IPL 2022: CSK ಹಾಗೂ ಮುಂಬೈ ಇಂಡಿಯನ್ಸ್​ಗೆ ಇನ್ನೂ ಇದೆ ಪ್ಲೇಆಫ್ ಚಾನ್ಸ್..!

| Updated By: ಝಾಹಿರ್ ಯೂಸುಫ್

Updated on: May 05, 2022 | 4:13 PM

IPL 2022: ಯಾವುದೇ ತಂಡ ಇನ್ನೂ ಸಹ ಪ್ಲೇಆಫ್ ಖಚಿತಪಡಿಸಿಕೊಳ್ಳದ ಕಾರಣ ಇತ್ತ ಯಾವುದೇ ತಂಡ ಕೂಡ ಪ್ಲೇಆಫ್ ರೇಸ್​ನಿಂದ ಹೊರಬಿದ್ದಿಲ್ಲ. ಏಕೆಂದರೆ 9 ಪಂದ್ಯವಾಡಿರುವ ಮುಂಬೈ ಇಂಡಿಯನ್ಸ್ 1 ಗೆಲುವು ದಾಖಲಿಸಿದೆ.

IPL 2022: CSK ಹಾಗೂ ಮುಂಬೈ ಇಂಡಿಯನ್ಸ್​ಗೆ ಇನ್ನೂ ಇದೆ ಪ್ಲೇಆಫ್ ಚಾನ್ಸ್..!
IPL 2022 MI vs CSK
Follow us on

IPL 2022: ಇಂಡಿಯನ್ ಪ್ರೀಮಿಯರ್ ಲೀಗ್​ನ ಅತ್ಯಂತ ಬಲಿಷ್ಠ ಎರಡು ತಂಡಗಳು ಈ ಬಾರಿ ಸತತ ಸೋಲುಗಳಿಂದ ಕಂಗೆಟ್ಟಿದೆ. ಅದರಲ್ಲೂ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ (Mumbai Indians) ಕೇವಲ 1 ಗೆಲುವು ದಾಖಲಿಸಿ ಪಾಯಿಂಟ್ಸ್ ಟೇಬಲ್​ನಲ್ಲಿ ಕೊನೆಯ ಸ್ಥಾನದಲ್ಲಿದೆ. ಇನ್ನು 3 ಪಂದ್ಯ ಜಯಿಸಿರುವ ಚೆನ್ನೈ ಸೂಪರ್ ಕಿಂಗ್ಸ್ (CSK)​ 9ನೇ ಸ್ಥಾನದಲ್ಲಿದೆ. ಇತ್ತ ಆಡಿರುವ 10 ಪಂದ್ಯಗಳಲ್ಲಿ 8 ಜಯ ಸಾಧಿಸಿರುವ ಗುಜರಾತ್ ಟೈಟನ್ಸ್ ತಂಡವು 16 ಅಂಕ ಪಡೆದು ಪಾಯಿಂಟ್ಸ್​ ಟೇಬಲ್​ನಲ್ಲಿ ಅಗ್ರಸ್ಥಾನದಲ್ಲಿದೆ. ವಿಶೇಷ ಎಂದರೆ ಇದುವರೆಗೆ ಯಾವುದೇ ತಂಡ ಪ್ಲೇಆಫ್ ಅರ್ಹತೆಯನ್ನು ಗಿಟ್ಟಿಸಿಕೊಂಡಿಲ್ಲ. ಅಂದರೆ ಈ ಬಾರಿ 10 ತಂಡಗಳಿರುವ ಕಾರಣ ಪ್ಲೇಆಫ್​ ಖಚಿತವಾಗುವುದು 18 ಪಾಯಿಂಟ್ಸ್​ ಪಡೆದ ಮೇಲೆ ಎಂದರೆ ತಪ್ಪಾಗಲಾರದು. ಅದರಂತೆ ಗುಜರಾತ್ ಟೈಟನ್ಸ್ ತಂಡದ ಪ್ಲೇಆಫ್ ಕನ್​ಫರ್ಮ್ ಆಗಬೇಕಿದ್ರೆ ಇನ್ನೊಂದು ಪಂದ್ಯವನ್ನೂ ಕೂಡ ಗೆಲ್ಲಬೇಕಿದೆ.

