AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

GT vs PBKS Prediction Playing XI: ಬಲಿಷ್ಠ ಗುಜರಾತ್ ಎದುರಿಸಲು ತಂಡದಲ್ಲಿ ಬದಲಾವಣೆ ಮಾಡಲಿದೆ ಪಂಜಾಬ್

GT vs PBKS Prediction Playing XI IPL 2022: ಪಾಯಿಂಟ್ ಪಟ್ಟಿಯಲ್ಲಿ ಗುಜರಾತ್ ನಂಬರ್-1 ತಂಡವಾಗಿದೆ. ಪಂಜಾಬ್‌ಗೆ ತೊಂದರೆಯ ವಿಷಯವೆಂದರೆ ಈ ತಂಡ ಅತ್ಯುತ್ತಮ ಫಾರ್ಮ್‌ನಲ್ಲಿರುವುದಾಗಿದೆ. ಅದರ ಬ್ಯಾಟಿಂಗ್‌ನಿಂದ ಬೌಲಿಂಗ್‌ವರೆಗೆ ಎಲ್ಲಾ ವಿಭಾಗದಲ್ಲೂ ಬಲಿಷ್ಠ ಪ್ರದರ್ಶನ ನೀಡುತ್ತಿದೆ.

GT vs PBKS Prediction Playing XI: ಬಲಿಷ್ಠ ಗುಜರಾತ್ ಎದುರಿಸಲು ತಂಡದಲ್ಲಿ ಬದಲಾವಣೆ ಮಾಡಲಿದೆ ಪಂಜಾಬ್
GT vs PBKS
TV9 Web
| Updated By: ಪೃಥ್ವಿಶಂಕರ|

Updated on: May 02, 2022 | 6:12 PM

Share

ಪಂಜಾಬ್ ಕಿಂಗ್ಸ್ (Punjab Kings) ಹೊಸ ನಾಯಕನೊಂದಿಗೆ ಇಂಡಿಯನ್ ಪ್ರೀಮಿಯರ್ ಲೀಗ್‌ನ (Indian Premier League) 15 ನೇ ಸೀಸನ್‌ಗೆ ಪ್ರವೇಶಿಸಿದೆ. ಈ ಸೀಸನ್​ನಲ್ಲಿ ಈ ತಂಡದ ನಾಯಕತ್ವವನ್ನು ಮಯಾಂಕ್ ಅಗರ್ವಾಲ್ (Mayank Agarwal) ವಹಿಸಿಕೊಂಡಿದ್ದಾರೆ. ಆದರೆ, ತಂಡದ ಪ್ರದರ್ಶನದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ತಂಡದ ಪ್ರದರ್ಶನ ಹಿಂದಿನ ಸೀಸನ್‌ಗಳಲ್ಲಿ ಇದ್ದಂತೆಯೇ ಇದೆ. ಪಂಜಾಬ್ ಕಿಂಗ್ಸ್ ತಂಡದ ಈವರೆಗಿನ ಪ್ರದರ್ಶನವನ್ನು ಗಮನಿಸಿದರೆ, ಅದು ಹೆಚ್ಚು ಪರಿಣಾಮ ಬೀರಲು ಸಾಧ್ಯವಾಗಿಲ್ಲ. ತಂಡದ ಪ್ರದರ್ಶನದಲ್ಲಿ ಸ್ಥಿರತೆ ಇಲ್ಲ. ಇದುವರೆಗೆ ಆಡಿರುವ ಒಂಬತ್ತು ಪಂದ್ಯಗಳಲ್ಲಿ ಈ ತಂಡ ನಾಲ್ಕರಲ್ಲಿ ಗೆದ್ದು ಆರರಲ್ಲಿ ಸೋತಿದೆ. ತಂಡದಲ್ಲಿ ಬೌಲಿಂಗ್​ನಿಂದ ಹಿಡಿದು ಬ್ಯಾಟಿಂಗ್​ವರೆಗೆ ಯಾವುದೇ ಕ್ಷೇತ್ರವನ್ನು ನೋಡಿದರೂ ಈ ತಂಡ ಬಲಿಷ್ಠವಾಗಿದೆ ಎಂದು ಹೇಳಲಾಗದು. ಇಂತಹ ಪರಿಸ್ಥಿತಿಯಲ್ಲಿ ಪಂಜಾಬ್ ಬಲಿಷ್ಠವಾಗಿರುವ ಗುಜರಾತ್ ಟೈಟಾನ್ಸ್ ನಂತಹ ತಂಡವನ್ನು ಎದುರಿಸಬೇಕಾಗಿದೆ.

