IPL 2022: 38 ವರ್ಷದ ಹಿರಿಯ ಆಲ್​ರೌಂಡರ್ ಐಪಿಎಲ್ ಆಡೋದು ಖಚಿತ ಎಂದ CSK

| Updated By: ಝಾಹಿರ್ ಯೂಸುಫ್

Updated on: Nov 24, 2021 | 5:10 PM

IPL 2022: ಸಿಎಸ್​ಕೆ ಪರ ಹಲವು ದಾಖಲೆಗಳನ್ನು ಬರೆದಿರುವ ಬ್ರಾವೊ, ಸದ್ಯ ಔಟ್ ಫಾರ್ಮ್​​ನಲ್ಲಿದ್ದಾರೆ. ಇದಾಗ್ಯೂ ಅವರು ಸಿಎಸ್​ಕೆ ಪರ ಕಣಕ್ಕಿಳಿಯುವ ವೇಳೆ ಅತ್ಯುತ್ತಮ ಪ್ರದರ್ಶನ ನೀಡುತ್ತಾರೆ ಎಂಬುದು ವಿಶೇಷ.

IPL 2022: 38 ವರ್ಷದ ಹಿರಿಯ ಆಲ್​ರೌಂಡರ್ ಐಪಿಎಲ್ ಆಡೋದು ಖಚಿತ ಎಂದ CSK
CSK
Follow us on

ಇಂಡಿಯನ್ ಪ್ರೀಮಿಯರ್ ಲೀಗ್ 2022ರ (IPL 2022) ಸಿದ್ಧತೆಗಳು ಆರಂಭವಾಗಿದೆ. ಎಲ್ಲಾ ತಂಡಗಳು ನವೆಂಬರ್ 30 ರೊಳಗೆ ತಾವು ಉಳಿಸಿಕೊಳ್ಳಲಿರುವ ಆಟಗಾರರ ಪಟ್ಟಿಯನ್ನು ಪ್ರಕಟಿಸಬೇಕಿದೆ. ಇದಾದ ಬಳಿಕ ಮೆಗಾ ಹರಾಜು ನಡೆಯಲಿದೆ. ಹೀಗಾಗಿ ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡಗಳ ಅತ್ಯುತ್ತಮ ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ಒತ್ತು ನೀಡುತ್ತಿವೆ. ಕೆಲವು ಫ್ರಾಂಚೈಸಿಗಳು ಮೂರರಿಂದ ನಾಲ್ಕು ಆಟಗಾರರನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ಈ ಬಾರಿ ಮೆಗಾ ಹರಾಜು ನಡೆದರೆ ಬಹುತೇಕ ತಂಡಗಳು ಬದಲಾಗುವುದು ಖಚಿತ ಎಂದೇ ಹೇಳಬಹುದು. ಇದಾಗ್ಯೂ ಚೆನ್ನೈ ಸೂಪರ್ ಕಿಂಗ್ಸ್​ ಫ್ರಾಂಚೈಸಿ ತಮಗೆ ಬೇಕಾದ ಆಟಗಾರರನ್ನು ಈ ಬಾರಿ ಕೂಡ ಟಾರ್ಗೆಟ್ ಮಾಡಲಿದೆ ಎಂಬುದು ಸ್ಪಷ್ಟವಾಗಿದೆ. ಏಕೆಂದರೆ ಇತ್ತೀಚೆಗೆ ನಿವೃತ್ತಿ ನೀಡಿರುವ ವೆಸ್ಟ್ ಇಂಡೀಸ್ ಆಲ್​ರೌಂಡರ್ ಡ್ವೇನ್ ಬ್ರಾವೊ ಅವರಿಂದ ಮುಂದಿನ ಸೀಸನ್ ಐಪಿಎಲ್ ಆಡುವ ಬಗ್ಗೆ ಸ್ಪಷ್ಟನೆ ಪಡೆದುಕೊಂಡಿದೆ.