ಅಷ್ಟೇ ಅಲ್ಲದೆ ಯಾವುದೇ ತಂಡ ಇನ್ನೂ ಸಹ ಪ್ಲೇಆಫ್ ಖಚಿತಪಡಿಸಿಕೊಳ್ಳದ ಕಾರಣ ಇತ್ತ ಯಾವುದೇ ತಂಡ ಕೂಡ ಪ್ಲೇಆಫ್ ರೇಸ್​ನಿಂದ ಹೊರಬಿದ್ದಿಲ್ಲ. ಏಕೆಂದರೆ 9 ಪಂದ್ಯವಾಡಿರುವ ಮುಂಬೈ ಇಂಡಿಯನ್ಸ್ 1 ಗೆಲುವು ದಾಖಲಿಸಿದೆ. ಇನ್ನು ಮುಂಬೈಗೆ 5 ಮ್ಯಾಚ್​ಗಳಿದ್ದು, ಈ ಎಲ್ಲಾ ಪಂದ್ಯಗಳನ್ನು ಗೆದ್ದರೆ 12 ಪಾಯಿಂಟ್ಸ್ ಆಗಲಿದೆ. ಆದರೆ ಪ್ರಸ್ತುತ ಪಾಯಿಂಟ್ಸ್​ ಟೇಬಲ್​ನಲ್ಲಿ 3ನೇ ಮತ್ತು ನಾಲ್ಕನೇ ಸ್ಥಾನ ಪಡೆದಿರುವ ರಾಜಸ್ಥಾನ್ ರಾಯಲ್ಸ್ ಮತ್ತು ಆರ್​ಸಿಬಿ ಕೂಡ 12 ಪಾಯಿಂಟ್ಸ್ ಪಡೆದುಕೊಂಡಿದೆ. ಅಂದರೆ ಪಾಯಿಂಟ್ಸ್ ಟೇಬಲ್​ನಲ್ಲಿ ಅಗ್ರ ನಾಲ್ಕು ತಂಡಗಳ ಪಾಯಿಂಟ್ಸ್​ 14 ಆಗುವ ತನಕ ಮುಂಬೈ ಇಂಡಿಯನ್ಸ್ ತಂಡಕ್ಕೆ ಪ್ಲೇಆಫ್ ಅವಕಾಶ ಇರಲಿದೆ.

ಹಾಗೆಯೇ ಚೆನ್ನೈ ಸೂಪರ್ ಕಿಂಗ್ಸ್​ 10 ರಲ್ಲಿ 3 ಗೆಲುವು ದಾಖಲಿಸಿ 6 ಪಾಯಿಂಟ್ಸ್ ಕಲೆಹಾಕಿದೆ. ಇನ್ನು 4 ಮ್ಯಾಚ್​ ಉಳಿದಿದ್ದು, ಈ ಎಲ್ಲಾ ಪಂದ್ಯಗಳನ್ನು ಸಿಎಸ್​ಕೆ ಗೆದ್ದರೆ 14 ಪಾಯಿಂಟ್ಸ್ ಆಗಲಿದೆ. ಆದರೆ ಪ್ರಸ್ತುತ ಪಾಯಿಂಟ್ಸ್ ಟೇಬಲ್​ನಲ್ಲಿ ಕೇವಲ ಎರಡು ತಂಡಗಳು ಮಾತ್ರ 14 ಪಾಯಿಂಟ್ಸ್​ ಗಳಿಸಿದೆ. ಅದರಂತೆ 16 ಪಾಯಿಂಟ್ಸ್​ಗಳೊಂದಿಗೆ ಗುಜರಾತ್ ಟೈಟನ್ಸ್ ಅಗ್ರಸ್ಥಾನದಲ್ಲಿದ್ದರೆ, ಲಕ್ನೋ ಸೂಪರ್ ಜೈಂಟ್ಸ್​ 14 ಪಾಯಿಂಟ್ಸ್​ಗಳಿಸಿ 2ನೇ ಸ್ಥಾನದಲ್ಲಿದೆ.

ಇದಾಗ್ಯೂ 3ನೇ ಮತ್ತು 4ನೇ ಸ್ಥಾನದಲ್ಲಿರುವ ತಂಡಗಳು 14 ಪಾಯಿಂಟ್ಸ್​ ಅಥವಾ ಅದಕ್ಕಿಂತ ಹೆಚ್ಚಿನ ಅಂಕ ಪಡೆಯುವವರೆಗೂ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ ತಂಡಗಳು ಪ್ಲೇಆಫ್ ರೇಸ್​ನಲ್ಲಿ ಕಾಣಿಸಿಕೊಳ್ಳಲಿದೆ. ಅಂದರೆ ಪಾಯಿಂಟ್ಸ್​ ಟೇಬಲ್​ನಲ್ಲಿರುವ ಟಾಪ್ 4 ತಂಡಗಳು 16 ಪಾಯಿಂಟ್ಸ್​ ಗಳಿಸಿದರೆ, ಸಿಎಸ್​ಕೆ ಹಾಗೂ ಮುಂಬೈ ಇಂಡಿಯನ್ಸ್ ಅಧಿಕೃತವಾಗಿ ಹೊರಬೀಳಲಿದೆ. ಹಾಗೆಯೇ ಪಾಯಿಂಟ್ಸ್​ ಟೇಬಲ್​ನಲ್ಲಿ ಅಗ್ರ ನಾಲ್ಕರಲ್ಲಿ ಒಂದು ತಂಡವು 14 ಅಂಕ ಪಡೆದರೆ ಸಿಎಸ್​ಕೆ ತಂಡಕ್ಕೆ ಪ್ಲೇಆಫ್ ಅವಕಾಶ ಇರಲಿದೆ. ಇದಕ್ಕಾಗಿ ಈ ಸಿಎಸ್​ಕೆ ​ ಮುಂದಿನ ಎಲ್ಲಾ ಪಂದ್ಯಗಳನ್ನೂ ಗೆಲ್ಲಲೇಬೇಕು. ಆ ಬಳಿಕ ಪಾಯಿಂಟ್ಸ್​ ಟೇಬಲ್​ನಲ್ಲಿ 3 ಮತ್ತು 4ನೇ ಸ್ಥಾನ ಪಡೆಯುವ ತಂಡಗಳು 14 ಪಾಯಿಂಟ್ಸ್ ಪಡೆದರೆ ನೆಟ್​ ರನ್​ ರೇಟ್ ಮೂಲಕ ಪ್ಲೇಆಫ್ ಆಡುವ ಅವಕಾಶ ಚೆನ್ನೈ ಸೂಪರ್ ಕಿಂಗ್ಸ್​ಗೆ ದೊರೆಯಲಿದೆ.

