಿಗೆ ಐಪಿಎಲ್ ಇತಿಹಾಸದಲ್ಲೇ ಸತತವಾಗಿ 8 ಪಂದ್ಯ ಸೋತ ಮೊದಲ ತಂಡ ಎಂಬ ಕೆಟ್ಟ ದಾಖಲೆಯನ್ನು ಮುಂಬೈ ಇಂಡಿಯನ್ಸ್ ಬರೆದಿದೆ. ಈ ಹೀನಾಯ ದಾಖಲೆಯೊಂದಿಗೆ ಈ ಬಾರಿಯ ಪ್ಲೇ ಆಫ್ ರೇಸ್ನಿಂದ ಮುಂಬೈ ತಂಡ ಬಹುತೇಕ ಹೊರಬಿದ್ದಂತಾಗಿದೆ. ಏಕೆಂದರೆ ಇನ್ನು ಮುಂಬೈ ಇಂಡಿಯನ್ಸ್ ತಂಡಕ್ಕೆ ಉಳಿದಿರುವುದು ಕೇವಲ 6 ಪಂದ್ಯ ಮಾತ್ರ. ಇನ್ನು 6 ಪಂದ್ಯಗಳಲ್ಲಿ ಗೆದ್ದರೂ 12 ಪಾಯಿಂಟ್ ಮಾತ್ರ ಗಳಿಸಲಿದೆ.
ಈಗಾಗಲೇ ಗುಜರಾತ್ ಟೈಟನ್ಸ್ ತಂಡ 12 ಪಾಯಿಂಟ್ ಗಳಿಸಿದೆ. ಮತ್ತೊಂದೆಡೆ ಸನ್ರೈಸರ್ಸ್ ಹೈದರಾಬಾದ್, ಲಕ್ನೋ ಸೂಪರ್ ಜೈಂಟ್ಸ್, ರಾಜಸ್ಥಾನ್ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು 10 ಪಾಯಿಂಟ್ ಪಡೆದುಕೊಂಡಿದೆ. ಅಂದರೆ ಉಳಿದ ಪಂದ್ಯಗಳಲ್ಲಿ ಈ ತಂಡಗಳು 2 ಮ್ಯಾಚ್ ಗೆದ್ದರೆ ಈ ತಂಡಗಳ ಪಾಯಿಂಟ್ 14 ಆಗಲಿದೆ. ಅದರಂತೆ ಗುಜರಾತ್ ಟೈಟನ್ಸ್ ಒಂದು ಪಂದ್ಯ ಗೆದ್ದರೆ, ಲಕ್ನೋ, ಆರ್ಸಿಬಿ, ರಾಜಸ್ಥಾನ್ ರಾಯಲ್ಸ್ ಹಾಗೂ ಎಸ್ಆರ್ಹೆಚ್ 2 ಪಂದ್ಯಗಳನ್ನು ಗೆದ್ದರೆ ಮುಂಬೈ ಇಂಡಿಯನ್ಸ್ ಅಧಿಕೃತವಾಗಿ ಪ್ಲೇಆಫ್ನಿಂದ ಹೊರಬೀಳಲಿದೆ.
ಮುಂಬೈಗೆ ಪ್ಲೇ ಆಫ್ ಎಂಟ್ರಿಗೆ ಚಾನ್ಸೇ ಇಲ್ವಾ?
ಇಡೀ ಟೂರ್ನಿ ನಾಟಕೀಯ ತಿರುವುಗಳಿಗೆ ಸಾಕ್ಷಿಯಾಗಿ ಲೀಗ್ ಹಂತದ ಪಂದ್ಯಗಳ ಮುಕ್ತಾಯದ ವೇಳೆ ಪಾಯಿಂಟ್ ಟೇಬಲ್ನಲ್ಲಿ ನಾಲ್ಕನೇ ಸ್ಥಾನ ಪಡೆಯುವ ತಂಡ 12 ಪಾಯಿಂಟ್ ಪಡೆದರೆ, ಮುಂಬೈ ಇಂಡಿಯನ್ಸ್ ಉಳಿದ 6 ಪಂದ್ಯಗಳನ್ನು ಗೆದ್ದು ನೆಟ್ ರನ್ ರೇಟ್ ಮೂಲಕ ಪ್ಲೇಆಫ್ಗೆ ಪ್ರವೇಶಿಸಬಹುದು. ಆದರೆ ಪ್ರಸ್ತುತ ಇತರೆ ತಂಡಗಳ ಪ್ರದರ್ಶನ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಪ್ರದರ್ಶನವನ್ನು ಗಮನಿಸಿದರೆ ಇದು ಅಸಾಧ್ಯ ಎಂದೇ ಹೇಳಬಹುದು.
