KL Rahul: ಐಪಿಎಲ್ನಲ್ಲಿ ವಿಶೇಷ ದಾಖಲೆ ನಿರ್ಮಿಸಿದ ಕೆಎಲ್ ರಾಹುಲ್
IPL 2022: ಐಪಿಎಲ್ನಲ್ಲಿ ಒಂದು ಶತಕ ಮೂಡಿಬಂದರೆ ವಿರಾಟ್ ಕೊಹ್ಲಿಯ (5 ಶತಕ) ಶತಕದ ದಾಖಲೆಯನ್ನೂ ಕೂಡ ಕೆಎಲ್ ರಾಹುಲ್ ಸರಿಗಟ್ಟಲ್ಲಿದ್ದಾರೆ. ಅಲ್ಲದೆ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ಶತಕ ಬಾರಿಸಿದ ಭಾರತೀಯ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ.
IPL 2022: ಐಪಿಎಲ್ ಸೀಸನ್ 15ರ 37ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ವಿರುದ್ದ ಕೆಎಲ್ ರಾಹುಲ್ (KL Rahul) ಭರ್ಜರಿ ಶತಕ ಸಿಡಿಸಿದ್ದರು. ಈ ಶತಕದೊಂದಿಗೆ ಒಂದೇ ಸೀಸನ್ನಲ್ಲಿ 2 ಶತಕ ಬಾರಿಸಿದ ವಿಶೇಷ ಸಾಧಕರ ಪಟ್ಟಿಗೆ ಕೆಎಲ್ ರಾಹುಲ್ ಕೂಡ ಸೇರ್ಪಡೆಯಾದರು. ಅಷ್ಟೇ ಅಲ್ಲದೆ ಒಂದೇ ತಂಡದ ವಿರುದ್ದ 2 ಶತಕ ಬಾರಿಸಿದ ದಾಖಲೆಯನ್ನೂ ಕೂಡ ಬರೆದರು. ಹೌದು, ಕೆಎಲ್ ರಾಹುಲ್ ಈ ಬಾರಿ ಬಾರಿಸಿದ ಎರಡೂ ಶತಕಗಳೂ ಕೂಡ ಮುಂಬೈ ಇಂಡಿಯನ್ಸ್ ವಿರುದ್ದವೇ ಮೂಡಿಬಂದಿರುವುದು ವಿಶೇಷ. ಅಂದರೆ ಐಪಿಎಲ್ನ 26ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ದ ಕೆಎಲ್ ರಾಹುಲ್ 60 ಎಸೆತಗಳಲ್ಲಿ ಅಜೇಯ 103 ರನ್ ಬಾರಿಸಿ ಮಿಂಚಿದ್ದರು. ಇನ್ನು ಐಪಿಎಲ್ನ 37ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ದವೇ 62 ಎಸೆತಗಳಲ್ಲಿ ಅಜೇಯ 103 ರನ್ ಬಾರಿಸಿದ್ದಾರೆ. ಈ ಮೂಲಕ ತಮ್ಮ ಐಪಿಎಲ್ ಶತಕದ ಸಂಖ್ಯೆಯನ್ನು 4 ಕ್ಕೇರಿಸಿದ್ದಾರೆ.
