GT vs PBKS IPL 2022 Head to Head: ಪಂಜಾಬ್​ಗೆ ಗುಜರಾತ್ ಸವಾಲು; ಉಭಯರಲ್ಲಿ ಯಾರು ಬಲಿಷ್ಠ?

GT vs PBKS IPL 2022 Head to Head: ಗುಜರಾತ್ ಮತ್ತು ಪಂಜಾಬ್ ನಡುವೆ ಇದು ಈ ಋತುವಿನ ಮೊದಲ ಪಂದ್ಯವಲ್ಲ. ಇದಕ್ಕೂ ಮುನ್ನ ಎರಡೂ ತಂಡಗಳು ಮುಖಾಮುಖಿಯಾಗಿದ್ದು, ಆ ಪಂದ್ಯದಲ್ಲಿ ಗುಜರಾತ್ ಗೆದ್ದಿತ್ತು.

GT vs PBKS IPL 2022 Head to Head: ಪಂಜಾಬ್​ಗೆ ಗುಜರಾತ್ ಸವಾಲು; ಉಭಯರಲ್ಲಿ ಯಾರು ಬಲಿಷ್ಠ?
PBKS vs GT
Follow us
TV9 Web
| Updated By: ಪೃಥ್ವಿಶಂಕರ

Updated on: May 02, 2022 | 3:48 PM

ಐಪಿಎಲ್ -2022 ರ (IPL 2022) ಅರ್ಧದಷ್ಟು ಪ್ರಯಾಣ ಮುಗಿದಿದ್ದು, ಇದುವರೆಗೆ ಈ ಲೀಗ್‌ನಲ್ಲಿ ಒಂದು ತಂಡ ಏಕಪಕ್ಷೀಯ ಆಟವನ್ನು ಪ್ರದರ್ಶಿಸಿದೆ. ಆ ತಂಡ ಯಾವುದೆಂದರೆ ಅದುವೆ ಗುಜರಾತ್ ಟೈಟಾನ್ಸ್ (Gujarat Titans). ಇಲ್ಲಿಯವರೆಗೆ ಈ ತಂಡ ಕೇವಲ ಒಂದು ಪಂದ್ಯದಲ್ಲಿ ಸೋತಿದ್ದು, ಎಂಟು ಪಂದ್ಯಗಳನ್ನು ಗೆದ್ದಿದೆ. ಗುಜರಾತ್ ಟೈಟಾನ್ಸ್ ಆಡುತ್ತಿರುವ ರೀತಿ ಉಳಿದ ತಂಡಗಳಿಗೆ ತೀವ್ರ ತಲೆನೋವು ತಂದಿದೆ. ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ ಮತ್ತು ರಶೀದ್ ಖಾನ್ (David Miller, Rahul Tewatia and Rashid Khan) ತೋರಿದ ಫಿನಿಶಿಂಗ್ ಕೌಶಲ್ಯಗಳು ಬೆರಗು ಮೂಡಿಸಿವೆ. ಕೊನೆಯ ಓವರ್‌ನಲ್ಲಿ ಈ ಮೂವರು ಬಂದು ಸಿಕ್ಸರ್‌ಗಳ ಸುರಿಮಳೆಗೈಯುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ನಾಯಕತ್ವದ ಈ ತಂಡ ಈಗ ತನ್ನ ಮುಂದಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (Punjab Kings) ತಂಡವನ್ನು ಎದುರಿಸಲಿದೆ. ಈ ಎರಡು ತಂಡಗಳು ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ.

ಪಂಜಾಬ್ ಬಗ್ಗೆ ಮಾತನಾಡುವುದಾದರೆ, ಪಾಯಿಂಟ್ ಟೇಬಲ್ ಮತ್ತು ಫಾರ್ಮ್ ಎರಡರಲ್ಲೂ ಪಂಜಾಬ್ ಹಿಂದೆ ಇದೆ. ಪಾಯಿಂಟ್ ಪಟ್ಟಿಯಲ್ಲಿ ಗುಜರಾತ್ ತಂಡ 1ನೇ ಸ್ಥಾನದಲ್ಲಿದ್ದರೆ, ಪಂಜಾಬ್ ತಂಡ ಏಳನೇ ಸ್ಥಾನದಲ್ಲಿದೆ. ಮಯಾಂಕ್ ಅಗರ್ವಾಲ್ ನೇತೃತ್ವದ ತಂಡ ಇದುವರೆಗೆ ಒಂಬತ್ತು ಪಂದ್ಯಗಳನ್ನು ಆಡಿದ್ದು, ಅದರಲ್ಲಿ ನಾಲ್ಕರಲ್ಲಿ ಗೆದ್ದು ಐದರಲ್ಲಿ ಸೋತಿದೆ.