ಹೀಗಾಗಿ ಪ್ಲೇಆಫ್ ಆಡುವ ಅವಕಾಶ ಮುಂಬೈಗೆ ಇರಲ್ಲ ಎಂದೇ ಹೇಳಬಹುದು. ಇದರೊಂದಿಗೆ ಈ ಬಾರಿಯ ಐಪಿಎಲ್ನ ಪ್ಲೇಆಫ್ ರೇಸ್ನಿಂದ ಹೊರಬಿದ್ದ ಮೊದಲ ತಂಡವಾಗಿ ಮುಂಬೈ ಹೊರಹೊಮ್ಮಿದೆ. ಒಟ್ಟಿನಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಈ ಬಾರಿ ಕೂಡ ಪ್ಲೇಆಫ್ ಆಡಲ್ಲ. ಕಳೆದ ಸೀಸನ್ನಲ್ಲಿ ಮುಂಬೈ ಇಂಡಿಯನ್ಸ್ ಪಾಯಿಂಟ್ ಟೇಬಲ್ನಲ್ಲಿ 5ನೇ ಸ್ಥಾನ ಪಡೆದಿತ್ತು. ಈ ಬಾರಿ ಯಾವ ಸ್ಥಾನ ಪಡೆಯಲಿದೆ ಕಾದು ನೊಡೇಬೇಕಿದೆ.
ಮುಂಬೈ ಇಂಡಿಯನ್ಸ್ (MI):
ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಡೆವಾಲ್ಡ್ ಬ್ರೆವಿಸ್, ಕೀರಾನ್ ಪೊಲಾರ್ಡ್, ಜಸ್ಪ್ರೀತ್ ಬುಮ್ರಾ, ಮುರುಗನ್ ಅಶ್ವಿನ್, ಬಾಸಿಲ್ ಥಂಪಿ, ಜಯದೇವ್ ಉನದ್ಕತ್, ಮಯಾಂಕ್ ಮಾರ್ಕಂಡೆ, ಸಂಜಯ್ ಯಾದವ್, ರಮಣ್‌ದೀಪ್ ಸಿಂಗ್, ಆರ್ಯನ್ ಜುಯಲ್, ಅರ್ಜುನ್ ತೆಂಡೂಲ್ಕರ್, ತಿಲಕ್ ವರ್ಮಾ, ರಾಹುಲ್ ಬುಮ್ರಾ, ಹೃತಿಕ್ ಶೋಕೀನ್ , ಅರ್ಷದ್ ಖಾನ್, ಟೈಮಲ್ ಮಿಲ್ಸ್, ಜೋಫ್ರಾ ಆರ್ಚರ್, ಫ್ಯಾಬಿಯನ್ ಅಲೆನ್, ಡೇನಿಯಲ್ ಸ್ಯಾಮ್ಸ್, ಅನ್ಮೋಲ್ಪ್ರೀತ್ ಸಿಂಗ್, ಟಿಮ್ ಡೇವಿಡ್, ರಿಲೆ ಮೆರೆಡಿತ್.
ಇದನ್ನೂ ಓದಿ: Virat Kohli: IPL ನಲ್ಲಿ ವಿರಾಟ್ ಕೊಹ್ಲಿ ಎಷ್ಟು ಬಾರಿ ಝೀರೊಗೆ ಔಟಾಗಿದ್ದಾರೆ ಗೊತ್ತಾ?
ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್