ಅಲ್ಲದೆ ವಿರಾಟ್ ಕೊಹ್ಲಿ ಹೆಸರಿನಲ್ಲಿ ಮಾತ್ರ ಇದ್ದ ವಿಶೇಷ ದಾಖಲೆಯೊಂದನ್ನು ಕೆಎಲ್ ರಾಹುಲ್ ಸರಿಗಟ್ಟಿದ್ದಾರೆ. ಕಿಂಗ್ ಕೊಹ್ಲಿ 2016 ರಲ್ಲಿ ಗುಜರಾತ್ ಲಯನ್ಸ್ ವಿರುದ್ದ 2 ಶತಕ ಬಾರಿಸಿ ಒಂದೇ ಸೀಸನ್ನಲ್ಲಿ ಒಂದೇ ತಂಡದ ವಿರುದ್ದ ಎರಡು ಸೆಂಚುರಿ ಬಾರಿಸಿದ ದಾಖಲೆ ನಿರ್ಮಿಸಿದ್ದರು. ಇದೀಗ ಐಪಿಎಲ್ ಇತಿಹಾಸದಲ್ಲೇ ಎರಡನೇ ಬಾರಿಗೆ ಅಂತಹದೊಂದು ದಾಖಲೆ ಮೂಡಿ ಬಂದಿದೆ. ಅದು ಕೂಡ ಕನ್ನಡಿಗ ಕೆಎಲ್ ರಾಹುಲ್ ಅವರ ಬ್ಯಾಟ್ನಿಂದ ಎಂಬುದು ವಿಶೇಷ. ಮುಂಬೈ ಇಂಡಿಯನ್ಸ್ ವಿರುದ್ದ ಈ ಬಾರಿ 2 ಶತಕ ಬಾರಿಸುವ ಮೂಲಕ 2016 ರಲ್ಲಿ ವಿರಾಟ್ ಕೊಹ್ಲಿ ನಿರ್ಮಿಸಿದ ವಿಶೇಷ ದಾಖಲೆಯನ್ನು ಕೆಎಲ್ಆರ್ ಸರಿಗಟ್ಟಿದ್ದಾರೆ.
ಸದ್ಯ ಐಪಿಎಲ್ನಲ್ಲಿ ಅತ್ಯಧಿಕ ಶತಕ ಬಾರಿಸಿದ ಭಾರತೀಯ ಆಟಗಾರನ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಕೊಹ್ಲಿ ಇದುವರೆಗೆ 5 ಶತಕ ಬಾರಿಸಿದ್ದಾರೆ. ಈ ದಾಖಲೆಯನ್ನು ಸರಿಗಟ್ಟಲು ಕೆಎಲ್ ರಾಹುಲ್ಗೆ ಇನ್ನು ಒಂದು ಶತಕದ ಅವಶ್ಯಕತೆಯಿದೆ. ಮತ್ತೊಂದೆಡೆ ರೋಹಿತ್ ಶರ್ಮಾ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ಶತಕ ಬಾರಿಸಿದ ದಾಖಲೆ ಹೊಂದಿದ್ದಾರೆ. ಹಿಟ್ಮ್ಯಾನ್ ಐಪಿಎಲ್ನಲ್ಲಿ 1 ಶತಕ ಬಾರಿಸಿದರೆ, ಟೀಮ್ ಇಂಡಿಯಾ ಪರ 5 ಶತಕ ಸಿಡಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ 6 ಶತಕ ಬಾರಿಸಿದ ಏಕೈಕ ಭಾರತೀಯ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದರು.
ಇದೀಗ ಕೆಎಲ್ ರಾಹುಲ್ ಟೀಮ್ ಇಂಡಿಯಾ ಪರ 2 ಶತಕ ಹಾಗೂ ಐಪಿಎಲ್ನಲ್ಲಿ 4 ಸೆಂಚುರಿ ಬಾರಿಸುವ ಮೂಲಕ 6 ಶತಕಗಳನ್ನು ಪೂರೈಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಹಿಟ್ಮ್ಯಾನ್ ಹೆಸರಿನಲ್ಲಿದ್ದ ದಾಖಲೆಯನ್ನು ಕೆಎಲ್ ರಾಹುಲ್ ಸರಿಗಟ್ಟಿದ್ದಾರೆ. ಇನ್ನು ಐಪಿಎಲ್ನಲ್ಲಿ ಒಂದು ಶತಕ ಮೂಡಿಬಂದರೆ ವಿರಾಟ್ ಕೊಹ್ಲಿಯ (5 ಶತಕ) ಶತಕದ ದಾಖಲೆಯನ್ನೂ ಕೂಡ ಕೆಎಲ್ ರಾಹುಲ್ ಸರಿಗಟ್ಟಲ್ಲಿದ್ದಾರೆ. ಅಲ್ಲದೆ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ಶತಕ ಬಾರಿಸಿದ ಭಾರತೀಯ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: Virat Kohli: IPL ನಲ್ಲಿ ವಿರಾಟ್ ಕೊಹ್ಲಿ ಎಷ್ಟು ಬಾರಿ ಝೀರೊಗೆ ಔಟಾಗಿದ್ದಾರೆ ಗೊತ್ತಾ?
ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್
Published On - 3:42 pm, Mon, 25 April 22