ಪಾಯಿಂಟ್ ಪಟ್ಟಿಯಲ್ಲಿ ಗುಜರಾತ್ ನಂಬರ್-1 ತಂಡವಾಗಿದೆ. ಪಂಜಾಬ್‌ಗೆ ತೊಂದರೆಯ ವಿಷಯವೆಂದರೆ ಈ ತಂಡ ಅತ್ಯುತ್ತಮ ಫಾರ್ಮ್‌ನಲ್ಲಿರುವುದಾಗಿದೆ. ಅದರ ಬ್ಯಾಟಿಂಗ್‌ನಿಂದ ಬೌಲಿಂಗ್‌ವರೆಗೆ ಎಲ್ಲಾ ವಿಭಾಗದಲ್ಲೂ ಬಲಿಷ್ಠ ಪ್ರದರ್ಶನ ನೀಡುತ್ತಿದೆ. ಒಂದು ವೇಳೆ ಗುಜರಾತ್ ಪಂಜಾಬ್ ತಂಡವನ್ನು ಸೋಲಿಸಿದರೆ, ಅದು ಪ್ಲೇಆಫ್‌ ದಾರಿಯನ್ನು ಸುಗಮಗೊಳಿಸಿಕೊಳ್ಳಲ್ಲಿದೆ. ಒಂದು ವೇಳೆ ಪಂಜಾಬ್ ಸೋಲನುಭವಿಸಿದರೆ, ಕೊನೆಯ-4 ರ ಘಟ್ಟಕ್ಕೆ ಹೋಗುವ ಅವಕಾಶಕ್ಕೆ ದೊಡ್ಡ ಹಿನ್ನಡೆಯಾಗಬಹುದು. ಈ ಋತುವಿನಲ್ಲಿ ಉಭಯ ತಂಡಗಳ ನಡುವೆ ಒಂದು ಪಂದ್ಯ ನಡೆದಿದ್ದು, ಇದರಲ್ಲಿ ಗುಜರಾತ್ ಗೆದ್ದಿದೆ.

ಪಂಜಾಬ್​ಗೆ ಬದಲಾವಣೆ ಅಗತ್ಯ ಪಂಜಾಬ್ ತಂಡದ ಬ್ಯಾಟಿಂಗ್ ನೋಡಿದರೆ ಮಯಾಂಕ್ ಅವರ ಫಾರ್ಮ್ ಆತಂಕಕಾರಿಯಾಗಿದೆ. ಜಾನಿ ಬೈರ್‌ಸ್ಟೋ ಸತತವಾಗಿ ನಿರಾಸೆ ಮೂಡಿಸಿದ್ದಾರೆ. ಶಿಖರ್ ಧವನ್ ಮತ್ತು ಲಿಯಾಮ್ ಲಿವಿಂಗ್‌ಸ್ಟನ್ ಮಾತ್ರ ಫಾರ್ಮ್‌ನಲ್ಲಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ತಂಡವು ತನ್ನ ಪ್ಲೇಯಿಂಗ್-11 ನಲ್ಲಿ ಬದಲಾವಣೆಗಳನ್ನು ಮಾಡಬೇಕಾಗಿದೆ. ಬೈರ್‌ಸ್ಟೋರನ್ನು ಕೈಬಿಡುವ ಮೂಲಕ ತಂಡವು ಓಡಿಯನ್ ಸ್ಮಿತ್ ಅಥವಾ ಶಾರುಖ್ ಖಾನ್‌ಗೆ ಅವಕಾಶ ನೀಡಬಹುದು. ಒಡಿಯನ್ ಸ್ಮಿತ್ ಬಂದರೆ, ಪಂಜಾಬ್‌ಗೆ ಒಂದು ಅನುಕೂಲವೆಂದರೆ ಅವರಿಗೆ ಹೆಚ್ಚುವರಿ ಬೌಲಿಂಗ್ ಆಯ್ಕೆ ಇರುತ್ತದೆ.