ಅಂದರೆ ಮುಂದಿನ ಸೀಸನ್​ನಲ್ಲೂ ಬ್ರಾವೊ ಅವರನ್ನು ಖರೀದಿಸಲು ಸಿಎಸ್​ಕೆ ಆಸಕ್ತಿ ಹೊಂದಿದೆ ಎಂದೇ ಹೇಳಬಹುದು. ಇದಾಗ್ಯೂ ಬ್ರಾವೊ ಅವರನ್ನು ಸಿಎಸ್​ಕೆ ಉಳಿಸಿಕೊಳ್ಳುವುದಿಲ್ಲ. ಧೋನಿ ನಾಯಕತ್ವದ ಹಿರಿಯ ಆಲ್​ರೌಂಡರ್ ಅನ್ನು ತಂಡದಲ್ಲೇ ಉಳಿಸಿಕೊಳ್ಳಲು ಬಯಸಿಲ್ಲ. ಬದಲಾಗಿ ಹರಾಜಿನ ಮೂಲಕ ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲು ಪ್ಲ್ಯಾನ್ ರೂಪಿಸಿದೆ ಎನ್ನಲಾಗಿದೆ.

ಈ ಬಗ್ಗೆ ಮಾತನಾಡಿರುವ ಸಿಎಸ್​​ಕೆ ಸಿಇಒ ಕಾಶಿ ವಿಶ್ವನಾಥನ್, ಡ್ವೇನ್ ಬ್ರಾವೊ ಮುಂದಿನ ಸೀಸನ್ ಐಪಿಎಲ್ ಆಡಲಿದ್ದಾರೆ ಎಂಬುದನ್ನು ಖಚಿತಪಡಿಸಿದ್ದಾರೆ. ಈಗಾಗಲೇ ಸಿಎಸ್​ಕೆ ಟೀಮ್ ಮ್ಯಾನೇಜ್ಮೆಂಟ್ ಐಪಿಎಲ್​ ಆಡುವ ಬಗ್ಗೆ ಬ್ರಾವೊ ಅವರಿಂದ ಮಾಹಿತಿ ಪಡೆದಿದ್ದು, ಹೀಗಾಗಿಯೇ ಸಿಎಸ್​ಕೆ ಸಿಇಒ ಕೂಡ 38 ವರ್ಷದ ಹಿರಿಯ ಆಲ್​ರೌಂಡರ್ ಐಪಿಎಲ್ ಸೀಸನ್​ 15 ಆಡುವುದು ಖಚಿತ ಎನ್ನಲು ಮುಖ್ಯ ಕಾರಣ ಎಂದು ವಿಶ್ಲೇಷಿಸಲಾಗುತ್ತದೆ. ಅದರಂತೆ ಡ್ವೇನ್ ಬ್ರಾವೊ ಹೆಸರು ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡರೂ, ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಸಿಎಸ್​ಕೆ ಕೂಡ ಪ್ರಯತ್ನ ನಡೆಸಲಿದೆ.

ಸಿಎಸ್​ಕೆ ಪರ ಹಲವು ದಾಖಲೆಗಳನ್ನು ಬರೆದಿರುವ ಬ್ರಾವೊ, ಸದ್ಯ ಔಟ್ ಫಾರ್ಮ್​​ನಲ್ಲಿದ್ದಾರೆ. ಇದಾಗ್ಯೂ ಅವರು ಸಿಎಸ್​ಕೆ ಪರ ಕಣಕ್ಕಿಳಿಯುವ ವೇಳೆ ಅತ್ಯುತ್ತಮ ಪ್ರದರ್ಶನ ನೀಡುತ್ತಾರೆ ಎಂಬುದು ವಿಶೇಷ. ಟಿ20 ಕ್ರಿಕೆಟ್​ನಲ್ಲಿ 512 ಪಂದ್ಯಗಳನ್ನು ಆಡಿರುವ ಬ್ರಾವೊ 553 ವಿಕೆಟ್‌ಗಳನ್ನು ಪಡೆದಿದ್ದಾರೆ. ಹೀಗಾಗಿ ಮೆಗಾ ಹರಾಜಿನಲ್ಲಿ ಹಿರಿಯ ಆಲ್​ರೌಂಡರ್ ಖರೀದಿಗೆ ಒಂದಷ್ಟು ಫ್ರಾಂಚೈಸಿ ಕೂಡ ಪೈಪೋಟಿ ನಡೆಸಲಿದೆ.

ಇದನ್ನೂ ಓದಿ: ಹಲಾಲ್ ಮಾಂಸ ಅಥವಾ ಹಲಾಲ್ ಕಟ್ ಎಂದರೇನು?

ಇದನ್ನೂ ಓದಿ: IPL 2022: ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೊಸ​ ಜೆರ್ಸಿ ಫೋಟೋ ವೈರಲ್

(IPL 2022: CSK CEO confirms, Dwayne Bravo will return to IPL 2022)