ಉಭಯ ತಂಡಗಳ ಹೆಡ್ ಡು ಹೆಡ್ ಫಿಗರ್ಸ್ ಗುಜರಾತ್ ಈ ಋತುವಿನಲ್ಲಿ ಮೊದಲ ಬಾರಿಗೆ ಐಪಿಎಲ್ ಆಡುತ್ತಿದ್ದು ತನ್ನ ಮೊದಲ ಸೀಸನ್‌ನಲ್ಲಿಯೇ ಸದ್ದು ಮಾಡುತ್ತಿದೆ. ಗುಜರಾತ್ ಮತ್ತು ಪಂಜಾಬ್ ನಡುವೆ ಇದು ಈ ಋತುವಿನ ಮೊದಲ ಪಂದ್ಯವಲ್ಲ. ಇದಕ್ಕೂ ಮುನ್ನ ಎರಡೂ ತಂಡಗಳು ಮುಖಾಮುಖಿಯಾಗಿದ್ದು, ಆ ಪಂದ್ಯದಲ್ಲಿ ಗುಜರಾತ್ ಗೆದ್ದಿತ್ತು. ಅದೂ ಅವರ ಪರಿಚಿತ ಶೈಲಿಯಾದ ಕೊನೆಯ ಓವರ್‌ನಲ್ಲಿ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಒಂಬತ್ತು ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತ್ತು. ತಂಡದ ಪರವಾಗಿ ಲಿಯಾಮ್ ಲಿವಿಂಗ್‌ಸ್ಟನ್ 64 ಮತ್ತು ಆರಂಭಿಕ ಶಿಖರ್ ಧವನ್ 35 ರನ್ ಗಳಿಸಿದರು. ಈ ಪಂದ್ಯವನ್ನು ಕೊನೆಯ ಓವರ್‌ನಲ್ಲಿ ಗುಜರಾತ್ ಗೆದ್ದಿತ್ತು, ಅದೂ ರಾಹುಲ್ ಟಿಯೋಟಿಯಾ ಬಲದಿಂದ. ಒಡಿಯನ್ ಸ್ಮಿತ್ ಎಸೆತದಲ್ಲಿ ಕೊನೆಯ ಎರಡು ಎಸೆತಗಳಲ್ಲಿ ಎರಡು ಸಿಕ್ಸರ್ ಬಾರಿಸುವ ಮೂಲಕ ತೆವಾಟಿಯಾ ಗುಜರಾತ್​ಗೆ ಗೆಲುವನ್ನು ತಂದುಕೊಟ್ಟಿದ್ದರು.

ಪಂಜಾಬ್ ಮುಂದೆ ಕಠಿಣ ಸವಾಲು ಪಂಜಾಬ್‌ಗೆ ಈ ಪಂದ್ಯವನ್ನು ಗೆಲ್ಲುವುದು ಸುಲಭವಲ್ಲ. ಇದಕ್ಕೆ ಕಾರಣ ಗುಜರಾತ್ ತಂಡದ ಬೌಲಿಂಗ್ ಮತ್ತು ಫಿನಿಶಿಂಗ್ ಕೌಶಲ್ಯ. ಮೊಹಮ್ಮದ್ ಶಮಿ, ಲಾಕಿ ಫರ್ಗುಸನ್, ರಶೀದ್ ಖಾನ್ ರಂತಹ ಆಟಗಾರರಿಂದ ಕಂಗೊಳಿಸುತ್ತಿರುವ ಬೌಲಿಂಗ್ ದಾಳಿಯನ್ನು ಎದುರಿಸುವುದು ಪಂಜಾಬ್​ಗೆ ಸುಲಭವಲ್ಲ. ಅಲ್ಲದೆ, ತೆವಾಟಿಯಾ, ರಶೀದ್ ಮತ್ತು ಮಿಲ್ಲರ್ ಅವರ ಕೊನೆಯ ಓವರ್‌ಗಳಲ್ಲಿ ಬಿರುಗಾಳಿ ವೇಗದ ಬ್ಯಾಟಿಂಗ್ ನಿಲ್ಲಿಸುವುದು ಪಂಜಾಬ್‌ಗೆ ದೊಡ್ಡ ಸವಾಲಾಗಿ ಪರಿಣಮಿಸಬಹುದು.

ಇದನ್ನೂ ಓದಿ:ಐಪಿಎಲ್ ಮಾದರಿಯಲ್ಲಿ ಟಿ20 ಲೀಗ್ ಆಯೋಜನೆಗೆ ಮುಂದಾದ ಕ್ರಿಕೆಟ್ ಸೌತ್ ಆಫ್ರಿಕಾ! ಟೂರ್ನಿ ಯಾವಾಗ ಆರಂಭ?

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್