ಹಾರ್ದಿಕ್ ಪಾಂಡ್ಯ ಬದಲಾಗುವುದಿಲ್ಲ! ಕಳೆದ ಪಂದ್ಯದಲ್ಲಿ ಗುಜರಾತ್ ತಂಡದ ನಾಯಕ ಪಾಂಡ್ಯ ಎರಡು ಬದಲಾವಣೆ ಮಾಡಿದ್ದರು. ಪ್ಲೇಯಿಂಗ್-11 ನಲ್ಲಿ ಅಭಿನವ್ ಮನೋಹರ್ ಅವರನ್ನು ಕೈಬಿಟ್ಟು ಸಾಯಿ ಸುದರ್ಶನ್ ಅವರಿಗೆ ಅವಕಾಶ ನೀಡಲಾಯಿತು. ಯಶ್ ದಯಾಳ್ ಬದಲಿಗೆ ಪ್ರದೀಪ್ ಸಾಂಗ್ವಾನ್ ಅವರಿಗೆ ಅವಕಾಶ ನೀಡಲಾಯಿತು. ಇಬ್ಬರೂ ಒಳ್ಳೆಯ ಪ್ರದರ್ಶನ ನೀಡಿದರು. ಇಂತಹ ಪರಿಸ್ಥಿತಿಯಲ್ಲಿ ಪಾಂಡ್ಯ ಪಂಜಾಬ್ ವಿರುದ್ಧ ಆಡುವ 11ರಲ್ಲಿ ಯಾವುದೇ ಬದಲಾವಣೆ ಮಾಡುವಂತೆ ಕಾಣುತ್ತಿಲ್ಲ.

ಎರಡೂ ತಂಡಗಳ ಸಂಭಾವ್ಯ ಆಟ-11

ಗುಜರಾತ್ ಟೈಟಾನ್ಸ್ – ಹಾರ್ದಿಕ್ ಪಾಂಡ್ಯ (ನಾಯಕ), ವೃದ್ಧಿಮಾನ್ ಸಹಾ, ಶುಭಮನ್ ಗಿಲ್, ಸಾಯಿ ಸುದರ್ಶನ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಅಲ್ಜಾರಿ ಜೋಸೆಫ್, ಲಾಕಿ ಫರ್ಗುಸನ್, ಪ್ರದೀಪ್ ಸಾಂಗ್ವಾನ್, ಮೊಹಮ್ಮದ್ ಶಮಿ.

ಪಂಜಾಬ್ ಕಿಂಗ್ಸ್- ಮಯಾಂಕ್ ಅಗರ್ವಾಲ್ (ನಾಯಕ), ಶಿಖರ್ ಧವನ್, ಭಾನುಕಾ ರಾಜಪಕ್ಸೆ, ಓಡಿಯನ್ ಸ್ಮಿತ್ / ಶಾರುಖ್ ಖಾನ್, ಲಿಯಾಮ್ ಲಿವಿಂಗ್ಸ್ಟನ್, ಜಿತೇಶ್ ಶರ್ಮಾ, ರಿಷಿ ಧವನ್, ಕಗಿಸೊ ರಬಾಡ, ರಾಹುಲ್ ಚಹಾರ್, ಸಂದೀಪ್ ಶರ್ಮಾ, ಅರ್ಶ್ದೀಪ್ ಸಿಂಗ್.

ಇದನ್ನೂ ಓದಿ: PV Sindhu: ಸಿಂಧುಗೆ ಅನ್ಯಾಯ? ಆಟದ ಮಧ್ಯದಲ್ಲೇ ಅಂಪೈರ್ ಜೊತೆ ವಾಗ್ವಾದಕ್ಕಿಳಿದ ಸಿಂಧು! ವಿಡಿಯೋ ನೋಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