IPL 2022: ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿಯ ಐಪಿಎಲ್ನಲ್ಲಿ ನೀರಸ ಪ್ರದರ್ಶನ ನೀಡಿದೆ. ಸತತ ಸೋಲಿನೊಂದಿಗೆ ಐಪಿಎಲ್ ಅಭಿಯಾನ ಆರಂಭಿಸಿದ್ದ CSK ಮೊದಲ ಪಂದ್ಯವನ್ನು ಗೆದ್ದಿದ್ದು ತನ್ನ 5ನೇ ಮ್ಯಾಚ್ನಲ್ಲಿ ಎಂಬುದು ವಿಶೇಷ. ಇದೀಗ 9 ಪಂದ್ಯಗಳನ್ನಾಡಿರು ಸಿಎಸ್ಕೆ ತಂಡವು ಕೇವಲ 3 ಗೆಲುವು ದಾಖಲಿಸಿದೆ. ಇನ್ನು ಚೆನ್ನೈಗೆ ಉಳಿದಿರುವುದು ಕೇವಲ 5 ಮ್ಯಾಚ್ಗಳು ಮಾತ್ರ. ಇತ್ತ 3 ಪಂದ್ಯಗಳಲ್ಲಿ ಗೆದ್ದಿರುವ ಸಿಎಸ್ಕೆ ತಂಡವು ಪಾಯಿಂಟ್ ಟೇಬಲ್ನಲ್ಲಿ 9ನೇ ಸ್ಥಾನದಲ್ಲಿದೆ. ಹೀಗಾಗಿಯೇ ಈ ಬಾರಿ ಪ್ಲೇಆಫ್ ಆಡುವ ಅವಕಾಶ ಸಿಎಸ್ಕೆ ತಂಡಕ್ಕೆ ಇದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಇದಕ್ಕೆ ಸದ್ಯ ಉತ್ತರ ಖಂಡಿತವಾಗಿಯೂ ಇದೆ. ಏಕೆಂದರೆ ಸಿಎಸ್ಕೆ ತಂಡವು 3 ಗೆಲುವಿನೊಂದಿಗೆ 6 ಪಾಯಿಂಟ್ ಕಲೆಹಾಕಿದೆ. ಇನ್ನು ಉಳಿದಿರುವುದು 5 ಮ್ಯಾಚ್ಗಳು. ಅಂದರೆ ಈ ಐದು ಪಂದ್ಯಗಳಲ್ಲಿ ಗೆದ್ದರೆ ಸಿಎಸ್ಕೆ ತಂಡದ ಪಾಯಿಂಟ್ 16 ಆಗಲಿದೆ. ಒಂದು ವೇಳೆ ಲೀಗ್ ಹಂತದ ಪಂದ್ಯಗಳ ಮುಕ್ತಾಯದ ವೇಳೆಗೆ ಪಾಯಿಂಟ್ ಟೇಬಲ್ನಲ್ಲಿ 3ನೇ ಅಥವಾ 4ನೇ ಸ್ಥಾನ ಪಡೆಯುವ ತಂಡಗಳು 16 ಪಾಯಿಂಟ್ಗಳಿಸಿದರೆ ಸಿಎಸ್ಕೆ ತಂಡಕ್ಕೆ ಅವಕಾಶ ದೊರೆಯಲಿದೆ. ಅಥವಾ ಸಿಎಸ್ಕೆ ತಂಡವೇ 16 ಪಾಯಿಂಟ್ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಳ್ಳಬಹುದು.
ಅಂದರೆ ಇಲ್ಲಿ ಪಾಯಿಂಟ್ ಟೇಬಲ್ನ ಅಗ್ರ ನಾಲ್ಕು ತಂಡಗಳಲ್ಲಿ ಒಂದು ತಂಡವು 16 ಪಾಯಿಂಟ್ ಗಳಿಸಿದರೂ ಸಿಎಸ್ಕೆ ತಂಡಕ್ಕೆ ಚಾನ್ಸ್ ಸಿಗಲಿದೆ. ಆದರೆ ಇಲ್ಲಿ ಒಂದಕ್ಕಿಂತ ಹೆಚ್ಚಿನ ತಂಡಗಳು 16 ಪಾಯಿಂಟ್ ಗಳಿಸಿದರೆ ನೆಟ್ ರನ್ ರೇಟ್ನ ಮೊರೆ ಹೋಗಬೇಕಾಗುತ್ತದೆ. ಹೀಗಾಗಿ ಸಿಎಸ್ಕೆ ತಂಡದ ಮುಂದಿನ ಗುರಿ ಐದು ಪಂದ್ಯಗಳನ್ನು ಗೆಲ್ಲುವುದು. ಆ ಮೂಲಕ 16 ಪಾಯಿಂಟ್ ಗಳಿಸಿ ನೆಟ್ ರನ್ ರೇಟ್ ಮೂಲಕ ಪ್ಲೇಆಫ್ಗೆ ಎಂಟ್ರಿ ಕೊಡುವ ವಿಶ್ವಾಸದಲ್ಲಿದೆ.