ಆದರೆ ಇಲ್ಲಿ ಇಂಟ್ರೆಸ್ಟಿಂಗ್ ವಿಷಯ ಎಂದರೆ ಮುಂದಿನಗಳಲ್ಲಿ ಸಿಎಸ್​ಕೆ ಹಾಗೂ ಮುಂಬೈ ಇಂಡಿಯನ್ಸ್ ಕೂಡ ಮುಖಾಮುಖಿಯಾಗಬೇಕಿದೆ. ಹೀಗಾಗಿ ಈ ಪಂದ್ಯದ ಫಲಿತಾಂಶದ ಮೂಲಕ ಒಂದು ತಂಡವು ಪ್ಲೇಆಫ್ ರೇಸ್​ನಿಂದ ಅಧಿಕೃತವಾಗಿ ಹೊರಬೀಳುವುದು ಖಚಿತ ಎನ್ನಬಹುದು. ಅಲ್ಲಿಯವರೆಗೂ ಎರಡೂ ತಂಡಗಳು ಪ್ಲೇಆಫ್ ರೇಸ್​ನಲ್ಲಿ ಇರಲಿದೆ. ಇದರ ನಡುವೆ ಈ ತಂಡಗಳು ಒಂದೊಂದು ಪಂದ್ಯ ಸೋತರೆ ಮತ್ತು ಪಾಯಿಂಟ್ಸ್​ ಟೇಬಲ್​ನಲ್ಲಿ 4 ತಂಡಗಳು 14 ಪಾಯಿಂಟ್ಸ್​ಗಳಿಸಿದರೆ ಕೂಡ ಪ್ಲೇಆಫ್ ರೇಸ್​ನಿಂದ ಹೊರಬೀಳಲಿದೆ.

ಅಂದರೆ ಪಾಯಿಂಟ್ಸ್​ ಟೇಬಲ್​ನಲ್ಲಿ ಅಗ್ರ ನಾಲ್ಕು ತಂಡಗಳು 16 ಪಾಯಿಂಟ್ಸ್​ಗಳಿಸುವವರೆಗೆ ಅಥವಾ ಮುಂಬೈ ಇಂಡಿಯನ್ಸ್ ಹಾಗೂ ಸಿಎಸ್​ಕೆ ಮುಂದಿನ ಪಂದ್ಯ ಸೋಲುವವರೆಗೆ ಪ್ಲೇಆಫ್ ರೇಸ್​ನಲ್ಲಿ ಕಾಣಿಸಿಕೊಳ್ಳಲಿದೆ. ಹೀಗಾಗಿ ಸಿಎಸ್​ಕೆ ಹಾಗೂ ಮುಂಬೈ ಇಂಡಿಯನ್ಸ್ ಅಭಿಮಾನಿಗಳು ತಮ್ಮ ತಂಡಗಳ ಗೆಲುವಿನೊಂದಿಗೆ ಪಾಯಿಂಟ್ಸ್​ ಟೇಬಲ್​ ಮೇಲೂ ಕಣ್ಣಿಡಬೇಕಾಗುತ್ತದೆ. ಏಕೆಂದರೆ ಇತ್ತ ಎರಡೂ ತಂಡಗಳು ಗೆದ್ದರೂ ಅತ್ತ ಉಳಿದ ತಂಡಗಳ ಪಾಯಿಂಟ್ಸ್ 16 ಆದರೂ ಸಿಎಸ್​ಕೆ-ಮುಂಬೈ ಪ್ಲೇಆಫ್​ ರೇಸ್​ನಿಂದ ಹೊರಬೀಳಲಿದೆ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.