ಈಗಾಗಲೇ 16 ಪಾಯಿಂಟ್ಸ್ ಗಳಿಸಿರುವ ಗುಜರಾತ್ ಟೈಟನ್ಸ್ ತಂಡವು ಮುಂದಿನ ಒಂದು ಪಂದ್ಯ ಗೆದ್ದರೆ ಪ್ಲೇಆಫ್ ಆಡುವುದು ಖಚಿತವಾಗಲಿದೆ. ಇನ್ನು 4 ಪಂದ್ಯಗಳು ಉಳಿದಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡವು 2 ಗೆಲುವು ದಾಖಲಿಸಿದರೆ ಪ್ಲೇಆಫ್ ಅನ್ನು ಕನ್ಫರ್ಮ್ ಮಾಡಿಕೊಳ್ಳಬಹುದು. ಇನ್ನುಳಿದಂತೆ ರಾಜಸ್ಥಾನ್ ರಾಯಲ್ಸ್, ಎಸ್ಆರ್ಹೆಚ್, ಆರ್ಸಿಬಿ, ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್, ಕೆಕೆಆರ್ ಹಾಗೂ ಸಿಎಸ್ಕೆ ನಡುವೆ 3ನೇ ಮತ್ತು 4ನೇ ಸ್ಥಾನಕ್ಕಾಗಿ ಪೈಪೋಟಿ ಕಂಡು ಬರಲಿದೆ.
ಇತ್ತ ನಿರ್ಣಾಯಕ ಹಂತದಲ್ಲಿ ಸಿಎಸ್ಕೆ ತಂಡದ ನಾಯಕತ್ವವನ್ನು ಮಹೇಂದ್ರ ಸಿಂಗ್ ವಹಿಸಿಕೊಂಡಿದ್ದು, ಹೀಗಾಗಿ ಮುಂದಿನ 5 ಪಂದ್ಯಗಳಲ್ಲಿ ಸಿಎಸ್ಕೆ ಗೆಲ್ಲುವ ನಿರೀಕ್ಷೆ ಮೂಡಿಸಿದೆ. ಈ ಮೂಲಕ ಸಿಎಸ್ಕೆ ನೇರವಾಗಿ ಪ್ಲೇಆಫ್ ಪ್ರವೇಶಿಸಲಿದೆಯಾ? ಅಥವಾ ನೆಟ್ ರನ್ ರೇಟ್ ನೆರವಿನಿಂದ ಸಿಎಸ್ಕೆ ತಂಡವು ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯಲಿದೆಯಾ ಕಾದು ನೋಡಬೇಕಿದೆ.
ಚೆನ್ನೈ ಸೂಪರ್ ಕಿಂಗ್ಸ್ (CSK):
ರವೀಂದ್ರ ಜಡೇಜಾ (ನಾಯಕ), ಎಂಎಸ್ ಧೋನಿ, ರುತುರಾಜ್ ಗಾಯಕ್‌ವಾಡ್, ಅಂಬಟಿ ರಾಯುಡು, ಮೊಯಿನ್ ಅಲಿ, ಶಿವಂ ದುಬೆ, ದೀಪಕ್ ಚಹರ್, ಡ್ವೇನ್ ಬ್ರಾವೋ, ರಾಬಿನ್ ಉತ್ತಪ್ಪ, ಕೆಎಂ ಆಸಿಫ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ, ಎನ್ ಜಗದೀಶನ್, ಹರಿ ನಿಶಾಂತ್, ಸುಭ್ರಂಶು ಸೇನಾಪತಿ , ರಾಜವರ್ಧನ್ ಹಂಗರ್ಗೇಕರ್, ಭಗತ್ ವರ್ಮಾ, ಪ್ರಶಾಂತ್ ಸೋಲಂಕಿ, ಕ್ರಿಸ್ ಜೋರ್ಡನ್, ಡ್ವೈನ್ ಪ್ರಿಟೋರಿಯಸ್, ಡೆವೊನ್ ಕಾನ್ವೇ, ಆಡಮ್ ಮಿಲ್ನೆ, ಮಿಚೆಲ್ ಸ್ಯಾಂಟ್ನರ್.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.